ETV Bharat / science-and-technology

ಈ ದಿನದಂದು ಸಂಭವಿಸಲಿದೆ 2021ರ ಮೊದಲ ಗ್ರಹಣ.. ಈ ವರ್ಷವೂ ತಪ್ಪಲ್ಲ ಆರ್ಥಿಕ ಹೊಡೆತ!! - 2021 ರ ಮೊದಲ ಗ್ರಹಣ

ಅಮೆರಿಕ, ಯುರೋಪ್, ರಷ್ಯಾ ಮತ್ತು ಕೆನಡಾದಂತಹ ದೇಶಗಳಲ್ಲಿ ಗ್ರಹಣದ ಪರಿಣಾಮವು ಹೆಚ್ಚಾಗಿರಲಿದ್ದು, ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿವೆ.

First Solar Eclipse of the year 2021
2021 ರ ಮೊದಲ ಗ್ರಹಣ
author img

By

Published : Jan 9, 2021, 4:58 PM IST

Updated : Feb 16, 2021, 7:53 PM IST

ನವದೆಹಲಿ: ಈ ವರ್ಷದ ಮೊದಲ ಸೂರ್ಯಗ್ರಹಣ 2021 ಜೂನ್ 10 ರಂದು ಸಂಭವಿಸಲಿದೆ. ಇದರ ಪ್ರಭಾವವು ಉತ್ತರ ದಿಕ್ಕಿನಲ್ಲಿ ಹೆಚ್ಚು ಕಂಡು ಬರಲಿದ್ದು, ಭಾರತದಲ್ಲಿ ಅರುಣಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ಕೆಲವು ಭಾಗಗಳಲ್ಲಿ ಮಾತ್ರ ಸ್ವಲ್ಪ ಸಮಯದವರೆಗೆ ಗೋಚರವಾಗಲಿದೆ. ಅಮೆರಿಕ, ಯುರೋಪ್, ರಷ್ಯಾ ಮತ್ತು ಕೆನಡಾದಂತಹ ದೇಶಗಳಲ್ಲಿ ಗ್ರಹಣದ ಪರಿಣಾಮವು ಹೆಚ್ಚಾಗಿರಲಿದ್ದು, ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿವೆ.

ದೆಹಲಿ ಮೂಲದ ಜ್ಯೋತಿಷಿ ಪಂಕಜ್ ಖನ್ನಾ ಅವರ ಪ್ರಕಾರ 2021 ರ ಜೂನ್ 10 ರಂದು ಸೂರ್ಯಗ್ರಹಣ ಆರ್ಥಿಕ ಕುಸಿತವನ್ನು ತರಲಿದೆ. ಈ ಗ್ರಹಣದ ಪರಿಣಾಮವು ಆಗಸ್ಟ್ 2022 ರವರೆಗೆ ಇರಲಿದೆ. ಆಗಸ್ಟ್ 2022 ರಿಂದ, ಗ್ರಹಣದ ಋಣಾತ್ಮಕ ಪ್ರಭಾವವು ನಿಧಾನವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದು ಡಿಸೆಂಬರ್ 2022 ರವರೆಗೆ ಮುಂದುವರಿಯುತ್ತದೆ.

ಇದನ್ನೂ ಓದಿ: ಕೋವಿಡ್​ ವ್ಯಾಕ್ಸಿನ್​ ಹಾಕಿಸಿಕೊಂಡ ಮೊದಲ ಭಾರತೀಯ ನಟಿ ಶಿಲ್ಪಾ.. ಹೇಳಿದ್ದೇನು!?

ಗ್ರಹಣದ ಗರಿಷ್ಠ ಅವಧಿಯಲ್ಲಿ, ಶನಿ ಗ್ರಹವು ಮಕರ ಸಂಕ್ರಾಂತಿಯ ರಾಶಿಚಕ್ರ ಚಿಹ್ನೆಯಲ್ಲಿರುತ್ತದೆ. ಅದು ಆರ್ಥಿಕ ಹಿನ್ನಡೆಯನ್ನು ಸೃಷ್ಟಿಸುತ್ತದೆ. ಶನಿ ಗ್ರಹವು ಬಲಗೊಳ್ಳುತ್ತದೆ ಮತ್ತು ತಾಂತ್ರಿಕ ಬೆಳವಣಿಗೆ, ಆವಿಷ್ಕಾರಗಳು ಇತ್ಯಾದಿಗಳನ್ನು ಬೆಂಬಲಿಸುತ್ತದೆ. ಸೂರ್ಯ ದುರ್ಬಲಗೊಳ್ಳುತ್ತಾನೆ ಮತ್ತು ಆಡಳಿತ ಸರ್ಕಾರ ಮತ್ತು ಸಂಬಂಧಿತ ಜನರು ಅನಾನುಕೂಲ ಮತ್ತು ಪ್ರಕ್ಷುಬ್ಧರಾಗುತ್ತಾರೆ ಎಂದು ಜ್ಯೋತಿಷಿ ಪಂಕಜ್ ಖನ್ನಾ ಹೇಳಿದರು.

Last Updated : Feb 16, 2021, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.