ಐಫೋನ್ 14 ಮತ್ತು 14 ಪ್ಲಸ್ ಮೊಬೈಲ್ಗಳು ಬಂದಿದ್ದು, ಆ್ಯಪಲ್ ಬಳಕೆದಾರರು ಈಗಾಗಲೇ ಮತ್ತಷ್ಟು ಹೊಸತನದ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಮೊದಲ ತಲೆಮಾರಿನ ಐ ಫೋನ್ ಮೊಬೈಲ್ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿ ಗಮನ ಸೆಳೆದಿದೆ. ಐ ಫೋನ್ ಇತಿಹಾಸದ ಹೆಗ್ಗುರುತಾಗಿರುವ ಐಫೋನ್ ಮೊದಲ ತಲೆಮಾರಿನ ಮೊಬೈಲ್ಗಳ (ಸೀಲ್ಡ್ ಪ್ಯಾಕ್)ಗಳು ಇಂದೀಗೂ ಅಭಿಮಾನ ಬಳಗವನ್ನು ಹೊಂದಿದ್ದು, ಹರಾಜಿನಲ್ಲಿ ಅತಿ ಹೆಚ್ಚಿನ ಮೌಲ್ಯಕ್ಕೆ ಮಾರಾಟವಾಗಿದೆ. ಅದರಂತೆ ಈ ಬಾರಿ ಕೂಡ ಐಫೋನ್ನ ಮೊದಲ ತಲೆಮಾರಿನ ಸೀಲ್ಡ್ ಪ್ಯಾಕ್ ಹಾರಾಜಿನಲ್ಲಿ 54.904 ಡಾಲರ್ ಅಂದರೆ 45 ಲಕ್ಷಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.
ಐಫೋನ್ ಮೊದಲ ತಲೆಮಾರಿನ ಮೊಬೈಲ್ ಬೆಲೆ 599 ಡಾಲರ್ ಅಂದರೆ, 49,473.19 ರೂ ಇತ್ತು. 2007ರಲ್ಲಿ ಈ ಫೋನ್ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅಂದಿಗೆ ಇಂಟರ್ನೆಟ್ ಮತ್ತು ಮಲ್ಟಿ ಮೀಡಿಯಾ ಸೌಲಭ್ಯವನ್ನು ಹೊಂದಿರುವ ಈ ಸ್ಮಾರ್ಟ್ಫೋನ್ ಮೊಬೈಲ್ ಜಗತ್ತಿನಲ್ಲಿ ಹೊಸ ಬೆಳವಣಿಗೆಗೆ ಕಾರಣವಾಯಿತು. ಆಪಲ್‌ನ ಮಾಜಿ ಉದ್ಯೋಗಿಯೊಬ್ಬರು ಮೂಲ ಐಫೋನ್ ಅನ್ನು ಆರ್ಆರ್ ಹರಾಜಿನಲ್ಲಿ ಖರೀದಿಸಿದರು.
ಆ್ಯಪಲ್-1 ಕಂಪ್ಯೂಟರ್ ಕೂಡ ಇದೇ ಆರ್ಆರ್ ಹಾರಾಜಿನಲ್ಲಿ ಮಾರುಕಟ್ಟೆಯಾಯಿತು. ಇದು ಮಾರಾಟವಾದ ಮೊತ್ತದ ಕುರಿತು ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಇದರ ಜೊತೆಗೆ ಆ್ಯಪಲ್ ಉತ್ಪನ್ನಗಳನ್ನು ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಐಫೋನ್ 11ಕ್ಕೆ ಆ್ಯಪಲ್ ಸಿಇಒ ಟಿಮ್ ಕುಕ್ 4000 ಡಾಲರ್ಗೆ ಸಹಿ ಹಾಕಿದ್ದರು.
ಈ ಹಿಂದೆ ಕೂಡ ದಾಖಲೆ ಮೊತ್ತಕ್ಕೆ ಮಾರಾಟ: ಕಳೆದ ತಿಂಗಳು ಮೊದಲ ತಲೆಮಾರಿನ ಐಫೋನ್ ದಾಖಲೆ ಮಟ್ಟದ ಮೊತ್ತಕ್ಕೆ ಅಂದರೆ 52 ಲಕ್ಷಕ್ಕೆ ಮಾರಾಟವಾಗಿತ್ತು. 2007ರಲ್ಲಿ ಬಿಡುಗಡೆಯಾದ ಐಫೋನ್ ಮಾರಾಟವಾದ ದಾಖಲೆ ಮಾರಾಟ ಬೆಲೆ ಇದಾಗಿದೆ. ಏತನ್ಮಾಥ್ಯೆ, ಆಗಸ್ಟ್ನಲ್ಲಿ ಕೂಡ ಓಪನ್ ಆಗದ 2007ರ ಐಫೋನ್ ಸೀಲ್ಡ್ ಬಾಕ್ಸ್ 35 ಡಾಲರ್ಗೆ ಅಂದರೆ 28 ಲಕ್ಷಕ್ಕೆ ಅಮೆರಿಕದಲ್ಲಿ ಬಿಡುಗಡೆಯಾಗಿತ್ತು.
ಮೊದಲ ತಲೆಮಾರಿನ ಐಫೋನ್ ವೈಶಿಷ್ಟ್ಯತೆ: ಜೂನ್ 9, 2007ರಲ್ಲಿ ಸ್ಟೀವ್ ಜಾಬ್ಸ್ ಸ್ಯಾನ್ ಫ್ರಾನ್ಸಿಸ್ಕೊದ ಟ್ರೆಡ್ ಶೋ ಮ್ಯಾಕ್ವರ್ಲ್ಡ್ನಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ ಐದು ತಿಂಗಳ ಬಳಿಕ ಯುರೋಪ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಯಿತು. ಅತ್ಯುತ್ತಮ ವಿನ್ಯಾಸ ಮತ್ತು ರೆಸಲ್ಯೂಷನ್, ಧ್ವನಿ ನಿಯಂತ್ರಣ, ಟಚ್ ಸ್ಕ್ರೀನ್, ವೆಬ್ ಬ್ರೌಸಿಂಗ್ ಸಾಮರ್ಥ್ಯ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಈ ಸ್ಮಾರ್ಟ್ಫೋನ್ ಹೊಂದಿತ್ತು. ಐಫೋನ್ 3ಜಿಯನ್ನು ಆಪೆಲ್ 2008ರ ಜುಲೈ 11ರಂದು ಮೊದಲ ಬಾರಿಗೆ ಅನ್ನುವಂತೆ ಇವು ಆರು ದೇಶಗಳೂ ಸೇರಿ ಒಟ್ಟು ಇಪ್ಪತ್ತೆರಡು ದೇಶಗಳಲ್ಲಿ ಬಿಡುಗಡೆಗೊಳಿಸಿತು.
ವಿಶೇಷ ಅಭಿಮಾನಿ ಬಳಗ ಹೊಂದಿರುವ ಆ್ಯಪಲ್: ಆ್ಯಪಲ್ ಫೋನ್ಗೆ ಹೆಚ್ಚಿನ ನಿಷ್ಠಾವಂತ ಅಭಿಮಾನಿ ಬಳಗ ಇದೆ. ಹೊಸ ವಿನ್ಯಾಸ, ತಾಂತ್ರಿಕತೆ ಹೊಂದಿರುವ ಇದು ಸಾಂಸ್ಕೃತಿಕ ಜೊತೆ ಟೆಕ್ ಇತಿಹಾಸದಲ್ಲಿ ಹೆಗ್ಗುರುತುಗಳನ್ನು ಪರಿಗಣಿಸುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಗೆ ಸಜ್ಜಾದ iQOO Z7 5G; ಇಲ್ಲಿದೆ ಈ ಸ್ಮಾರ್ಟ್ಫೋನ್ನ ವಿಶೇಷತೆ