ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಮ್ಯಾಪ್ಗಳನ್ನು ಕೆಲವು ಬಾರಿ ಬೇರೆ ಸ್ಥಳ ಅಥವಾ ದಿಕ್ಕು ತಪ್ಪಿಸಿ ಪ್ರಯಾಣಿಕರನ್ನು ಪೇಚಿಗೆ ಸಿಲುಕುವ ಪ್ರಕರಣಗಳು ವರದಿಯಾಗಿವೆ. ಆದರೆ, ಈ ಗೂಗಲ್ ಮ್ಯಾಪ್ ಬಳಸಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಳ್ಳುವಂತೆ ಆಗಿರುವ ಘಟನೆ ನಡೆದಿದ್ದು, ಇದರಿಂದ ವ್ಯಕ್ತಿಯ ಕುಟುಂಬಸ್ಥರು ಇದೀಗ ಗೂಗಲ್ ವಿರುದ್ಧ ಮೊಕದ್ದಮೆ ಹೂಡಿರುವ ಪ್ರಸಂಗ ಅಮೆರಿಕದಲ್ಲಿ ನಡೆದಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪಿಲಿಪ್ ಪಾಕ್ಸೊನ್ ಎಂಬ ವ್ಯಕ್ತಿ ಗೂಗಲ್ ಮ್ಯಾಪ್ ಬಳಸಿ ಹೋಗುತ್ತಿದ್ದ. ಈ ವೇಳೆ ಈ ಮ್ಯಾಪ್ ಆತನಿಗೆ 2013ರಲ್ಲಿ ಉತ್ತರ ಕೆರೊಲಿನಾದ ಹಿಕೋರಿಯಲ್ಲಿ ಕುಸಿದುಬಿದ್ದ ಸೇತುವೆ ಮಾರ್ಗ ಸೂಚಿಸಿದ್ದು, ಇದೇ ಮಾರ್ಗದಲ್ಲಿ ಚಲಿಸಿದ ಆತ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದರಿಂದ ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ವಿರುದ್ಧ ಪಾಕ್ಸೊನ್ ಹೆಂಡತಿ ಅಲಿಸಿಯ ಮೊಕದ್ದಮೆ ದಾಖಲಿಸಿದ್ದಾರೆ. ಪಾಕ್ಸೊನ್ ತನ್ನ ಮಗಳ 9ನೇ ಹುಟ್ಟುಹಬ್ಬ ಆಚರಣೆಗೆ ಅಪರಿಚಿತವಾಗಿರುವ ಪಕ್ಕದ ಸ್ಥಳಕ್ಕೆ ಗೂಗಲ್ ಮ್ಯಾಪ್ ಆಧರಿಸಿ ಪ್ರಯಾಣ ನಡೆಸಿದ್ದಾನೆ. ಈ ವೇಳೆ ಗೂಗಲ್ ಮ್ಯಾಪ್ ಆತನಿಗೆ ಸ್ನೋ ಕ್ರಿಕ್ ಸೇತುವೆಯನ್ನು ದಾಟುವಂತೆ ಸೂಚಿಸಿದೆ.
ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ನೌಕ ಪಡೆಯ ಪರಿಣಿತರು ಆತನ ದೇಹವನ್ನು ಮುಳುಗಿದ್ದ ಟ್ರಕ್ನಲ್ಲಿ ಪತ್ತೆ ಮಾಡಿದರು. ಫ್ಯಾಕ್ಸನ್ 20 ಅಡಿಯ ಕಣಿವೆಯ ಪ್ರದೇಶದಲ್ಲಿ ಕಾರನ್ನು ಚಲಾಯಿಸಿದ್ದು, ಈ ರಸ್ತೆಯ ಅಪಾಯದ ಬಗ್ಗೆ ಕೂಡ ಯಾವುದೇ ಎಚ್ಚರಿಕೆ ಫಲಕಗಳು ಕೂಡ ಹಾಕಿರಲಿಲ್ಲ ಎಂದು ದೂರಿದ್ದಾರೆ.
ನಮ್ಮ ಮಗಳು ತಂದೆ ಹೇಗೆ ಮತ್ತು ಯಾಕೆ ಸಾವನ್ನಪ್ಪಿದರು ಎಂದು ಕೇಳಿದಾಗ ನನಗೆ ಮಾತೇ ಬರಲಿಲ್ಲ. ನನಗೆ ಇನ್ನೂ ಅರ್ಧವಾಗುತ್ತಿಲ್ಲ, ಹೇಗೆ ಜಿಪಿಎಸ್ ನಿರ್ದೇಶನ ಜೀವ ಕಳೆಯಿತು ಎಂದಿದ್ದಾರೆ.
ಪಾಕ್ಸೊನ್ ಸಾವಿನ ನಂತರ ಗೂಗಲ್ ಮ್ಯಾಪ್ ಅನೇಕ ಬಾರಿ ಜನರು ಗೂಗಲ್ಗೆ ಮಾರ್ಗದ ಮಾಹಿತಿಯನ್ನು ಅಪ್ಡೇಟ್ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಕೂಡ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಗೂಗಲ್ ವಕ್ತಾರ, ಕಂಪನಿ ಪಾಕ್ಸೊನ್ ಸಾವು ಮತ್ತು ಆತನ ಕುಟುಂಬದ ಬಗ್ಗೆ ಮರುಕವನ್ನು ಹೊಂದಿದೆ. ನಮ್ಮ ಗುರಿ ಮ್ಯಾಪ್ ಬಳಸುವವರಿಗೆ ಸರಿಯಾದ ಮಾರ್ಗದ ಮಾಹಿತಿ ಒದಗಿಸುವುದಾಗಿದೆ. ತಾವು ಈ ಮೊಕದ್ದಮೆಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಒಂದೇ ದಿನದಲ್ಲಿ 7 ಲಕ್ಷ ವಹಿವಾಟು ದಾಖಲಿಸಿದ ಬಿಟ್ ಕಾಯಿನ್; 2 ವರ್ಷಗಳಲ್ಲೇ ಗರಿಷ್ಠ