ETV Bharat / science-and-technology

10ಕ್ಕೂ ಹೆಚ್ಚು ನಕಲಿ ಚಾಟ್​ಜಿಪಿಟಿ ಲಿಂಕ್ ಬ್ಲಾಕ್ ಮಾಡಿದ ಫೇಸ್​ಬುಕ್

author img

By

Published : May 8, 2023, 4:09 PM IST

ತನ್ನ ಪ್ಲಾಟ್​ಫಾರ್ಮ್​ನಲ್ಲಿ ಹಾಕಲಾಗಿದ್ದ 10ಕ್ಕೂ ಹೆಚ್ಚು ನಕಲಿ ಚಾಟ್ ಜಿಪಿಟಿ ಆ್ಯಪ್​ಗಳ ಲಿಂಕ್​ಗಳನ್ನು ಫೇಸ್​ಬುಕ್ ತೆಗೆದು ಹಾಕಿದೆ.

Facebook blocks more than 10 fake ChatGPT apps trying to frame users

ವಾಶಿಂಗ್ಟನ್ (ಅಮೆರಿಕ) : ಬಳಕೆದಾರರನ್ನು ವಂಚಿಸುವ ಉದ್ದೇಶದಿಂದ ಅಪ್ಲೋಡ್ ಮಾಡಲಾಗಿದ್ದ 10 ಕ್ಕೂ ನಕಲಿ ಚಾಟ್​ ಜಿಪಿಟಿ ಆ್ಯಪ್​ಗಳ ಲಿಂಕ್​ಗಳನ್ನು ಫೇಸ್ ಬುಕ್ ಬ್ಲಾಕ್ ಮಾಡಿದೆ. ಜನರನ್ನು ವಂಚಿಸಿ, ಅವರು ತಮ್ಮ ಕಂಪ್ಯೂಟರ್​ಗೆ ಹಾನಿಕಾರಕ ಸಾಫ್ಟವೇರ್ ಮತ್ತು ಬ್ರೌಸರ್ ಆ್ಯಡ್ ಆನ್​ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ನಕಲಿ ಆ್ಯಪ್​ಗಳ ಲಿಂಕ್​ಗಳನ್ನು ಫೇಸ್​ಬುಕ್​ನಲ್ಲಿ ಹಾಕಲಾಗಿತ್ತು. ಚಾಟ್​ ಜಿಪಿಟಿಯ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕ್ರಿಮಿನಲ್​ಗಳು ಸೈಬರ್ ದಾಳಿಗಳನ್ನು ನಡೆಸುವ ಮೂಲಕ ಇಡೀ ಇಂಟರ್ನೆಟ್​ನಲ್ಲಿ ಅಕೌಂಟ್​ಗಳನ್ನು ಹ್ಯಾಕ್ ಮಾಡುವ ದುಷ್ಕೃತ್ಯದಲ್ಲಿ ತೊಡಗಿದ್ದರು.

ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿರುವ ಮೆಟಾ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಶೇರ್ ಮಾಡಲಾಗಿದ್ದ 1,000 ವಿವಿಧ ದುರುದ್ದೇಶಪೂರಿತ URL ಗಳನ್ನು ತೆಗೆದು ಹಾಕಿದೆ. ಇಂಥ ಯುಆರ್​ಎಲ್​ ಗಳ ಬಗ್ಗೆ ಇತರ ಫೈಲ್ ಶೇರಿಂಗ್ ಪ್ಲಾಟ್​ಫಾರ್ಮ್​ಗಳಿಗೆ ಕೂಡ ಫೇಸ್ ಬುಕ್ ಮಾಹಿತಿ ನೀಡಿದೆ. ಆನ್ಲೈನ್ ಫ್ರಾಡ್​ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಟರ್ನೆಟ್​ ಈಗ ಮೊದಲಿಗಿಂತಲೂ ಹೆಚ್ಚು ಅಪಾಯಕಾರಿಯಾಗುತ್ತಿದೆ. ಹೀಗಾಗಿ ಮೆಟಾ ದಂಥ ಬೃಹತ್ ಸೋಶಿಯಲ್ ಮೀಡಿಯಾ ಕಂಪನಿಗಳು ಸಹ ಇಂಥ ಅಪಾಯಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುತ್ತಿವೆ. ಚಾಟ್ ಜಿಪಿಟಿ ವಿಚಾರದಲ್ಲಿ ಬಳಕೆದಾರರು ಈಗ ಮೊದಲಿಗಿಂತ ಹೆಚ್ಚು ಜಾಗರೂಕರಾಗಿರಬೇಕಿದೆ. ವಿಶ್ವಾಸಾರ್ಹ ವೆಬ್​ಸೈಟ್​ಗಳಿಂದ ಮಾತ್ರ ಚಾಟ್ ಜಿಪಿಟಿ ಅಪ್ಲಿಕೇಶನ್​ಗಳನ್ನು ಡೌನ್ಲೋಡ್ ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾದ ಚಾಟ್‌ಜಿಪಿಟಿ, ಮಾನವನ ಪ್ರತಿಕ್ರಿಯೆಗಳನ್ನು ಹೋಲುವ ಪ್ರತಿಕ್ರಿಯೆಗಳನ್ನು ಉತ್ಪಾದಿಸುವ ಪ್ರಭಾವಶಾಲಿ ಸಾಮರ್ಥ್ಯದಿಂದಾಗಿ ತ್ವರಿತವಾಗಿ ಅತ್ಯಂತ ಜನಪ್ರಿಯ ಅಪ್ಲಿಕೇಶನ್​ಗಳಲ್ಲಿ ಒಂದಾಗಿದೆ. ಇಷ್ಟೊಂದು ಜನಪ್ರಿಯತೆ ಗಳಿಸುವ ಯಾವುದೇ ವಿಷಯದಲ್ಲಿ ಅದರ ದುರ್ಲಾಭ ಪಡೆಯಲು ಕೆಲವರು ಮುಂದಾಗುವುದು ಸಹಜ. ಇದರ ಪರಿಣಾಮವಾಗಿ, ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ನಲ್ಲಿ ಹಲವಾರು ನಕಲಿ ಚಾಟ್‌ಜಿಪಿಟಿ ಅಪ್ಲಿಕೇಶನ್‌ಗಳು ಹೊರಹೊಮ್ಮಿವೆ. ಉಚಿತ ಎಂದು ಹೇಳಿಕೊಳ್ಳುವ ಈ ಆ್ಯಪ್​ಗಳು ಜನರನ್ನು ವಂಚಿಸುತ್ತಿವೆ.

ಚಾಟ್ ಜಿಪಿಟಿಯ ಅಗಾಧ ಜನಪ್ರಿಯತೆ ಮತ್ತು ವೇಗದ ಬೆಳವಣಿಗೆಯಿಂದಾಗಿ, OpenAI ಟೂಲ್‌ನ ಬಳಕೆಯನ್ನು ನಿಯಂತ್ರಿಸುವುದು ಅಗತ್ಯವಾಗಿತ್ತು. ಹೀಗಾಗಿ ಚಾಟ್‌ಜಿಪಿಟಿ ಪ್ಲಸ್ ಎಂಬ ಪಾವತಿಸಿ ಬಳಸುವ ವರ್ಷನ್ ಅನ್ನು ಜಾರಿಗೊಳಿಸಲಾಗಿತ್ತು. ಈ ಯೋಜನೆಯಡಿ ಪ್ರತಿ ತಿಂಗಳಿಗೆ 20 ಡಾಲರ್ ಪಾವತಿಸಿ ಚಾಟ್​ ಜಿಪಿಟಿಯನ್ನು ಯಾವುದೇ ನಿರ್ಬಂಧಗಳಿಲ್ಲದೆ ಬಳಸಬಹುದಾಗಿದೆ. ಪಾವತಿಸಿದ ವರ್ಷನ್ ಪರಿಣಾಮವಾಗಿ, ಚಾಟ್‌ಜಿಪಿಟಿಯ ಪ್ರೀಮಿಯಂ ಆವೃತ್ತಿಗೆ ತಡೆರಹಿತ ಮತ್ತು ಉಚಿತ ಪ್ರವೇಶವನ್ನು ಸುಳ್ಳು ಭರವಸೆ ನೀಡುವ ಮೂಲಕ ಹ್ಯಾಕರ್‌ಗಳು ಉಪಕರಣದ ಜನಪ್ರಿಯತೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಇಂಥ ನಕಲಿ ಆಫರ್​ಗಳು ಮಾಲ್‌ವೇರ್ ಅನ್ನು ಸ್ಥಾಪಿಸಲು ಅಥವಾ ಬಳಕೆದಾರರ ಖಾತೆಯ ಮಾಹಿತಿಗಳನ್ನು ಕಳ್ಳತನ ಮಾಡುವ ಉದ್ದೇಶಗಳನ್ನು ಹೊಂದಿವೆ. ಗ್ರಾಹಕರನ್ನು ವಂಚಿಸಲು ಸೈಬರ್ ವಂಚಕರು ಮೊದಲಿಗೆ ನಕಲಿ ವೆಬ್‌ಸೈಟ್ ಅನ್ನು ರಚಿಸುತ್ತಾರೆ. ಅನ್ ಲಿಮಿಟೆಡ್ ಚಾಟ್‌ಜಿಪಿಟಿ ಬಳಕೆಯ ಸೌಲಭ್ಯ ನೀಡುವುದಾಗಿ ಇದರಲ್ಲಿ ಹೇಳಿಕೊಳ್ಳುತ್ತಾರೆ. ಜೊತೆಗೆ ಅದನ್ನು ಪ್ರಚಾರ ಮಾಡಲು ಫೇಸ್‌ಬುಕ್ ಪೇಜ್ ಅನ್ನು ಸಹ ಕ್ರಿಯೇಟ್ ಮಾಡುತ್ತಾರೆ.

ಇದನ್ನೂ ಓದಿ : ಚಾಟ್​ಜಿಪಿಟಿ ತಯಾರಕ OpenAI ಗೆ 540 ಮಿಲಿಯನ್ ಡಾಲರ್ ನಷ್ಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.