ಚೆನ್ನೈ: ಹೆಲಿಕಾಪ್ಟರ್ ಶಾಟ್ ಬ್ಯಾಟಿಂಗ್ಗೆ ಹೆಸರಾಗಿರುವ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಗ್ರಾಹಕರು ಬಳಸಬಹುದಾದ ಡ್ರೋನ್ ಕ್ಯಾಮೆರಾವೊಂದನ್ನು ಲಾಂಚ್ ಮಾಡಿದ್ದಾರೆ. ವಿಶೇಷವೆಂದರೆ ಇದಕ್ಕೆ ಡ್ರೋನಿ ಎಂದು ಹೆಸರಿಡಲಾಗಿದೆ. ನಗರ ಮೂಲದ ಡ್ರೋನ್ ಸ್ಟಾರ್ಟ್‌ಅಪ್ ಗರುಡಾ ಏರೋಸ್ಪೇಸ್ ಇದನ್ನು ತಯಾರಿಸಿದೆ. ಡ್ರೋನಿ ಡ್ರೋನ್ ಇದು ಕ್ವಾಡ್‌ಕಾಪ್ಟರ್ ಕ್ಯಾಮೆರಾ ಡ್ರೋನ್ ಆಗಿದೆ.
ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅಗ್ನಿಶ್ವರ್ ಜಯಪ್ರಕಾಶ್ ಪ್ರಕಾರ, ಡ್ರೋನ್ ಅನ್ನು ವಿವಿಧ ಕಣ್ಗಾವಲು ಉದ್ದೇಶಗಳಿಗಾಗಿ ಬಳಸಬಹುದು ಮತ್ತು 2022 ರ ಅಂತ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಗರುಡ ಏರೋಸ್ಪೇಸ್ ಭಾನುವಾರ ಕೃಷಿ ಕೀಟನಾಶಕ ಸಿಂಪಡಣೆಗೆ ಬಳಸುವ ಬ್ಯಾಟರಿ ಚಾಲಿತ ಹೊಸ ಕಿಸಾನ್ ಡ್ರೋನ್ ಅನ್ನು ಬಿಡುಗಡೆ ಮಾಡಿದೆ. ದಿನಕ್ಕೆ 30 ಎಕರೆಗಳಷ್ಟು ಭೂಪ್ರದೇಶದಲ್ಲಿ ಇದನ್ನು ಬಳಸಿ ಕೀಟನಾಶಕ ಸಿಂಪಡಿಸಬಹುದು.
ಡ್ರೋನ್ ಮಾನವರಹಿತ ವೈಮಾನಿಕ ವಾಹನವಾಗಿದೆ (UAV). ಇದನ್ನು ವಿವಿಧ ಉದ್ದೇಶಗಳಿಗಾಗಿ ದೂರದಿಂದಲೇ ನಿಯಂತ್ರಿಸಬಹುದು. ಡ್ರೋನ್‌ಗಳು ಸಾಮಾನ್ಯವಾಗಿ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಕಣ್ಗಾವಲುಗಳೊಂದಿಗೆ ಸಂಬಂಧ ಹೊಂದಿವೆ. ಆದಾಗ್ಯೂ, ಈ ಸಣ್ಣ ಮಾನವರಹಿತ ರೋಬೋಟ್‌ಗಳನ್ನು ವಿಡಿಯೋ ಕ್ಯಾಮೆರಾ ಸಾಧನಗಳೊಂದಿಗೆ ಸಜ್ಜುಗೊಳಿಸುವ ಮೂಲಕ, ಇವನ್ನು ವಾಣಿಜ್ಯ ಮತ್ತು ವೈಯಕ್ತಿಕ ವಿಷಯಗಳಲ್ಲಿ ಬಳಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಶೀಘ್ರ ಬರಲಿವೆ ಬೇಕಾದಲ್ಲಿಗೆ ನಮ್ಮನ್ನು ಕರೆದೊಯ್ಯಬಲ್ಲ ಡ್ರೋನ್