ETV Bharat / science-and-technology

ವಾಟ್ಸ್​​ಆ್ಯಪ್​​​​​​ನಿಂದ ಮತ್ತೊಂದು ಹೊಸ ಫೀಚರ್ಸ್: ಕ್ರಿಯೇಟ್​ ಕಾಲ್​ ಲಿಂಕ್​ ಮೂಲಕ ಗ್ರೂಪ್​ ಕಾಲ್​ - ಮೊಬೈಲ್​​ಗಳು ಮತ್ತು ಗ್ಯಾಜೆಟ್​ಗಳು

ವಾಟ್ಸ್​ಆ್ಯಪ್​​ ದಿನದಿಂದ ದಿನಕ್ಕೆ ಒಂದಲ್ಲ ಒಂದು ಫೀಚರ್‌ಗಳನ್ನು ನೀಡುತ್ತಾ ಬರುತ್ತಿದೆ. ಈ ರೀತಿ ಮಾಡುವುದರಿಂದಲೇ ವಾಟ್ಸ್​ಆ್ಯಪ್​​ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದೀಗ ವಾಟ್ಸ್​ಆ್ಯಪ್​ ​ ಕ್ರಿಯೇಟ್​ ಕಾಲ್​ ಲಿಂಕ್ ಎಂಬ ಹೊಸ ಫೀಚರ್​ನನ್ನು ಹೊರ ತಂದಿದೆ.

ವಾಟ್ಸಾಪ್
ವಾಟ್ಸಾಪ್
author img

By

Published : Oct 26, 2022, 1:08 PM IST

Updated : Oct 26, 2022, 1:16 PM IST

ನವದೆಹಲಿ: ಮೆಟಾ ಹಿಡಿತದಲ್ಲಿರುವ ಮೆಸೇಜಿಂಗ್‌ ಆ್ಯಪ್‌ಗಳಲ್ಲಿ ವಾಟ್ಸ್​ಆ್ಯಪ್​​ ಕೂಡಾ ಒಂದು. ಈ ವಾಟ್ಸ್​ಆ್ಯಪ್​ ದಿನದಿಂದ ದಿನಕ್ಕೆ ಒಂದಲ್ಲ ಒಂದು ಫೀಚರ್‌ಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ಇದು ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ವೈಶಿಷ್ಟ್ಯ ಪರಿಚಯಿಸಿದೆ. ಹೌದು, ಜೂಮ್ ಮತ್ತು ಗೂಗಲ್ ಮೀಟ್‌ನಂತೆಯೇ ಒಂದೇ ಸಮಯದಲ್ಲಿ ಹೆಚ್ಚಿನ ಜನರೊಂದಿಗೆ ಇನ್ಮುಂದೆ ವಾಟ್ಸ್​ಆ್ಯಪ್​ನಲ್ಲಿ ಕರೆ ಮಾಡಬಹುದಾಗಿದೆ.

ಇದಕ್ಕಾಗಿ ವಾಟ್ಸ್​ಆ್ಯಪ್​ ಕ್ರಿಯೇಟ್ ಕಾಲ್ ಲಿಂಕ್ ಎಂಬ ಹೊಸ ಫೀಚರ್​ ತಂದಿದೆ. ಈ ವೈಶಿಷ್ಟ್ಯ ಈಗಾಗಲೇ ಅನೇಕ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಇತರ ಆ್ಯಪ್‌ಗಳಿಗಿಂತ ಭಿನ್ನವಾಗಿ ಗ್ರೂಪ್ ಕಾಲಿಂಗ್​ ಅನ್ನು ಬಳಕೆದಾರರಿಗೆ ಹೆಚ್ಚು ಸುಲಭವಾಗಿಸಲು ಈ ವೈಶಿಷ್ಟ್ಯ ಪರಿಚಯಿಸಲಾಗಿದೆ ಎಂದು ವಾಟ್ಸ್​ಆ್ಯಪ್​​ ಹೇಳೀದೆ.

ಈ ಹೊಸ ಫೀಚರ್​​ನನ್ನು ಬಳಸುವುದು ಹೇಗೆ ಗೊತ್ತಾ?:

  • ವಾಟ್ಸ್​ಆ್ಯಪ್​ ​​ ಓಪನ್​ ಮಾಡಿ, ಬಳಿಕ ಚಾಟ್ ಪೇಜ್​​ನಲ್ಲಿರುವ ಕರೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಕ್ರಿಯೇಟ್ ಕಾಲ್ ಲಿಂಕ್ ಫೀಚರ್​ ಕಾಣಲಿದೆ.
  • ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ಕರೆ ಪ್ರಕಾರ - ಆಡಿಯೋ/ವಿಡಿಯೋ, ವಾಟ್ಸ್​ಆ್ಯಪ್​ ಮೂಲಕ ಲಿಂಕ್ ಕಳುಹಿಸಿ, ಲಿಂಕ್ ಅನ್ನು ಕಾಪಿ ಅಥವಾ ಲಿಂಕ್ ಅನ್ನು ಹಂಚಿಕೊಳ್ಳಿ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
  • ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರು ಆಯ್ಕೆ ಮಾಡಿದ ಕರೆ ಪ್ರಕಾರವನ್ನು ಆಧರಿಸಿ ಲಿಂಕ್ ಅನ್ನು ರಚಿಸಲಾಗಿದೆ. ಬಳಕೆದಾರರು ವಾಟ್ಸ್​ಆ್ಯಪ್​​​ ಮೂಲಕ ಲಿಂಕ್ ಅನ್ನು ಇತರರಿಗೆ ಕಳುಹಿಸಬಹುದು, ಕಾಪಿ ಮಾಡಬಹುದು ಅಥವಾ ಹಂಚಿಕೊಳ್ಳಬಹುದು.
  • ಇತರ ಬಳಕೆದಾರರು ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಅವರು ಎರಡು ಆಯ್ಕೆಗಳನ್ನು ನೋಡುತ್ತಾರೆ. ಅವುಗಳೆಂದರೇ, ಜಾಯಿನ್​ ಅಥವಾ ಲೀವ್​. ಜಾಯಿನ್​​ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಗುಂಪು ಕರೆಯಲ್ಲಿ ಭಾಗವಹಿಸಬಹುದು. ಬಳಕೆದಾರರು ಒಮ್ಮೆ ರಚಿಸಿದ ಲಿಂಕ್ ಅನ್ನು 90 ದಿನಗಳವರೆಗೆ ಬಳಸಬಹುದು ಎಂದು ಟೆಕ್ ತಜ್ಞರು ಭಾವಿಸುತ್ತಾರೆ. ಈ ಬಗ್ಗೆ ವಾಟ್ಸ್​ಆ್ಯಪ್​ನಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.
  • ಈ ಲಿಂಕ್ ಮೂಲಕ ಒಂದೇ ಬಾರಿಗೆ ಎಷ್ಟು ಜನರು ಗುಂಪು ಕರೆಯಲ್ಲಿ ಭಾಗವಹಿಸಬಹುದು ಎಂಬುದೂ ಅಸ್ಪಷ್ಟವಾಗಿದೆ. ಪ್ರಸ್ತುತ ಅಪ್‌ಡೇಟ್‌ನ ಪ್ರಕಾರ, ಒಂದು ಬಾರಿಗೆ 32 ಜನರು ವಾಟ್ಸ್​ಆ್ಯಪ್​ನಲ್ಲಿ ಭಾಗವಹಿಸಬಹುದು. ಶೀಘ್ರದಲ್ಲೇ ಈ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ವರದಿಯಾಗಿದೆ.
  • ಇತ್ತೀಚಿಗೆ ವಾಟ್ಸ್​ಆ್ಯಪ್​ ಗ್ರೂಪ್ ಸದಸ್ಯರ ಸಂಖ್ಯೆಯನ್ನು 512 ರಿಂದ 1024 ಕ್ಕೆ ಹೆಚ್ಚಿಸಲು ಪರೀಕ್ಷೆಯನ್ನು ಪ್ರಾರಂಭಿಸಿದೆ. ಈ ವೈಶಿಷ್ಟ್ಯವನ್ನು ಗ್ರೂಪ್ ಕಾಲಿಂಗ್‌ಗೂ ಪರಿಚಯಿಸುವಮತೆ ಕಾಣುತ್ತದೆ.

ಇದಲ್ಲದೆ, ವಾಟ್ಸ್​ಆ್ಯಪ್​ ಅನೇಕ ಆಂಡ್ರಾಯ್ಡ್ ಬಳಕೆದಾರರಿಗೆ ಕ್ರಿಯೇಟ್ ಅವತಾರ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ತಮ್ಮ ಆಯ್ಕೆಯ ಅವತಾರವನ್ನು ರಚಿಸಬಹುದು. ಅದರ ಆಧಾರದ ಮೇಲೆ, WhatsApp ಬಳಕೆದಾರರಿಗೆ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ನೀಡುತ್ತದೆ. ಬಳಕೆದಾರರು ಅದರಲ್ಲಿರುವ ಅವತಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು ಮತ್ತು ಅದನ್ನು ಪ್ರೊಫೈಲ್ ಫೋಟೋ/ಡಿಪಿಯಾಗಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ:ವಾಟ್ಸ್​​ಆ್ಯಪ್​ನಿಂದ ಶೀಘ್ರದಲ್ಲೇ ಗ್ರೂಪ್ ಪೋಲಿಂಗ್ ಫೀಚರ್ ಬಿಡುಗಡೆ

Last Updated : Oct 26, 2022, 1:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.