ETV Bharat / science-and-technology

ಕೊರೊನಾ ಸಂಬಂಧಿತ ಸರ್ಚ್​​ ಬ್ಲಾಕ್ ಮಾಡಿದ ಥ್ರೆಡ್ಸ್; ಆರೋಗ್ಯ ತಜ್ಞರಿಂದ ಖಂಡನೆ

ಅಮೆರಿಕದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವರದಿಗಳು ತಿಳಿಸಿವೆ.

metas threads blcks searches related to covid

author img

By ETV Bharat Karnataka Team

Published : Sep 12, 2023, 12:36 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಅಮೆರಿಕದಲ್ಲಿ ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಕೋವಿಡ್ ಮತ್ತು ಕೊರೊನಾವೈರಸ್ ಲಸಿಕೆಗಳಿಗೆ ಸಂಬಂಧಿಸಿದ ಹುಡುಕಾಟಗಳನ್ನು ಇನ್​ಸ್ಟಾಗ್ರಾಮ್‌ನ ಥ್ರೆಡ್ಸ್ ನಿರ್ಬಂಧಿಸಿದೆ ಎಂದು ವರದಿಯಾಗಿದೆ. ಕೊರೊನಾ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಚ್ ಮಾಡದಂತೆ ನಿರ್ಬಂಧಿಸಿರುವ ಥ್ರೆಡ್ಸ್​ನ ಕ್ರಮವನ್ನು ವೈದ್ಯಕೀಯ ತಜ್ಞರು ತೀವ್ರವಾಗಿ ಟೀಕಿಸಿದ್ದಾರೆ. ಕೋವಿಡ್​ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ತುರ್ತು ವೈದ್ಯಕೀಯ ಮಾಹಿತಿಯನ್ನು ಹುಡುಕಾಡದಂತೆ ನಿರ್ಬಂಧಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಹಲವಾರು ಪದಗಳು ಸರ್ಚ್ ಆಗದಂತೆ ತಾನು ಅವುಗಳನ್ನು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿರುವುದಾಗಿ ಥ್ರೆಡ್ಸ್​ ಹೇಳಿಕೊಂಡಿದೆ. "ತಾತ್ಕಾಲಿಕವಾಗಿ ಸರ್ಚ್​ ಸೌಲಭ್ಯವು ಕೆಲ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದ ಕೀವರ್ಡ್​ಗಳನ್ನು ಹುಡುಕಿ ತೋರಿಸುವುದಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 'ಸೆಕ್ಸ್', 'ನಗ್ನ', 'ಅಶ್ಲೀಲ', 'ಕೊರೊನಾವೈರಸ್', 'ಲಸಿಕೆಗಳು' ಮತ್ತು 'ವ್ಯಾಕ್ಸಿನೇಷನ್' ಎಂಬ ಪದಗಳು ಸಹ ನಿರ್ಬಂಧಿತ ಪದಗಳಲ್ಲಿ ಸೇರಿವೆ ಎಂದು ತಿಳಿದು ಬಂದಿದೆ.

ಬಳಕೆದಾರರು ಥ್ರೆಡ್ಸ್​ನಲ್ಲಿ "ಕೋವಿಡ್" ಅಥವಾ "ಕೋವಿಡ್ -19" ಎಂದು ಟೈಪ್ ಮಾಡಿದ ನಂತರ, ಥ್ರೆಡ್ಸ್​ನಿಂದ ಅವರು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವೆಬ್​ಸೈಟ್​​ಗೆ ರಿಡೈರೆಕ್ಟ್​ ಆಗುತ್ತಾರೆ. ದೇಶಾದ್ಯಂತ ಹೊಸ ಕೋವಿಡ್ ಸೋಂಕುಗಳು ತೀವ್ರವಾಗಿ ಹೆಚ್ಚುತ್ತಿರುವ ಮಧ್ಯೆ ಥ್ರೆಡ್ಸ್ ಕ್ರಮವನ್ನು ಸಾರ್ವಜನಿಕ ಆರೋಗ್ಯ ತಜ್ಞರು ಖಂಡಿಸಿದ್ದಾರೆ.

"ದೀರ್ಘಕಾಲದ ಕೋವಿಡ್​​ನಿಂದ ಬಳಲಿದ ರೋಗಿಗಳು ಅಂಗಾಂಗ ವೈಫಲ್ಯ, ಸೋಂಕುಗಳು, ಹೃದಯದ ಘಟನೆಗಳು ಮತ್ತು ಇನ್ನಿತರ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ. ಇಂಥ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವು ಸೂಕ್ತ ವೇದಿಕೆಯಾಗಿದೆ. ಬಳಲುತ್ತಿರುವ ಮತ್ತು ಅಸಹಾಯಕ ರೋಗಿಗಳೊಂದಿಗೆ ಹೊರಜಗತ್ತಿನ ಸಂಪರ್ಕವನ್ನು ಕಡಿತಗೊಳಿಸುವುದು ಅತ್ಯಂತ ಕ್ರೂರವಾಗಿದೆ. ಇದು ಸಮರ್ಥನೀಯವಲ್ಲ" ಎಂದು ಲಾಭರಹಿತ ಸಂಘಟನೆಯಾದ ವರ್ಲ್ಡ್​ ಹೆಲ್ತ್​ ನೆಟ್​​ವರ್ಕ್​ನ ಔಟ್​ರೀಚ್ ನಿರ್ದೇಶಕಿ ಜೂಲಿಯಾ ಡಬಲ್ಡೇ ಹೇಳಿದ್ದಾರೆ.

ಹಲವಾರು ಹೊಸ ಕೋವಿಡ್ ರೂಪಾಂತರಗಳ ಏರಿಕೆಯ ಮಧ್ಯೆ, ಕಳೆದ ವಾರ ಸಿಡಿಸಿಯ ಅಂಕಿಅಂಶಗಳ ಪ್ರಕಾರ, ಯುಎಸ್​ನಲ್ಲಿ ಸಾರ್ಸ್-ಕೋವ್-2 ವೈರಸ್ ಸಂಬಂಧಿತ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇಕಡಾ 16 ರಷ್ಟು ಏರಿಕೆಯಾಗಿದೆ. ಅರ್ಕಾನ್ಸಾಸ್, ಕೊಲೊರಾಡೊ, ಇಂಡಿಯಾನಾ, ಕಾನ್ಸಾಸ್, ಮಿನ್ನೆಸೊಟಾ, ಒಕ್ಲಹೋಮ, ಟೆನ್ನೆಸ್ಸಿ, ಉತಾಹ್ ಮತ್ತು ವ್ಯೋಮಿಂಗ್​ ಮುಂತಾದ ರಾಜ್ಯಗಳಲ್ಲಿ ಕಳೆದ ಒಂದು ವಾರದಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಜನವರಿಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಸದ್ಯ ಈ ಪ್ರಮಾಣ ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ.

ಚಳಿಗಾಲಕ್ಕೆ ಮುಂಚಿತವಾಗಿ ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಬಹುದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈ ಹಿಂದೆಯೇ ಎಚ್ಚರಿಕೆ ನೀಡಿದೆ. ಪ್ರಸ್ತುತ ಹೊಸ ಕೋವಿಡ್​ ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ದೃಢಪಟ್ಟ ಫೈಜರ್ ಮತ್ತು ಮಾಡರ್ನಾದ ಹೊಸ ಕೋವಿಡ್​ ಲಸಿಕೆಗಳನ್ನು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್​ಡಿಎ) ಅನುಮೋದಿಸಿದೆ. (ಐಎಎನ್‌ಎಸ್‌)

ಇದನ್ನೂ ಓದಿ : ಭಾರತೀಯರಲ್ಲಿ ಹೆಚ್ಚುತ್ತಿದೆ ಐಫೋನ್​ ಒಲವು; ಶೇ 7ರಷ್ಟು ಮಾರುಕಟ್ಟೆ ಪಾಲು ಪಡೆದ ಆ್ಯಪಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.