ETV Bharat / science-and-technology

ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಳ ಒಪ್ಪಂದ: ವಿಶ್ವಸಂಸ್ಥೆಯ ಪ್ರಸ್ತಾಪಕ್ಕೆ ಸಹಿ ಹಾಕದ ಭಾರತ, ಚೀನಾ - Indias renewable energy capacity

COP28 climate summit, Dubai: ಪಳೆಯುಳಿಕೆಗಳಿಂದ ಪಡೆಯುವ ಇಂಧನದ ಮೇಲೆ ಅವಲಂಬನೆ ತಗ್ಗಿಸಲು ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸುವ ಸಲುವಾಗಿ ವಿಶ್ವಸಂಸ್ಥೆ ಈ ಒಪ್ಪಂದವನ್ನು ವಿಶ್ವ ಹವಾಮಾನ ಶೃಂಗದಲ್ಲಿ (COP-28) ಪ್ರಸ್ತಾಪಿಸಿದೆ.

ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಳ ಒಪ್ಪಂದ

author img

By PTI

Published : Dec 3, 2023, 7:11 AM IST

ದುಬೈ: 2030ರ ವೇಳೆಗೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಏಷ್ಯಾದ ಬಲಿಷ್ಠ ರಾಷ್ಟ್ರಗಳಾದ ಭಾರತ ಮತ್ತು ಚೀನಾ ದೂರ ಉಳಿದಿವೆ. ಇದೇ ವೇಳೆ ಒಪ್ಪಂದಕ್ಕೆ ಹಲವು ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ. ದುಬೈನಲ್ಲಿ ವಿಶ್ವ ಹವಾಮಾನ ಶೃಂಗಸಭೆ ನಡೆಯುತ್ತಿದೆ.

ಜಪಾನ್, ಆಸ್ಟ್ರೇಲಿಯಾ, ಕೆನಡಾ, ಚಿಲಿ, ಬ್ರೆಜಿಲ್, ನೈಜೀರಿಯಾ, ಬಾರ್ಬಡೋಸ್ ಸೇರಿದಂತೆ 118 ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಆದರೆ ಭಾರತ ಮತ್ತು ಚೀನಾ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ದೆಹಲಿಯಲ್ಲಿ ಈಚೆಗೆ ನಡೆದಿದ್ದ ಜಿ-20 ಶೃಂಗದಲ್ಲಿ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸುವ ಬದ್ಧತೆಯನ್ನು ಭಾರತ ತೋರಿತ್ತು. ಚೀನಾ ಕೂಡ ಈ ಬಗ್ಗೆ ಅನುಮೋದನೆ ನೀಡಿದೆ. ಆದರೆ, ಕಾಪ್​ ಶೃಂಗದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಿಲ್ಲ.

ನವೀಕರಿಸಬಹುದಾದ ಇಂಧನ ಎಂದರೇನು?: ಸದ್ಯ ಜಗತ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಒಡಲಲ್ಲಿನ ಪಳೆಯುಳಿಕೆಗಳಿಂದ ಸಿಗುವ ಇಂಧನವೇ ಮೂಲವಾಗಿದೆ. ಇದು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಕಾರಣ, ಇದರ ಬಳಕೆ ತಗ್ಗಿಸುವ ಮತ್ತು ಗಾಳಿ, ನೀರು, ಜೈವಿಕ ವಸ್ತುಗಳಿಂದಲೇ ಇಂಧನವನ್ನು ಉತ್ಪತ್ತಿ ಮಾಡಿ ಅದನ್ನೇ ಬಳಸುವ ಪ್ರಕ್ರಿಯೆಯೇ ನವೀಕರಿಸಬಹುದಾದ ಇಂಧನವಾಗಿದೆ. ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರಗಳಿಗೆ ವಿದಾಯ ಹೇಳುವುದಕ್ಕೆ ಇದು ಅನುಮೋದಿಸುತ್ತದೆ.

ಪಳೆಯುಳಿಕೆಗಳಿಂದ ಪಡೆಯುವ ಇಂಧನ ಹೊರಸೂಸುವ 'ಅನ್ಬೇಟೆಡ್' ಅನ್ನು ಕಡಿಮೆ ಮಾಡುವುದೇ ಇದರ ಉದ್ದೇಶವಾಗಿದೆ. ಆದರೂ, ಈ ಪ್ರಸ್ತಾಪ ಚುರುಕು ಪಡೆದಿಲ್ಲ. ಪಳೆಯುಳಿಕೆ ಇಂಧನಗಳ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಲು 2030ರ ವೇಳೆಗೆ ಜಗತ್ತು ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಬೇಕು. ಇಂಧನ ದಕ್ಷತೆಯ ದರವನ್ನು ದ್ವಿಗುಣಗೊಳಿಸಬೇಕು ಎಂದು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ ಹೇಳಿದೆ.

ಭಾರತದ ಗುರಿ ಏನು?: ಭಾರತದ 14ನೇ ರಾಷ್ಟ್ರೀಯ ವಿದ್ಯುಚ್ಛಕ್ತಿ ಯೋಜನೆ (NEP) 2030ರ ವೇಳೆಗೆ ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚು ಮಾಡುವ ಹಾದಿಯಲ್ಲಿದೆ. ಆದರೆ, ಇದನ್ನು ಸಾಧಿಸಲು 293 ಬಿಲಿಯನ್​ ಡಾಲರ್​ ಅಗತ್ಯವಿದೆ. ನಿಗದಿತ ವೇಳೆಗೆ ಪಳೆಯುಳಿಕೆರಹಿತ ಇಂಧನ ಮೂಲಗಳಿಂದ 500 ಗಿಗಾವ್ಯಾಟ್​ ವಿದ್ಯುತ್ ಉತ್ಪಾದಿಸುವುದು ಭಾರತದ ಪ್ರಸ್ತುತ ಗುರಿಯಾಗಿದೆ. ಆದರೆ, ಕಾಪ್​ -28 ಶೃಂಗದಲ್ಲಿ 2030 ರ ವೇಳೆಗೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಒಪ್ಪಂದಕ್ಕೆ ಸಹಿ ಹಾಕದೇ ಇರುವುದು ತಜ್ಞರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: 172 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುತ್ತಿದೆ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.