ETV Bharat / science-and-technology

ಸಿಮ್ ಪೋರ್ಟೆಬಿಲಿಟಿಗೆ ಕಂಪನಿಗಳ ಕಿರಿಕಿರಿ; ಗ್ರಾಹಕರು ಹೈರಾಣು

ಸಿಮ್ ಕಾರ್ಡ್​ ಪೋರ್ಟ್​ ಮಾಡುವಾಗ ಟೆಲಿಕಾಂ ಕಂಪನಿಗಳು ಅನಗತ್ಯವಾಗಿ ನಿಧಾನ ಮಾಡುತ್ತಿವೆ ಎಂದು ಹಲವಾರು ಗ್ರಾಹಕರು ದೂರುತ್ತಿದ್ದಾರೆ.

ಸಿಮ್ ಪೋರ್ಟೆಬಿಲಿಟಿಗೆ ಕಂಪನಿಗಳ ಕಿರಿಕಿರಿ; ಗ್ರಾಹಕರು ಹೈರಾಣು
1 in 4 Indians struggled to port their mobile number in last 24 months
author img

By ETV Bharat Karnataka Team

Published : Sep 29, 2023, 3:56 PM IST

ನವದೆಹಲಿ : ಒಂದು ಟೆಲಿಕಾಂ ಕಂಪನಿಯ ಸಿಮ್ ಹೊಂದಿರುವವರು ಇನ್ನೊಂದು ಟೆಲಿಕಾಂ ಕಂಪನಿಯ ಸೇವೆಗೆ ವರ್ಗಾವಣೆಯಾಗಲು ಬಯಸಿದರೆ ಅವರು ತಮ್ಮ ಸಿಮ್ ಅನ್ನು ಪೋರ್ಟ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಪೋರ್ಟಿಂಗ್ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ತೀರಾ ಗೋಜಲಾಗುತ್ತಿರುವುದರಿಂದ ಬಳಕೆದಾರರು ಹೈರಾಣಾಗುತ್ತಿದ್ದಾರೆ. ಕಳೆದ 24 ತಿಂಗಳ ಅವಧಿಯಲ್ಲಿ ಸಿಮ್ ಪೋರ್ಟ್​ ಮಾಡಿಕೊಂಡ ಪ್ರತಿ ನಾಲ್ವರ ಪೈಕಿ ಒಬ್ಬರು ಪೋರ್ಟ್ ಮಾಡಿಕೊಳ್ಳಲು ತೀರಾ ಕಷ್ಟಪಟ್ಟಿದ್ದಾರೆ ಎಂದು ಶುಕ್ರವಾರ ಬಂದ ಹೊಸ ವರದಿಯೊಂದು ಹೇಳಿದೆ. ಕೇವಲ ಶೇ 47 ರಷ್ಟು ಗ್ರಾಹಕರು ಮಾತ್ರ ತಮ್ಮ ಪೋರ್ಟಿಂಗ್ ಸುಲಭವಾಗಿ ಆಯಿತು ಎಂದು ಹೇಳಿಕೊಂಡಿದ್ದಾರೆ.

ಆನ್ಲೈನ್ ಕಮ್ಯುನಿಟಿ ಪ್ಲಾಟ್​ಫಾರ್ಮ್ ಲೋಕಲ್ ಸರ್ಕಲ್ಸ್ ಪ್ರಕಾರ, ಶೇಕಡಾ 11 ರಷ್ಟು ಗ್ರಾಹಕರು ಪೋರ್ಟಿಂಗ್ ಪ್ರಕ್ರಿಯೆಯು ಕಷ್ಟಕರವಾಗಿತ್ತು ಎಂದು ಹೇಳಿದರು ಮತ್ತು ಶೇಕಡಾ 14 ರಷ್ಟು ಜನ ಇದು ತೀರಾ ಕಷ್ಟವಾಗಿತ್ತು ಎಂದು ಹೇಳಿದರು. ಇನ್ನು ಸುಮಾರು ಶೇಕಡಾ 23 ರಷ್ಟು ಜನ ಈ ಪ್ರಕ್ರಿಯೆ ತೀರಾ ಕಷ್ಟವಲ್ಲವಾದರೂ ಸುಲಭವಂತೂ ಅಲ್ಲ ಎಂದಿದ್ದಾರೆ. ಇನ್ನು ಶೇಕಡಾ 29 ರಷ್ಟು ಜನ ಇದು ತುಂಬಾ ಸುಲಭ ಎಂದು ಹೇಳಿದರೆ, ಶೇಕಡಾ 18 ರಷ್ಟು ಜನ ಇದು ಸುಲಭವಾಗಿತ್ತು ಎಂದಿದ್ದಾರೆ.

ಭಾರತದ 311 ಜಿಲ್ಲೆಗಳಲ್ಲಿ ವಾಸಿಸುವ ನಾಗರಿಕರಿಂದ ಬಂದ 23,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಸುಮಾರು ಶೇಕಡಾ 44 ರಷ್ಟು ಜನ ಮೊದಲ ಶ್ರೇಣಿಯ ನಗರಗಳಿಗೆ, ಶೇಕಡಾ 32 ರಷ್ಟು ಜನ ಎರಡನೇ ಶ್ರೇಣಿಯ ನಗರಗಳಿಗೆ, ಶೇಕಡಾ 24 ರಷ್ಟು ಜನ 3, 4 ನೇ ಶ್ರೇಣಿಯ ನಗರಗಳು ಮತ್ತು ಗ್ರಾಮೀಣ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಬೇರೆ ಆಪರೇಟರ್​ಗೆ ಪೋರ್ಟ್​ ಮಾಡುವಾಗ ಮೂಲ ಕಂಪನಿಯವರು ಅದಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಬಹುತೇಕರು ಹೇಳಿರುವುದು ಗಮನಾರ್ಹ.

"ಪೋರ್ಟಿಂಗ್ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರುವುದು ಅಗತ್ಯವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (ಎಂಎನ್​ಪಿ) ಯನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ." ಎಂದು ವರದಿ ಹೇಳಿದೆ.

ಪೋರ್ಟೆಬಿಲಿಟಿ ಪ್ರಕ್ರಿಯೆಯಲ್ಲಿ ನಡೆಯುವ ವಂಚನೆಗಳನ್ನು ತಪ್ಪಿಸಲು ನಿಯಮಗಳನ್ನು ಮಾರ್ಪಡಿಸಲು ಮುಂದಾಗಿರುವ ಟ್ರಾಯ್, ಅಕ್ಟೋಬರ್ 25 ರೊಳಗೆ ಕರಡು ದೂರಸಂಪರ್ಕ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (ಒಂಬತ್ತನೇ ತಿದ್ದುಪಡಿ) ನಿಯಮಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.

ಇದನ್ನೂ ಓದಿ : ಭಾರತೀಯರ ಮೆಚ್ಚಿನ ಆನ್ಲೈನ್​ ಪ್ಲಾಟ್​ಫಾರ್ಮ್ ಆದ ಯೂಟ್ಯೂಬ್; ಶಾರ್ಟ್ಸ್​ ಜನಪ್ರಿಯತೆಯೂ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.