ETV Bharat / science-and-technology

ಭಾರಿ ನಷ್ಟದಲ್ಲಿChatGPT ತಯಾರಕ OpenAI: 2024ರ ಅಂತ್ಯಕ್ಕೆ ಕಂಪನಿ ದಿವಾಳಿ ಸಾಧ್ಯತೆ! - ChatGPT maker OpenAI at huge loss

ChatGPT: ಓಪನ್​ ಎಐ ನಿರ್ಮಿತ ಚಾಟ್​ ಜಿಪಿಟಿ ಚಾಟ್​ಬಾಟ್​ನ ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ 2024ರ ಅಂತ್ಯದ ವೇಳೆಗೆ ಕಂಪನಿ ಮುಚ್ಚುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

OpenAI likely to go bankrupt
OpenAI likely to go bankrupt
author img

By

Published : Aug 14, 2023, 1:34 PM IST

ನವದೆಹಲಿ: ಚಾಟ್ ಜಿಪಿಟಿ ತಯಾರಕ ಕಂಪನಿಯಾಗಿರುವ ಓಪನ್ ಎಐ (OpenAI) ತ್ವರಿತವಾಗಿ ಮತ್ತಷ್ಟು ಫಂಡಿಂಗ್ ಪಡೆದಿದ್ದರೆ 2024 ರ ಅಂತ್ಯದ ವೇಳೆಗೆ ದಿವಾಳಿಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವರ್ಷದ ಮೊದಲ ಆರು ತಿಂಗಳಲ್ಲಿ ಚಾಟ್ ಜಿಪಿಟಿ ವೆಬ್ ಸೈಟ್ ಬಳಕೆದಾರರ ಸಂಖ್ಯೆ ನಿರಂತರವಾಗಿ ಕುಸಿತವಾಗಿದೆ ಎಂದು ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ ವರದಿ ಮಾಡಿದೆ.

ಜೂನ್​ನಲ್ಲಿ 1.7 ಬಿಲಿಯನ್ ಮತ್ತು ಮೇನಲ್ಲಿ 1.9 ಬಿಲಿಯನ್ ಇದ್ದ ಬಳಕೆದಾರರ ಸಂಖ್ಯೆ ಜುಲೈನಲ್ಲಿ 1.5 ಬಿಲಿಯನ್​ಗೆ ಇಳಿದಿದೆ ಎಂದು ವಿಶ್ಲೇಷಣಾ ಕಂಪನಿಯ ಡೇಟಾ ಬಹಿರಂಗಪಡಿಸಿದೆ. ಈ ಸಂಖ್ಯೆ ಎಪಿಐಗಳು ಅಥವಾ ಚಾಟ್ ಜಿಪಿಟಿ ಮೊಬೈಲ್ ಅಪ್ಲಿಕೇಶನ್ ಅನ್ನು ಒಳಗೊಂಡಿಲ್ಲ. ಮೇ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ರಜೆ ಇದ್ದುದರಿಂದ ಚಾಟ್​ ಜಿಪಿಟಿ ಬಳಕೆ ಹೆಚ್ಚಾಗಿತ್ತು ಎಂದು ಒಂದು ವರದಿ ಹೇಳುತ್ತದೆ. ಆದರೆ, ಮತ್ತೊಂದು ವಿಶ್ಲೇಷಣೆಯ ಪ್ರಕಾರ ಜನರು ಮೂಲ ಚಾಟ್​​ ಜಿಪಿಟಿಯ ಬದಲು ತಮ್ಮದೇ ಆದ ಬಾಟ್​ಗಳನ್ನು ನಿರ್ಮಿಸಿಕೊಂಡು ಬಳಸಲಾರಂಭಿಸಿದ್ದಾರೆ ಎನ್ನಲಾಗಿದೆ.

ಕೆಲಸದಲ್ಲಿ ಚಾಟ್ ಜಿಪಿಟಿ ಬಳಸಲು ನಮಗೆ ಅನುಮತಿ ಇಲ್ಲ. ಆದರೆ, ನಾವು ಚಾಟ್ ಜಿಪಿಟಿ ಆಧಾರಿತ ನಮ್ಮ ಸ್ವಂತ ಆಂತರಿಕ ಬಾಟ್​ ಒಂದನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಬಳಕೆದಾರರೊಬ್ಬರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಓಪನ್​ಎಐನ ಚಾಟ್​ಜಿಪಿಟಿ ಮಾನವರ ಉದ್ಯೋಗಗಳನ್ನು ನುಂಗಿ ಹಾಕಬಹುದು ಎಂಬ ಭಯ ಶುರುವಾಗಿತ್ತು. ನಂತರ ಕಳೆದ ವರ್ಷದಲ್ಲಿಯೇ ಚಾಟ್​ಜಿಪಿಟಿಯ ನಷ್ಟ ದುಪ್ಪಟ್ಟಾಗಿ 540 ಮಿಲಿಯನ್​ ಡಾಲರ್​ ಆಗಿತ್ತು.

ಪ್ರಸ್ತುತ ಚಾಟ್​​ಜಿಪಿಟಿಯ ನಿರ್ವಹಣೆಗಾಗಿ ಪ್ರತಿದಿನ 5.80 ಕೋಟಿ ರೂಪಾಯಿಗಳಷ್ಟು ಅಗಾಧ ಮೊತ್ತವನ್ನು ಓಪನ್​ಎಐ ಖರ್ಚು ಮಾಡುತ್ತಿದೆ. "ಚಾಟ್​ ಜಿಪಿಟಿಯ ನಿರ್ವಹಣೆ ವೆಚ್ಚಗಳು ಕಣ್ಣೀರು ತರಿಸುವಂತಿವೆ" ಎಂದು ಸ್ವತಃ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್​​ಮ್ಯಾನ್​ ಟ್ವೀಟ್ ಮಾಡಿರುವುದು ಗಮನಾರ್ಹ. ಓಪನ್ಎಐ, ಆಂಥ್ರೋಪಿಕ್ ಅಥವಾ ಇನ್​ಫ್ಲೆಕ್ಷನ್​ನಂಥ ಯಾವುದೇ ಪ್ರಮುಖ ಎಐ ಕಂಪನಿ ಇಷ್ಟು ಬೇಗನೆ ಐಪಿಒ ಮಾರುಕಟ್ಟೆಗೆ ಹೋಗಿ ಬಂಡವಾಳ ಕ್ರೋಢೀಕರಿಸುವುದು ಸಹ ಸಾಧ್ಯವಿಲ್ಲದ ಮಾತು ಎಂದು ವಿಶ್ಲೇಷಕರು ಹೇಳುತ್ತಾರೆ.

ಇದಲ್ಲದೆ ಬಿಲಿಯನೇರ್ ಎಲೋನ್ ಮಸ್ಕ್ ಸಹ ಪ್ರತಿಸ್ಪರ್ಧಿ ಚಾಟ್​​ಬಾಟ್​ ನಿರ್ಮಿಸುವ ಹೇಳಿಕೆಗಳೊಂದಿಗೆ ಓಪನ್​ಎಐ ಮೇಲೆ ಒತ್ತಡ ಹೆಚ್ಚಿಸುತ್ತಿದ್ದಾರೆ. ಮೈಕ್ರೋಸಾಫ್ಟ್ ಬೆಂಬಲಿತ ಓಪನ್ಎಐ 2023 ರಲ್ಲಿ ವಾರ್ಷಿಕ 200 ಮಿಲಿಯನ್ ಡಾಲರ್ ಆದಾಯವನ್ನು ಅಂದಾಜಿಸಿದೆ ಮತ್ತು 2024 ರಲ್ಲಿ 1 ಬಿಲಿಯನ್ ಡಾಲರ್ ಆದಾಯ ಪಡೆಯುವ ಗುರಿಯನ್ನು ಹೊಂದಿದೆ. ಸದ್ಯ ಓಪನ್​ಎಐ ಮೈಕ್ರೋಸಾಫ್ಟ್​​ ನೀಡಿರುವ 10 ಬಿಲಿಯನ್ ಡಾಲರ್ ಹೂಡಿಕೆಯಿಂದ ಜೀವಂತವಾಗಿದೆ.

ಓಪನ್ಎಐ ಇದೊಂದು ಖಾಸಗಿ ಸಂಶೋಧನಾ ಪ್ರಯೋಗಾಲಯವಾಗಿದ್ದು, ಇದು ಒಟ್ಟಾರೆ ಮಾನವಕುಲಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಅಭಿವೃದ್ಧಿಪಡಿಸುವ ಮತ್ತು ನಿರ್ದೇಶಿಸುವ ಗುರಿಯನ್ನು ಹೊಂದಿದೆ. ಕಂಪನಿಯು 2015 ರಲ್ಲಿ ಎಲೋನ್ ಮಸ್ಕ್, ಸ್ಯಾಮ್ ಆಲ್ಟ್​ಮ್ಯಾನ್ ಮತ್ತು ಇತರರಿಂದ ಸ್ಥಾಪಿಸಲ್ಪಟ್ಟಿತು. ಇದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಇದನ್ನೂ ಓದಿ : 'Threads' ಬಳಕೆದಾರರ ಸಂಖ್ಯೆ ಶೇ 79ರಷ್ಟು ಕುಸಿತ: ಮತ್ತೆ ಮುಂಚೂಣಿಯಲ್ಲಿ 'X'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.