ETV Bharat / science-and-technology

ಮಕ್ಕಳು ಮಲಗುವ ಮುನ್ನ ಕಥೆ ಹೇಳಲಿದೆ ಕೃತಕ ಬುದ್ಧಿಮತ್ತೆಯ ಸಾಧನ

ಎಐ ಆಧಾರಿತ ಕಥೆಗಳು ಮಕ್ಕಳಿಗೆ ಉಪಯುಕ್ತವೇ ಎನ್ನುವುದು ಚರ್ಚೆಯ ವಿಷಯ. ಇದರ ನಡುವೆ ಇದು ಕಾನೂನಾತ್ಮಕ ಮತ್ತು ನೈತಿಕ ಕಾಳಜಿಯನ್ನು ಹುಟ್ಟುಹಾಕಿದೆ.

ChatGPT created AI based model tell bedtime stories to kids

author img

By ETV Bharat Karnataka Team

Published : Dec 26, 2023, 3:55 PM IST

ಸ್ಯಾನ್​ ಫ್ರಾನ್ಸಿಸ್ಕೋ: ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿರುವ ಮಕ್ಕಳು ಇಂದು ಅಜ್ಜಿ-ಅಜ್ಜಂದಿರು ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ನಿದ್ರೆಗೆ ಜಾರುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಕೊರತೆಯನ್ನು ನೀಗಿಸಲು ಇದೀಗ ಕೃತಕ ಬುದ್ಧಿಮತ್ತೆ (ಎಐ) ಸಜ್ಜಾಗಿದೆ. ಇದಕ್ಕಾಗಿ ಚಾಟ್​ಜಿಪಿಟಿ ಹೊಸ ಎಐ ಆಧಾರಿತ ಮಾದರಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಇದು ಮಕ್ಕಳಿಗೆ ಅವರ ಇಷ್ಟದ ಪಾತ್ರದಲ್ಲಿ ಚೆಂದದ ಕಥೆಯನ್ನು ರಾತ್ರಿ ಮಲಗುವ ಮುನ್ನ ಹೇಳಲಿದೆ.

ಬ್ಲುಯಿ ಜಿಪಿಟಿ ಎಂಬ ಕಥೆ ಹೇಳುವ ಎಐ ಈಗಾಗಲೇ ಕಾರ್ಯಾರಂಭ ಮಾಡಿದೆ. ಇದು ಹೆಸರು, ವಯಸ್ಸು, ಅವರ ದಿನಗಳನ್ನು ಕೇಳುವ ಮೂಲಕ ಕಥೆ ಹೇಳಬಲ್ಲದು. ಇದರ ಸಹೋದರಿ ಬಿಂಗೋ ಕೂಡ ಇದೇ ರೀತಿ ಅದರ ಶಾಲೆಯ ಹೆಸರು, ಇರುವ ಸ್ಥಳ, ಹೊರಗಿನ ವಾತಾವರಣಗಳ ಕುರಿತು ಮಾತನಾಡುವ ಮೂಲಕ ಮಕ್ಕಳನ್ನು ಹಿಡಿದಿಡುವ ಪ್ರಯತ್ನ ನಡೆಸಲಿದೆ ಎಂದು ಲಂಡನ್​ ಮೂಲದ ಡೆವಲಪರ್​ ಲುಕೆ ವಾರ್ನರ್​ ತಿಳಿಸಿದ್ದಾರೆ.

ಎಐ ಆಧಾರಿತ ಕಥೆಗಳು ಮಕ್ಕಳಿಗೆ ಉಪಯುಕ್ತವೇ ಆದರೂ ಇದು ಕಾನೂನಾತ್ಮಕ ಮತ್ತು ನೈತಿಕ ಕಾಳಜಿಯನ್ನು ಹುಟ್ಟುಹಾಕಿದೆ. ಯುಕೆಯಲ್ಲಿ ಪಾತ್ರಗಳ ಹೆಸರು, ಪ್ರದರ್ಶನ ಮತ್ತು ನಡವಳಿಕೆಗಳು ಕಾನೂನಾತ್ಮಕ ರಕ್ಷಣೆ ಹೊಂದಿವೆ ಎಂದು ಟೈಲೊರ್​ ವೆಸ್ಸಿಂಗ್​ನ ವಕೀಲ ಕ್ಸುಯಂಗ್​ ಜು ಹೇಳಿದ್ದಾರೆ.

ಅದೇ ರೀತಿಯಲ್ಲಿ ಮತ್ತೊಂದು ಪಾತ್ರ ಅಥವಾ ವಿಷಯಗಳನ್ನು ಪುನರ್​ರೂಪಿಸಿದಾಗ ಕಾಪಿರೈಟ್​​​ ಆಗುವ ಸಾಧ್ಯತೆ ಕೂಡ ಇದೆ. ಪಾತ್ರವು ನಿರ್ದಿಷ್ಟ ಜಿಪಿಟಿ ಕಾಪಿರೈಟ್​ಗಿಂತ ಹೆಚ್ಚಿನ ಟ್ರೇಡ್​ ಮಾರ್ಕ್​ ಸಮಸ್ಯೆಗೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇದರಲ್ಲಿ ಮತ್ತೊಂದು ಕಾಳಜಿಯ ಅಂಶವೆಂದರೆ, ಇವು ಮಕ್ಕಳಿಗೆ ಸುರಕ್ಷತೆಯ ಅಂಶಗಳನ್ನು ಹೊಂದಿರುವ ಕಥೆಗಳನ್ನು ಸೃಷ್ಟಿ ಮಾಡುತ್ತವೆಯೇ ಎಂಬುದು.(ಐಎಎನ್​ಎಸ್​)

ಇದನ್ನೂ ಓದಿ: 'ಡೂಮ್ ಕ್ಯಾಲ್ಕುಲೇಟರ್'; ಬಂದಿದೆ ಸಾವಿನ ಮುನ್ಸೂಚನೆ ನೀಡುವ ಎಐ ತಂತ್ರಜ್ಞಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.