ಸ್ಯಾನ್ ಫ್ರಾನ್ಸಿಸ್ಕೊ: ಟೆಕ್ ದೈತ್ಯ ಗೂಗಲ್, ಮೇನಲ್ಲಿ ನಡೆಯಲಿರುವ ವಾರ್ಷಿಕ ಡೆವಲಬರ್ ಕಾನ್ಫರೆನ್ಸ್ನಲ್ಲಿ ಕನಿಷ್ಠ 20 ಕೃತಕ ಬುದ್ಧಿಮತ್ತೆ ಚಾಲಿತ ಉಪಕರಣ ಮತ್ತು ಚಾಟ್ಬೂಟ್ ಸರ್ಚ್ ಅನ್ನು ಬಿಡುಗಡೆ ಗೊಳಿಸುವ ಸಿದ್ಧತೆ ನಡೆಸುತ್ತಿದೆ. ಮೈಕ್ರೋಸಾಫ್ಟ್ ಓಪನ್ಎಐ ಆಧಾರಿತ ಚಾಟ್ಜಿಪಿಟಿ (ChatGPT)ಗೆ ಸ್ಪರ್ಧೆಯಾಗಿ ಗೂಗಲ್ ಇದನ್ನು ಪರಿಚಯಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಎಐ ಚಾಲಿತ ಚಾಟ್ ಬೂಟ್ ಪವರ್ಡ್ ChatGPT ಯನ್ನು ಟೆಕ್ದೈತ್ಯ ಕಳೆದ ಕೆಲವು ತಿಂಗಳ ಹಿಂದೆ ಪರಿಚಯಿಸಿತ್ತು. ಇದು ಜನರಿಗೆ ಅರ್ಥವಾಗುವ ಮಾದರಿಯಲ್ಲಿ ಮಾಹಿತಿ ನೀಡುತ್ತದೆ.
ತಮ್ಮ ಸರ್ಚ್ ಉದ್ಯಮದಲ್ಲಿ ChatGPT ಅಪಾಯ ಗಮನಿಸಿದ ಅವರು, ಕೃತಕ ಬುದ್ಧಿಮತ್ತೆ ಚಾಲಿತ ಮತ್ತು ಕೋಡ್ ರೆಡ್ ಅನ್ನು ಗೂಗಲ್ ಸಿಇಒ ಸುಂದರ್ ಪಿಚ್ಚೈ ಘೋಷಿಸಿದ್ದರು. ಟೆಕ್ ದೈತ್ಯ ಗೂಗಲ್, ಕೃತಕ ಬುದ್ದಿಮತೆ ಯೋಜನೆಗಳು ಇಮೇಜ್ ಜನರೇಷನ್ ಟೂಲ್, ಎಐ ಟೆಸ್ಟ್ ಕಿಚನ್‌ನ ಅಪ್‌ಗ್ರೇಡ್ ಆವೃತ್ತಿ ಹೊಂದಿದೆ. ಯೂಟ್ಯೂಬ್ಗಾಗಿ ಟಿಕ್ಟಾಕ್ ಮೋಡ್ ಮತ್ತು ಇತರ ಕ್ಲಿಪ್‌ಗಳನ್ನು ಹೊಂದಿರುವ ವಿಡಿಯೋಗಳನ್ನು ರಚಿಸುವ ಸಾಧನವನ್ನು ಒಳಗೊಂಡಿವೆ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ತಿಳಿಸಿದ್ದಾರೆ.
ಕಂಪನಿ ಶಾಪಿಂಗ್ ಟ್ರೈ-ಆನ್ ಎಂಬ ವೈಶಿಷ್ಯಗಳ ಮೇಲೆ ಕೂಡ ಕೆಲಸ ಮಾಡಲಿದೆ. ಪಿಕ್ಸೆಲ್ ಫೋನ್ಗಾಗಿ ವಾಲ್ಪೇಪರ್ ಸೃಷ್ಟಿ ಮತ್ತು ಎಐ ಚಾಲಿತ ಟೂಲ್ಸ್ ಅ್ಯಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ರಚಿಸಲು ಡೆವಲಪರ್‌ಗಳಿಗೆ ಸಹಾಯ ಮಾಡಲಿದೆ. ಸ್ಲೈಡ್ ಡೆಕ್ ಹಕ್ಕುಸ್ವಾಮ್ಯ, ಗೌಪ್ಯತೆ ಮತ್ತು ಆಂಟಿಟ್ರಸ್ಟ್ ನಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಪಾಯ ಹೊಂದಿರುವುದಾಗಿ ಉಲ್ಲೇಖಿಸಿದೆ. ಕೃತಕ ಬುದ್ಧಿಮತ್ತೆ ಯೋಜನೆ ಮತ್ತು ಇನ್ಪುಟ್ ಆಫರ್ ಪರಿಶೀಲನೆ ಕುರಿತು ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಕೆ ಬ್ರೈನ್ ಅವರ ಗಮನಕ್ಕೆ ಸುಂದರ್ ಪಿಚ್ಚೈ ತಂದಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರು, ಕೃತಕ ಬುದ್ಧಿಮತ್ತೆ ಚಾಲಿಕ ಅಪ್ಲಿಕೇಷನ್ ಆದ ChatGPT ಕುರಿತು ಘೋಷಣೆ ಹೊರಡಿಸಿದ್ದರು.
ಏನಿದು ಚಾಟ್ಜಿಪಿಟಿ : ಮೈಕ್ರೋಸಾಫ್ಟ್ನ ಔಸರ್ ಓಪನ್ ಎಐನಲ್ಲಿ ಈ ಚಾಟ್ಜಿಪಿಟಿ ಪಡೆಯಬಹುದಾಗಿದೆ. ತಮ್ಮ ಸ್ವಂತ ಉದ್ಯಮದಲ್ಲಿ ಗ್ರಾಹಕರು ಮುಂದಿನ ಹಂತದ ಕೃತಕ ಬುದ್ಧಿಮತ್ತೆ ಮಾಡ್ಯೂಲ್ನ ಬಳಕೆ ಮಾಡಬಹುದಾಗಿದೆ.
ಗೂಗಲ್ನ ಎಐ ಸರ್ಚ್ ಡೆಮೊವನ್ನು ಯಾವಾಗ ಮಾಡಲಾಗುವುದು ಎಂಬುದರ ಕುರಿತು ಯಾವುದೇ ಸಮಯ ನಿಗದಿಸಿಲ್ಲ. ಆದರೆ, ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಈ ಯೋಜನೆಯನ್ನು ಪ್ರಸೆಟೆಂಷನ್ ನಡೆಸುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಗೂಗಲ್ ತನ್ನ ಹೊಸ ಎಐ ಉತ್ಪನ್ನಗಳನ್ನು ಬಿಡುಗಡೆ ಮಾಡುವಾಗ ಬಹಳ ಜಾಗ್ರತೆ ವಹಿಸಿದೆ. ಫೀಲ್ಡ್ನಿಂದ ಇಬ್ಬರು ಸಂಶೋಧಕರನ್ನು ಹೊರಗೆ ಕಳುಹಿಸಿದ ಬಳಿಕ ಸಂಸ್ಥೆ ಕೃತ್ತಕ ಬುದ್ಧಿಮತ್ತೆಯ ಬದ್ಧತೆ ಬಗ್ಗೆ ಚರ್ಚೆಯ ಪ್ರಮುಖ ಕೇಂದ್ರವಾಗಿದೆ. ಕೆಲವು ನಿರ್ದಿಷ್ಟ ಎಐ ಉತ್ತನ್ನಗಳ ಬಿಡುಗಡೆಗೆ ಗೂಗಲ್ ಹಿಂದೆ ಸರಿಯುತ್ತಿದೆ. ಕಾರಣ, ಅದರ ಸಾಮರ್ಥ್ಯ ತಮ್ಮ ಘನತೆಗೆ ಹಾನಿ ತರಬಾರದು ಎನ್ನುವುದಾಗಿದೆ.
ಇದನ್ನೂ ಓದಿ: ವಿಂಡೋಸ್ 11ರಲ್ಲಿ ನೋಟ್ಪ್ಯಾಡ್ ಟ್ಯಾಬ್ ಪರೀಕ್ಷೆ ಆರಂಭಿಸಿದ ಮೈಕ್ರೋಸಾಫ್ಟ್