ಹೈದರಾಬಾದ್: ಚಂದ್ರಯಾನ-3 ಮಿಷನ್‌ನ ಭಾಗವಾಗಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನಿಂದ ಸದ್ಯಕ್ಕೆ ಯಾವುದೇ ಸಿಗ್ನಲ್‌ಗಳು ಬಂದಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ತಿಳಿಸಿದೆ.
"ಚಂದ್ರಯಾನ-3 ಮಿಷನ್: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎಚ್ಚರಗೊಳ್ಳುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂವಹನವನ್ನು ಸಾಧಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಸದ್ಯಕ್ಕೆ ಯಾವುದೇ ಸಿಗ್ನಲ್‌ಗಳು ದೊರೆತಿಲ್ಲ. ಸಂಪರ್ಕವನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಗಳು ಮುಂದುವರಿವೆ" ಎಂದು ಇಸ್ರೋ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
-
Chandrayaan-3 Mission:
— ISRO (@isro) September 22, 2023 " class="align-text-top noRightClick twitterSection" data="
Efforts have been made to establish communication with the Vikram lander and Pragyan rover to ascertain their wake-up condition.
As of now, no signals have been received from them.
Efforts to establish contact will continue.
">Chandrayaan-3 Mission:
— ISRO (@isro) September 22, 2023
Efforts have been made to establish communication with the Vikram lander and Pragyan rover to ascertain their wake-up condition.
As of now, no signals have been received from them.
Efforts to establish contact will continue.Chandrayaan-3 Mission:
— ISRO (@isro) September 22, 2023
Efforts have been made to establish communication with the Vikram lander and Pragyan rover to ascertain their wake-up condition.
As of now, no signals have been received from them.
Efforts to establish contact will continue.
ಸ್ಲೀಪ್ ಮೋಡ್‌ಗೆ ತೆರಳಿದ್ದ ರೋವರ್: ಸೆಪ್ಟೆಂಬರ್ 2ರಂದು ರೋವರ್ ಸ್ಲೀಪ್ ಮೋಡ್‌ಗೆ ತೆರಳಿದ ನಂತರ, ರೋವರ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ. ಅದನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಮತ್ತು ಸ್ಲೀಪ್ ಮೋಡ್‌ಗೆ ಸೆಟ್ ಮಾಡಲಾಗಿದೆ. ಎಪಿಎಕ್ಸ್ಎಸ್ ಮತ್ತು ಎಲ್ಐಬಿಎಸ್ ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಪ್ರಸ್ತುತ, ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಿದೆ. ಸೆಪ್ಟೆಂಬರ್ 22ರಂದು ನಿರೀಕ್ಷಿಸಲಾದ ಮುಂದಿನ ಸೂರ್ಯೋದಯದಲ್ಲಿ ಬೆಳಕನ್ನು ಸ್ವೀಕರಿಸಲು ಸೌರ ಫಲಕವು ಸಿದ್ಧವಾಗಿದೆ. ರಿಸೀವರ್ ಇರಿಸಲಾಗಿದೆ. ಮತ್ತೊಂದು ಸುತ್ತಿನ ಕಾರ್ಯಯೋಜನೆಯ ಯಶಸ್ವಿಗಾಗಿ ಆಶಿಸುತ್ತಿದ್ದೇವೆ ಎಂದು ಇಸ್ರೋ ಸಂಸ್ಥೆ ಹೇಳಿತ್ತು.
ಚಂದ್ರಯಾನ-3 ಗಗನ ನೌಕೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆಗಸ್ಟ್ 3ರಂದು ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿತ್ತು. 26 ಕೆಜಿ ತೂಕದ ಆರು ಚಕ್ರಗಳ ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಇಳಿದಿತ್ತು. ಶತಮಾನಗಳಿಂದಲೂ ಬೆಳಕನ್ನೇ ಕಾಣದ ಈ ಧ್ರುವದ ಮೇಲೆ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆ ಇಳಿಸಿದ ಹೆಗ್ಗಳಿಕೆ ಭಾರತೀಯ ವಿಜ್ಞಾನಿಗಳಿಗೆ ಸಂದಿದೆ. ಜೊತೆಗೆ ವಿಕ್ರಮ್ ಲ್ಯಾಂಡರ್ನಲ್ಲಿದ್ದ ಪ್ರಜ್ಞಾನ್ ರೋವರ್ ಹೊರಬಂದು ತನ್ನ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. 14 ದಿನಗಳ ಕಾಲ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಿದ್ದ ರೋವರ್ ಹಲವಾರು ಮಾಹಿತಿ ಮತ್ತು ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು.
14 ದಿನಗಳ ಕಾಲ ಅಧ್ಯಯನ ನಡೆಸಿ ಸ್ಲೀಪ್ ಮೋಡ್‌ಗೆ ಲ್ಯಾಂಡರ್ ಮತ್ತು ರೋವರ್ ಜಾರಿತ್ತು. ಇದೀಗ ಮತ್ತೆ ಎಚ್ಚರಿಗೊಳಿಸುವ ಸಾಹಸವನ್ನು ಇಸ್ರೋ ಮಾಡಿತ್ತು. ಶುಕ್ರವಾರದಿಂದ ಚಂದ್ರನ ಮೇಲೆ ಬೆಳಕು ಬಿದ್ದಿದ್ದು, ಲ್ಯಾಂಡರ್ ಮತ್ತು ರೋವರ್ ಎರಡೂ ಎಚ್ಚರಗೊಳ್ಳುವ ನಿರೀಕ್ಷೆಯನ್ನು ಇಸ್ರೋ ಹೊಂದಿತ್ತು.
ಇದನ್ನೂ ಓದಿ: ಭೂಮಿಯ ಎಲೆಕ್ಟ್ರಾನ್ಗಳಿಂದ ಚಂದ್ರನಲ್ಲಿ ನೀರು; ಚಂದ್ರಯಾನ-1 ಮಾಹಿತಿಯಿಂದ ಸಂಶೋಧನೆ