ETV Bharat / science-and-technology

Chandrayaan-3: ವಿಕ್ರಮ ಲ್ಯಾಂಡರ್​ ಸೆರೆಹಿಡಿದ ಭೂಮಿ ಮತ್ತು ಚಂದ್ರನ ಚಿತ್ರ ಬಿಡುಗಡೆ ಮಾಡಿದ ಇಸ್ರೊ

ಚಂದ್ರಯಾನ್​-3 ಬಾಹ್ಯಾಕಾಶ ನೌಕೆಯ ವಿಕ್ರಮ ಲ್ಯಾಂಡರ್ ಸೆರೆಹಿಡಿದ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಇಸ್ರೊ ಬಿಡುಗಡೆ ಮಾಡಿದೆ.

Earth viewed by Lander Imager
Earth viewed by Lander Imager
author img

By

Published : Aug 10, 2023, 12:36 PM IST

ಬೆಂಗಳೂರು: ಚಂದ್ರಯಾನ -3 ಬಾಹ್ಯಾಕಾಶ ನೌಕೆಯಲ್ಲಿನ ಲ್ಯಾಂಡರ್ ಸೆರೆಹಿಡಿದ ಎರಡು ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ. ಲ್ಯಾಂಡರ್ ಇಮೇಜರ್ (ಎಲ್ಐ) ಕ್ಯಾಮೆರಾ ಸೆರೆಹಿಡಿದ ಮೊದಲ ಚಿತ್ರವು ಭೂಮಿಯದ್ದಾಗಿದೆ. ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಮಿಷನ್​​ನ ಆರಂಭಿಕ ಹಂತದಲ್ಲಿ ತೆಗೆದ ಚಿತ್ರ ಇದಾಗಿದೆ. ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಹೆಸರಿನ ವಿಕ್ರಮ್ ಲ್ಯಾಂಡರ್ ಆಗಸ್ಟ್ 23, 2023 ರಂದು ಚಂದ್ರನ ಮೇಲೆ ಸಾಫ್ಟ್​ ಲಾಂಡಿಂಗ್​ ಆಗುವ ನಿರೀಕ್ಷೆಯಿದೆ.

ಎರಡನೇ ಚಿತ್ರವು ಆಗಸ್ಟ್ 6 ರಂದು ಬಾಹ್ಯಾಕಾಶ ನೌಕೆಯಲ್ಲಿನ ಲ್ಯಾಂಡರ್ ತನ್ನ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (ಎಲ್ಎಚ್​ವಿಸಿ) ಮೂಲಕ ಸೆರೆಹಿಡಿದ ಚಂದ್ರನ ಚಿತ್ರವಾಗಿದೆ. ಚಿತ್ರಗಳನ್ನು ಎಕ್ಸ್​​ನಲ್ಲಿ ಹಂಚಿಕೊಂಡಿರುವ ಇಸ್ರೋ ಹೀಗೆ ಪೋಸ್ಟ್ ಮಾಡಿದೆ: "ಚಂದ್ರಯಾನ -3 ಮಿಷನ್: ಉಡಾವಣೆಯ ದಿನದಂದು ಲ್ಯಾಂಡರ್ ಇಮೇಜರ್ (ಎಲ್ಐ) ಕ್ಯಾಮೆರಾದಿಂದ ಸೆರೆಹಿಡಿದ ಭೂಮಿಯ ಚಿತ್ರ, ಚಂದ್ರನ ಕಕ್ಷೆಗೆ ಸೇರಿದ ಒಂದು ದಿನದ ನಂತರ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (ಎಲ್ಎಚ್​ವಿಸಿ) ಸೆರೆಹಿಡಿದ ಚಂದ್ರನ ಚಿತ್ರ."

ಎಲ್ಐ ಕ್ಯಾಮೆರಾವನ್ನು ಗುಜರಾತಿನ ಅಹಮದಾಬಾದ್​ನಲ್ಲಿರುವ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (ಎಸ್ಎಸಿ) ಮತ್ತು ಎಲ್ಎಚ್​ವಿ ಕ್ಯಾಮೆರಾವನ್ನು ಕರ್ನಾಟಕದ ಬೆಂಗಳೂರು ಮೂಲದ ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (ಎಲ್ಇಒಎಸ್) ಅಭಿವೃದ್ಧಿಪಡಿಸಿವೆ. ಆಗಸ್ಟ್ 1 ರಂದು ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಸಮಯದಲ್ಲಿ ಚಂದ್ರಯಾನ -3 ಸೆರೆಹಿಡಿದ ಚಂದ್ರನ ವಿಡಿಯೋವನ್ನು ಇಸ್ರೋ ಈ ಹಿಂದೆ ಬಿಡುಗಡೆ ಮಾಡಿತ್ತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಾರ, ಚಂದ್ರಯಾನ -3 ಚಂದ್ರನ ಮೇಲೆ ಇಳಿಯುವ ಗುರಿಯತ್ತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜುಲೈ 14, 2023 ರಂದು ಉಡಾವಣೆಯಾದ ಬಾಹ್ಯಾಕಾಶ ನೌಕೆ ಪ್ರಸ್ತುತ ಚಂದ್ರನ ಸುತ್ತ ಅಂಡಾಕಾರದ ಕಕ್ಷೆಯಲ್ಲಿದೆ. ಮುಂಬರುವ ದಿನಗಳಲ್ಲಿ ಇದನ್ನು 100 ಕಿ.ಮೀ ವೃತ್ತಾಕಾರದ ಕಕ್ಷೆಯಲ್ಲಿ ಇರಿಸಲು ಸರಣಿ ತಂತ್ರಗಳನ್ನು ಯೋಜಿಸಲಾಗಿದೆ.

ಚಂದ್ರಯಾನ-3 ಮಿಷನ್​ನ ಪ್ರಗತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಕಕ್ಷೆಯನ್ನು ನಿರ್ಧರಿಸುವ ಪ್ರಕ್ರಿಯೆಯು ಅತ್ಯಂತ ನಿರ್ಣಾಯಕ ಹಂತವಾಗಿದೆ ಎಂದು ಹೇಳಿದರು. ಭೂಮಿಯಿಂದ ವಿಕ್ರಮ್ ಲ್ಯಾಂಡರ್​ನ ಸ್ಥಾನವನ್ನು ನಿಖರವಾಗಿ ಅಂದಾಜು ಮಾಡುವ ಈ ಪ್ರಕ್ರಿಯೆಯು ಒಳಗೊಂಡಿದೆ. ಈ ಕಾರ್ಯವನ್ನು ಇಲ್ಲಿಯವರೆಗೆ ದೋಷರಹಿತವಾಗಿ ನಿರ್ವಹಿಸಲಾಗಿದೆ.

ಈ ಮಿಷನ್ ಯಶಸ್ವಿಯಾದರೆ ಅಮೆರಿಕ, ಮಾಜಿ ಸೋವಿಯತ್ ಒಕ್ಕೂಟ ಮತ್ತು ಚೀನಾದ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ತನ್ನ ಸಾಧನವನ್ನು ಇಳಿಸಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಚಂದ್ರಯಾನ -3 ರ ಯಶಸ್ಸು ಭಾರತದ ಬಾಹ್ಯಾಕಾಶ ಸಂಶೋಧನಾ ಪ್ರಯತ್ನಗಳಿಗೆ ಮಹತ್ವದ ಮೈಲಿಗಲ್ಲಾಗುವುದಲ್ಲದೇ, ಜಾಗತಿಕವಾಗಿ ಚಂದ್ರ ವಿಜ್ಞಾನ ಮತ್ತು ಭವಿಷ್ಯದ ಪರಿಶೋಧನಾ ಯೋಜನೆಗೆ ಅಮೂಲ್ಯವಾದ ಮಾಹಿತಿ ಒದಗಿಸಲಿದೆ.

ಇದನ್ನೂ ಓದಿ : ಚಂದ್ರನಿಗೆ 1,500 ಕಿಮೀ ಹತ್ತಿರ ತಲುಪಿದ Chandrayaan-3; ಇಸ್ರೊದ 3ನೇ ಹಂತದ ಕಾರ್ಯಾಚರಣೆ ಯಶಸ್ವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.