ETV Bharat / science-and-technology

Chandrayaan-3: ಚಂದ್ರಯಾನಕ್ಕೆ ಎರಡು ದಶಕ... 2003 ರಿಂದ ಸಾಗಿ ಬಂದ ದಾರಿ

ಚಂದ್ರಯಾನ ಯೋಜನೆ ಇಲ್ಲಿಯವರೆಗೆ ಸಾಗಿಬಂದ ದಾರಿ ಇಲ್ಲಿದೆ.

Timeline of Chandrayaan missions undertaken by ISRO

author img

By

Published : Jul 14, 2023, 1:03 PM IST

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 'ಚಂದ್ರಯಾನ'ಕ್ಕೆ ಎರಡು ದಶಕಗಳು ಸಂದಿವೆ. 2003ರಿಂದ ಆರಂಭವಾದ ಈ ಮಹಾತ್ವಾಕಾಂಕ್ಷೆ ಯೋಜನೆ ನಡೆದು ಬಂದ ಹಾದಿ (ಟೈಮ್‌ಲೈನ್) ಇಲ್ಲಿದೆ.

  • ಆಗಸ್ಟ್ 15, 2003: ಅಂದಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರಯಾನ ಕಾರ್ಯಕ್ರಮವನ್ನು ಘೋಷಿಸಿದರು.
  • ಅಕ್ಟೋಬರ್ 22, 2008: ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-1 ಉಡ್ಡಯನ.
  • ನವೆಂಬರ್ 8, 2008: ಚಂದ್ರಯಾನ-1 ಚಂದ್ರನ ವರ್ಗಾವಣೆ ಪಥವನ್ನು ಪ್ರವೇಶಿಸಿತು.
  • ನವೆಂಬರ್ 14, 2008: ಮೂನ್ ಇಂಪ್ಯಾಕ್ಟ್​ ಪ್ರೋಬ್ ನೌಕೆಯು ಚಂದ್ರಯಾನ್​-1 ನಿಂದ ಬೇರ್ಪಟ್ಟು ಹೊರಕ್ಕೆ ಚಿಮ್ಮುತ್ತದೆ ಮತ್ತು ಚಂದ್ರನ ದಕ್ಷಿಣ ಧ್ರುವದ ಬಳಿ ಅಪ್ಪಳಿಸುತ್ತದೆ. ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಉಪಸ್ಥಿತಿಯನ್ನು ಇದು ದೃಢೀಕರಿಸಿದೆ.
  • ಆಗಸ್ಟ್ 28, 2009: ಇಸ್ರೋ ಪ್ರಕಾರ ಚಂದ್ರಯಾನ-1 ಕಾರ್ಯಕ್ರಮ ಅಂತ್ಯ.
  • ಜುಲೈ 22, 2019: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆ.
  • ಆಗಸ್ಟ್ 20, 2019: ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲಾಯಿತು.
  • ಸೆಪ್ಟೆಂಬರ್ 2, 2019: 100 ಕಿಲೋಮೀಟರ್ ಚಂದ್ರನ ಧ್ರುವ ಕಕ್ಷೆಯಲ್ಲಿ ಚಂದ್ರನನ್ನು ಸುತ್ತುತ್ತಿರುವಾಗ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿತು. ಆದಾಗ್ಯೂ, ಲ್ಯಾಂಡರ್‌ನಿಂದ ನೆಲದ ಕೇಂದ್ರಗಳಿಗೆ ಚಂದ್ರನ ಮೇಲ್ಮೈಯಿಂದ 2.1 ಕಿಮೀ ಎತ್ತರದಲ್ಲಿ ಸಂಪರ್ಕ ಕಡಿತಗೊಂಡಿತು.
  • ಜುಲೈ 14, 2023: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿದೆ.
  • ಆಗಸ್ಟ್ 23/24, 2023: ಇಸ್ರೋ ವಿಜ್ಞಾನಿಗಳು ತಾತ್ಕಾಲಿಕವಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್
  • ಆಗಸ್ಟ್​ 23 ಮತ್ತು 24 ಮಧ್ಯೆ ಚಂದ್ರಯಾನ-3 ಅನ್ನು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ವಿಜ್ಞಾನಿಗಳಿಂದ ತಾತ್ಕಾಲಿಕ ಸಿದ್ಧತೆ. ಇದರಲ್ಲಿ ಸಫಲವಾದರೆ ಭಾರತ, ಈಗಾಗಲೇ ಇದನ್ನು ಸಾಧಿಸಿದ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಬಹು ನಿರೀಕ್ಷಿತ ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ಸಿದ್ಧವಾಗಿದೆ. ಇಸ್ರೋದ ಚಂದ್ರಯಾನ 3 ಮಿಷನ್ ರಾಕೆಟ್​ ಜುಲೈ 14, 2023 ರ ಶುಕ್ರವಾರ ಮಧ್ಯಾಹ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ರಾಸಾಯನಿಕ ವಿಶ್ಲೇಷಣೆ ನಡೆಸಲು ಮತ್ತು ಭವಿಷ್ಯದ ಗ್ರಹಗಳ ಕಾರ್ಯಾಚರಣೆಗಳಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್​ ಲ್ಯಾಂಡಿಂಗ್ ಮಾಡುವುದು ಚಂದ್ರಯಾನ-3 ರ ಮುಖ್ಯ ಉದ್ದೇಶವಾಗಿದೆ.

ಲಾಂಚ್ ವೆಹಿಕಲ್ ಮಾರ್ಕ್-3 (LVM3) ಎಂದು ಕರೆಯಲ್ಪಡುವ ಇಸ್ರೋದ ಮೂರು-ಹಂತದ ರಾಕೆಟ್ ಚಂದ್ರಯಾನ -3 ಬಾಹ್ಯಾಕಾಶ ನೌಕೆಯ ರೋಬೋಟಿಕ್ ಮೂನ್ ಲ್ಯಾಂಡರ್ ಮತ್ತು ರೋವರ್ ಜೋಡಿಯನ್ನು ಭೂಮಿಯ ಪಾರ್ಕಿಂಗ್ ಕಕ್ಷೆಗೆ ಸಾಗಿಸಲಿವೆ.

ಇದನ್ನೂ ಓದಿ : ಇಂಟರ್​ನೆಟ್​ಗೆ ಗಡಿಗಳಿಲ್ಲ, ಸೈಬರ್ ಭದ್ರತೆಗೆ ದೇಶಗಳ ಒಗ್ಗಟ್ಟು ಅಗತ್ಯ; ಸಚಿವ ರಾಜೀವ್ ಚಂದ್ರಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.