ನವದೆಹಲಿ: ಐಷಾರಾಮಿ ಕಾರು ಉತ್ಪಾದಕ ಕಂಪನಿಯಾದ ಮರ್ಸಿಡಿಸ್ ಬೆಂಜ್ ಕಂಪನಿ(Mercedes Benz Company)ಯು ಹೊಸ ಮರ್ಸಿಡಿಸ್ 'ಎಎಂಜಿ ಎ 45 ಎಸ್ 4ಮ್ಯಾಟಿಕ್+' ( AMG A 45 S 4MATIC+) ಕಾರನ್ನು ಬಿಡುಗಡೆ ಮಾಡಿದೆ.
AMG A 45 S 4MATIC+ ಕಾರ್ನ ಬೆಲೆ 79.50 ಲಕ್ಷ ರೂ. ಇದೆ. ಇದು 2 ಲೀಟರ್ ಟರ್ಬೊ ಚಾರ್ಜ್ಡ್ ಎಂಜಿನ್ ಹೊಂದಿದ್ದು, 421 ಹೆಚ್‌ಪಿ ಶಕ್ತಿ ಉತ್ಪಾದಿಸಬಲ್ಲದು. ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ ಗರಿಷ್ಠ ವೇಗವು ಗಂಟೆಗೆ 270 ಕಿ.ಮೀ. ಇದೆ.
ಇದನ್ನೂ ಓದಿ: NASA Seeks Ideas: ಚಂದ್ರನ ಮೇಲೆ ಪರಮಾಣು ವಿದ್ಯುತ್ ಸ್ಥಾವರ ಇಳಿಸಲು ಐಡಿಯಾ ಕೇಳಿದ ನಾಸಾ..
ದೇಶದಲ್ಲೇ ಅತಿ ವೇಗದಲ್ಲಿ ಚಲಿಸುವ ಹ್ಯಾಚ್‌ಬ್ಯಾಕ್ ಇದಾಗಿದೆ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್ ಶ್ವೆಂಕ್ ಹೇಳಿದ್ದಾರೆ. ದೇಶಾದ್ಯಂತ ಇರುವ ಮರ್ಸಿಡಿಸ್ ಬೆಂಜ್ ವಿತರಣಾ ಕೇಂದ್ರಗಳು ಮತ್ತು ಮರ್ಸಿಡಿಸ್ ಬೆಂಜ್‌ನ ಆನ್‌ಲೈನ್ ಮಳಿಗೆಯ ಮೂಲಕ ಈ ಕಾರು ಖರೀದಿಗೆ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.