ಲಾಸ್ ಏಂಜಲೀಸ್: ಫೋರ್ಡ್ ಮುಸ್ತಾಂಗ್ ಮ್ಯಾಕ್-ಇ ಗ್ರಾಹಕ ವರದಿಗಳ ಈವಿ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಗ್ರಾಹಕ ವರದಿಗಳ ಪ್ರಕಾರ, ಲಾಭರಹಿತ ಗ್ರಾಹಕ ಸಂಶೋಧನೆ ಮತ್ತು ವಕಾಲತ್ತು ಸಂಸ್ಥೆಯು ಪ್ರಸ್ತುತ ನೂರಾರು ಮಾದರಿಗಳಿಂದ ವರ್ಷದ ಉನ್ನತ ಮಾದರಿಗಳನ್ನು ಆಯ್ಕೆ ಮಾಡುತ್ತದೆ.
ಟೆಸ್ಲಾ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದ್ದು, ಕಳೆದ ಎರಡು ವರ್ಷಗಳಿಂದ ಈವಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಆದ್ರೀಗ ಫೋರ್ಡ್ ಮುಸ್ತಾಂಗ್ ಮ್ಯಾಕ್ - ಇ ರಸ್ತೆ-ಪರೀಕ್ಷಾ ಸ್ಕೋರ್, ವಿಶ್ವಾಸಾರ್ಹತೆ, ಮಾಲೀಕರ ತೃಪ್ತಿ ಮತ್ತು ಸುರಕ್ಷತೆಯ ಆಧಾರದ ಮೇಲೆ ಗೌರವವನ್ನು ಗಳಿಸಿದೆ. ಇದು ಓಡಿಸಲು ನಿಜವಾಗಿಯೂ ಮೋಜಿನ ವಾಹನ ಮಾತ್ರವಲ್ಲದೇ ಅತ್ಯಂತ ಪ್ರಬುದ್ಧ ವಾಹನ ಎನಿಸಿಕೊಂಡಿದೆ.
ಈ ಗಾಡಿ ಚೆನ್ನಾಗಿದೆ. ನಿಜವಾಗಿಯೂ ಉತ್ತಮವಾಗಿ ರೂಪುಗೊಂಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಿಆರ್ನ ಆಟೋಮೋಟಿವ್ ಟೆಸ್ಟಿಂಗ್‌ನ ಹಿರಿಯ ನಿರ್ದೇಶಕ ಜೇಕ್ ಫಿಶರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಪಿ ನಿಯಂತ್ರಣ, ಗಾಯಕ್ಕೆ ಹೊಸ ಔಷದ ಕಂಡು ಹಿಡಿದ ಪ್ರಾಂಶುಪಾಲ!
ವರದಿಯ ಪ್ರಕಾರ, ಟೆಸ್ಲಾ ಮಾಡೆಲ್ 3 ಉತ್ತಮ ವಾಹನವಾಗಿದೆ. ಆದರೆ ಮುಸ್ತಾಂಗ್ ಮ್ಯಾಕ್ - ಇ ಬಳಸಲು ಸುಲಭವಾಗಿದೆ. ಎರಡೂ ಕಾರುಗಳು ದೊಡ್ಡ ಇನ್ಫೋಟೈನ್‌ಮೆಂಟ್ ಸೆಂಟರ್ ಸ್ಕ್ರೀನ್‌ಗಳನ್ನು ಹೊಂದಿವೆ. ಆದರೆ ಮ್ಯಾಕ್-ಇ ಕಾರ್ಯನಿರ್ವಹಿಸಲು ತುಂಬಾ ಸುಲಭವಾಗಿದೆ ಎಂದು ವರದಿ ಹೇಳುತ್ತದೆ.