ETV Bharat / science-and-technology

ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರಗೊಳಿಸುವ ಮೂಲಕ ಶಿಶುಗಳ ಮಿದುಳಿನ ಹಾನಿ ತಡೆಯಬಹುದು: ಅಧ್ಯಯನ - ಜಾಮ(JAMA) ಜರ್ನಲ್‌

ವಾಟರ್‌ಲೂ ವಿಶ್ವವಿದ್ಯಾನಿಲಯ ಮತ್ತು ಆಕ್ಲೆಂಡ್ ವಿಶ್ವವಿದ್ಯಾನಿಲಯದ ಅಧ್ಯಯನವು ಹೈಪೊಗ್ಲಿಸಿಮಿಯಾ ಹೊಂದಿರುವ ನವಜಾತ ಶಿಶುಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದರಿಂದ ಮಿದುಳಿನ ಹಾನಿಯನ್ನು ತಡೆಯುತ್ತದೆ ಎಂದು ಹೇಳಿದೆ.

University of Waterloo and the University of Auckland
ಅಧ್ಯಯನ
author img

By

Published : Apr 3, 2022, 10:53 PM IST

ವಾಷಿಂಗ್ಟನ್(ಯುಎಸ್): ಇತ್ತೀಚಿನ ಕ್ಲಿನಿಕಲ್ ಅಧ್ಯಯನದ ಪ್ರಕಾರ, ಶೈಶವಾವಸ್ಥೆಯಲ್ಲಿರುವ ಶಿಶುಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವ ಚಿಕಿತ್ಸೆಯು ದೀರ್ಘಕಾಲದ ಮಿದುಳಿನ ಹಾನಿಯನ್ನು ನಿವಾರಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಅಧ್ಯಯನ ಜಾಮ(JAMA) ಜರ್ನಲ್‌ನಲ್ಲಿ ಪ್ರಕಟವಾಗಿದೆ.

ವಾಟರ್‌ಲೂ ವಿಶ್ವವಿದ್ಯಾನಿಲಯ ಮತ್ತು ಆಕ್ಲೆಂಡ್ ವಿಶ್ವವಿದ್ಯಾನಿಲಯದ ಅಧ್ಯಯನವು ಹೈಪೊಗ್ಲಿಸಿಮಿಯಾ ಹೊಂದಿರುವ ನವಜಾತ ಶಿಶುಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದರಿಂದ ಮಿದುಳಿನ ಹಾನಿಯನ್ನು ತಡೆಯುತ್ತದೆ ಎಂದು ಸಂಶೋಧಿಸಿದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದನ್ನು ಹೈಪೊಗ್ಲಿಸಿಮಿಯಾ ಎಂದೂ ಕರೆಯುತ್ತಾರೆ. ಇದು ರಕ್ತದಲ್ಲಿ ಗ್ಲೂಕೋಸ್ ಮಟ್ಟವು ತುಂಬಾ ಕಡಿಮೆಯಾದಾಗ ಸಂಭವಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದು ಈಗ ಸಾಮಾನ್ಯವಾಗಿದೆ, ಜನಿಸಿದ ಆರು ಶಿಶುಗಳಲ್ಲಿ ಒಂದು ಮಗು ಈ ಕಾಯಿಲೆಯಿಂದ ಬಳಲುತ್ತಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ ಕಡಿಮೆ ಇರುವ ಕಾರಣ ದೇಹಕ್ಕೆ ಮತ್ತು ಮಿದುಳಿಗೆ ಬೆಳವಣಿಗೆ ಸಮಸ್ಯೆ ಆಗಬಹುದು ಮತ್ತು ನರಗಳ ಬೆಳವಣಿಗೆಯಲ್ಲಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.

ಮಗು ಹೈಪೊಗ್ಲಿಸಿಮಿಯಾಕ್ಕೆ ಒಳಗಾಗುವುದರಿಂದ ಮಿದುಳಿನ ಬೆಳವಣಿಗೆಯಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತದೆ. ಶಾಲಾ ಮಕ್ಕಳಲ್ಲಿ ಅವರ ಶೈಕ್ಷಣಿಕ ಬೆಳವಣಿಗೆಯನ್ನು ಅವರ ಸ್ನೇಹಿತರೊಂದಿಗೆ ಹೊಂದಾಣಿಸಿ ನೋಡಿದಾಗ ಇದು ತಿಳಿದುಬರುತ್ತದೆ. 'ಶಾಲೆಯ ವಾತಾವರಣ ಮತ್ತು ಅಲ್ಲಿಯ ಅನುಭವಗಳು ನಿಧಾನವಾಗಿ ಮಿದುಳಿದನ ಬೆಳವಣಿಗೆಗೆ ಸಹಕಾರವಾಗಬಹುದು. ಶಿಕ್ಷಣದಲ್ಲಿ ಸಿಗುವ ಪ್ರೋತ್ಸಾಹದ ಆಧಾರದಲ್ಲಿ ಆದು ಸಾಗುತ್ತದೆ' ಎಂದು ಆಪ್ಟೋಮೆಟ್ರಿ ಮತ್ತು ವಿಷನ್ ಸೈನ್ಸ್ ಸ್ಕೂಲ್‌ನ ಪ್ರಾಧ್ಯಾಪಕ ಬೆನ್ ಥಾಂಪ್ಸನ್ ಹೇಳಿದರು. ಈ ಅಧ್ಯಯನವನ್ನು ಹಾಂಗ್ ಕಾಂಗ್‌ನಲ್ಲಿರುವ ಸೆಂಟರ್ ಫಾರ್ ಐ ಆ್ಯಂಡ್ ವಿಷನ್ ರಿಸರ್ಚ್ ತಂಡ ಮಾಡಿದೆ.

ಅಧ್ಯಯನಕ್ಕೆ 480 ಮಕ್ಕಳ ಬಳಕೆ: ಅಧ್ಯಯನಕ್ಕೆ 9 ರಿಂದ 10 ವರ್ಷದ 480 ಹೈಪೊಗ್ಲಿಸಿಮಿಯಾಕ್ಕೆ ಒಳಪಟ್ಟ ಮಕ್ಕಳನ್ನು ಒಳಪಡಿಸಲಾಗಿತ್ತು. ಅವರಲ್ಲಿ ಶೈಕ್ಷಣಿಕ ಸಾಧನೆ, ಕಾರ್ಯನಿರ್ವಾಹಕ ಕಾರ್ಯ, ದೃಶ್ಯ-ಮೋಟಾರ್ ಕಾರ್ಯ, ಮಾನಸಿಕ ಅಳವಡಿಕೆ ಮತ್ತು ಸಾಮಾನ್ಯ ಆರೋಗ್ಯ ಈ ಐದು ಅಂಶಗಳನ್ನು ಗಮನಿಸಲಾಯಿತು. ಸಂಶೋಧಕರು 2 ರಿಂದ 4.5 ವರ್ಷಗಳ ಅಂತರದಲ್ಲಿ ಮೌಲ್ಯ ಮಾಪನಕ್ಕೆ ಒಳಪಡಿಸುತ್ತಿದ್ದರು.

ಈ ಸಂಶೋಧನೆ ಇಂದ ಹೈಪೊಗ್ಲಿಸಿಮಿಯಾಕ್ಕೆ ಒಳಪಟ್ಟ ಮಗುವಿಗೆ ನಿಯಮಿತ ಚಿಕಿತ್ಸೆಯಿಂದ ಮಿದುಳಿನ ಹಾನಿಯನ್ನು ತಡೆಯಬಹುದು ಎಂದು ತಿಳಿದು ಬಂದಿದೆ ಎಂದು ಥಾಂಪ್ಸನ್​ ತಿಳಿಸಿದರು.

ಚಿಕಿತ್ಸೆಗೆ ಡೆಕ್ಸೋಟ್ರೋಸ್​ ಜೆಲ್: ಸಂಶೋಧನಾ ತಂಡವು ಜನಿಸಿದ 48 ಗಂಟೆಗಳಲ್ಲಿ ಡೆಕ್ಸೋಟ್ರೋಸ್​ ಜೆಲ್​ ನೀಡುವ ಮೂಲಕ ಚಿಕಿತ್ಸೆ ನೀಡಿದೆ. ಇದು ಶಿಶುಗಳು ಹೆರಿಗೆಯ ನಂತರ ತಕ್ಷಣವೇ ನವಜಾತ ತೀವ್ರ ನಿಗಾ ಘಟಕಗಳಿಗೆ ಹೋಗುವುದನ್ನು ತಪ್ಪಿಸುತ್ತದೆ. ಡೆಕ್ಸೋಟ್ರೋಸ್ ಎಂಬುದು ಕಾರ್ನ್ ಅಥವಾ ಗೋಧಿಯಿಂದ ಬರುವ ಸಕ್ಕರೆಯಾಗಿದ್ದು ಅದು ರಕ್ತದ ಸಕ್ಕರೆಗೆ ರಾಸಾಯನಿಕವಾಗಿ ಸೇರುತ್ತದೆ.

'ಜರ್ನಲ್ ಫಾರ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್' ನಲ್ಲಿ ಪ್ರಕಟವಾದ ಹೆಚ್ಚುವರಿ ಅಧ್ಯಯನದಲ್ಲಿ, ತಂಡವು ಶೈಶವಾವಸ್ಥೆಯಲ್ಲಿ ಹೈಪೊಗ್ಲಿಸಿಮಿಯಾಕ್ಕೆ ಚಿಕಿತ್ಸೆಯಾಗಿ ಡೆಕ್ಸೋಟ್ರೋಸ್​ ಜೆಲ್​ ನಂತರದ ಅಪಾಯ ಮಾಡುತ್ತದೆ ಎಂದು ತಿಳಿಸಿದೆ. ಕೆನಡಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹೆಚ್ಚುತ್ತಿರುವ ಸಂಖ್ಯೆಯ ದೇಶಗಳಲ್ಲಿ ನ್ಯೂಜಿಲೆಂಡ್‌ನ ಹೊರಗೆ ಈ ಚಿಕಿತ್ಸೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಇದನ್ನೂ ಓದಿ:ಉಲ್ಕೆಯಲ್ಲ, ಉಪಗ್ರಹ..: ಸ್ಥಳಕ್ಕೆ ಧಾವಿಸಿ ಅವಶೇಷ ಸಂಗ್ರಹಿಸಿದ ತಜ್ಞರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.