ETV Bharat / science-and-technology

ಭಾರತದತ್ತ ಮೊಬೈಲ್ ಘಟಕ: ಚೀನಾಕ್ಕೆ ಕೋವಿಡ್ ಬಳಿಕ ಆ್ಯಪಲ್ ಕಂಪನಿ ಶಾಕ್ - ಆ್ಯಪಲ್ ಕಂಪನಿ

ಆ್ಯಪಲ್ ಕಂಪನಿಯು ತನ್ನ ಘಟಕಗಳನ್ನು ಭಾರತ ಮತ್ತು ವಿಯೆಟ್ನಾಂಗೆ ವರ್ಗಾಯಿಸಲು ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ

apple-plans-to-shift-production-out-of-china
ಭಾರತದತ್ತ ಮೊಬೈಲ್ ಘಟಕ; ಚೀನಾಕ್ಕೆ ಕೋವಿಡ್ ಬಳಿಕ ಆ್ಯಪಲ್ ಕಂಪೆನಿ ಶಾಕ್
author img

By

Published : Dec 5, 2022, 12:42 PM IST

ವಾಷಿಂಗ್ಟನ್: ಚೀನಾದಲ್ಲಿ ಕೊರೊನಾ ಕೇಸ್ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ ಜನರು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರ ಕೊರೊನಾ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಅನುಸರಿಸುತ್ತಿದ್ದು, ದೇಶದೆಲ್ಲೆಡೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಹೀಗಾಗಿ ಉತ್ಪಾದನೆಗಳಲ್ಲಿ ಕುಸಿತ ಕಂಡಿದ್ದು, ಆ್ಯಪಲ್ ಕಂಪನಿಯು ತನ್ನ ಘಟಕಗಳನ್ನು ಭಾರತ ಮತ್ತು ವಿಯೆಟ್ನಾಂಗೆ ವರ್ಗಾಯಿಸಲು ನಿರ್ಧರಿಸಿದೆ.

ಈ ಹಿಂದೆ ಚೀನಾದ ಐಫೋನ್ ಉತ್ಪಾದನಾ ಘಟಕಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ಆ್ಯಪಲ್ ಕಂಪನಿಯು ತನ್ನ ಕೆಲವು ಉತ್ಪಾದನೆಗಳನ್ನು ಚೀನಾದಿಂದ ಹೊರತರುವ ಕೆಲಸಕ್ಕೆ ಮುಂದಾಗಿದೆ. ಚೀನಾದ ಝೆಂಗ್‌ಝೌನಲ್ಲಿರುವ ಐಫೋನ್ ಮೊಬೈಲ್ ಉತ್ಪಾದನಾ ಘಟಕದಲ್ಲಿ 3 ಲಕ್ಷ ಕಾರ್ಮಿಕರು ಮೊಬೈಲ್ ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟಕದಲ್ಲಿ ಶೇಕಡ 85ರಷ್ಟು ಉತ್ಪಾದನೆ ನಡೆಯುತ್ತಿತ್ತು.

ಕೊರೊನಾ ನಿಯಮಗಳ ವಿರುದ್ಧ ಜನರು ತೀವ್ರ ಪ್ರತಿಭಟನೆ ನಡೆಸುತ್ತಿರುವ ಕಾರಣ ಆ್ಯಪಲ್ ಘಟಕದಲ್ಲಿ ಉತ್ಪಾದನೆ ತೀವ್ರ ಕುಸಿತ ಕಂಡಿದೆ. ಇದು ಕಂಪನಿಯ ಘಟಕವನ್ನು ಎತ್ತಂಗಡಿ ಮಾಡಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ವಿಶ್ವದ ಮೊದಲ ಮೆಸೆಜ್​ 'ಮೆರ್ರಿ ಕ್ರಿಸ್​ಮಸ್​'ಗೆ 30 ವರ್ಷ: ಯಾರು ಕಳುಹಿಸಿದ್ದು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.