ನವದೆಹಲಿ: 5ಜಿ ಯುಗಕ್ಕೆ ಭಾರತ ಪ್ರವೇಶ ಮಾಡಿದೆ. ಈ ಹಿನ್ನಲೆ ಭಾರತದಲ್ಲಿ ಐಫೋನ್ 14, ಐ ಫೋನ್ 13, ಐಫೋನ್ ಎಸ್ಇ ಮತ್ತು ಐಫೋನ್ 12 5ಜಿಗೆ ಬೆಂಬಲಿಸಲಿದ ಎಂದು ಆ್ಯಪಲ್ ಘೋಷಿಸಿದೆ. ಐಫೋನ್ 12 ಅಥವಾ ಅದರ ನಂತರ ಬಂದ ಮಾಡೆಲ್ಗೆ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ 5ಜಿ ಸಂಪರ್ಕ ಪಡೆಯಲಿದ್ದು, ಇದಕ್ಕೆ ಐಒಎಸ್ 16.2 ಅಪ್ಡೇಟ್ ಮಾಡಬೇಕಿದ್ದು, ಇದು ಹೆಚ್ಚಿನ ವೈಶಿಷ್ಟ್ಯ ಹೊಂದಿದೆ.
ಕೆಲ ಆಯ್ದ ಐಫೋನ್ಗಳಲ್ಲಿ ಐಒಎಸ್ 16 ಬೆಟಾ ಸಾಫ್ಟ್‌ವೇರ್ ಪ್ರೋಗ್ರಾಂ ಮೂಲಕ ಕಳೆದ ವಾರದಿಂದಲೇ ದೇಶದಲ್ಲಿ 5ಜಿ ಸೇವೆ ಪಡೆಯ ಬಹುದಿತ್ತು. ಆ್ಯಪಲ್ನ ಏರ್ಟೆಲ್ ಮತ್ತು ಜಿಯೋ ಗ್ರಾಹಕರು ಈ ಐಒಎಸ್ 16 ಬೆಟಾ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಅಪ್ಡೇಟ್ ಮಾಡುವ ಮೂಲಕ ಬಳಕೆ ಮಾಡಬಹುದಿತ್ತು. ನೆಟ್ವರ್ಕ್ ವಾಲಿಡೇಷನ್ ಮತ್ತು ಕಾರ್ಯಕ್ಷಮತೆ ಬಳಿಕ ಭಾರತದ ಐಫೋನ್ ಬಳಕೆದಾರರು ಉತ್ತಮ 5ಜಿ ಸೇವೆ ಹೊಂದಲು ಆ್ಯಪಲ್ ಕಾರ್ಯ ನಿರ್ವಹಿಸಿದೆ ಎಂದು ಸಂಸ್ಥೆ ತಿಳಿಸಿತ್ತು.
ಪ್ರಮುಖ ಮೆಟ್ರೋ ನಗರಗಳಲ್ಲಿ ಭಾರತದ 5ಜಿ ಸೇವೆಯನ್ನು ಹಂತ ಹಂತವಾಗಿ ನೀಡಲು ಮುಂದಾಗಿದೆ. ಸ್ಮಾರ್ಟ್ಫೋನ್ಗಳು ಕೂಡ ತಮ್ಮ ಡಿವೈಸ್ಗಳಲ್ಲಿ 5ಜಿ ಸೇವೆ ಸಿಗುವಂತೆ ಕಾರ್ಯ ನಿರ್ವಹಣೆಗೆ ಮುಂದಾಗಿದೆ. ಈ ಸಂಬಂಧ ಆ್ಯಪಲ್, ಐಫೋನ್ ಬಳಕೆದಾರರಿಗೆ ಅತ್ಯುತ್ತಮ ಕಾರ್ಯಕ್ಷಮತೆ ನೀಡಲು ಪರೀಕ್ಷೆಗಳನ್ನು ನಡೆಸಿದೆ. ಐಫೋನ್ ಕೂಡ ತಮ್ಮ ಬಳಕೆದಾರರಿಗೆ ಸೂಪರ್ - ಫಾಸ್ಟ್ ಡೌನ್ಲೋಡ್ ಮತ್ತು ಅಪ್ಲೋಡ್ ಸೇವೆ ಜೊತೆಗೆ ಉತ್ತಮ ಸ್ಟ್ರೀನಿಂಗ್, ರಿಯಲ್ ಟೈಮ್ ಸಂಪರ್ಕ ನೀಡಲು ಮುಂದಾಗಿದೆ.
ಐಫೋನ್ನಲ್ಲಿ 5ಜಿ ಬೆಂಬಲವು ಈಗ ಪ್ರಪಂಚದಾದ್ಯಂತ 70 ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ 250ಕ್ಕೂ ಹೆಚ್ಚು ವಾಹಕ ಪಾಲುದಾರರಿಗೆ ವಿಸ್ತರಿಸಿದೆ, ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳಿಗೆ ಆದ್ಯತೆ ನೀಡುವುದರಿಂದ ಭಾರತದಲ್ಲಿ 5ಜಿ ಆರಂಭಿಕ ಅಳವಡಿಕೆ ಸಕ್ರಿಯಗೊಳಿಸುತ್ತದೆ.
ಇದನ್ನೂ ಓದಿ: 5ಜಿ ಸ್ಮಾರ್ಟ್ಫೋನ್ಗೆ ಹೊಸ ಡೈಮೆನಿಸ್ಟಿ 8200 ಚಿಪ್ ಬಿಡುಗಡೆ ಘೋಷಿಸಿದ ಮೀಡಿಯಾ ಟೆಕ್