ಬೆಂಗಳೂರು: ಆ್ಯಪಲ್ ಗ್ರಾಹಕರ ದೀರ್ಘ ಕಾಯುವಿಕೆ ಅವಧಿ ಮುಗಿದಿದ್ದು, ಐಫೋನ್ 15 ಸರಣಿಯ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಜನರಲ್ಲಿ ಸಾಕಷ್ಟು ಕ್ರೇಜ್ ಮೂಡಿಸಿರುವ ಈ ಫೋನ್ ಕೊಳ್ಳಲು ಗ್ರಾಹಕರು ಕೂಡ ಉತ್ಸಾಹ ತೋರಿದ್ದು, ಸರತಿ ಸಾಲಿನಲ್ಲಿ ನಿಂತಿದ್ದಾರೆ. ಐಫೋನ್ ಸರಳಿಯ ಮೊಬೈಲ್ಗಳಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐ ಪೋನ್ 15 ಪ್ರೋ ಮಾಕ್ಸ್ ಮೊಬೈಲ್ಗಳಿವೆ. ಇದರ ಜೊತೆಗೆ ಆ್ಯಪಲ್ ವಾಚ್ನ ಸೀರಿಸ್ 9 ಮತ್ತು ವಾಚ್ ಅಲ್ಟ್ರಾ 2 ಕೂಡ ಬಿಡುಗಡೆಯಾಗಿದೆ.
ಯುಎಸ್‌ಬಿ ಸಿ ಟೈಪ್ ಚಾರ್ಚಿಂಗ್: ಐ ಫೋನ್ ಸರಣಿಯಲ್ಲಿ ವೈಶಿಷ್ಟ್ಯಗಳಲ್ಲಿ ಒಂದು ಯುಎಸ್‌ಬಿ ಸಿ ಟೈಪ್ ಚಾರ್ಚಿಂಗ್ ಆಗಿದೆ. ಆರಂಭದಲ್ಲಿ ಈ ಯುಎಸ್‌ಬಿ ಸಿ ಟೈಪ್ ಚಾರ್ಚಿಂಗ್ ಅನ್ನು ಐಫೋನ್ 14 ಪ್ರೋ ಮತ್ತು ಪ್ರೋ ಮಾಕ್ಸ್ನಲ್ಲಿ ನೀಡಲಾಗಿತ್ತು. ಇದೀಗ ಈ ವೈಶಿಷ್ಟಯ 15 ಮತ್ತು ಐಫೋನ್ 15 ಪ್ಲಸ್ನಲ್ಲಿಯೂ ಇದೆ.
ವರ್ಜ್ ಪ್ರಕಾರ, ಐಫೋನ್ 15 OLED ಸೂಪರ್ ರೆಟಿನಾ ಡಿಸ್ಪ್ಲೇ ಒಂದಿದ್ದು, ಇದು ಡಾಲ್ಬಿ ವರ್ಷನ್ ಕಂಟೆಟ್ ಜೊತೆಗೆ 1,600 ಬ್ರೈಟ್ನೆಸ್ ಹೊಂದಿದೆ. ಸೂರ್ಯನ ಬೆಳಕಿನಲ್ಲಿ ಇದರ ಹೆಚ್ಚಿನ ಮಟ್ಟದ ಡಿಸ್ಪ್ಲೈ ಬ್ರೈಟ್ನೆಸ್ 2,000 ನಿಟ್ಸ್ ಆಗಿದ್ದು, ಐಫೋನ್ 14ಗಿಂತ ಇದು ದುಪ್ಪಟ್ಟಾಗಿರಲಿದೆ.
-
Got it .Proud and thrilled to own the MADE IN INDIA IPHONE 15.. #MakeInIndia #iPhone15 🙏🙏🇮🇳🇮🇳🇮🇳 pic.twitter.com/DlnAeScLDt
— Ranganathan Madhavan (@ActorMadhavan) September 21, 2023 " class="align-text-top noRightClick twitterSection" data="
">Got it .Proud and thrilled to own the MADE IN INDIA IPHONE 15.. #MakeInIndia #iPhone15 🙏🙏🇮🇳🇮🇳🇮🇳 pic.twitter.com/DlnAeScLDt
— Ranganathan Madhavan (@ActorMadhavan) September 21, 2023Got it .Proud and thrilled to own the MADE IN INDIA IPHONE 15.. #MakeInIndia #iPhone15 🙏🙏🇮🇳🇮🇳🇮🇳 pic.twitter.com/DlnAeScLDt
— Ranganathan Madhavan (@ActorMadhavan) September 21, 2023
ಇನ್ನು ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಕ್ಯಾಮೆರಾ ವ್ಯವಸ್ಥೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಬಹುದಾಗಿದೆ. ಮುಖ್ಯ ಕ್ಯಾಮೆರಾ ಸೆನ್ಸಾರ್ನಲ್ಲಿ 48 ಮೆಗಾಪಿಕ್ಸೆಲ್ ಇರಲಿದೆ. ಪೋಟ್ರಾಯಟ್ ಮೂಡ್ನಲ್ಲಿ ಮ್ಯಾನುಯಲ್ ಸ್ವಿಚಿಂಗ್ ಅವಶ್ಯಕತೆಯನ್ನು ತೆಗೆಯಲಾಗಿದೆ.
ಐ ಫೋನ್ 15 6.1 ಇಂಚ್ ಸ್ಕ್ರೀನ್ ಹೊಂದ್ದರೆ, ಐಫೋನ್ 15 ಪ್ಲಸ್ 6.7 ಇಂಚಿನ ಸ್ಕ್ರೀನ್ ಲಭ್ಯವಿದೆ. ಈ ಐಫೋನ್ಗಳು ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ.
ಭಾರತದಲ್ಲಿ ಐಫೋನ್ ದರಗಳ ಪಟ್ಟಿ ಹೀಗಿದೆ
ಐಫೋನ್ 15 (128 GB): Rs 79,900
ಐಫೋನ್ 15 (256 GB): Rs 89,900
ಐಫೋನ್ 15 (512GB): Rs 1,09,900
ಐಫೋನ್ 15 ಪ್ಲಸ್ ದರ
ಐಫೋನ್ 15 ಪ್ಲಸ್ (128 GB): Rs 89,900
ಐಫೋನ್ 15 ಪ್ಲಸ್ (256 GB): Rs 99,900
ಐಫೋನ್ 15 ಪ್ಲಸ್ (512 GB): Rs 1,19,900
ಐಫೋನ್ 15 ಪ್ರೊ ದರ
ಐಫೋನ್ 15 ಪ್ರೊ (128 GB): Rs 1,34,900
ಐಫೋನ್ 15 ಪ್ರೊ (256 GB): Rs 1,44,900
ಐಫೋನ್ 15 ಪ್ರೊ (512GB): Rs 1,64,900
ಐಫೋನ್ 15 ಪ್ರೊ (1 TB): Rs 1,84,900
ಐಫೋನ್ 15 ಪ್ರೊ ಮಾಕ್ಸ್ ದರ
ಐಫೋನ್ 15 ಪ್ರೊ ಮಾಕ್ಸ್ (256 GB): Rs 1,59,900
ಐಫೋನ್ 15 ಪ್ರೊ ಮಾಕ್ಸ್ (512 GB): Rs 1,79,900
ಐಫೋನ್ 15 ಪ್ರೊ ಮಾಕ್ಸ್ (1 TB): Rs 1,99,900
ಪ್ರೋ ಮಾಡೆಲ್ ಅನ್ನು ಎ 17 ಪ್ರಿ ಚಿಪ್ ಇದ್ದು, ಯಾವುದೇ ಸ್ಮಾರ್ಟ್ಫೋನ್ಗಿಂತ ಅತಿ ವೇಗವಾಗಿ ಕಾರ್ಯ ನಿರ್ವಹಿಸಲಿದೆ. ಯುಎಸ್‌ಬಿ- ಸಿ ಪೋ
ರಿಯಾಯಿತಿ: ಆ್ಯಪಲ್ ಗ್ರಾಹಕರಿಗೆ ಎಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಹೆಚ್ಚಿನ ರಿಯಾಯಿತಿ ನೀಡಿದೆ. ಎಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಐಫೋನ್ 15 ಪ್ರೊ ಮತ್ತು ಪ್ರೊ ಮಾಕ್ಸ್ ಕೊಳ್ಳುವುದಾದರೆ 6 ಸಾವಿರ ತಕ್ಷಣದ ರಿಯಾಯಿರಿ ಸಿಗಲಿದೆ. ಎಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಬಳಕೆ ಮಾಡಿ ಐಫೋನ್ 15 ಮತ್ತು 15 ಪ್ಲಸ್ ಮೇಲೆ 5000 ಕ್ಯಾಶ್ಬ್ಯಾಕ್ ಆಫರ್ ಸಿಗಲಿದೆ. ಈ ಆಫರ್ ಐ ಫೋನ್ ಹಳೆಯ ಮಾಡೆಲ್ಗೂ ವಿಸ್ತರಿಸಲಾಗಿದ್ದು, ಐ ಫೋನ್ 14 ಮೇಲೆ 4000, 14 ಪ್ಲಸ್ ಮೇಲೆ 3000, ಐ ಫೋನ್ 13ರ ಮೇಲೆ 2000 ಡಿಸ್ಕೌಟ್ ಸಿಗಲಿದೆ.
ಹೆಚ್ಚುವರಿಯಾಗಿ ಹೊಸ ಐಫೋನ್‌ಗಾಗಿ ಅರ್ಹವಾದ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವಾಗ ಗ್ರಾಹಕರು ರೂ 55,700 ವರೆಗೆ ತ್ವರಿತ ಕ್ರೆಡಿಟ್ ಅನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಐಫೋನ್ 15 ಪ್ರೊ, ಪ್ರೊ ಮ್ಯಾಕ್ಸ್ ಬಿಡುಗಡೆ: 48 MP ಕ್ಯಾಮರಾ, ಯುಎಸ್‌ಬಿ-ಸಿ ಟೈಪ್ ಚಾರ್ಜರ್ ಇನ್ನೂ ಏನೆಲ್ಲಾ!