ETV Bharat / science-and-technology

ಕಾರ್ಪೋರೇಟ್​ ಸಿಬ್ಬಂದಿಗೆ ಬ್ಯಾಕ್​ ಟು ಆಫೀಸ್​ ಎಂದ ಅಮೆಜಾನ್​: ವಾರದ ಮೂರು ದಿನ ಕಚೇರಿಯಲ್ಲಿ ಕೆಲಸ

ಕೋವಿಡ್​ ಕಾರಣದಿಂದ ಅದೆಷ್ಟೋ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಮ್​ ಮಾಡಲು ಹೇಳಿದ್ದ ಕಂಪನಿಗಳು ಇದೀಗ ಮತ್ತೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚನೆ ನೀಡುತ್ತಿವೆ.

author img

By

Published : Feb 18, 2023, 7:13 AM IST

Amazone
ಅಮೆಜಾನ್​

ನ್ಯೂಯಾರ್ಕ್​: ವರ್ಕ್​ ಫ್ರಂ ಹೋಮ್​ನಲ್ಲಿದ್ದ ತನ್ನ ಕಾರ್ಪೋರೇಟ್​ ಉದ್ಯೋಗಿಗಗಳು ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಗೆ ಹಾಜರಾಗುವಂತೆ ಅಮೆಜಾನ್​ ಕಂಪನಿ ತಿಳಿಸಿದೆ. ಈ ಕುರಿತು ಅಮೆಜಾನ್​ ಸಿಇಒ ಆ್ಯಂಡಿ ಜೆಸ್ಸಿ ಶುಕ್ರವಾರ ಸಿಬ್ಬಂದಿಗೆ ಮೆಮೊ ನೋಟಿಸ್​ ಮೂಲಕ ಘೋಷಿಸಿದ್ದು, ನೂತನ ನಿಯಮ ಮೇ 1 ರಿಂದ ಜಾರಿಗೆ ಬರಲಿದೆ. ತಮ್ಮ ತಂಡಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಿರ್ಧರಿಸಲು ನಾಯಕರಿಗೆ ಅವಕಾಶ ನೀಡುವ ಅಮೆಜಾನ್‌ನ ಪ್ರಸ್ತುತ ನೀತಿಯನ್ನು ಬದಲಾಯಿಸಿ, ಇದನ್ನು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್​ 19 ಕಾರಣದಿಂದಾಗಿ ಅನಿವಾರ್ಯವಾಗಿ ತನ್ನ ಉದ್ಯೋಗಿಗಳನ್ನು ವರ್ಕ್​ ಫ್ರಂ ಹೋಮ್​ಗೆ ಕಳುಹಿಸಿದ್ದ ಅನೇಕ ಕಂಪನಿಗಳು ಇದೀಗ ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳಲು ಪ್ರಾರಂಭಿಸಿವೆ. ಕಳೆದ ತಿಂಗಳು, ಸ್ಟಾರ್‌ಬಕ್ಸ್ ತನ್ನ ಕಾರ್ಪೊರೇಟ್ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡಲು ಯೋಜನೆ ರೂಪಿಸಿಕೊಳ್ಳುವಂತೆ ಹೇಳಿತ್ತು.

ಅದೇ ರೀತಿ ಡಿಸ್ನಿ ಕೂಡ ಮಾರ್ಚ್​ನಿಂದ ವಾರದಲ್ಲಿ ನಾಲ್ಕು ದಿನ ಕಚೇರಿಯಿಂದ ಕಾರ್ಯನಿರ್ವಹಿಸುವಂತೆ ಕೇಳಿದೆ. ವಾಲ್​ಮಾರ್ಟ್​ ಕಂಪನಿ ಮಾತ್ರ ತನ್ನ ಟೆಕ್​ ತಂಡಗಳಿಗೆ ವರ್ಕ್​ ಫ್ರಂ ಹೋಮ್​ ಮಾದರಿಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಹಿಂದಿನಂತೆಯೇ ಪ್ರತಿದಿನ ಕಚೇರಿಗೆ ಬಂದು ಕೆಲಸ ನಿರ್ವಹಿಸುವಂತೆ ತಿಳಿಸಿದೆ. ಕೋವಿಡ್​ ಸಾಂಕ್ರಾಮಿಕ ಸಮಯದಲ್ಲಿ ಯಾವ ರೀತಿ ಕೆಲಸ ಮಾಡಿದ್ದೀರಾ ಎಂಬುದನ್ನು ಗಮನಿಸಿದ ನಂತರ ಅಮೆಜಾನ್​ ತನ್ನ ನಿರ್ಧಾವನ್ನು ತೆಗೆದುಕೊಂಡಿದೆ.

ಅಮೆಜಾನ್​ ಕಂಪನಿಯ ಹಿರಿಯ ಲೀಡರ್​ಶಿಪ್​ ಟೀಂ ನಮ್ಮ ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸಿದ್ದಾರೆ ಮತ್ತು ಇತರ ಕಂಪನಿಗಳ ನಾಯಕರ ಜೊತೆ ಮಾತನಾಡಿರುವುದನ್ನು ಗಮನಿಸಿದ್ದಾರೆ. ಉದ್ಯೋಗಿಗಳು ವೈಯಕ್ತಿಕವಾಗಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ ಮತ್ತು ಹೆಚ್ಚು ಸುಲಭವಾಗಿ ಸಹಕರಿಸುತ್ತಾರೆ ಎಂದು ನಮ್ಮ ತಂಡ ತಿಳಿಸಿದೆ. ಈ ಕ್ರಮವು ಸ್ಥಳೀಯ ಆರ್ಥಿಕತೆಗೆ ಸಹಾಯ ಮಾಡಬಹುದು ಎಂದು ಜೆಸ್ಸಿ ಮೆಮೊದಲ್ಲಿ ಹೇಳಿದ್ದಾರೆ.

ಈ ಬದಲಾವಣೆಯು ಪುಗೆಟ್ ಸೌಂಡ್, ವರ್ಜೀನಿಯಾ, ನ್ಯಾಶ್‌ವಿಲ್ಲೆ ಮತ್ತು ನಮ್ಮ ಉದ್ಯೋಗಿಗಳು ಕಚೇರಿಗೆ ಹೋಗುವ ಪ್ರಪಂಚದಾದ್ಯಂತದ ಡಜನ್‌ಗಟ್ಟಲೆ ನಗರಗಳಲ್ಲಿ ನಮ್ಮ ನಗರ ಪ್ರಧಾನ ಕಚೇರಿಯ ಸುತ್ತ ಇರುವ ಸಾವಿರಾರು ವ್ಯವಹಾರಗಳಿಗೆ ಉತ್ತೇಜನವನ್ನು ನೀಡುತ್ತದೆ ಎನ್ನುವ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ ಎಂದಿದ್ದಾರೆ. ಈ ನೂತನ ಬದಲಾವಣೆಯ ವಿವರಗಳನ್ನು ಇನ್ನೂ ಅಂತಿಗೊಳಿಸಲಾಗಿಲ್ಲ. ಈ ವಾರ ಆದಷ್ಟು ಬೇಗ ಕಂಪನಿಯ ಹಿರಿಯ ನಾಯಕತ್ವದ ತಂಡದ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರದ ಬಗ್ಗೆ ಪ್ರಸ್ತಾಪಿಸುತ್ತೇನೆ. ಈ ಬದಲಾವಣೆಯಿಂದ ಕೆಲವು ಉದ್ಯೋಗಿಗಳಿಗೆ ವಿನಾಯಿತಿ ನೀಡಲಾಗುವುದು. ವಿನಾಯಿತಿ ಪಡೆಯುವವರ ಸಂಖ್ಯೆ ಸಣ್ಣದಾಗಿರುತ್ತದೆ ಎಂದು ವಿವರಿಸಿದ್ದಾರೆ.

ಕಳೆದ ತಿಂಗಳಷ್ಟೆ ಅಮೆಜಾನ್​ ಕೋವಿಡ್​ ಲಾಕ್​ಡೌನ್​ ಸಮಯದಲ್ಲಿ ವೇಗವಾಗಿ ವಿಸ್ತರಿಸಿದ ವೇತನದಾರರ ಪಟ್ಟಿಯನ್ನು ಕತ್ತರಿಸುವ ನಿಟ್ಟಿನಲ್ಲಿ 18,000 ಕಾರ್ಪೋರೇಟ್​ ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದುಹಾಕುದಾಗಿ ಘೋಷಣೆ ಮಾಡಿತ್ತು. ಸೇಲ್ಸ್‌ಫೋರ್ಸ್ ಮತ್ತು ಗೂಗಲ್ ಸೇರಿದಂತೆ ಇತರ ದೊಡ್ಡ ಟೆಕ್ ಕಂಪನಿಗಳು ಕೂಡ ಅದೇ ರೀತಿ ಮಾಡುತ್ತಿವೆ.

ಇದನ್ನೂ ಓದಿ: ಅಮೆಜಾನ್‌ನಿಂದ 18 ಸಾವಿರ ಉದ್ಯೋಗ ಕಡಿತ ನಿರ್ಧಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.