ETV Bharat / science-and-technology

ಕಿಂಡಲ್ ನಿಯತಕಾಲಿಕೆ, ವೃತ್ತಪತ್ರಿಕೆ ಸಬ್​ಸ್ಕ್ರಿಪ್ಷನ್ ಸ್ಥಗಿತಗೊಳಿಸಿದ ಅಮೆಜಾನ್

author img

By

Published : Mar 17, 2023, 6:13 PM IST

ತಮ್ಮ ಕೈಯಲ್ಲಿರುವ ಟ್ಯಾಬ್ ಅಥವಾ ಮೊಬೈಲ್​ನಲ್ಲಿಯೇ ಪುಸ್ತಕ, ನಿಯಕಾಲಿಕೆಗಳನ್ನು ಓದುವ ಅವಕಾಶ ನೀಡುತ್ತಿದ್ದ ಅಮೆಜಾನ್ ಕಿಂಡಲ್ ಮುಚ್ಚುವ ಹಾದಿಯಲ್ಲಿದೆ. ಹೊಸ ಕಿಂಡಲ್ ಚಂದಾದಾರಿಕೆಗಳನ್ನು ನಿಲ್ಲಿಸುತ್ತಿರುವುದಾಗಿ ಅಮೆಜಾನ್ ಹೇಳಿದೆ.

Amazon shuts Kindle magazine, newspaper subscriptions

ಸ್ಯಾನ್ ಫ್ರಾನ್ಸಿಸ್ಕೋ : ಅಮೆಜಾನ್ ಮಾರ್ಚ್ 9 ರಿಂದ ಕಿಂಡಲ್ ನ್ಯೂಸ್‌ಸ್ಟ್ಯಾಂಡ್ ಮೂಲಕ ನಿಯತಕಾಲಿಕೆ ಮತ್ತು ವೃತ್ತಪತ್ರಿಕೆ ಸಬ್​ಸ್ಕ್ರಿಪ್ಷನ್ ಮಾರಾಟ ಮಾಡುವುದನ್ನು ನಿಲ್ಲಿಸಿದೆ ಮತ್ತು ಸೆಪ್ಟೆಂಬರ್‌ನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಿಂಡಲ್ ನ್ಯೂಸ್‌ಸ್ಟ್ಯಾಂಡ್ ಸಬ್​ಸ್ಕ್ರಿಪ್ಷನ್​ಗಳ ಸೇವೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಕಿಂಡಲ್ ನ್ಯೂಸ್‌ಸ್ಟ್ಯಾಂಡ್ ಎಂಬುದು ಕಿಂಡಲ್​ಗಾಗಿ ತಯಾರಿಸಿದ ಪುಸ್ತಕ ಅಥವಾ ವೃತ್ತಪತ್ರಿಕೆಯನ್ನು ಓದುವ ಪ್ಲಾಟ್​ಪಾರ್ಮ್ ಆಗಿದೆ.

ಮಾಸಿಕ ಕಿಂಡಲ್ ನ್ಯೂಸ್ ಸಬ್ ಸ್ಕ್ರಿಪ್ಷನ್ ಖರೀದಿಸಿದವರು ಸೆಪ್ಟೆಂಬರ್ 4, 2023 ರವರೆಗೆ ತಮ್ಮ ಸಂಚಿಕೆಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಚಂದಾದಾರರು ತಾವಾಗಿಯೇ ತಮ್ಮ ಸಬ್​ಸ್ಕ್ರಿಪ್ಷನ್ ಅನ್ನು ರದ್ದು ಮಾಡದಿದ್ದರೆ ಈ ದಿನಾಂಕದವರೆಗೆ ಸಂಚಿಕೆಗಳನ್ನು ಪಡೆಯುತ್ತಾರೆ. ಆ ದಿನಾಂಕದ ನಂತರ, ಅಮೆಜಾನ್ ಮೂಲಕ ನಿಮ್ಮ ಚಂದಾದಾರಿಕೆ(ಗಳನ್ನು) ನವೀಕರಿಸಲು ನಿಮಗೆ ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ನಿಮಗೆ ಈಗಾಗಲೇ ತಲುಪಿಸಲಾದ ಸಂಚಿಕೆಗಳನ್ನು ನೀವು ಓದುವುದನ್ನು ಮುಂದುವರಿಸಬಹುದು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಕಂಪನಿಯು ಕಿಂಡಲ್ ನ್ಯೂಸ್‌ಸ್ಟ್ಯಾಂಡ್ ಚಂದಾದಾರಿಕೆಗಳ ಜೊತೆಗೆ ಮುದ್ರಣ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳ ಮಾರಾಟ ಸಹ ಸ್ಥಗಿತಗೊಳಿಸಿದೆ. ಜೂನ್ 5, 2023 ರವರೆಗೆ ಅಮೆಜಾನ್ ಮೂಲಕ ನಿಮ್ಮ ಪ್ರಿಂಟ್ ಮ್ಯಾಗಜೀನ್ ಚಂದಾದಾರಿಕೆ(ಗಳನ್ನು) ನಿರ್ವಹಿಸುವುದನ್ನು ನೀವು ಮುಂದುವರಿಸಬಹುದು. ಆ ದಿನಾಂಕದ ನಂತರ, ಯಾವುದೇ ಉಳಿದಿರುವ ಸಕ್ರಿಯ ಚಂದಾದಾರಿಕೆಗಳಿಗಾಗಿ ಎಲ್ಲ ಗ್ರಾಹಕ ಸೇವಾ ವಿಚಾರಣೆಗಳನ್ನು ಪ್ರಕಾಶಕರು ನೇರವಾಗಿ ನಿರ್ವಹಿಸುತ್ತಾರೆ ಎಂದು ಕಂಪನಿ ಹೇಳಿದೆ. ಈ ತಿಂಗಳ ಆರಂಭದಲ್ಲಿ, ಅಮೆಜಾನ್ ಅಮೆರಿಕದಲ್ಲಿನ ತನ್ನ ಎಂಟು ಗೋ ಕನ್ವಿನಿಯನ್ಸ್​ ಮಳಿಗೆಗಳನ್ನು ಮುಚ್ಚುವುದಾಗಿ ಘೋಷಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಮೆಜಾನ್ ನ್ಯೂಯಾರ್ಕ್ ನಗರದಲ್ಲಿ ಎರಡು ಗೋ ಸ್ಟೋರ್‌ಗಳು, ಸಿಯಾಟಲ್‌ನಲ್ಲಿ ಎರಡು ಸ್ಥಳಗಳು ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಾಲ್ಕು ಮಳಿಗೆಗಳನ್ನು ಏಪ್ರಿಲ್ 1 ರಂದು ಮುಚ್ಚಲಿದೆ. ಇದರಿಂದ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಕಂಪನಿಯಲ್ಲಿ ಬೇರೆ ಕೆಲಸ ನೀಡಲು ಪ್ರಯತ್ನ ಮಾಡಲಿದೆ ಎಂದು ಹೇಳಿದೆ.

ಚಾಟ್​ ಅಟ್ಯಾಚ್​ಮೆಂಟ್​ ಮೆನು ನೀಡಲಿದೆ ವಾಟ್ಸ್​ಆ್ಯಪ್: ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಕಂಪನಿ ವಾಟ್ಸ್​ ಆ್ಯಪ್, ಆ್ಯಂಡ್ರಾಯ್ಡ್ ಬೀಟಾ ವರ್ಷನ್​ಗಾಗಿ ಮರುವಿನ್ಯಾಸಗೊಳಿಸಲಾದ ಚಾಟ್​ ಅಟ್ಯಾಚ್​ಮೆಂಟ್​ ಮೆನು ಬಗ್ಗೆ ಕೆಲಸ ಮಾಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮರುವಿನ್ಯಾಸಗೊಳಿಸಲಾದ ಚಾಟ್ ಅಟ್ಯಾಚ್​ಮೆಂಟ್ ಮೆನು ಮೊದಲಿಗಿಂತ ಸರಳವಾಗಿದ್ದು, ಬಳಸಲು ಸುಲಭವಾಗಿದೆ ಎಂದು ಹೇಳಲಾಗಿದೆ.

ಏತನ್ಮಧ್ಯೆ, ವಾಟ್ಸ್​ ಆ್ಯಪ್ ತನ್ನ ಗ್ರೂಪ್ ಚಾಟ್‌ಗಳಲ್ಲಿ ಪ್ರೊಫೈಲ್ ಐಕಾನ್‌ಗಳನ್ನು ಪ್ರದರ್ಶಿಸುವ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯವು ಪ್ರೊಫೈಲ್ ಐಕಾನ್‌ಗಳನ್ನು ತೋರಿಸುವ ಮೂಲಕ ಗ್ರೂಪ್​ನ ಸದಸ್ಯರನ್ನು ಸ್ಪಷ್ಟವಾಗಿ ಗುರುತಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ ಮತ್ತು ಗ್ರೂಪ್ ಚಾಟ್​ಗಳಲ್ಲಿ ತೊಡಗಿಸಿಕೊಳ್ಳಲು ಸುಲಭವಾಗುತ್ತದೆ.

ಟ್ವೀಟ್ ಪಿನ್ ಮಾಡಲು ವಿಶೇಷ ಬಟನ್: ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ಬಳಕೆದಾರರು ತಮ್ಮ ಟಾಪ್ ಟ್ವೀಟ್​ಗಳನ್ನು ಪಿನ್ ಮಾಡಲು ಸಾಧ್ಯವಾಗುವಂತೆ ಕಸ್ಟಮ್ ಟ್ಯಾಬ್ ಒಂದನ್ನು ನೀಡುವ ನಿರೀಕ್ಷೆಯಿದೆ. ಟಾಪ್ ಟ್ವೀಟ್​ ಪಿನ್ ಮಾಡುವ ಸಲುವಾಗಿ ವಿಶೇಷ ಬಟನ್ ಇದ್ದರೆ ಒಳ್ಳೆಯದು ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಮಸ್ಕ್, ಸದ್ಯದಲ್ಲೇ ಇದು ಬರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಮೆಜಾನ್‌ನಿಂದ 18 ಸಾವಿರ ಉದ್ಯೋಗ ಕಡಿತ ನಿರ್ಧಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.