ಕೇಪ್ ಕ್ಯಾನವೆರಲ್ (ಅಮೆರಿಕ) : ಸ್ಪೇಸ್‌ಎಕ್ಸ್‌ನ ಬ್ರಾಡ್ ಬ್ಯಾಂಡ್ ನೆಟ್‌ವರ್ಕ್‌ಗೆ ಪ್ರತಿಸ್ಪರ್ಧಿಯಾಗಿ ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಯೋಜಿತ ಇಂಟರ್ನೆಟ್ ಸೇವೆಗಾಗಿ ಮೊದಲ ಪರೀಕ್ಷಾ ಉಪಗ್ರಹಗಳನ್ನು ಶುಕ್ರವಾರ ಉಡಾವಣೆ ಮಾಡಿದೆ.
ಹೌದು, ಅಮೆಜಾನ್ ಕಂಪನಿಯು ಬಾಹ್ಯಾಕಾಶ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸುತ್ತಿದ್ದು, ಅದಕ್ಕೆ ಪ್ರಾಜೆಕ್ಟ್ ಕೈಪರ್ ಎಂದು ಹೆಸರಿಟ್ಟಿದೆ. ಈ ಯೋಜನೆಯ ಮೂಲಕ ಅಮೆಜಾನ್, ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್‌ನೊಂದಿಗೆ ಸ್ಪರ್ಧಿಸಲಿದೆ ಎಂದು ಅಂದಾಜಿಸಲಾಗಿದೆ.
ಈ ಯೋಜನೆಯು 'ಕೈಪರ್‌ಸ್ಯಾಟ್-1' ಮತ್ತು 'ಕೈಪರ್‌ಸಾಟ್-2' ಹೆಸರಿನ ಜೋಡಿ ಉಪಗ್ರಹಗಳನ್ನು ಒಳಗೊಂಡಿದೆ. ಇದನ್ನು ಶುಕ್ರವಾರ (ಅಕ್ಟೋಬರ್ 6) ಫ್ಲೋರಿಡಾದ ಕೇಪ್ ಕೆನವೆರಲ್‌ನಿಂದ ಪೂರ್ವ ಕಾಲಮಾನದ ಮಧ್ಯಾಹ್ನ 2:06 ಗಂಟೆಗೆ ಯುನೈಟೆಡ್ ಲಾಂಚ್ ಅಲೈಯನ್ಸ್ (ULA) ನಲ್ಲಿ ಅಟ್ಲಾಸ್ ವಿ ರಾಕೆಟ್ ಸಹಾಯದಿಂದ ಉಡಾವಣೆ ಮಾಡಲಾಯಿತು. ಭೂಮಿಯ ಸುತ್ತ ಅಂತಿಮವಾಗಿ 3,236 ಉಪಗ್ರಹಗಳೊಂದಿಗೆ ಜಾಗತಿಕ ಇಂಟರ್ನೆಟ್ ಕವರೇಜ್ ಸುಧಾರಿಸುವ ಗುರಿ ಹೊಂದಲಾಗಿದ್ದು, ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಇರಿಸಲಾಗುತ್ತದೆ.
ಇದನ್ನೂ ಓದಿ : ಪ್ರಕೃತಿ ಆಧರಿತ ಯೋಜನೆಗಳಿಗೆ 3 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಅಮೆಜಾನ್
ಅಮೆಜಾನ್‌ನ ಸ್ಪೇಸ್ ಇಂಟರ್ನೆಟ್ ಸೌಲಭ್ಯ ಯಾವಾಗ ಲಭ್ಯವಾಗುತ್ತದೆ? : ಮಾಹಿತಿ ಪ್ರಕಾರ, ಆರಂಭಿಕ ಕೈಪರ್ ಸಮೂಹವು 3,236 ಉಪಗ್ರಹಗಳನ್ನು ಒಳಗೊಂಡಿರುತ್ತದೆ. Kuipersat - 1 ಮತ್ತು Kuipersat - 2 ಅನ್ನು ಮೂಲತಃ ULA ಯ ಹೊಸ ವಲ್ಕನ್ ರಾಕೆಟ್‌ನ ಚೊಚ್ಚಲ ಉಡಾವಣೆಯಲ್ಲಿ ಉಪಗ್ರಹಗಳನ್ನು ಹಾರಿಸಲು ಅಮೆಜಾನ್ ಒಪ್ಪಿಕೊಂಡಿತು. ಆದರೆ, ಆ ರಾಕೆಟ್‌ನ ವಿಳಂಬದಿಂದಾಗಿ ಉಡಾವಣೆಗಾಗಿ ಅಟ್ಲಾಸ್ V ಗೆ ಬದಲಾಯಿಸಲಾಯಿತು. ಆದಾಗ್ಯೂ, ಮುಂದಿನ ದಿನಗಳಲ್ಲಿ ಪ್ರಾಜೆಕ್ಟ್ ಕೈಪರ್ ಉಪಗ್ರಹಗಳನ್ನು ವಲ್ಕನ್ ಸೆಂಟರ್ ಮೂಲಕ ಉಡಾವಣೆ ಮಾಡುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಯೋಜನೆಯ ಪ್ರಕಾರ ನಡೆದರೆ ಇದು 2024 ರ ಅಂತ್ಯದ ವೇಳೆಗೆ ಕೆಲವು ಗ್ರಾಹಕರಿಗೆ ಸೇವೆ ಸಲ್ಲಿಸಬಹುದು.
ಇದನ್ನೂ ಓದಿ : ಜನರೇಟಿವ್ ಎಐಗೆ ಅಮೆಜಾನ್ ಪ್ರವೇಶ : ಜಾಗತಿಕವಾಗಿ 10 ಸ್ಟಾರ್ಟ್ ಅಪ್ಗಳಿಗೆ ಸಹಾಯ
ಇನ್ನು ಸ್ಪೇಸ್‌ಎಕ್ಸ್ ತನ್ನ ಮೊದಲ ಟೆಸ್ಟ್ ಸ್ಟಾರ್‌ಲಿಂಕ್ ಉಪಗ್ರಹಗಳನ್ನು 2018 ರಲ್ಲಿ ಹಾರಿಸಿತು ಮತ್ತು 2019 ರಲ್ಲಿ ಮೊದಲ ಕಾರ್ಯಾಚರಣೆಯ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ತನ್ನ ಸ್ವಂತ ಫಾಲ್ಕನ್ ರಾಕೆಟ್‌ಗಳನ್ನು ಬಳಸಿಕೊಂಡು ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಿಂದ 5,000 ಕ್ಕೂ ಹೆಚ್ಚು ಸ್ಟಾರ್‌ಲಿಂಕ್‌ಗಳನ್ನು ಉಡಾವಣೆ ಮಾಡಿದೆ. ಯುರೋಪ್‌ನ Eutelsat OneWeb ಸಹ ಇಂಟರ್ನೆಟ್ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಹಾಗೆಯೇ ಅಮೆಜಾನ್, ULA ಯುಎಲ್ಎ, ಬ್ಲೂ ಒರಿಜಿನ್ ಮತ್ತು ಯುರೋಪ್‌ನ ಏರಿಯನ್ಸ್ಪೇಸ್‌ನಿಂದ 77 ಉಡಾವಣೆಗಳನ್ನು ಕಾಯ್ದಿರಿಸಿದೆ.
ಇದನ್ನೂ ಓದಿ : ಅಮೆಜಾನ್ ಪ್ರೈಮ್ನಲ್ಲಿ ಬರಲಿದೆ ಸ್ಟಾರ್ಟಪ್ ಕೇಂದ್ರಿತ ಶೋ ; ಸೆಲೆಬ್ರಿಟಿಗಳು, ಹೂಡಿಕೆದಾರರು ಭಾಗಿ