ETV Bharat / science-and-technology

Apple TV+ ಶೋನಲ್ಲಿ ಹೊಸ ವಿನ್ಯಾಸದೊಂದಿಗೆ ಕಾಣಿಸಿಕೊಂಡ iPhone 13 - ಟೆಡ್ ಲಾಸ್ಸೋ

ಐಫೋನ್ 13 ಸ್ಮಾರ್ಟ್‌ಫೋನ್‌ಗಳ ಮುಂಭಾಗದಲ್ಲಿರುವ ನಾಚ್ ವಿನ್ಯಾಸ ಸ್ವಲ್ಪ ಬದಲಾಗಲಿದೆ. ಐಫೋನ್ 13 ಮತ್ತು ಐಫೋನ್ 13 ಮಿನಿ ಫೋನ್‌ಗಳು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮರಾಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರೊ ಮಾದರಿಗಳು ಟ್ರಿಪಲ್ ಕ್ಯಾಮೆರಾಗಳನ್ನು ಒಳಗೊಂಡಿವೆ ಎನ್ನಲಾಗಿದೆ. ಈ ಫೋನ್​ ಈಗಾಗಲೇ ಆ್ಯಪಲ್ ಟಿವಿ+ ಶೋನಲ್ಲಿ ಕಾಣಿಸಿಕೊಂಡಿದೆ.

IPhone
ಐಫೋನ್ 13
author img

By

Published : Aug 31, 2021, 7:43 PM IST

ಸ್ಯಾನ್​ ಫ್ರಾನ್ಸಿಸ್ಕೊ: ಆ್ಯಪಲ್​​ ಸಂಸ್ಥೆ ಮುಂದಿನ ತಲೆಮಾರಿನ ಐಫೋನ್​ 13 ಸರಣಿಯನ್ನು ಸಿದ್ಧಪಡಿಸಿದೆ. ಸೆಪ್ಟೆಂಬರ್​ನಲ್ಲಿ ನೂತನ ಐಫೋನ್​ 13 (iPhone 13) ಮಾರುಕಟ್ಟೆಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಐಫೋನ್ 13 ಎಂದು ಹೇಳಲಾದ ಈ ಹೊಸ ಐಫೋನ್​ ಆ್ಯಪಲ್ ಟಿವಿ+ ನಲ್ಲಿ ಪ್ರಸಾರವಾಗುವ "ಟೆಡ್ ಲಾಸ್ಸೋ" ಎಂಬ ಕಾಮಿಡಿ ಸೀರಿಸ್​ನಲ್ಲಿ ಕಾಣಿಸಿಕೊಂಡಿದೆ. "ದಿ ಸಿಗ್ನಲ್" ಶೀರ್ಷಿಕೆಯ ಎರಡನೇ ಸೀಸನ್​ನ 6ನೇ ಎಪಿಸೋಡ್​ನ ಎರಡು ವಿಭಿನ್ನ ದೃಶ್ಯಗಳಲ್ಲಿ ನೋಚ್ಲೆಸ್ ಐಫೋನ್ ಅನ್ನು ಬಹಿರಂಗಪಡಿಸಿದೆ.

ಫೋನ್ ಕಸ್ಟಮ್ ಐಫೋನ್ UI ಅನ್ನು ಹೊಂದಿತ್ತು, ಆದರೆ ನಾಚ್ ಕೊರತೆಯಿತ್ತು. ಐಫೋನ್ 13 ಸ್ಮಾರ್ಟ್‌ಫೋನ್‌ಗಳ ಮುಂಭಾಗದಲ್ಲಿರುವ ನಾಚ್ ವಿನ್ಯಾಸ ಸ್ವಲ್ಪ ಬದಲಾಗಲಿದೆ ಎಂದು ಹೇಳಲಾಗಿರುವುದು ವಿಶೇಷವಾಗಿದೆ. ಐಫೋನ್ 13 ಮತ್ತು ಐಫೋನ್ 13 ಮಿನಿ ಫೋನ್‌ಗಳು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮರಾಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರೊ ಮಾದರಿಗಳು ಟ್ರಿಪಲ್ ಕ್ಯಾಮರಾಗಳನ್ನು ಒಳಗೊಂಡಿವೆ ಎಂದು ಹೇಳಲಾಗ್ತಿದೆ.

2017 ಐಫೋನ್ ಎಕ್ಸ್ ನಲ್ಲಿ ಆ್ಯಪಲ್ ನಾಚ್ ಅನ್ನು ಪರಿಚಯಿಸಿತು, ಇದರಲ್ಲಿ ಫೇಸ್ ಐಡಿ ಮತ್ತು ಸೆಲ್ಫಿ ಕ್ಯಾಮರಾದ ಘಟಕಗಳಿವೆ. ಕ್ಯಾಮರಾ ಮಾಡ್ಯೂಲ್ ಲೇಸರ್ ಸೆನ್ಸಾರ್ ಮತ್ತು ಎಲ್ಇಡಿ ಫ್ಲಾಶ್ ಅನ್ನು ಒಳಗೊಂಡಿದೆ ಹಾಗೂ ಐಫೋನ್ 13 ಸರಣಿಯ ಎಲ್ಲಾ ಹೊಸ ಫೋನ್‌ಗಳು ಮತ್ತಷ್ಟು ಅಭಿವೃದ್ದಿಗೊಂಡಿರುವ ಫೇಸ್ ಅನ್ಲಾಕ್ ಫೀಚರ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ತೈವಾನೀಸ್ ಸಂಶೋಧನಾ ಸಂಸ್ಥೆ ಟ್ರೆಂಡ್‌ಫೋರ್ಸ್ ಪ್ರಕಾರ, ಹೊಸ ಐಫೋನ್‌ಗಳು ಡಿಸ್‌ಪ್ಲೇಗಿಂತ ಚಿಕ್ಕದಾಗಿರುತ್ತವೆ. ಆದರೆ ಐಫೋನ್ 12 ಮಾದರಿಗಳಂತೆಯೇ ಬಾಹ್ಯ ವಿನ್ಯಾಸವನ್ನು ಹೊಂದಿರುತ್ತವೆ. ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಅವರು ವರದಿ ಮಾಡಿರುವಂತೆ, ಮುಂದಿನ ಪೀಳಿಗೆಯ ಐಫೋನ್‌ಗಳು ವೇಗವಾದ A15 ಬಯೋನಿಕ್ ಚಿಪ್‌ಸೆಟ್ ಹೊಂದಿರುವುದನ್ನು ಖಚಿತಪಡಿಸಿದ್ದಾರೆ.

ಆನ್‌ಪ್ಲೇ ಡಿಸ್‌ಪ್ಲೇ (AOD) ಮೋಡ್‌ನೊಂದಿಗೆ ನೂತನ ಐಫೋನ್ 13 ಸರಣಿ ಫೋನ್‌ಗಳು ಕಾಣಿಸಿಕೊಳ್ಳಲಿವೆ ಎಂದು ಹೇಳಿದ್ದಾರೆ. ಐಫೋನ್ ಬ್ಯಾಟರಿಯ ಮೇಲೆ ಪರಿಣಾಮ ಬೀರದಂತೆ AOD ಮತ್ತು 120Hz ರಿಫ್ರೆಶ್ ದರವನ್ನು ಸಾಧಿಸಲು, ಆ್ಯಪಲ್ ಪವರ್-ಎಫೆಕ್ಟಿವ್ LTPO ಡಿಸ್‌ಪ್ಲೇಗಳನ್ನು ಬಳಸಬಹುದು. ಇದು ಕಾರ್ಯನಿರ್ವಹಣೆ ಅನುಗುಣವಾಗಿ ಸೆಟ್ಟಿಂಗ್‌ಗಳನ್ನು ಹೊಂದಿಸುತ್ತದೆ. ಆ್ಯಪಲ್ ವೇಗದ ಚಾರ್ಜಿಂಗ್ ವೇಗಕ್ಕಾಗಿ ಲೈಟ್ನಿಂಗ್ ಪೋರ್ಟ್ ಬದಲಿಗೆ ಕೆಳಭಾಗದಲ್ಲಿ ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.