ETV Bharat / science-and-technology

ಬಿಡುಗಡೆಗೂ ಮುನ್ನವೇ Google Pixel​ ಫೋನ್​ ಫೀಚರ್ಸ್​​ ಲೀಕ್​​ - ತೈವಾನ್ ಮೂಲದ ಎನ್​ಸಿಸಿ ಡೇಟಾಬೇಸ್ ಬೆಬ್​​ಸೈಟ್​

ಈ ವರ್ಷದ ಗೂಗಲ್​​ ಪಿಕ್ಸೆಲ್(Google Pixel​) ಫೋನ್​ ಅಕ್ಟೋಬರ್​ನಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಅದಕ್ಕೂ ಮೊದಲೇ ವೆಬ್​ಸೈಟ್​​​ನಲ್ಲಿ ಎರಡೂ ಫೋನ್​​ಗಳ ವೈಶಿಷ್ಟ್ಯಗಳು ಲೀಕ್​ ಆಗಿದೆ. ಈ ಹಿಂದಿನ ಪಿಕ್ಸೆಲ್​ ಸಿರೀಸ್​​ಗಿಂತಲೂ 6ನೇ ಆವೃತ್ತಿ ವಿಭಿನ್ನ ಫೀಚರ್​ನಿಂದ ಕೂಡಿದೆ.

google-pixel-6-pro-specifications-leaked-ahead-of-launch
ಬಿಡುಗಡೆಗೂ ಮುನ್ನ ವೆಬ್​ಸೈಟ್​ನಲ್ಲಿ ಗೂಗಲ್​ ಪಿಕ್ಸೆಲ್​ ಫೋನ್​ ಫೀಚರ್ಸ್​​ ಲೀಕ್​​
author img

By

Published : Sep 21, 2021, 4:34 PM IST

ಸ್ಯಾನ್ ಫ್ರಾನ್ಸಿಸ್ಕೋ (ಯುಎಸ್​): ಗೂಗಲ್​​ ಪಿಕ್ಸೆಲ್​ ಸರಣಿಯ ಬಹುನಿರೀಕ್ಷಿತ ಪಿಕ್ಸೆಲ್​ 6 ಮತ್ತು ಪಿಕ್ಸೆಲ್ 6 ಪ್ರೊಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ಸಂಸ್ಥೆ ಘೋಷಿಸಿತ್ತು. ಆದರೆ ಇದಕ್ಕೂ ಮೊದಲೇ ಈ ಎರಡೂ ಮೊಬೈಲ್ ಸಿರೀಸ್​​ಗಳ ಫೀಚರ್​ಗಳು ಆನ್​ಲೈನ್​​ನಲ್ಲಿ ಹರಿದಾಡುತ್ತಿವೆ.

ತೈವಾನ್ ಮೂಲದ ಎನ್​ಸಿಸಿ ಡೇಟಾಬೇಸ್ ವೆಬ್​​ಸೈಟ್​ನಲ್ಲಿ ಈ ಎರಡೂ ಮೊಬೈಲ್​​ಗಳು ಲಿಸ್ಟಿಂಗ್ ಆಗಿದ್ದು, ಇವೆರಡರ ಎಕ್ಸ್​ಕ್ಲೂಸಿವ್ ಫೀಚರ್​ ಬಹಿರಂಗವಾಗಿದೆ. ಮುಖ್ಯವಾಗಿ ಇದೇ ಮೊದಲ ಬಾರಿಗೆ ಗೂಗಲ್ ತನ್ನ 6 ಪ್ರೊ ಮೊಬೈಲ್​​ನಲ್ಲಿ 33 ವ್ಯಾಟ್​​ ಫಾಸ್ಟ್​ ಚಾರ್ಜಿಂಗ್ ಪರಿಚಯಿಸುತ್ತಿದೆ ಎಂದು ವೆಬ್​ಸೈಟ್​​ ತಿಳಿಸಿದೆ.

ಜೊತೆಗೆ ಈ ಮೊಬೈಲ್​​ನಲ್ಲಿ 5,000mAh ಬ್ಯಾಟರಿ ಇರಲಿದ್ದು, ಇದು ಈ ಹಿಂದೆ ಬಿಡುಗಡೆಯಾದ ಪಿಕ್ಸೆಲ್​​ ಮೊಬೈಲ್​ಗೆ ಹೋಲಿಸಿದರೆ ಬಹುದೊಡ್ಡ ಅಪ್​​ಗ್ರೇಡ್ ಎಂದು ವರದಿಯಾಗಿದೆ. ಜೊತೆಗೆ ಫುಲ್​​ ಹೆಚ್​ಡಿ ಡಿಸ್​ಪ್ಲೇಗೆ 120Hzನ ರಿಫ್ರೆಶ್ ರೇಟ್ ಸಿಗಲಿದೆ. ಇದರ ಜೊತೆ ಡಿಜಿಟಲ್ ಕಾರ್​ ಕಿ ಅಪ್ಲಿಕೇಶನ್​ ಪ್ರಿ ಇನ್ಸ್​​ಸ್ಟಾಲ್​​ ಆಗಿರಲಿದೆ ಎಂದು ವೆಬ್​ಸೈಟ್ ಉಲ್ಲೇಖಿಸಿದೆ.

ಎಂದಿನಂತೆ ಗೂಗಲ್ ಪಿಕ್ಸೆಲ್ ಫೋನ್​​ಗಳು ಸೆನ್ಸಾರ್ ಚಿಪ್​ಸೆಟ್​ ಮೂಲಕ ಹೊರಬರಲಿದ್ದು, ಮಲಿ-ಜಿ78 ಜಿಪಿಯು, ಎಲ್​​​ಪಿಡಿಡಿಆರ್​ 5ನೊಂದಿಗೆ 12 ಜಿಬಿ ಱಮ್​​​​ 512 ಜಿಬಿ ಸ್ಟೊರೇಜ್​ನಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

ಗೂಗಲ್​ ಪಿಕ್ಸೆಲ್​ನ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿದ್ದ ಕ್ಯಾಮರಾವನ್ನ ಈ ಎರಡೂ ಫೋನ್​ಗಳಲ್ಲಿ ಅಪ್​ಗ್ರೇಡ್ ಮಾಡಲಾಗಿದೆ. ಸ್ಯಾಮ್​​​ಸಂಗ್ ಸೆನ್ಸಾರ್​​ನ 50 ಎಂಪಿ ಮೂಲ ಕ್ಯಾಮರಾ ಜೊತೆ ಸೋನಿ ಐಎಂಎಕ್ಸ್​386 ಸೆನ್ಸಾರ್ ಒಳಗೊಂಡ 12 ಎಂಪಿ ವೈಡ್ ಆ್ಯಂಗಲ್​ ಕ್ಯಾಮರಾ ಜೊತೆಗೆ ಸೋನಿ ಐಎಂಎಕ್ಸ್ 586 ಸೆನ್ಸಾರ್​ನ 48 ಎಂಪಿ ಟೆಲಿಫೋಟೋ ಲೆನ್ಸ್ ಹೊಂದಿರುವ ಟ್ರಿಪಲ್ ಕ್ಯಾಮರಾ ಸೆಟ್​ಅಪ್ ಸಿಗಲಿದೆ. 12 ಎಂಪಿ ಸೆಲ್ಫಿ ಕ್ಯಾಮರಾದಲ್ಲೂ ಸೋನಿ ಸೆನ್ಸಾರ್ ಬಳಸಲಾಗಿದ್ದು, ಅದ್ಭುತ ಚಿತ್ರ ಸೆರೆಹಿಡಿಯಲಿದೆ ಎಂದು ವೆಬ್​ಸೈಟ್​​ನಲ್ಲಿ ತಿಳಿಸಲಾಗಿದೆ.

ಓದಿ: ಎರಡೇ ದಿನದಲ್ಲಿ 1,100 ಕೋಟಿ ರೂ.ಮೌಲ್ಯದ Electric scooters ಮಾರಾಟ ಮಾಡಿದ Ola

ETV Bharat Logo

Copyright © 2025 Ushodaya Enterprises Pvt. Ltd., All Rights Reserved.