ETV Bharat / science-and-technology

ದೇಶದಲ್ಲಿ 75 ಕೋಟಿ ಇಂಟರ್ನೆಟ್ ಬಳಕೆದಾರರು: ಮುಂಚೂಣಿಯಲ್ಲಿ ಗ್ರಾಮೀಣ ಭಾರತ! - ಡಿಜಿಟಲ್ ಡಿವೈಡ್ ಈಗಲೂ ಇದೆ

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಅತಿ ವೇಗವಾಗಿ ಏರಿಕೆಯಾಗುತ್ತಿದೆ. ಭಾರತದಲ್ಲಿ ಈಗ 759 ಮಿಲಿಯನ್ 'ಸಕ್ರಿಯ' ಇಂಟರ್ನೆಟ್ ಬಳಕೆದಾರರು ಇದ್ದಾರೆ ಎಂದು ವರದಿ ತಿಳಿಸಿದೆ.

India reaches 759 mn 'active' internet users, to hit 900 mn by 2025

author img

By

Published : May 3, 2023, 7:45 PM IST

ನವದೆಹಲಿ : ಭಾರತವು ಈಗ ತಿಂಗಳಿಗೆ ಒಮ್ಮೆಯಾದರೂ ಇಂಟರ್ನೆಟ್ ಬಳಸುವ 759 ಮಿಲಿಯನ್ (75.0 ಕೋಟಿ) 'ಸಕ್ರಿಯ' ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ ಮತ್ತು 2025 ರ ವೇಳೆಗೆ ಈ ಸಂಖ್ಯೆ 900 ಮಿಲಿಯನ್ (90 ಕೋಟಿ) ತಲುಪಲಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ. ಸದ್ಯ 2022 ರಲ್ಲಿದ್ದಂತೆ ಸಕ್ರಿಯ ಇಂಟರ್ನೆಟ್ ಬಳಕೆದಾರರ ಪೈಕಿ 399 ಮಿಲಿಯನ ಜನ ಗ್ರಾಮೀಣ ಭಾಗದವರು ಮತ್ತು 360 ಮಿಲಿಯನ್ ಜನ ನಗರವಾಸಿಗಳು. ಅಂದರೆ ಇಂಟರ್ನೆಟ್ ಬಳಕೆ ಏರಿಕೆಗೆ ಗ್ರಾಮೀಣ ಭಾರತವು ಗಮನಾರ್ಹ ಕೊಡುಗೆ ನೀಡುತ್ತಿದೆ ಎಂಬುದು ಇದರಿಂದ ತಿಳಿದು ಬರುತ್ತದೆ ಎಂದು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಮತ್ತು ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿ ಕಾಂಟರ್ ವರದಿ ಹೇಳಿದೆ.

ಇಂಟರ್ನೆಟ್​ನ ಒಟ್ಟು ಬಳಕೆದಾರರ ಪೈಕಿ ಶೇಕಡಾ 54 ರಷ್ಟು ಪುರುಷರಿದ್ದಾರೆ. ಆದರೆ, 2022 ರಲ್ಲಿ ಬಂದ ಹೊಸ ಬಳಕೆದಾರರ ಪೈಕಿ ಶೇಕಡಾ 57 ರಷ್ಟು ಮಹಿಳೆಯರು ಎಂಬುದು ಗಮನಾರ್ಹ. 2025 ರ ವೇಳೆಗೆ, ಎಲ್ಲಾ ಹೊಸ ಬಳಕೆದಾರರಲ್ಲಿ ಶೇಕಡಾ 65 ರಷ್ಟು ಮಹಿಳೆಯರೇ ಇರುತ್ತಾರೆ ಎಂದು ಅಂದಾಜಿಸಲಾಗಿದೆ. ಇದು ಬಳಕೆದಾರರಲ್ಲಿನ ಲಿಂಗ ತಾರತಮ್ಯವನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸರಿಸುಮಾರು ಶೇಕಡಾ 71 ರಷ್ಟು ಬೆಳವಣಿಗೆಯೊಂದಿಗೆ ನಗರ ಪ್ರದೇಶಗಳು ಕೇವಲ 6 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ಶೇಕಡಾ 14 ರಷ್ಟು ಇಂಟರ್ನೆಟ್ ಬಳಕೆ ವೃದ್ಧಿಯಾಗಿದೆ. 2025 ರ ವೇಳೆಗೆ ಭಾರತದಲ್ಲಿನ ಎಲ್ಲಾ ಹೊಸ ಇಂಟರ್ನೆಟ್ ಬಳಕೆದಾರರಲ್ಲಿ ಶೇಕಡಾ 56 ರಷ್ಟು ಗ್ರಾಮೀಣ ಭಾರತದವರಾಗಿರುತ್ತಾರೆ ಎಂದು ಅಂದಾಜಿಸಲಾಗಿದೆ.

ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಡಿಜಿಟಲ್ ಡಿವೈಡ್ ಈಗಲೂ ಇದೆ. ಬಿಹಾರ (ಶೇ 32 ಪ್ರತಿಶತ) ಅತಿ ಕಡಿಮೆ ಹಾಗೂ ಗೋವಾ (ಶೇ 70) ಅತಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಬಳಕೆಯ ವಿಷಯದಲ್ಲಿ, ಡಿಜಿಟಲ್ ಮನರಂಜನೆ, ಡಿಜಿಟಲ್ ಸಂವಹನಗಳು ಮತ್ತು ಸಾಮಾಜಿಕ ಮಾಧ್ಯಮಗಳು ಭಾರತದಲ್ಲಿ ಅತ್ಯಂತ ಜನಪ್ರಿಯ ಸೇವೆಗಳಾಗಿ ಮುಂದುವರೆದಿವೆ. ವಾಸ್ತವವಾಗಿ, ಭಾರತೀಯರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಮುಂದಿನ ಇ-ಕಾಮರ್ಸ್ ತಾಣವಾಗಿ ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಕಾಮರ್ಸ್ ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಶೇ 51 ರಷ್ಟು ಬೆಳವಣಿಗೆ ದಾಖಲಿಸಿದೆ.

ಇಂಟರ್ನೆಟ್ ಒಂದು ಜಾಗತಿಕ ನೆಟ್‌ವರ್ಕ್ ಆಗಿದ್ದು ಅದು ಪ್ರಪಂಚದಾದ್ಯಂತದ ಶತಕೋಟಿ ಕಂಪ್ಯೂಟರ್‌ಗಳನ್ನು ಪರಸ್ಪರ ಮತ್ತು ವರ್ಲ್ಡ್ ವೈಡ್ ವೆಬ್‌ಗೆ ಸಂಪರ್ಕಿಸುತ್ತದೆ. ವಿಶ್ವಾದ್ಯಂತ ಶತಕೋಟಿ ಕಂಪ್ಯೂಟರ್ ಬಳಕೆದಾರರನ್ನು ಸಂಪರ್ಕಿಸಲು ಇದು ಪ್ರಮಾಣಿತ ಇಂಟರ್ನೆಟ್ ಪ್ರೋಟೋಕಾಲ್ ಸೂಟ್ (TCP/IP) ಅನ್ನು ಬಳಸುತ್ತದೆ. ಆಪ್ಟಿಕಲ್ ಫೈಬರ್‌ಗಳು ಮತ್ತು ಇತರ ವೈರ್‌ಲೆಸ್ ಮತ್ತು ನೆಟ್‌ವರ್ಕಿಂಗ್ ತಂತ್ರಜ್ಞಾನಗಳಂತಹ ಕೇಬಲ್‌ಗಳನ್ನು ಬಳಸಿಕೊಂಡು ಇದನ್ನು ಸ್ಥಾಪಿಸಲಾಗಿದೆ. ಪ್ರಸ್ತುತ, ಇಂಟರ್ನೆಟ್ ಪ್ರಪಂಚದಾದ್ಯಂತ ಕಂಪ್ಯೂಟರ್‌ಗಳ ನಡುವೆ ಮಾಹಿತಿ ಮತ್ತು ಡೇಟಾವನ್ನು ಕಳುಹಿಸುವ ಅಥವಾ ವಿನಿಮಯ ಮಾಡುವ ವೇಗವಾದ ಸಾಧನವಾಗಿದೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ 1956ರ ನಂತರ ಅತ್ಯಧಿಕ ಹಣದುಬ್ಬರ: ಜನಜೀವನ ದುಸ್ತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.