ETV Bharat / science-and-technology

4ಜಿ ಮೊಬೈಲ್​ನಲ್ಲಿ 5ಜಿ ಸೇವೆ ಪಡೆಯಲು ಸಾಧ್ಯವೇ? - 4ಜಿ ಮೊಬೈಲ್​

ಹೆಚ್ಚಿನ ವೇಗದ ಇಂಟರ್​ನೆಟ್ ಮತ್ತು ಇತರ ಸೇವೆಗಳನ್ನು ಪಡೆಯಲು 5ಜಿ ಸಕ್ರಿಯಗೊಳಿಸಿದ ಮೊಬೈಲ್ ಹ್ಯಾಂಡ್‌ಸೆಟ್ ಅನ್ನು ಹೊಂದಿರುವುದು ಅವಶ್ಯಕ ಎಂದು ಕೌಂಟರ್‌ ಪಾಯಿಂಟ್ ರಿಸರ್ಚ್‌ನ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ.

5g-services-in-4g-mobile-must-have-5g-enabled-mobile-handset
4ಜಿ ಮೊಬೈಲ್​ನಲ್ಲಿ 5ಜಿ ಸೇವೆ ಪಡೆಯಲು ಸಾಧ್ಯವೇ?
author img

By

Published : Oct 5, 2022, 8:49 PM IST

Updated : Oct 5, 2022, 9:00 PM IST

ನವದೆಹಲಿ: ದೇಶದಲ್ಲಿ 5ಜಿ ಇಂಟರ್​​ನೆಟ್​ಗೆ​ ಚಾಲನೆ ಸಿಕ್ಕಿದೆ. ಟೆಲಿಕಾಂ ಕಂಪನಿಗಳು ಮೆಟ್ರೋ ನಗರಗಳಲ್ಲಿ ಆಯ್ದ ಬಳಕೆದಾರರೊಂದಿಗೆ 5ಜಿ ಸೇವೆಗಳನ್ನು ನೀಡಲು ಪ್ರಾರಂಭಿಸಿವೆ. ಆದರೆ, ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5ಜಿ ಡೇಟಾ ಪ್ಯಾಕ್‌ಗಳನ್ನು ಚಲಾಯಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡುತ್ತಿವೆ. ತಜ್ಞರ ಪ್ರಕಾರ ವೇಗದ ಇಂಟರ್​ನೆಟ್ ಆನಂದಿಸಲು 5ಜಿ ಸಕ್ರಿಯಗೊಳಿಸಿದ ಹ್ಯಾಂಡ್‌ಸೆಟ್ ಅಗತ್ಯವಿದೆ.

ಸಿಮ್ ಮಟ್ಟದಲ್ಲಿ ಸೇವಾ ಪೂರೈಕೆದಾರರು 5ಜಿ ಸೇವೆಗಳಿಗೆ ಸಕ್ರಿಯಗೊಳಿಸಲು ಬ್ಯಾಕ್ ಎಂಡ್‌ನಿಂದ ಸಿಮ್ ಅನ್ನು ಅಪ್‌ಗ್ರೇಡ್ ಮಾಡುವುದರಿಂದ ಸದ್ಯಕ್ಕೆ ಬದಲಾಯಿಸುವ ಅಗತ್ಯವಿಲ್ಲ. 4ಜಿ ಸಿಮ್ ಖಂಡಿತವಾಗಿಯೂ 5ಜಿ ಚಾಲಿತ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಹೆಚ್ಚಿನ ವೇಗದ ಇಂಟರ್​ನೆಟ್ ಮತ್ತು ಇತರ ಸೇವೆಗಳನ್ನು ಪಡೆಯಲು 5ಜಿ ಸಕ್ರಿಯಗೊಳಿಸಿದ ಮೊಬೈಲ್ ಹ್ಯಾಂಡ್‌ಸೆಟ್ ಅನ್ನು ಹೊಂದಿರುವುದು ಅವಶ್ಯಕ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ... ಇನ್ಮುಂದೆ ಆನಂದಿಸಿ ವೇಗದ ಇಂಟರ್​ನೆಟ್

ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿ ನಾಲ್ಕು ನಗರಗಳಲ್ಲಿ 'ಜಿಯೋ ವೆಲ್ಕಮ್ ಆಫರ್'ನ ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಜಿಯೋ ಸಿಮ್ ಅಥವಾ 5ಜಿ ಹ್ಯಾಂಡ್‌ಸೆಟ್ ಅನ್ನು ಬದಲಾಯಿಸುವ ಅಗತ್ಯವಿಲ್ಲದೇ ಗ್ರಾಹಕರು ಸ್ವಯಂಚಾಲಿತವಾಗಿ ಜಿಯೋ ಟ್ರೂ 5ಜಿ ಸೇವೆ ಪಡೆಯಲಿದ್ದಾರೆ ಎಂದು ರಿಲಯನ್ಸ್ ಜಿಯೋ ಮಂಗಳವಾರ ಹೇಳಿದೆ.

ರಿಲಯನ್ಸ್ ಜಿಯೋ 5ಜಿ ಹ್ಯಾಂಡ್‌ಸೆಟ್‌ಗಳನ್ನು ಜಿಯೋ ಟ್ರೂ 5ಜಿ ಸೇವೆಗಳೊಂದಿಗೆ ಕಾರ್ಯ ನಿರ್ವಹಿಸಲು ಎಲ್ಲ ಹ್ಯಾಂಡ್‌ಸೆಟ್ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡುತ್ತಿದೆ. ಇದರಿಂದಾಗಿ ಗ್ರಾಹಕರು 5ಜಿ ಆಯ್ಕೆ ಮಾಡಲು ವ್ಯಾಪಕ ಶ್ರೇಣಿಯ 5ಜಿ ಸಾಧನಗಳನ್ನು ಪಡೆಯಲಿದ್ದಾರೆ.

ಶೀಘ್ರವೇ 100 ಮಿಲಿಯನ್ ಬಳಕೆದಾರರು: ಭಾರತವು ಶೀಘ್ರದಲ್ಲೇ ಸುಮಾರು 100 ಮಿಲಿಯನ್ 5ಜಿ ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಲಿದೆ. ಈ ಲಕ್ಷಾಂತರ ಬಳಕೆದಾರರು ತಮ್ಮ ಸಾಧನಗಳಲ್ಲಿ 5ಜಿ ಅನ್ನು ಆನಂದಿಸಲು 2023ರ ಅಂತ್ಯದವರೆಗೆ ಅಥವಾ 2024ರ ಆರಂಭದವರೆಗೆ ಕಾಯಬೇಕಾಗುತ್ತದೆ. ಆದರೆ, ಅವರಿಗೆ 5ಜಿ ಸಕ್ರಿಯಗೊಳಿಸಿದ ಸಾಧನಗಳ ಅಗತ್ಯವಿದೆ.

ಏರ್‌ಟೆಲ್ ಪ್ರಕಾರ 4ಜಿ ಸಿಮ್ 5ಜಿ ಚಾಲಿತ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, 5ಜಿ ಸಾಮರ್ಥ್ಯಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 5ಜಿ ನೆಟ್‌ವರ್ಕ್‌ನಿಂದ ಹೆಚ್ಚಿನದನ್ನು ಪಡೆಯಲು 5ಜಿ ಫೋನ್‌ನೊಂದಿಗೆ 5G ಸಿಮ್ ಅಗತ್ಯವಿದೆ. ಇದೆಲ್ಲದರ ಹೊರತಾಗಿಯೂ ನಿಮ್ಮ 4ಜಿ ಸಿಮ್ 5ಜಿ ಫೋನ್‌ನೊಂದಿಗೆ ಬಳಸಿದಾಗ ಉತ್ತಮವಾದ ಅನುಭವ ಖಂಡಿತವಾಗಿ ನೀಡುತ್ತದೆ.

ಆದರೆ, 5ಜಿ ನೆಟ್‌ವರ್ಕ್‌ಗಳಿಗೆ ಹೊಂದಿಕೆಯಾಗುವ ಸಾಧನವನ್ನು ಹೊಂದಿರಬೇಕು. ಇಂದು 5ಜಿ ಸೇವೆಗಳು ಕಾರ್ಯಗತಗೊಳಿಸುವಾಗಲೇ ಹೆಚ್ಚಿನ ಫೋನ್ ಕಂಪನಿಗಳು 5ಜಿ ತಂತ್ರಜ್ಞಾನವನ್ನು ಬೆಂಬಲಿಸಲು ಮೋಡೆಮ್ ಮತ್ತು ಬಿಲ್ಟ್-ಇನ್ ಹಾರ್ಡ್‌ವೇರ್‌ನೊಂದಿಗೆ 5ಜಿ ಅನ್ನು ಸಕ್ರಿಯಗೊಳಿಸಿವೆ. ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

5ಜಿ ಸಿಮ್​ ಕಾರ್ಡ್ 4ಜಿ ಮೊಬೈಲ್‌ನಲ್ಲಿ ಬಳಸಬಹುದಾದರೂ 5ಜಿ ತಂತ್ರಜ್ಞಾನವನ್ನು ಬಳಸುವ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾದ 5ಜಿ ಚಾಲಿತ ಸಾಧನ ಇರಬೇಕು. ಇಲ್ಲವಾದಲ್ಲಿ ಇದು ನಿಮಗೆ 4ಜಿ ನೆಟ್‌ವರ್ಕ್ ಅನ್ನೇ ಒದಗಿಸುತ್ತದೆ. 5ಜಿ ನೆಟ್‌ವರ್ಕ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ದೇಶದಲ್ಲಿ 5G ಸೇವೆ ಯುಗಾರಂಭ.. ಹೈಸ್ಪೀಡ್​ ಇಂಟರ್​ನೆಟ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

Last Updated : Oct 5, 2022, 9:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.