ಹೈದರಾಬಾದ್: ಚಂದ್ರಶೇಖರ ವೆಂಕಟ ರಾಮನ್, ಸಿ. ವಿ. ರಾಮನ್ ಅವರು 1888 ರ ನವೆಂಬರ್ 7 ರಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಜನಿಸಿದರು. ಅವರ ತಂದೆ ಗಣಿತ ಮತ್ತು ಭೌತಶಾಸ್ತ್ರ ಉಪನ್ಯಾಸಕರಾಗಿದ್ದರು. ಹೀಗಾಗಿ ಸಹಜವಾಗಿಯೇ ಅವರು ಶೈಕ್ಷಣಿಕ ವಾತಾವರಣದಲ್ಲಿಯೇ ಬೆಳೆದರು.
13 ನೇ ವಯಸ್ಸಿನಲ್ಲಿ ಶಾಲಾ ಶಿಕ್ಷಣ ಮುಗಿಸಿದ ನಂತರ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಶ್ರೀಮತಿ ಎ.ವಿ.ಎನ್. ಕಾಲೇಜು ಸೇರಿದ್ರು. ನಂತರ ಅವರು ಚೆನ್ನೈನ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿಗೆ ತೆರಳಿದರು. 15 ವಯಸ್ಸಿಗೆ ಸಿ.ವಿ. ರಾಮನ್ ಬಿ.ಎ. ಭೌತಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಬಿ.ಎ. ಪದವಿ ಮತ್ತು 18 ನೇ ವಯಸ್ಸಿನಲ್ಲಿ ಎಂ.ಎ. ಶಿಕ್ಷಣ ಮುಗಿಸಿದರು.
ಬಹಳ ಚಿಕ್ಕ ವಯಸ್ಸಿನಲ್ಲಿಯೇ ರಾಮನ್ ತಮ್ಮ ಶೈಕ್ಷಣಿಕ ಪ್ರತಿಭೆ ಮೆರೆದವರು. 1970 ರಲ್ಲಿ, ವಿಜ್ಞಾನ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ಅವರಿಗೆ ಹೃದಯಾಘಾತವಾಗಿ ನವೆಂಬರ್ 21, 1970 ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿಯೇ ಕೊನೆಯುಸಿರೆಳೆದರು.
ಸರ್ ಸಿ. ವಿ. ರಾಮನ್ ವೃತ್ತಿಪರ ಜೀವನ:
- ಸಿ.ವಿ.ರಾಮನ್ ಭಾರತೀಯ ಲೆಕ್ಕಪರಿಶೋಧನೆ ಮತ್ತು ಖಾತೆ ಸೇವೆಗೆ ಸೇರಿದರು. ಅಲ್ಲಿ ಅವರನ್ನು ಕೋಲ್ಕತ್ತಾದ ಹಣಕಾಸು ಇಲಾಖೆಯ ಸಹಾಯಕ ಅಕೌಂಟೆಂಟ್ ಜನರಲ್ ಆಗಿ ನೇಮಿಸಲಾಯಿತು.
- ಕೋಲ್ಕತ್ತಾದಲ್ಲಿ, ಅವರು ಭಾರತೀಯ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಮೂಲಕ ವಿಜ್ಞಾನದಲ್ಲಿನ ತಮ್ಮ ಕೃಷಿಯನ್ನು ಮುಂದುವರಿಸಿದ್ರು.ಬಿಡುವಿನ ವೇಳೆ ತಂತಿ ವಾದ್ಯಗಳು ಮತ್ತು ಭಾರತೀಯ ಡ್ರಮ್ಸ್ ಬಗ್ಗೆ ಭೌತಶಾಸ್ತ್ರ ಅಧ್ಯಯನ ಮಾಡಿದರು.
- 1917 ರಲ್ಲಿ ಸಿ.ವಿ.ರಾಮನ್ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನಲ್ಲಿ (1917-33) ಭೌತಶಾಸ್ತ್ರದ ಸರ್ ತಾರಕ್ನಾಥ್ ಪಲಿತ್ ಭೌತಶಾಸ್ತ್ರದ ಪ್ರಾಧ್ಯಾಪಕರಾಗಲು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ರು.
- ಕಲ್ಕತ್ತಾದಲ್ಲಿ 15 ವರ್ಷಗಳ ಸೇವೆಯ ನಂತರ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 1933 -1948 ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ರು. 1948 ರಿಂದ ಅವರು ಬೆಂಗಳೂರಿನ ರಾಮನ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಅನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿದ್ದರು, 1926 ರಲ್ಲಿ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಅನ್ನು ಸ್ಥಾಪಿಸಿದರು.ಸರ್ ಸಿ.ವಿ. ರಾಮನ್ ಪುಣ್ಯಸ್ಮರಣೆ
ಇತರ ಕೊಡುಗೆಗಳು - ಕಂಪನ, ಧ್ವನಿ, ಸಂಗೀತ ಸಾಧನಗಳು, ಅಲ್ಟ್ರಾಸಾನಿಕ್ಸ್, ವಿವರ್ತನೆ, ದ್ಯುತಿವಿದ್ಯುತ್, ಕೊಲೊಯ್ಡಲ್ ಕಣಗಳು, ಎಕ್ಸರೆ ವಿವರ್ತನೆ, ಮ್ಯಾಗ್ನೆಟ್ರಾನ್, ಡೈಎಲೆಕ್ಟ್ರಿಕ್ಸ್ ಮುಂತಾದ ಕ್ಷೇತ್ರಗಳಲ್ಲಿನ ಸಂಶೋಧನೆಗೆ ಅವರು ಅಪಾರ ಕೊಡುಗೆಗಳನ್ನು ನೀಡಿದರು.
- ರಾಮನ್ ಸ್ಪೆಕ್ಟ್ರೋಸ್ಕೋಪಿಯನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ ವಿನಾಶಕಾರಿಯಲ್ಲದ, ಸೂಕ್ಷ್ಮ, ರಾಸಾಯನಿಕ ವಿಶ್ಲೇಷಣೆ ಮತ್ತು ಇಮೇಜ್ ಅಗತ್ಯವಿರುವ ಯಾವುದೇ ಅಪ್ಲಿಕೇಶನ್ಗಳಲ್ಲಿ ಇದನ್ನ ಬಳಸಲಾಗುತ್ತೆ.
- ಸರ್ ಸಿ.ವಿ. ರಾಮನ್ರವರು ಫೆಬ್ರವರಿ 28 ರಂದು 'ರಾಮನ್ ಪರಿಣಾಮ' ಕಂಡುಹಿಡಿದ ನೆನಪಿಗಾಗಿ ಈ ದಿನವನ್ನು ಪ್ರತಿ ವರ್ಷ 'ರಾಷ್ಟ್ರೀಯ ವಿಜ್ಞಾನ ದಿನ'ವನ್ನು ಆಚರಿಸಲಾಗುತ್ತದೆ.ಸರ್ ಸಿ.ವಿ. ರಾಮನ್ ಪುಣ್ಯಸ್ಮರಣೆ
ಸರ್ ಸಿ.ವಿ. ರಾಮನ್ರವರ ಪ್ರಸಿದ್ಧ ಸಾಲುಗಳು:
- "Treat me right and you will see the light…Treat me wrong and you will be gone!"
( ನನ್ನನ್ನು ಸರಿಯಾಗಿ ನಡೆಸಿಕೊಂಡರೆ ನೀವು ಬೆಳಕನ್ನು ಕಾಣುತ್ತೀರಿ, ತಪ್ಪಾಗಿ ನಡೆಸಿಕೊಂಡರೆ ನಾಶವಾಗುತ್ತೀರಿ )
- "Ask the right questions, and nature will open the doors to her secrets I am the master of my failure… If I never fail how will I ever learn.
(ಸರಿಯಾದ ಪ್ರಶ್ನೆ ಕೇಳಿ, ಆಗ ಪ್ರಕೃತಿ ತನ್ನ ರಹಸ್ಯದ ಬಾಗಿಲು ತೆರೆಯುತ್ತದೆ...... ನಾನು ವಿಫಲತೆಗಳ ಸರದಾರ, ವಿಫಲತೆಗಳೇ ಇಲ್ಲದಿದ್ದರೆ ನಾನು ಕಲಿಯುವುದಾದರೂ ಹೇಗೆ?)
- you can't always choose who comes into your life but you can learn what lesson they teach you Success can come to you by courageous Devotion to the task lying in front of you."
(ನಿಮ್ಮ ಜೀವನದಲ್ಲಿ ಯಾರು ಬರ್ತಾರೆ ಎಂಬುದನ್ನು ನೀವು ಯಾವಾಗಲೂ ಆಯ್ಕೆ ಮಾಡಲು ಸಾಧ್ಯವಿಲ್ಲ, ಆದರೆ ಅವರು ನಿಮಗೆ ಪಾಠವನ್ನು ಕಲಿಸುತ್ತಾರೆ ಎಂಬುದನ್ನು ನೀವು ಕಲಿಯಬಹುದು ನಿಮ್ಮ ಮುಂದೆ ಇರುವ ಸವಾಲಿನ ಅಥವಾ ಕಾರ್ಯದ ಬಗೆಗಿನ ಭಕ್ತಿ, ಉತ್ಸಾಹದಿಂದ ನಿಮಗೆ ಯಶಸ್ಸು ಖಂಡಿತ ಸಿಗುತ್ತದೆ.)
- "I strongly believe that fundamental science cannot be driven by instructional, industrial and government or military pressures.
("ಮೂಲ ವಿಜ್ಞಾನವನ್ನು ಬೋಧನೆ, ಕೈಗಾರಿಕೆ ಮತ್ತು ಸರ್ಕಾರ ಅಥವಾ ಬಲಪ್ರಯೋಗದಿಂದ ಮುನ್ನಡೆಸಲಾಗುವುದಿಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ.")
"If someone judges you, they are wasting space in their mind…Best part, it's their problem."
(ಯಾರಾದರೂ ನಿಮ್ಮ ಬಗ್ಗೆ ಮಾತಾಡ್ತಿದ್ದಾರೆ ಅಂದ್ರೆ ಅವ್ರು ತಮ್ಮ ಸಮಯ ವ್ಯರ್ಥ ಮಾಡ್ಕೊತ್ತಿದ್ದಾರೆ ಅಂಥ , ಅದು ಅವರ ನ್ಯೂನತೆ ಕೂಡ ಆಗಿರಬಹುದು)