ETV Bharat / science-and-technology

ಶಾಲಾ ಮಕ್ಕಳು ತಯಾರಿಸಿದ 150 ಉಪಗ್ರಹಗಳ ಉಡ್ಡಯನ - ಶಾಲಾ ಮಕ್ಕಳು ತಯಾರಿಸಿದ ಒಟ್ಟು 150 ಉಪಗ್ರಹ

ತಮಿಳುನಾಡಿನಲ್ಲಿ ಅಪರೂಪದ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳೇ ತಯಾರಿಸಿದ ಸುಮಾರು 150 ಉಪಗ್ರಹಗಳ ಉಡ್ಡಯನ ನಡೆಯಿತು. ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಇದಕ್ಕೆ ಸಾಕ್ಷಿಯಾದರು.

150 satellites made by school children launched from TN
ಶಾಲಾ ಮಕ್ಕಳು ತಯಾರಿಸಿದ 150 ಉಪಗ್ರಹಗಳ ಉಡ್ಡಯನ
author img

By

Published : Feb 20, 2023, 6:41 AM IST

ಚೆನ್ನೈ( ತಮಿಳುನಾಡು): ಎಪಿಜೆ ಅಬ್ದುಲ್ ಕಲಾಂ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್ 2023 ರ ಭಾಗವಾಗಿ ದೇಶಾದ್ಯಂತ ಶಾಲಾ ಮಕ್ಕಳು ತಯಾರಿಸಿದ ಒಟ್ಟು 150 ಉಪಗ್ರಹಗಳನ್ನು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಭಾನುವಾರ ಉಡಾವಣೆ ಮಾಡಲಾಯಿತು. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಚೆಂಗಲ್ಪಟ್ಟು ಜಿಲ್ಲೆಯ ಪಟ್ಟಿಪೋಲಂ ಗ್ರಾಮದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಿದರು.

ಈ ಮಿಷನ್ ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್, ಕಲ್ಪಾಕಂ ಅಟಾಮಿಕ್ ರಿಸರ್ಚ್ ಸೆಂಟರ್, ಮಾರ್ಟಿನ್ ಫೌಂಡೇಶನ್ ಮತ್ತು ಭಾರತದ ಬಾಹ್ಯಾಕಾಶ ವಲಯ ನಡುವಿನ ಜಂಟಿ ಉದ್ಯಮದ ಒಂದು ಭಾಗವಾಗಿದೆ. "ದೇಶದ ವಿವಿಧ ಶಾಲೆಗಳ ಸುಮಾರು 3,500 ವಿದ್ಯಾರ್ಥಿಗಳು ಈ ಯೋಜನೆಯ ಭಾಗವಾಗಿದ್ದರು’’ ಎಂದು ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿ:ರಸ್ತೆ ನಿಯಮ ಮೀರಿ ಚಾಲನೆ: ಆನ್​ ರೋಡ್​ ಆಟೋಪೈಲಟ್ ವ್ಯವಸ್ಥೆಯ 3 ಲಕ್ಷ ಕಾರುಗಳನ್ನ ಹಿಂಪಡೆದ ಟೆಸ್ಲಾತಮಿಳುನಾಡು ಮತ್ತು ಪುದುಚೇರಿಯ ಮೀನುಗಾರ ಸಮುದಾಯದ 200 ವಿದ್ಯಾರ್ಥಿಗಳು, ಬುಡಕಟ್ಟು ಬೆಲ್ಟ್‌ಗಳ 100 ವಿದ್ಯಾರ್ಥಿಗಳು ಯೋಜನೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ವಾಸ್ತವಿಕವಾಗಿ ಉಪಗ್ರಹ ತಂತ್ರಜ್ಞಾನದ ತರಬೇತಿಯನ್ನು ನೀಡಲಾಯಿತು. ಆ ಬಳಿಕ ಪ್ರಾಯೋಗಿಕವಾಗಿ ಹೆಚ್ಚುವರಿ ಟಾಸ್ಕ್​ಗಳನ್ನು ನೀಡಲಾಯಿತು ಎಂದು ಬಾಹ್ಯಾಕಾಶ ವಲಯದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಮೇಗಲಿಂಗಂ ಹೇಳಿದರು.

"ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸುಲಭವಾಗಿ ಗ್ರಹಿಸಿದ್ದಾರೆ ಮತ್ತು ಹೊಸ ತಂತ್ರಜ್ಞಾನಗಳನ್ನು ಕಲಿಯುವ ಅವರ ಸಾಮರ್ಥ್ಯಕ್ಕೆ ಚಪ್ಪಾಳೆ ಬೇಕು. ಇದನ್ನು ಸಾಧಿಸಲು ವಿದ್ಯಾರ್ಥಿಗಳು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಆನಂದ ಮೇಗಲಿಂಗ ಹೇಳಿದರು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಚುಯಲ್ ತರಗತಿಗಳ ಮೂಲಕ ಉಪಗ್ರಹ ತಂತ್ರಜ್ಞಾನದ ಬಗ್ಗೆ ಕಲಿಸಲಾಯಿತು, ಪ್ರಾಜೆಕ್ಟ್ ಡೊಮೇನ್ ಅನ್ನು ಅನ್ವೇಷಿಸಲು ಅವರಿಗೆ ಸಹಾಯ ಮಾಡಲು ಹ್ಯಾಂಡ್ - ಆನ್ ತರಗತಿಗಳ ಮೂಲಕ ಬೋಧನೆ ಮಾಡಲಾಯಿತು. ಈ ವಲಯದಲ್ಲಿ ಲಭ್ಯವಿರುವ ಹಲವಾರು ಪ್ರಯೋಜನಗಳ ಬಗ್ಗೆಯೂ ಅವರಿಗೆ ಅರಿವು ಮೂಡಿಸಲಾಯಿತು ಎಂದು ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ತರಬೇತಿ ಪಡೆಯಲು ಮತ್ತು ಆ ಮೂಲಕವೇ ವೃತ್ತಿಯನ್ನು ಹುಡಿಕಿಕೊಳ್ಳಲು ವೇದಿಕೆ ಕಲ್ಪಿಸಲಾಯಿತು ಎಂದು ಪೌಂಡೇಶನ್​ ಹೇಳಿಕೊಂಡಿದೆ.

ಇದನ್ನು ಓದಿ: ಜೀರೋ-ಕ್ಲಿಕ್ ಆಂಟಿವೈರಸ್ 'ಮೆಸೇಜ್ ಗಾರ್ಡ್' ಪರಿಚಯಿಸಿದ ಸ್ಯಾಮ್‌ಸಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.