ETV Bharat / opinion

ಪಶ್ಚಿಮ ಬಂಗಾಳದ ಬಳಿಕ ಕೇರಳ ಕನಸು.. 20 ಲೋಕಸಭಾ ಕ್ಷೇತ್ರದ ಮೇಲೆ ಕಮಲ ಕಣ್ಣು

ಕೇರಳದ ಬಿಜೆಪಿಯ ರಾಜಕೀಯ ಇತಿಹಾಸವನ್ನು ಹಿಂತಿರುಗಿ ನೋಡಿದಾಗ, 2006ರ ನಂತರ ಬಿಜೆಪಿ ಒಟ್ಟುಗೂಡಿಸುವ ಸಾಮರ್ಥ್ಯದ ಚಿಹ್ನೆಗಳು ಸ್ಪಷ್ಟವಾಗಿವೆ ಎಂದು ತಿಳಿಯಬಹುದು. ಅಲ್ಲಿಯವರೆಗೆ ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸರಾಸರಿ 5,000 ರಿಂದ 10,000 ಮತಗಳು ಇದ್ದವು. ಅವರು ಎಲ್​ಡಿಫ್ ಅಥವಾ ಯುಡಿಎಗಿಂತ ಕೆಳಗಿನ 3ನೇ ಸ್ಥಾನಕ್ಕೆ ತೃಪ್ತರಾಗಬೇಕಾಯಿತು.

from-a-distant-3rd-bjp-is-aiming-to-win-20-assembly-seats-in-kerala
20 ವಿಧಾನಸಭಾ ಕ್ಷೇತ್ರದ ಮೇಲೆ ಕಮಲ ಕಣ್ಣು
author img

By

Published : Feb 11, 2021, 8:19 PM IST

ಹೈದರಾಬಾದ್: ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಲು ಮುಂದಾಗಿರುವ ಭಾರತೀಯ ಜನತಾ ಪಾರ್ಟಿ ಕೇರಳದಲ್ಲೂ ಕಮಲ ಅರಳಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಉತ್ತರ ಪ್ರದೇಶ ಹೊರತುಪಡಿಸಿ ಅತ್ಯಂತ ಹೆಚ್ಚು ಆರ್​​ಎಸ್​​ಎಸ್ ಶಾಖೆ ಇದ್ದರೆ ಅದು ಕೇರಳದಲ್ಲಿ ಮಾತ್ರ. ಯುಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಆದರೆ ಕೇರಳದಲ್ಲಿ ಮಾತ್ರ ಮತ ಪಡೆಯಲು ಯಶ ಗಳಿಸಿಲ್ಲ. 2016ರ ಚುನಾವಣೆಯಲ್ಲಿ ಮೊದಲ ಖಾತೆ ತೆರೆದಿರುವ ಬಿಜೆಪಿ ಎಡಪಕ್ಷಗಳಿಂದ ಮತ ಸೆಳೆಯುವಲ್ಲಿ ವಿಫಲವಾಗಿದೆ.

1980ರಲ್ಲಿ ಪ್ರಾರಂಭವಾದಾಗಿನಿಂದಲೂ ಬಿಜೆಪಿ ಪ್ರತಿಕೂಲ ರಾಜಕೀಯ ವಾತಾವರಣದಲ್ಲಿ ಬದುಕುಳಿಯುವ ಅಮೃತವಾಗಿದೆ. ಭಾರತೀಯ ಜನ ಸಂಘ ಮತ್ತು ಜನತಾ ಪಕ್ಷದ ಮಾಜಿ ಕಾರ್ಯಕರ್ತರೊಂದಿಗೆ ಬಿಜೆಪಿ ರಚನೆಯಾದಾಗ ಪಕ್ಷವು ಪರಿಶ್ರಮದ ರಾಜಕೀಯ ಸಿದ್ಧಾಂತಕ್ಕೆ ಅಂಟಿಕೊಂಡಿತು.

ಕೇರಳದಲ್ಲಿ ನೆಲೆಗಟ್ಟಿನಿಂದ ಪಕ್ಷ ಸಂಘಟನೆಗೆ ಮುಂದಾಗಿರುವ ಬಿಜೆಪಿ, ನಿರಂತರ ಹೋರಾಟ ನಡೆಸುತ್ತಿದೆ. ಈಗಾಗಲೇ ಕೇಡರ್ ನೆಲೆ ಸ್ಥಾಪನೆಯಲ್ಲಿ ಚುರುಕಿನ ಕಾರ್ಯ ಮಾಡುತ್ತಿದ್ದು, ಈ ಹಿನ್ನೆಲೆ ಮುಂಬರುವ ಚುನಾವಣೆಯಲ್ಲಿ 20 ಲೋಕಸಭೆಗಳಲ್ಲೂ ಸ್ಪರ್ಧಿಸುವ ವಿಶ್ವಾಸ ಹೊಂದಿರುವುದಲ್ಲದೆ, ಅವುಗಳಲ್ಲಿ ಕನಿಷ್ಠ 5 ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸುವ ಆಶಯ ಹೊಂದಿದೆ.

ಕೇರಳದ ಬಿಜೆಪಿಯ ರಾಜಕೀಯ ಇತಿಹಾಸವನ್ನು ಹಿಂತಿರುಗಿ ನೋಡಿದಾಗ, 2006ರ ನಂತರ ಬಿಜೆಪಿ ಒಟ್ಟುಗೂಡಿಸುವ ಸಾಮರ್ಥ್ಯದ ಗೋಚರ ಚಿಹ್ನೆಗಳು ಸ್ಪಷ್ಟವಾಗಿವೆ ಎಂದು ತಿಳಿಯಬಹುದು. ಅಲ್ಲಿಯವರೆಗೆ ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸರಾಸರಿ 5,000 ರಿಂದ 10,000 ಮತಗಳು ಇದ್ದವು. ಬಿಜೆಪಿ ಎಲ್​ಡಿಫ್ ಅಥವಾ ಯುಡಿಎಫ್​​ಗಿಂತ ಕೆಳಗಿನ 3ನೇ ಸ್ಥಾನಕ್ಕೆ ತೃಪ್ತರಾಗಬೇಕಾಯಿತು.

ಪಕ್ಷ ಸಂಘಟನೆಯ ವಿಷಯದಲ್ಲಿ ರಾಜ್ಯ ಬಿಜೆಪಿ ಮತ್ತು ಆರ್​​ಎಸ್​​ಎಸ್​​ ನಾಯಕರು ಬೇರೆಯದ್ದೆ ಯೋಚನೆ ನಡೆಸಿದ್ದರು. ಪಕ್ಷ ಸಂಘಟನೆಯಾಗಬೇಕಾದರೆ ದೊಡ್ಡ ಕ್ಷೇತ್ರಗಳಲ್ಲಿ ಇಳಿದು ಕೈಸುಟ್ಟಿಕೊಳ್ಳುವುದಕ್ಕಿಂತ, ಸಣ್ಣ ಸಣ್ಣ ಪ್ರದೇಶಗಳ ಮೇಲೆ ಹಿಡಿತ ಸಾಧಿಸುವ ಯೋಜನೆ ರೂಪಿಸಿದ್ದಾರೆ. ಈ ಹಿನ್ನೆಲೆ ಅಂತಹ ಪ್ರದೇಶದ ಜಾತಿ ಮತ್ತು ಸಮುದಾಯದ ವಿಶ್ಲೇಷಣೆಗೆ ಮುಂದಾಗಿದೆ. ಅಂತಹದರಲ್ಲಿ ಕಾಸರಗೋಡಿನ ಮಂಜೇಶ್ವರ ಮತ್ತು ತಿರುವನಂತಪುರರದ ನೆಮೊಮ್ ಬಗ್ಗೆ ಗಮನಹರಿಸಲು ಮುಂದಾಗಿದೆ.

ಐತಿಹಾಸಿಕವಾಗಿ ಹಿಂದೂತ್ವ ಪರವಾದ ಸಿದ್ಧಾಂತದತ್ತ ವಾಲುತ್ತಿದ್ದ ಕನ್ನಡ ಬ್ರಾಹ್ಮಣರ ಗಣನೀಯ ಜನಸಂಖ್ಯೆಯನ್ನು ಹೊಂದಿರುವ ಮಂಜೇಶ್ವರಂ ಬಿಜೆಪಿಗೆ ಗಣನೀಯವಾಗಿ ಬೆಳೆಯಲು ಸಹಾಯ ಮಾಡಿತು. ಮಂಗಳೂರಿನ ವ್ಯಾಪಾರಿಗಳಿಂದ ಅಪಾರ ಆರ್ಥಿಕ ನೆರವಿನೊಂದಿಗೆ, ಬಿಜೆಪಿ ಸ್ಥಿರತೆ ಮತ್ತು ಕಾಸರಗೋಡಿನ ರಾಜಕೀಯ ಬಿಜೆಪಿಗೆ ಹೆಚ್ಚು ಲಾಭವಾಯಿತು.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಪ್ರಮುಖ ಘಟಕವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಹಿಂದೆ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಒಟ್ಟುಗೂಡುತ್ತಿರುವುದರಿಂದ ಬಿಜೆಪಿ ಇನ್ನಷ್ಟು ಶ್ರಮವಹಿಸಬೇಕಿದೆ. ಐಜೆಎಂಎಲ್ ಅಭ್ಯರ್ಥಿಗಳ ಪರವಾಗಿ ಸಿಪಿಎಂ ಕೇಡರ್ ಕ್ರಾಸ್ ಮತದಾನ ಮಾಡಿದ್ದರ ಪರಿಣಾಮ ಮಂಜೇಶ್ವರಂನಲ್ಲಿ ಸೋಲು ಕಾಣಲು ಕಾರಣವಾಯಿತು ಎಂದು ಬಿಜೆಪಿ ಆರೋಪಿಸಿದೆ.

ಅದೇ ರೀತಿ ಆರ್‌ಎಸ್‌ಎಸ್ ಬಹುಸಂಖ್ಯಾತ ಹಿಂದೂ ಮತಗಳೊಂದಿಗೆ ಬಲವಾದ ನೆಲೆ ಹೊಂದಿರುವ ನೆಮೊಮ್ ಕ್ಷೇತ್ರವು ಬಿಜೆಪಿಯ ಬೆಳವಣಿಗೆಗೆ ಸಹಾಯ ಮಾಡುತ್ತಿತ್ತು. ಬಿಜೆಪಿಯ ಮೊದಲ ಅಧ್ಯಕ್ಷ ಓ. ರಾಜಗೋಪಾಲ್ ಈ ಕ್ಷೇತ್ರದಿಂದ ಹಲವಾರು ಬಾರಿ ಸೋಲನುಭವಿಸಿದರೂ, ಪಕ್ಷ ಅದನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ.

ಅಂತಿಮವಾಗಿ ಎಲ್ಲಾ ಚುನಾವಣೆಗಳಲ್ಲೂ ಸ್ಪರ್ಧಿಸುತ್ತಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​​​ಗೆ ಒಳಗಾಗಿದ್ದರು. ಆದರೆ 2016ರಲ್ಲಿ ಮೊದಲ ಬಾರಿಗೆ ಜಯದಾಖಲಿಸಿದಾಗ ಎಚ್ಚೆತ್ತ ಬಿಜೆಪಿ ಎಲ್ಲಾ ಮತದಾನ ಪ್ರಕ್ರಿಯೆಯ ರೂಪುರೇಷೆಗಳ ವಿಶ್ಲೇಷಣೆಗೆ ಮುಂದಾಯಿತು. ಹೀಗಾಗಿ ಇದೀಗ 20 ಲೋಕಸಭಾ ಕ್ಷೇತ್ರದ ಮೇಲೂ ಗಮನಹರಿಸಿದೆ.

ಇದೀಗ ಬಿಜೆಪಿ ಕಾಸರಗೋಡು, ತ್ರಿಶೂರ್, ಪಾಲಕ್ಕಾಡ್, ಕೊಲ್ಲಮ್ ಮತ್ತು ತ್ರಿವೆಂಡ್ರಮ್ ಜಿಲ್ಲೆಯಲ್ಲಿ ವಿರೋಧ ಪಕ್ಷಗಳಿಗೆ ತಕ್ಕ ಎದುರಾಳಿಯಾಗಿ ಹೋರಾಡಲು ಸಿದ್ಧತೆ ನಡೆಸಿದೆ.

ಬಿಜೆಪಿಗೆ ಇದು ಎಂದಿಗೂ ಸುಲಭದ ಹೋರಾಟವಲ್ಲ, ಅವರ ಸಿದ್ಧಾಂತ ಒಪ್ಪಿಕೊಳ್ಳುವವರು ಕಡಿಮೆ ಸಂಖ್ಯೆಯಲ್ಲಿರುವಾಗ ರಾಜಕೀಯಕ್ಕಾಗಿ ಸ್ಥಳ ಹುಡುಕಾಟ ನಡೆಸಲೇಬೇಕಾಗಿದೆ.

1980 ರಲ್ಲಿ ಬಿಜೆಪಿ ಕೇರಳ ಘಟಕ ರಚನೆಯಾದ ನಂತರವೂ, ಅದರ ರಾಜಕೀಯ ಅಸ್ತಿತ್ವವು ಸಣ್ಣ ಮಟ್ಟದಲ್ಲಿಯೇ ಇತ್ತು. ವಿಶೇಷವಾಗಿ 1990ರಲ್ಲಿ ಬಾಬರಿ ಮಸೀದಿ ಉರುಳಿಸಿದ ನಂತರ ಇಸ್ಲಾಮಿಕ್ ಉಗ್ರಗಾಮಿ ಸಿದ್ಧಾಂತದ ಗೋಚರ ಧಾರ್ಮಿಕ ಧ್ರುವೀಕರಣ ಮತ್ತು ಹೊರಹೊಮ್ಮುವಿಕೆಯು ರಾಜಕೀಯವಾಗಿ ತಟಸ್ಥ ಹಿಂದೂಗಳಲ್ಲಿ ಅಭದ್ರತೆಯ ಭಾವವನ್ನು ಮೂಡಿಸಲು ಬಿಜೆಪಿಗೆ ಸಹಾಯ ಮಾಡಿತು ಮತ್ತು ಅಂತಹ ಸಾಂಸ್ಕೃತಿಕವಾಗಿ ಒಲವು ಹೊಂದಿರುವ ಕೇರಳಿಗರಲ್ಲಿ ತನ್ನ ಪ್ರಭಾವವನ್ನು ಹರಡಿತು.

ಕಾಂಗ್ರೆಸ್​ ಆಡಳಿತ ರಾಜ್ಯಗಳಲ್ಲೀಗ ಬಿಜೆಪಿ ತನ್ನ ಸಾಮರ್ಥ್ಯ ವೃದ್ಧಿಕೊಂಡಿದ್ದು, ಹಲವೆಡೆ ಬಿಜೆಪಿಗೆ ಆಡಳಿತವೂ ದೊರಕಿದೆ. ಅದರಂತೆ ಕೇರಳದಲ್ಲೂ ಸಹ ಕಾಂಗ್ರೆಸ್ ಬಿಜೆಪಿಯ ಬೆಳವಣಿಗೆ ಮುಂದೂಡುತ್ತಿದೆ.

ಕೇರಳದ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯದೊಂದಿಗೆ ಮತ್ತು ವಲಸೆ ಕ್ರೈಸ್ತ ಕುಟುಂಬದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದ್ದರೂ, ಹೆಚ್ಚಾಗಿ ಮೃದು ಹಿಂದುತ್ವದ ಹಾದಿಯಲ್ಲಿ ಸಾಗಿತು. ಪಕ್ಷದ ಬೆಂಬಲಿಗರು ಯಾವಾಗಲೂ ತಮ್ಮ ರಾಜಕೀಯ ಸಿದ್ಧಾಂತದ ಕೇಂದ್ರದಲ್ಲಿ 'ಸಂಸ್ಕೃತಿ' ಮತ್ತು 'ನೈತಿಕ ಮೌಲ್ಯಗಳನ್ನು' ಹೊಂದಿದ್ದ ಬೇಲಿ ಒಳಗೆ ಇರಬೇಕಾದ ಸ್ಥಿತಿ ಇದೆ. ಇಂತಹ ಕಾರಣದಿಂದ ಈಗ ಸುಲಭವಾಗಿ ಬಿಜೆಪಿ ಕಡೆ ವಾಲುತ್ತಿದ್ದಾರೆ.

ಪಕ್ಷದ ಪ್ರಾದೇಶಿಕ ಕಾರ್ಯಸೂಚಿಗಳನ್ನು ಸಂಘಟಿಸಲು ಮತ್ತು ನಿಯಂತ್ರಿಸಲು ದೆಹಲಿಯಲ್ಲಿ ಅಧಿಕಾವಧಿ ಕೆಲಸ ಮಾಡುವ ರಾಜಕೀಯ ಪ್ರಚಾರದಿಂದಾಗಿ ಖಂಡಿತವಾಗಿಯೂ ಬಿಜೆಪಿ ಕೇರಳದಲ್ಲಿ ಬೆಳೆಯುತ್ತಿದೆ. ರಾಜಕೀಯ ನಿರೂಪಣೆಯನ್ನು ಹರಡಲು ಜನಪ್ರಿಯ ಸಾಧನವಾಗಿ ಸಾಮಾಜಿಕ ಮಾಧ್ಯಮಗಳ ಬಳಸಿಕೊಳ್ಳುವಿಕೆ ತಮ್ಮ ರಾಜಕೀಯ ಗುರಿಗಳನ್ನು ಪ್ರಚಾರ ಮಾಡಲು ಬಲವಾದ ಐಟಿ ಸೆಲ್​​​​​​​​​​​ಗಳನ್ನು ಹೊಂದಿರುವ ಬಿಜೆಪಿ ಇದರಲ್ಲಿ ಯಶಸ್ವಿಯೂ ಆಗುತ್ತಿದೆ.

ಇತ್ತೀಚಿಗೆ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಎಲ್‌ಡಿಎಫ್ ಮತ್ತು ಯುಡಿಎಫ್‌ ಜೊತೆ ಅನೇಕ ಪಂಚಾಯತ್‌ಗಳಲ್ಲಿ ಬಿಗು ಹೋರಾಟ ನಡೆಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಅವರ ಹೆಚ್ಚುತ್ತಿರುವ ಶಕ್ತಿಯನ್ನು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶಿಸಲಾಯಿತು. ಮುಂಬರುವ ಚುನಾವಣೆಗೆ ಬಿಜೆಪಿಗೆ ಗ್ರಾಮೀಣ ಪ್ರದೇಶಗಳೇ ಪ್ರಮುಖ ಕೇಂದ್ರಬಿಂದುವಾಗಿದೆ.

ಕೇರಳದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಅಥವಾ ಯುಡಿಎಫ್‌ನೊಂದಿಗೆ ನೇರ ಹೋರಾಟ ನಡೆಸುವ ಶಕ್ತಿಯಾಗಿ ಬೆಳೆಯಲು ಇನ್ನೂ 10 ವರ್ಷಗಳು ತೆಗೆದುಕೊಳ್ಳಬಹುದು. ಆದರೆ ಶೀಘ್ರದಲ್ಲೇ ಇಲ್ಲದಿದ್ದರೆ ಅದು ನಂತರ ಸಂಭವಿಸಲೂಬಹುದು.

ಪ್ರವೀಣ್ ಕುಮಾರ್, ಈಟಿವಿ ಭಾರತ ಕೇರಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.