ETV Bharat / opinion

Explained: ಆರ್ಥಿಕಾಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ.. ಭಾರತದ ಏಳಿಗೆಗೆ AI ಹೇಗೆ ಸಹಾಯಕ!

ಕೃತಕ ಬುದ್ಧಿಮತ್ತೆ (AI)ಗೆ ಸಂಬಂಧಿಸಿದಂತೆ ಭಾರತವು ಇನ್ನೂ ಆರಂಭಿಕ ಹಂತದಲ್ಲಿದೆ. ಭಾರತವು ತನ್ನದೇ ಆದ ಎಐ ಅಪ್ಲಿಕೇಶನ್​ಗಳ ಅಭಿವೃದ್ಧಿ ಮಾಡುವ ಮೂಲಕ ಜಾಗತಿಕ ನಾಯಕನಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಈ ದಿಶೆಯಲ್ಲಿ ಮುಂದುವರೆಯಬೇಕು. ಈಗಾಗಲೇ ಭಾರತ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

Explained: Artificial Intelligence for Economic Growth
Explained: ಆರ್ಥಿಕಾಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ.. ಭಾರತದ ಏಳಿಗೆಗೆ AI ಹೇಗೆ ಸಹಾಯಕ!
author img

By ETV Bharat Karnataka Team

Published : Sep 11, 2023, 7:43 PM IST

ಹೈದರಾಬಾದ್: ಇನ್ನೇನಿದ್ದರೂ ಕೃತಕಬುದ್ಧಿಮತ್ತೆಯದ್ದೇ ಹವಾ.. ಈಗಾಗಲೇ ಜಗತ್ತನ್ನು ಆಳಲು AI ಆರ್ಟಿಫಿಸಿಯಲ್​ ಇಂಟಲಿಜೆನ್ಸ್​​ ರೆಡಿಯಾಗಿದೆ. ಈ ಪ್ರಕ್ರಿಯೆಯಲ್ಲಿ, ಸರ್ಕಾರಗಳು ಮತ್ತು ಖಾಸಗಿ ವಲಯದ ಸಂಸ್ಥೆಗಳು ಈಗಾಗಲೇ ಈ AI ಗೆ ಹೆಚ್ಚು ಗಮನ ನೀಡುತ್ತಿವೆ, ಅರ್ಧಕ್ಕರ್ಧ ಕೆಲಸವನ್ನ ಈ ಕೃತಕ ಬುದ್ಧಿಮತ್ತೆಯ ಮೇಲೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲ ಕಚೇರಿಗಳಲ್ಲಿ ಇದನ್ನು ಅಳವಡಿಸಿಕೊಳ್ಳುವ ಯತ್ನಗಳು ನಡೆದಿವೆ. ಅಮೆರಿಕ ಸಂಯುಕ್ತ ಸಂಸ್ಥಾನ, ಚೀನಾ ಮತ್ತು ವಿವಿಧ ಯುರೋಪಿಯನ್ ರಾಷ್ಟ್ರಗಳಂತಹ ದೇಶಗಳಲ್ಲಿ ವೇಗವಾಗಿ ಈ ಎಐ ತನ್ನದೇ ಪ್ರಭಾವ ಬೀರುತ್ತಿದೆ. ಈ ಎಲ್ಲ ರಾಷ್ಟ್ರಗಳಲ್ಲಿ ಈಗಾಗಲೇ AI ಗೆ ಸಂಬಂಧಿಸಿದ ಮಹತ್ವದ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಯುನೈಟೆಡ್​ ಅರಬ್​ ಎಮಿರೈಟ್ಸ್​ ಮತ್ತು ಸೌದಿ ಅರೇಬಿಯಾದಂತಹ ಕೊಲ್ಲಿ ರಾಷ್ಟ್ರಗಳು ಸಹ AI ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ.

ಮತ್ತೊಂದೆಡೆ, ಭಾರತವು ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲು ಸಾಕಷ್ಟು ಮುಂದೆ ಸಾಗಿದೆ. ನಮ್ಮ ದೇಶವೂ ಯಾರಿಗೆ ಏನು ಕಮ್ಮಿ ಇಲ್ಲ ಎನ್ನುವಂತೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಈ ಪ್ರಯತ್ನಗಳು ಫಲ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಈಗಿನ ಪ್ರಮುಖ ಆದ್ಯತೆ ಆಗಿದೆ. ಇದಕ್ಕಾಗಿ ಹೆಚ್ಚಿನ ಸಂಪನ್ಮೂಲಗಳನ್ನು ನಿಯೋಜಿಸಬೇಕಾಗಿದೆ ಮತ್ತು ವ್ಯಾಪಕವಾದ ಸಂಶೋಧನೆ ಅಗತ್ಯ ಇದ್ದು, ಹೊಸ ತಾಂತ್ರಿಕ ಪರಿಹಾರಗಳಿಗೆ ಕಾರಣವಾಗಬೇಕಿದೆ. ಈ ವಿಚಾರದಲ್ಲಿ ಸರಕಾರ ಬಹುಮುಖ್ಯ ಪಾತ್ರ ವಹಿಸಬೇಕಿದೆ. ಸರ್ಕಾರವು ದಾರಿ ಮಾಡಿಕೊಟ್ಟರೆ, ಖಾಸಗಿ ವಲಯದ ಸಂಸ್ಥೆಗಳು ಐಟಿ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು.

ಬೇಕಿದೆ ಸ್ಪಷ್ಟ ಗುರಿ: ಭಾರತದ ಖಾಸಗಿ ವಲಯದ ಸಂಸ್ಥೆಯಾದ ರಿಲಯನ್ಸ್ ಗ್ರೂಪ್, AI ಮಾದರಿಗಳನ್ನು ಪರಿಚಯ ಬೆಳೆಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. AI ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಿರ್ವಹಿಸಲು ಶುರು ಮಾಡಿದೆ. ಇದಕ್ಕಾಗಿ ಇದು ಎರಡು ಎಕ್ಸಾಫ್ಲಾಪ್‌ಗಳ AI ಕಂಪ್ಯೂಟಿಂಗ್ ಸಾಮರ್ಥ್ಯದ ಕ್ಯಾಂಪಸ್ ಅನ್ನು ಸ್ಥಾಪಿಸಿದೆ. ಟೆಕ್ ಮಹೀಂದ್ರಾ ಮತ್ತು IIT ಮದ್ರಾಸ್‌ನಂತಹ ಭಾರತೀಯ ಸಂಸ್ಥೆಗಳು ಇಂಥವುಗಳಿಗೆ ಸಹಯೋಗ ನೀಡುತ್ತಿದ್ದು, AI ಕ್ಷೇತ್ರದಲ್ಲಿ ವಿಶೇಷ ಯೋಜನೆಗಳಿಗೆ ಕಾರಣವಾಗಿದೆ. AI ನಲ್ಲಿನ ಈ ಬೆಳವಣಿಗೆಗಳು ಭಾರತದ ಆರ್ಥಿಕ ಬೆಳವಣಿಗೆಯನ್ನು ಗಣನೀಯವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ. ಪರಿಣಾಮ ಆದಾಯದ ಮಟ್ಟವು ಹೆಚ್ಚಾಗಲಿದೆ. ಜನರ ಜೀವನಮಟ್ಟವೂ ಸುಧಾರಿಸುತ್ತದೆ. AI ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಪ್ರಭಾವ ಬೀರಲಿದೆ. ನೇರ ಸಂಶೋಧನೆ, ರೋಗ ರೋಗನಿರ್ಣಯ, ರೋಗಗಳ ತೀವ್ರತೆ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿನ ನಷ್ಟ ತಡೆಗಟ್ಟುವಿಕೆ ಸೇರಿದಂತೆ ಹೆಚ್ಚಿನ ವಿಷಯಗಳಲ್ಲಿ AI ಹೆಚ್ಚು ಕೆಲಸ ಮಾಡಲಿದೆ. ಈ ಮೂಲಕ ಅಲ್ಲಿನ ಸಮಸ್ಯೆಗಳ ನಿವಾರಣೆಗೆ ಎಐ ಸಹಾಯಕವಾಗಲಿದೆ. ಸಿಂಗಾಪುರದಲ್ಲಿ ಆರ್ಥಿಕ ಸೂಚ್ಯಾಂಕಗಳನ್ನು ಗುರುತಿಸಲು AI ಅನ್ನು ಬಳಸಲಾಗುತ್ತಿದೆ, ಆದರೆ ನೆದರ್ಲ್ಯಾಂಡ್ಸ್‌ನಲ್ಲಿ, ಕಲ್ಯಾಣ ಕಾರ್ಯಕ್ರಮಗಳನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಗುರುತಿಸಲು ಅಲ್ಲಿನ ಸರ್ಕಾರವು AI ಅನ್ನು ಬಳಕೆ ಮಾಡಿಕೊಳ್ಳುತ್ತಿದೆ.

ಕೃತಕ ಬುದ್ಧಿಮತ್ತೆ (AI)ಗೆ ಸಂಬಂಧಿಸಿದಂತೆ ಭಾರತವು ಇನ್ನೂ ಆರಂಭಿಕ ಹಂತದಲ್ಲಿದೆ. AI ತಂತ್ರಜ್ಞಾನದ ಅಪ್ಲಿಕೇಶನ್ ಮತ್ತು ಈ ಕ್ಷೇತ್ರದಲ್ಲಿ ಅಪ್ಲಿಕೇಶನ್‌ಗಳ ಅಭಿವೃದ್ಧಿ ಭಾರತದಲ್ಲಿ ಸೀಮಿತವಾಗಿದೆ. ಹೊಸ ಅಪ್ಲಿಕೇಶನ್‌ಗಳನ್ನು ಅನ್ವೇಷಿಸಲು AI ಯಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ (R&D) ಮತ್ತಷ್ಟು ಪ್ರಗತಿಯ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು, ಖಾಸಗಿ ವಲಯದ ಸಂಸ್ಥೆಗಳು ಉಪಕ್ರಮವನ್ನು ತೆಗೆದುಕೊಳ್ಳಬೇಕು. ಸರಕಾರ ಸೂಕ್ತ ಬೆಂಬಲ ಮತ್ತು ನಿಯಂತ್ರಣವನ್ನು ನೀಡಬೇಕು. ಭಾರತವು AI ನಲ್ಲಿ ನಾಯಕನಾಗಬೇಕಾದರೆ, ಅದು ಸ್ವತಂತ್ರವಾಗಿ ಹೊಸ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಬೇಕು. ಆಗ ಈ ಸಾಧನೆ ಮಾಡಲು ಸಾಧ್ಯವಾಗಬಹುದು. ಜಾಗತಿಕ AI ಸಾಮರ್ಥ್ಯಗಳಿಗೆ ಭಾರತವೂ ತನ್ನದೇ ಆದ ಕೊಡುಗೆ ನೀಡಬೇಕು. ಆ ದೇಶಗಳಲ್ಲಿನ ವಿವಿಧ ಸಮಸ್ಯೆಗಳು ಮತ್ತು ಅವಶ್ಯಕತೆಗಳಿಂದಾಗಿ ಇತರ ದೇಶಗಳೊಂದಿಗೆ ಸಹಯೋಗವು ಭಾರತಕ್ಕೆ ಅನನ್ಯ ಸವಾಲುಗಳನ್ನು ತರಬಹುದು. ಆದ್ದರಿಂದ, ಭಾರತವು ತನ್ನ ನಿರ್ದಿಷ್ಟ ಸವಾಲುಗಳನ್ನು ಪರಿಹರಿಸುವ ಡಿಜಿಟಲ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನಹರಿಸಬೇಕು. ಇದನ್ನು ಸಾಧಿಸಲು, ಸಂಶೋಧನೆಯಲ್ಲಿ ಗಣನೀಯ ಹೂಡಿಕೆಗಳು, ಸ್ಪಷ್ಟ ಗುರಿಗಳನ್ನು ಹೊಂದಿಸುವುದು ಮತ್ತು ಸಮರ್ಥ ಸಂಪನ್ಮೂಲ ಹಂಚಿಕೆ ನಿರ್ಣಾಯಕವಾಗಿದೆ. ಈ ಬಗ್ಗೆ ದೇಶ ಕಾರ್ಯ ಪ್ರವೃತ್ತವಾಗಬೇಕಿದೆ.

AI ಅಗತ್ಯತೆ ಏನು? : ಮುಂಬರುವ ದಶಕಗಳಲ್ಲಿ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಸುಧಾರಿಸುವ ಸಾಮರ್ಥ್ಯ AI ಹೊಂದಿದೆ. ಮುಂದಿನ ಕೆಲವು ದಶಕಗಳಲ್ಲಿ AI ಭಾರತದ ಆರ್ಥಿಕ ಮೌಲ್ಯಕ್ಕೆ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಸೇರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತವು ಆರ್ಥಿಕವಾಗಿ ಮತ್ತು ಪ್ರಬಲ AI ಶಕ್ತಿಯಾಗಿ ಶೀಘ್ರವಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ, ಹೊಸ ತಾಂತ್ರಿಕ ಪ್ರಗತಿಯನ್ನು ಬಳಸಿಕೊಳ್ಳುವುದು ಈಗಿನ ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ತಮ್ಮ ಪ್ರಯತ್ನಗಳನ್ನು ಆರಂಭಿಸಿವೆ. ಆಧಾರ್, UPI, ಡಿಜಿಟಲ್ ಲಾಕರ್, CoWIN ಪ್ಲಾಟ್‌ಫಾರ್ಮ್, UMANG, ಮತ್ತು ಇನ್ನೂ ಅನೇಕ ಉದಾಹರಣೆಗಳಾಗಿವೆ. ಭಾರತೀಯ ಸಂಶೋಧಕರು ಮತ್ತು ಸಂಸ್ಥೆಗಳು ಬಯೋಮೆಟ್ರಿಕ್ಸ್, ನೇರ ಸಂಶೋಧನೆ, ಮಹಿಳಾ ಸುರಕ್ಷತೆ ಮತ್ತು ಮುಖ ಗುರುತಿಸುವಿಕೆಯಂತಹ ವಿವಿಧ ಕ್ಷೇತ್ರಗಳಲ್ಲಿ AI ಅನ್ನು ಸಕ್ರಿಯವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. AI ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಬಹುದು, ವಿಶೇಷವಾಗಿ ಇ-ಆಡಳಿತ ಯೋಜನೆಗಳಲ್ಲಿ ಎಐ ಬಳಕೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ.

ಎಐನಿಂದ ಆಗುವ ಅನುಕೂಲಗಳು ಏನೇನು?: ಭಾರತದ ಅಭಿವೃದ್ಧಿಗಾಗಿ AI ಅಪ್ಲಿಕೇಶನ್‌ಗಳನ್ನು ಹೆಚ್ಚು ಹೆಚ್ಚು ಬಳಕೆ ಹಾಗೂ ಅಭಿವೃದ್ಧಿಪಡಿಸಿಕೊಳ್ಳಬೇಕಿದೆ. ರಾಷ್ಟ್ರೀಯ AI ಕಂಪ್ಯೂಟಿಂಗ್ ಕೇಂದ್ರವನ್ನು ಸ್ಥಾಪಿಸುವ ಅವಶ್ಯಕತೆಯಿದೆ ಎಂದು ಇತ್ತೀಚಿನ ಸಭೆಯಲ್ಲಿ IBM ನ ಅಧ್ಯಕ್ಷ ಮತ್ತು CEO ಅರವಿಂದ್ ಕೃಷ್ಣ ಹೈಲೈಟ್ ಮಾಡಿದ್ದಾರೆ. ಭಾರತವು ಐಟಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದೆ. ಜಾಗತಿಕ AI ಕ್ಷೇತ್ರದಲ್ಲಿ ಭಾರತವು ಇತರ ದೇಶಗಳಿಗೆ ಮಾರ್ಗದರ್ಶಿ ಶಕ್ತಿಯಾಗುವ ಸಾಮರ್ಥ್ಯವನ್ನು ಹೊಂದಿದೆ. ಮೋದಿ ಸರ್ಕಾರ ಡಿಜಿಟಲ್ ತಂತ್ರಜ್ಞಾನದ ಮಹತ್ವವನ್ನು ಈಗಾಗಲೇ ಗುರುತಿಸಿದೆ ಮತ್ತು ಈ ದಿಸೆಯಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ, AI ಯ ಜವಾಬ್ದಾರಿಯುತ ಮತ್ತು ನೈತಿಕ ಬಳಕೆ ಸೇರಿದಂತೆ ಹಲವು ಸವಾಲುಗಳು ನಮ್ಮ ಮುಂದಿವೆ. ಜಿ20 ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಚರ್ಚೆಗಳು ಗಮನ ಸೆಳೆದಿವೆ, ವಿವಿಧ ಸಮಸ್ಯೆಗಳನ್ನು ಪರಿಹರಿಸಲಾಗಿದೆ. AI ಯ ಸಾಮರ್ಥ್ಯವನ್ನು ನಿಜವಾಗಿಯೂ ಬಳಸಿಕೊಳ್ಳಲು ಹಾಗೂ ಅದರಲ್ಲಿ ದುರುಪಯೋಗವನ್ನು ತಡೆಗಟ್ಟುವುದು ಬಹಳ ಅಗತ್ಯವಾಗಿದೆ. ಗೌಪ್ಯತೆಯನ್ನು ಕಾಪಾಡಲು ಮತ್ತು ಎಲ್ಲರಿಗೂ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸೂಕ್ತವಾದ ನಿಯಮಗಳನ್ನು ಜಾರಿಗೆ ತರಬೇಕಾದ ಜವಾಬ್ದಾರಿ ಸರ್ಕಾರಗಳ ಮೇಲಿದೆ.

( ಈನಾಡು ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಇದನ್ನು ಓದಿ: 18ನೇ ಜಿ-20 ಶೃಂಗಸಭೆ: ಜಾಗತಿಕ ವೇದಿಕೆಯಲ್ಲಿ ಭಾರತ ಗಳಿಸಿದ್ದೇನು?.. ವಿಶ್ವಕ್ಕೆ ಕೊಟ್ಟ ಸಂದೇಶ ಯಾವುದು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.