ETV Bharat / opinion

ಸಂತೃಪ್ತ ರೈತನೇ ಸಮೃದ್ಧ ರಾಷ್ಟ್ರದ ತಳಹದಿ.. ಇದೆಲ್ಲ ರೈತ ಹಸಿರಾಗಿದ್ದರೆ ಮಾತ್ರ..

author img

By ETV Bharat Karnataka Team

Published : Oct 20, 2023, 2:32 PM IST

ರೈತರು ದಾನವನ್ನು ಬಯಸುತ್ತಿಲ್ಲ. ಅವರು ತಮ್ಮ ಪಟ್ಟುಬಿಡದ ಶ್ರಮಕ್ಕೆ ನ್ಯಾಯೋಚಿತ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ. ಅವರ ಪ್ರಯತ್ನಗಳನ್ನು ದುರ್ಬಲಗೊಳಿಸುವ ದೋಷಪೂರಿತ ನೀತಿಗಳ ನಿರಂತರತೆಯು ಪರ್ಯಾಯ ಜೀವನೋಪಾಯವನ್ನು ಬಯಸುವ ರೈತರ ವಲಸೆಯನ್ನು ವೇಗಗೊಳಿಸುತ್ತದೆ. ಇಂತಹ ಮಸುಕಾದ ಸನ್ನಿವೇಶದಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆ, ಈ ರಾಷ್ಟ್ರದ 140 ಕೋಟಿ ಜನರ ಹಸಿವು ನೀಗಿಸುವವರು ಯಾರು?

ಸಂತೃಪ್ತ ರೈತನೇ ಸಮೃದ್ಧ ರಾಷ್ಟ್ರದ ತಳಹದಿ... ರೈತ ಹಸಿರಾಗಿದ್ದರೆ ಮಾತ್ರ...
Eenadu editorial on Welfare of farmers

ದೇಶದ ಗಡಿಯನ್ನು ಶತ್ರುಗಳ ದಾಳಿಯಿಂದ ರಕ್ಷಿಸುವ ಸೈನಿಕರು ಮತ್ತು ರಾಷ್ಟ್ರಕ್ಕೆ ಅನ್ನ ನೀಡುವ, ಹಸಿವಿನ ಕಿಚ್ಚನ್ನು ತಣಿಸುವ ರೈತರಿಗೆ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 'ಜೈ ಜವಾನ್, ಜೈ ಕಿಸಾನ್​!' ಎಂಬ ಘೋಷದೊಂದಿಗೆ ಏಕಕಾಲದಲ್ಲಿ ಗೌರವ ಸಲ್ಲಿಸಿದ್ದರು. ಶಾಸ್ತ್ರಿಯವರ ಈ ಮನೋಭಾವನೆಯು ನಮ್ಮ ರೈತರು ವಹಿಸುವ ಅನಿವಾರ್ಯ ಪಾತ್ರವನ್ನು ನೆನಪಿಸುತ್ತದೆ. ರೈತರು ಎಂದರೆ ಕೇವಲ ಭೂಮಿಯನ್ನು ಉಳುಮೆ ಮಾಡುವವರಲ್ಲ, ಅವರು ನಮ್ಮ ಆಹಾರ ಭದ್ರತೆಯ ಕಾವಲುಗಾರರು. ಆದಾಗ್ಯೂ, ಸಮಕಾಲೀನ ಕಾಲದಲ್ಲಿ ಕೃಷಿ ಕ್ಷೇತ್ರ ಪಡೆಯುತ್ತಿರುವ ಆದ್ಯತೆ ಮತ್ತು ನೆರವು ಮಾತ್ರ ನಿರಾಶಾದಾಯಕವಾಗಿದೆ.

ಕೃಷಿ ಹಾಗೂ ರೈತರ ಮಹತ್ವವನ್ನು ಸ್ಪಷ್ಟವಾಗಿ ಗುರುತಿಸಿದ್ದರೂ, ಸಂತೃಪ್ತ ರೈತನು ಸಮೃದ್ಧ ರಾಷ್ಟ್ರದ ತಳಹದಿ ಎಂದು ಅರ್ಥಮಾಡಿಕೊಳ್ಳುವಲ್ಲಿ ನೀತಿ ನಿರೂಪಕರು ವಿಫಲರಾಗಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು 2024-25ನೇ ಸಾಲಿನ ಹಿಂಗಾರು ಋತುವಿನ ಆರು ನಿರ್ಣಾಯಕ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಈ ಗಮನಾರ್ಹ ಬೆಂಬಲ ಬೆಲೆ ಹೆಚ್ಚಳದಲ್ಲಿ ಪ್ರತಿ ಕ್ವಿಂಟಲ್‌ ಗೋಧಿಗೆ 150 ರೂ. ಘೋಷಿಸಲಾಗಿದೆ. ಜೊತೆಗೆ ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿಷ್ಕರಿಸಲಾಗಿದೆ. ಇದರಲ್ಲಿ ಬಾರ್ಲಿಗೆ 115 ರೂ., ಕಡಲೆಗೆ 105 ರೂ., ಸೂರ್ಯಕಾಂತಿಗೆ 150 ರೂ., ಸಾಸಿವೆಗೆ 200 ರೂ. ಏರಿಕೆ ಮಾಡಲಾಗಿದೆ. ದೇಶೀಯ ಅಗತ್ಯಗಳಿಗೆ ಶೇ.15ರಷ್ಟು ವಿದೇಶಿ ಆಮದನ್ನು ಅವಲಂಬಿಸಿರುವ ತೊಗರಿ ವಿಷಯದಲ್ಲಿ ಪ್ರತಿ ಕ್ವಿಂಟಾಲ್‌ಗೆ 425 ರೂ. ಹೆಚ್ಚಿಸಿರುವುದು ಅನಿವಾರ್ಯ ನಿರ್ಧಾರವಾಗಿದೆ.

ನಾಲ್ಕು ತಿಂಗಳ ಹಿಂದೆ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಕೇಂದ್ರವು ಉದಾರತೆಯನ್ನು ತೋರಿಸಿತ್ತು. ಆದರೆ, ರೈತ ಸಂಘಗಳು ಇದರ ಪ್ರಸ್ತುತತೆಯನ್ನು ನೇರವಾಗಿ ಪ್ರಶ್ನಿಸಿದ್ದವು. ಈಗಲೂ ಹಾಗೆಯೇ ಆಗಿದೆ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಬಲಪಡಿಸಲು 29 ಸದಸ್ಯರ ವಿಶೇಷ ಸಮಿತಿಯನ್ನು ನೇಮಿಸಿದ ನಂತರವೂ ದೇಶದಲ್ಲಿ ಬೆಳೆ ಬೆಂಬಲ ಬೆಲೆಗಳ ಮಾದರಿಯು ವರ್ಷದಿಂದ ವರ್ಷಕ್ಕೆ ಏನೂ ಬದಲಾಗಿಲ್ಲ. ಇಲ್ಲಿಯವರೆಗೆ ಗಣನೀಯ ಬದಲಾವಣೆಗಳು ತರಲು ಇದು ವಿಫಲವಾಗಿದೆ. ನಿಜವಾದ ಕೃಷಿ ವೆಚ್ಚವನ್ನು ಕಡಿಮೆ ಅಂದಾಜು ಮಾಡುವುದು, ರಾಜ್ಯಗಳ ನಡುವಿನ ವೆಚ್ಚದಲ್ಲಿನ ಅಸಮಾನತೆ ಮರೆಮಾಚುವುದು, ಹಣದುಬ್ಬರ ನಿರ್ಲಕ್ಷಿಸುವುದು ಮತ್ತು ರಸಗೊಬ್ಬರ ಬೆಲೆಗಳ ಏರಿಕೆಯನ್ನು ಅಲಕ್ಷ್ಯ ಮಾಡುವುದು... ಹೀಗೆ ಮುಂತಾದ ನಿರ್ಣಾಯಕ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ ಸಹ ಬೀಜಗಳು ಮತ್ತು ಕಾರ್ಮಿಕರ ಹೆಚ್ಚುತ್ತಿರುವ ವೆಚ್ಚವನ್ನು ಕಡೆಗಣಿಸುತ್ತಿದೆ. ಇದು ಪ್ರಸ್ತುತ ವಿಧಾನದ ಅಸಮರ್ಪಕತೆಯನ್ನು ಮತ್ತಷ್ಟು ಒತ್ತಿಹೇಳುವಂತಿದೆ. ಸಮಗ್ರ ವೆಚ್ಚದ ರಚನೆಯನ್ನು ಕಡೆಗಣಿಸಿ ಕೇವಲ ಭಾಗಶಃ ಆರ್ಥಿಕ ಪರಿಹಾರವನ್ನು ಒದಗಿಸುವುದು ನಮ್ಮ ರೈತ ಸಮುದಾಯದ ಕುರಿತಾದ ಒಂದು ಕ್ರೂರವಾದ ಅಪಹಾಸ್ಯವೇ ಸರಿ.

ವೈ.ಕೆ.ಅಲಘ್ ಸಮಿತಿಯು ಕೃಷಿಯ ಮೇಲಿನ ದೇಶದ ಭಾರೀ ಅವಲಂಬನೆಯನ್ನು ಗುರುತಿಸಿ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಷ್ಕರಿಸಲು ಕರೆ ನೀಡಿತ್ತು. ಪ್ರೊ.ಅಭಿಜಿತ್ ಸೇನ್ ಸಮಿತಿಯು ಬೆಲೆ ನಿರ್ಧರಿಸುವ ವಿಧಾನದ ಟೀಕೆಗೆ ಧ್ವನಿಗೂಡಿತ್ತು. 2000ರಿಂದ 2017ರವರೆಗೆ ನ್ಯಾಯಯುತ ಕೃಷಿ ಬೆಲೆಗಳನ್ನು ಲೆಕ್ಕಾಚಾರ ಮಾಡುವಲ್ಲಿ ವ್ಯವಸ್ಥಿತ ವೈಫಲ್ಯದಿಂದಾಗಿ ಭಾರತೀಯ ರೈತರು ವಹಿಸಿರುವ ವೆಚ್ಚವು ಅಂದಾಜು 45 ಲಕ್ಷ ಕೋಟಿ ರೂಪಾಯಿ. ಈ ಅಪಾರ ನಷ್ಟವು ಸುಧಾರಣೆಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ. ವಾಸ್ತವಿಕ ಕೃಷಿ ವೆಚ್ಚಗಳಿಗೆ ಶೇ.50ರಷ್ಟು ಸೇರಿಸುವ ಮೂಲಕ ರೈತರಿಗೆ ನ್ಯಾಯಯುತ ಬೆಲೆ ಒದಗಿಸಬೇಕೆಂಬ ಡಾ.ಸ್ವಾಮಿನಾಥನ್ ಶಿಫಾರಸುಗಳು ಇನ್ನೂ ಈಡೇರಿಲ್ಲ. ಭೂಮಿಯ ಮೌಲ್ಯ, ಬಾಡಿಗೆ ಮತ್ತು ಕುಟುಂಬದ ಶ್ರಮವನ್ನೂ ಸೇರಿ ನ್ಯಾಯಯುತ ಬೆಲೆ ನೀಡಬೇಕೆಂಬುವುದು ಅಪ್ರಾಯೋಗಿಕವಾಗಿದೆ ಎಂಬ ನೀತಿ ಆಯೋಗದ ಪ್ರತಿಪಾದನೆಯು ವ್ಯವಸ್ಥಿತ ನ್ಯೂನತೆಗಳನ್ನು ತೋರಿಸುತ್ತದೆ.

ಇದಲ್ಲದೇ, ಸಂಸದೀಯ ಸ್ಥಾಯಿ ಸಮಿತಿಯು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ ವಿರುದ್ಧ ಧ್ವನಿ ಎತ್ತಿದ್ದು, ಬಿತ್ತನೆ, ಕೊಯ್ಲು ಮತ್ತು ಕೀಟಗಳಿಂದ ಉಂಟಾಗುವ ನಷ್ಟದ ಸಮಯದಲ್ಲಿ ರೈತರನ್ನು ನಿರ್ಲಕ್ಷಿಸಿದೆ. ಈ ನಿರ್ಣಾಯಕ ಅಂತರಗಳನ್ನು ತ್ವರಿತವಾಗಿ ಪರಿಹರಿಸಬೇಕು. ಹೆಚ್ಚುವರಿಯಾಗಿ ಗೇಣಿದಾರರು ಸೇರಿದಂತೆ ಎಲ್ಲ ರೈತರಿಗೆ ಸಮಗ್ರ ವಿಮಾ ರಕ್ಷಣೆಯನ್ನು ವಿಸ್ತರಿಸುವುದು ಅಗತ್ಯವಾಗಿದೆ.

ಪ್ರಸ್ತುತ ಸನ್ನಿವೇಶದಲ್ಲಿ ರಾಷ್ಟ್ರದಲ್ಲಿ ಬೆಳೆಯುತ್ತಿರುವ ಎಪ್ಪತ್ತಕ್ಕೂ ಹೆಚ್ಚು ಬೆಳೆಗಳ ಪೈಕಿ ಕೇವಲ 14 ಮುಂಗಾರು ಮತ್ತು 6 ಹಿಂಗಾರು, 2 ವಾಣಿಜ್ಯ (ಸೆಣಬು ಮತ್ತು ತೆಂಗು) ಬೆಳೆಗಳೊಂದಿಗೆ ಬೆಂಬಲ ಬೆಲೆಗಳನ್ನು ಘೋಷಿಸುವುದೆಂದರೇನು?, ಅಧಿಕೃತ ಅಂಕಿ-ಅಂಶಗಳು, ಇದರ ದೊಡ್ಡ ವ್ಯಾಪ್ತಿಯನ್ನು ಸೂಚಿಸಬಹುದಾದರೂ, ಶಾಂತ ಕುಮಾರ್ ಸಮಿತಿಯು ಕೇವಲ ಶೇ.6ರಷ್ಟು ಭತ್ತ ಮತ್ತು ಗೋಧಿ ರೈತರು ಬೆಂಬಲ ಬೆಲೆ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಬಹಿರಂಗಪಡಿಸಿದೆ. ಈ ವ್ಯತ್ಯಾಸವು ಹೆಚ್ಚಿನ ರೈತರನ್ನು ನಿಷ್ಕರುಣಿ ಮಾರುಕಟ್ಟೆ ಶಕ್ತಿಗಳು ವಲಸೆಗೆ ಗುರಿಯಾಗುವಂತೆ ಮಾಡುತ್ತವೆ.

ವಿಶೇಷವಾಗಿ ಬೇಳೆ-ಕಾಳುಗಳನ್ನು ಬೆಳೆಯಲು ಮುಂದಾಗುವ ರೈತರಿಗೆ ತಮ್ಮ ಪ್ರಯತ್ನಗಳಿಗೆ ಸಮರ್ಪಕವಾಗಿ ಪ್ರತಿಫಲ ಸಿಗುತ್ತದೆಯೇ ಎಂದು ಖಚಿತತೆ ಇಲ್ಲ. ಈ ಅನಿಶ್ಚಿತತೆಯು ವಾರ್ಷಿಕ ಆಮದುಗಳ ಮೇಲೆ ಗಣನೀಯವಾಗಿ ಅವಲಂಬಿಸುವಂತೆ ದೇಶವನ್ನು ಮಾಡುತ್ತಿದೆ. ಏರುಗತ್ತಿಯ ಬೆಲೆಗಳು ಗ್ರಾಹಕರಿಗೆ ಹೊರೆಯಾಗುತ್ತದೆ. ರೈತರು ದಾನವನ್ನು ಬಯಸುತ್ತಿಲ್ಲ. ಅವರು ತಮ್ಮ ಪಟ್ಟುಬಿಡದ ಶ್ರಮಕ್ಕೆ ನ್ಯಾಯೋಚಿತ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ. ಅವರ ಪ್ರಯತ್ನಗಳನ್ನು ದುರ್ಬಲಗೊಳಿಸುವ ದೋಷಪೂರಿತ ನೀತಿಗಳ ನಿರಂತರತೆಯು ಪರ್ಯಾಯ ಜೀವನೋಪಾಯವನ್ನು ಬಯಸುವ ರೈತರ ವಲಸೆಯನ್ನು ವೇಗಗೊಳಿಸುತ್ತದೆ. ಇಂತಹ ಮಸುಕಾದ ಸನ್ನಿವೇಶದಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆ ಎಂದರೆ, ಈ ರಾಷ್ಟ್ರದ 140 ಕೋಟಿ ಜನರ ಹಸಿವು ನೀಗಿಸುವವರು ಯಾರು?. ರೈತನ ಸಂಕಷ್ಟ ಇಡೀ ರಾಷ್ಟ್ರಕ್ಕೆ ಶಾಪ. ರೈತರ ಕಲ್ಯಾಣವನ್ನು ನಿರ್ಲಕ್ಷಿಸುವುದರಿಂದ ನಮ್ಮ ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ತ್ವರಿತವಾಗಿ ಪರಿಹರಿಸಲು ವಿಫಲವಾದರೆ ನಮ್ಮ ದೇಶದ ಪೋಷಣೆಯ ಅಡಿಪಾಯವನ್ನು ಅಪಾಯಕ್ಕೆ ತಳ್ಳಿದಂತೆ.

ಇದನ್ನೂ ಓದಿ: ಆತಂಕದಲ್ಲಿ ಆಹಾರ ಭದ್ರತೆ: ಹೆಚ್ಚುತ್ತಿದೆ ಮಕ್ಕಳ ಅಪೌಷ್ಟಿಕತೆಯ ಬಿಕ್ಕಟ್ಟು.. ತುರ್ತು ಕ್ರಮ ಅಗತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.