ETV Bharat / opinion

ವಿಶೇಷ ಅಂಕಣ: ಇಥಿಯೋಪಿಯಾ ಬಿಕ್ಕಟ್ಟು-ರಾಜಕೀಯ ಪರಿವರ್ತನೆ - ಇಥಿಯೋಪಿಯನ್ ಪೀಪಲ್ಸ್ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್

2018 ರಲ್ಲಿ ಇಥಿಯೋಪಿಯಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಅಬಿ ಅಹ್ಮದ್ ದೇಶದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದರು. ಶತ್ರು ರಾಷ್ಟ್ರವನ್ನು ಮಿತ್ರ ರಾಷ್ಟ್ರವನ್ನಾಗಿ ಮಾಡಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದರು. ಆದರೆ ಒಂದು ದೇಶದ 'ರಾಜಕೀಯ ಪರಿವರ್ತನೆ' ಅಷ್ಟು ಸುಲಭವಲ್ಲ ಎಂಬುದಕ್ಕೆ ಇಥಿಯೋಪಿಯಾ ಸಾಕ್ಷಿಯಾಗಿದೆ.

The crisis in Ethiopia and political transition
ಇಥಿಯೋಪಿಯಾ ಬಿಕ್ಕಟ್ಟು
author img

By

Published : Dec 6, 2020, 6:24 PM IST

ಒಂದು ದೇಶದ 'ರಾಜಕೀಯ ಪರಿವರ್ತನೆ' ಅಷ್ಟು ಸುಲಭವಲ್ಲ. ಈ ಕಠಿಣ ಪ್ರಕ್ರಿಯೆಗೆ ಪ್ರಭಾವಿ ನಾಯಕ, ಉತ್ತಮ ನಾಯಕತ್ವದ ಅಗತ್ಯವಿದೆ. ರಾಜಕೀಯ ಬದಲಾವಣೆಯ ವೇಗವು ಕೆಲವು ಫಲಾನುಭವಿಗಳನ್ನು ಸೃಷ್ಟಿಸುತ್ತದೆ ಮತ್ತು ಕೆಲವರಿಂದ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಅಷ್ಟೇ ಅಲ್ಲ ಬದಲಾವಣೆಯ ವೇಗವು ರಾಜಕೀಯ ಪರಿವರ್ತನೆಯ ಸಂಪೂರ್ಣ ಪ್ರಕ್ರಿಯೆಯನ್ನು ಹಾಳುಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ, ಅನಿಶ್ಚಿತತೆಗಳನ್ನು ಉಂಟುಮಾಡುತ್ತದೆ. ಅಭಿವೃದ್ಧಿ ಬದಲಾಗಿ ದೇಶವನ್ನು ಹಿಮ್ಮೆಟ್ಟಿಸಲು ಸಹ ಕಾರಣವಾಗಬಹುದು.

ಈ ಹಂತದಲ್ಲಿಯೇ ನಾಯಕತ್ವದ ಪಾತ್ರ ಮತ್ತು ರಾಜಕೀಯವು ಹೊಸ ಆಯಾಮವನ್ನು ಪಡೆದುಕೊಳ್ಳುತ್ತದೆ. ದೇಶವನ್ನು ಪರಿವರ್ತನೆಯತ್ತ ಕೊಂಡೊಯ್ಯುವ ಭರದಲ್ಲಿ ಹಗೆತನವನ್ನು ಹೆಚ್ಚಿಸುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸಮಯ ಮತ್ತು ಪರಿಸ್ಥಿತಿಯ ನಿರ್ವಹಣೆ ಮಾಡುವ ವ್ಯಕ್ತಿ ಮಾತ್ರ ಉತ್ತಮ ನಾಯಕನಾಗಿ ಹೊರಹೊಮ್ಮಲು ಸಾಧ್ಯ. ವರ್ಣಭೇದ ನೀತಿಯನ್ನು ಆಧರಿಸಿದ ರಾಜಕೀಯ ವ್ಯವಸ್ಥೆಯಲ್ಲಿ, ಬಹುಪಕ್ಷ ಪ್ರಜಾಪ್ರಭುತ್ವ ಆಡಳಿತವಿದ್ದ ದಕ್ಷಿಣ ಆಫ್ರಿಕಾದ ಪರಿವರ್ತನೆಯ ಸಮಯದಲ್ಲಿ ನೆಲ್ಸನ್ ಮಂಡೇಲಾ ಇಂತಹ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಿದ್ದರು.

ಕಳೆದ ಕೆಲವು ದಿನಗಳಿಂದ ಪ್ರಧಾನಿ ಅಬಿ ಅಹ್ಮದ್ ನೇತೃತ್ವದ ಇಥಿಯೋಪಿಯನ್ ಸರ್ಕಾರವು ಟೈಗ್ರೇನ್ ಪಡೆ ಮೇಲೆ ವೈಮಾನಿಕ ದಾಳಿ ಸೇರಿದಂತೆ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇಥಿಯೋಪಿಯನ್ ಸೇನೆ ಹಾಗೂ ಟೈಗ್ರೇನ್ ಪಡೆ- ಎರಡೂ ಕಡೆಯಿಂದ ಮಿಲಿಟರಿ ಕಾರ್ಯಾಚರಣೆಗಳು ಸರಿಯಾಗಿ ಇಲ್ಲದಿದ್ದರೆ ದೇಶವು ಮತ್ತೆ ಅಂತರ್ಯುದ್ಧಕ್ಕೆ ಇಳಿಯುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಸೂಚನೆಗಳಿವೆ.

ಪ್ರಧಾನಿ ಅಬಿ ಅಹ್ಮದ್ ಹಾಗೂ ಸುಧಾರಣೆಗಳು

ಅಬಿ ಅಹ್ಮದ್ ಅವರು 2018 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ, ದೇಶವು ತನ್ನ ದೇಶೀಯ ರಾಜಕೀಯದಲ್ಲಿ ಮತ್ತು ವಿದೇಶಾಂಗ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಕಂಡಿದೆ.

ಮಾಜಿ ಸೇನಾಧಿಕಾರಿಯೂ ಆಗಿದ್ದ ಅಹ್ಮದ್, ಇಥಿಯೋಪಿಯಾ ಮತ್ತು ಏರಿಟ್ರಿಯಾ ನಡುವಿನ 20 ವರ್ಷಗಳ ಸಂಘರ್ಷವನ್ನು ಕೊನೆಗೊಳಿಸಿದರು. ಅಷ್ಟೇ ಅಲ್ಲ ಉಭಯ ರಾಷ್ಟ್ರಗಳ ನಡುವೆ ಮತ್ತೆ ಸ್ನೇಹ-ಶಾಂತಿ ಸ್ಥಾಪನೆಯಾಗುವಲ್ಲಿ ಕಾರಣರಾದರು. ಇದನ್ನು ಗುರುತಿಸಿ ಅಹ್ಮದ್‌ಗೆ 2019 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು. "ಶಾಂತಿ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಸಾಧಿಸುವ ಅವರ ಪ್ರಯತ್ನಗಳಿಗಾಗಿ ಮತ್ತು ನಿರ್ದಿಷ್ಟವಾಗಿ ನೆರೆಯ ಏರಿಟ್ರಿಯಾದೊಂದಿಗಿನ ಗಡಿ ಸಂಘರ್ಷವನ್ನು ಪರಿಹರಿಸುವ ಅಹ್ಮದ್‌ ಅವರ ನಿರ್ಣಾಯಕ ಕ್ರಮಗಳಿಗಾಗಿ ಪ್ರಶಸ್ತಿ ನೀಡಲಾಗಿದೆ" ಎಂದು ನೊಬೆಲ್ ಸಮಿತಿ ಉಲ್ಲೇಖಿಸಿತ್ತು.

ಸುಡಾನ್ ಮತ್ತು ದಕ್ಷಿಣ ಸುಡಾನ್‌ನಲ್ಲಿನ ಘರ್ಷಣೆಯನ್ನು ಕೊನೆಗೊಳಿಸುವಲ್ಲಿ, ಜಿಬೌಟಿ ಮತ್ತು ಏರಿಟ್ರಿಯಾ ನಡುವಿನ ಸಂಬಂಧವನ್ನು ತಿಳಿಗೊಳಿಸುವಲ್ಲಿ, ಕೀನ್ಯಾ ಮತ್ತು ಸೊಮಾಲಿಯಾ ನಡುವಿನ ಗಡಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಲ್ಲಿ ಅಹ್ಮದ್ ಸಕ್ರಿಯ ಪಾತ್ರ ವಹಿಸಿದ್ದರು. ಹೀಗಾಗಿ ಅಹ್ಮದ್ ಅವರ ಅಧಿಕಾರಾವಧಿಯು ಆಫ್ರಿಕಾದಲ್ಲಿ ಶಾಂತಿಯನ್ನು ತರುವ ಪ್ರಯತ್ನಗಳಿಂದ ಗುರುತಿಸಲ್ಪಟ್ಟಿದೆ.

ಆಂತರಿಕ ರಾಜಕೀಯವನ್ನು ಸುಧಾರಿಸಲು ಪ್ರಯತ್ನಗಳು

ಜನಸಂಖ್ಯೆಯಲ್ಲಿ ಆಫ್ರಿಕಾದ ಎರಡನೇ ಅತಿದೊಡ್ಡ ದೇಶವಾದ ಇಥಿಯೋಪಿಯಾದ ಆಂತರಿಕ ರಾಜಕೀಯವನ್ನು ಸುಧಾರಿಸುವಲ್ಲಿ ಅಹ್ಮದ್​ ಅವರ ಪ್ರಯತ್ನಗಳು ವಿವಾದಾಸ್ಪದವಾಗಿವೆ ಮತ್ತು ಸಾಕಷ್ಟು ವಿರೋಧವನ್ನು ಎದುರಿಸುತ್ತಿವೆ. ಒರೊಮಾ ಸಮುದಾಯದಿಂದ ಇಥಿಯೋಪಿಯಾದ ಪ್ರಧಾನಿಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಅಲ್ಲದೇ 44ನೇ ವಯಸ್ಸಿನಲ್ಲಿ ಪ್ರಧಾನಿ ಪಟ್ಟ ಪಡೆದ ಆಫ್ರಿಕಾದ ಅತ್ಯಂತ ಕಿರಿಯ ನಾಯಕ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.

ಅಹ್ಮದ್, ಸಾವಿರಾರು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿಸಿದ್ದಾರೆ. ಸಂಪುಟದ ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದ್ದಾರೆ. ಇಥಿಯೋಪಿಯನ್ ಪೀಪಲ್ಸ್ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್ (EPRDF) ಎಂದು ಕರೆಯಲ್ಪಡುವ ಆಡಳಿತ ಒಕ್ಕೂಟದಲ್ಲಿ ಮಹತ್ವದ ಬದಲಾವಣೆಗಳನ್ನು ತಂದರು.

ವಿವಾದಗಳು

2018 ರ ಸೆಪ್ಟೆಂಬರ್‌ನಲ್ಲಿ ನಡೆದ ನೇಡ್ ದಾಳಿಯಿಂದ ಅಹ್ಮದ್ ಬದುಕುಳಿದಿದ್ದರು. 2019 ರಲ್ಲಿ ಅಮ್ಹರಾ ಪ್ರದೇಶದಲ್ಲಿ ನಡೆದಿದ್ದ ದಾಳಿಯಲ್ಲಿ ಇಥಿಯೋಪಿಯನ್ ಸೇನಾ ಮುಖ್ಯಸ್ಥ ಮತ್ತು ಅಮ್ಹರಾ ಪ್ರದೇಶದ ಗವರ್ನರ್​ರನ್ನು ಕೊಲ್ಲಲಾಗಿತ್ತು. ಈ ವೇಳೆ ಅಹ್ಮದ್​ ಅವರನ್ನು ದೂಷಿಸಲಾಗಿತ್ತು. ಅಹ್ಮದ್ ತಂದ ರಾಜಕೀಯ ಬದಲಾವಣೆಯ ಪರಿಣಾಮವಾಗಿ ಟೈಗ್ರೇ ಪ್ರದೇಶದಲ್ಲಿ ಹಗೆತನ ಮತ್ತು ಅಶಾಂತಿ ಉಂಟಾಗಿರುವುದನ್ನೂ ಗಮನಿಸಬೇಕಾಗಿದೆ. ಹೀಗಾಗಿ ಕೆಲವು ಗುಂಪುಗಳು ಅಹ್ಮದ್ ಅವರ ರಾಜಕೀಯ ಸುಧಾರಣೆಗಳ ಶೈಲಿಯಿಂದಾಗಿ ಅಸಮಾಧಾನಗೊಂಡಿವೆ.

ಪಿಎಂ ಅಹ್ಮದ್ ಹಾಗೂ ಸರ್ಕಾರ ನೀತಿಗಳನ್ನು ಖಂಡಿಸಿದ್ದ ಒರೊಮೊ ಸಮುದಾಯದ ಖ್ಯಾತ ಸಾಮಾಜಿಕ ಕಾರ್ಯಕರ್ತ ಜಾವರ್​ ಮೊಹಮ್ಮದ್​ ಭದ್ರತಾ ಪಡೆಗಳು ನನ್ನ ಮೇಲೆ ನಡೆಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಇದೇ ಕಾರಣಕ್ಕೆ ಒರೊಮೊ ಜನಾಂಗೀಯ ಗುಂಪಿನ ಜನರು ಅಹ್ಮದ್ ವಿರುದ್ಧ 2019ರ ಅಕ್ಟೋಬರ್​ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು, 16 ಮಂದಿ ಬಲಿಯಾಗಿದ್ದರು.

ಪ್ರಧಾನಿ ಅಬಿ ಅಹ್ಮದ್ ಅವರ ಮಿಲಿಟರಿ ಸೈನ್ಯ ಮತ್ತು ಟೈಗ್ರೇ ಪೀಪಲ್ಸ್ ಲಿಬರೇಶನ್ ಫ್ರಂಟ್ (ಟಿಪಿಎಲ್ಎಫ್) ನಡುವೆ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಹೋರಾಟವು ಸಾವಿರಾರು ಜನರನ್ನು ಬಲಿಪಡೆದಿದೆ ಹಾಗೂ 46,000 ನಿರಾಶ್ರಿತರನ್ನು ನೆರೆಯ ಸುಡಾನ್‌ಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ.

ಇಥಿಯೋಪಿಯಾ ಬಹು-ಜನಾಂಗೀಯ ರಾಷ್ಟ್ರವಾಗಿದ್ದು, ಏಕತೆಯನ್ನು ಉಳಿಸಿಕೊಳ್ಳಲು ಒಕ್ಕೂಟ ವ್ಯವಸ್ಥೆಯ ಅಗತ್ಯವಿದೆ. ರಾಜಕೀಯ ಬದಲಾವಣೆಗಳಲ್ಲಿ ಪ್ರಧಾನಿ ಅಹ್ಮದ್ ಅವರ ಪ್ರಯತ್ನಗಳು ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯತ್ನವೆಂದು ಕೆಲವರು ನೋಡುತ್ತಾರೆ.

ಶೀತಲ ಸಮರದ ವೇಳೆ..

ಶೀತಲ ಸಮರದ ಸಮಯವದು. 1970 ರ ದಶಕದಲ್ಲಿ ಚಕ್ರವರ್ತಿ ಹೈಲೆ ಸೆಲಾಸ್ಸಿಯನ್ನು ಕುರ್ಚಿಯಿಂದ ಕೆಳಗಿಳಿಸಿ ಡೆರ್ಗ್ ಎಂಬ ಹೆಸರಿನ ಪ್ರಾದೇಶಿಕ ಮಿಲಿಟರಿ ಸರ್ಕಾರ ಅಧಿಕಾರವನ್ನು ವಹಿಸಿಕೊಂಡಿತು. ಬಳಿಕ ನಿಧಾನವಾಗಿ ಮಾರ್ಕ್ಸ್‌ವಾದದತ್ತ ತಿರುಗಿತು. ಸೋವಿಯತ್ ಮಿಲಿಟರಿ ಮತ್ತು ರಾಜಕೀಯ ಬೆಂಬಲವನ್ನು ಪಡೆಯಿತು.

1977 ರಲ್ಲಿ ಡೆರ್ಗ್ ನೇತೃತ್ವ ವಹಿಸಿಕೊಂಡ ಸರ್ವಾಧಿಕಾರಿ ಕರ್ನಲ್ ಮೆಂಗಿಸ್ಟು ಹೈಲೆ ಮಾರಿಯಮ್ ಸಾವಿರಾರು ಭಿನ್ನಮತೀಯರನ್ನು ನಿರ್ದಯವಾಗಿ ಕೊಲ್ಲಿಸಿದನು. 1988ರಲ್ಲಿ ಉತ್ತರ ಪ್ರಾಂತ್ಯದ ಟೈಗ್ರೇ ಮೇಲೆ ವೈಮಾನಿಕ ದಾಳಿ ನಡೆಸಲಾಯಿತು. ಇದರಲ್ಲಿ 1800 ಜನರು ಸಾವನ್ನಪ್ಪಿದ್ದರು.

1991 ರಲ್ಲಿ ಇಥಿಯೋಪಿಯನ್ ಪೀಪಲ್ಸ್ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್ (EPRDF) ಡೆರ್ಗ್ ಆಡಳಿತವನ್ನು ಉರುಳಿಸುವಲ್ಲಿ ಯಶಸ್ವಿಯಾಯಿತು. ಏರಿಟ್ರಿಯರನ್ನರು ಇಥಿಯೋಪಿಯಾದಿಂದ ಬೇರ್ಪಡುವಲ್ಲಿ ಯಶಸ್ವಿಯಾದರು. ಶೀತಲ ಸಮರದ ನಂತರದ ಯುಗವು ಇಥಿಯೋಪಿಯಾದಲ್ಲಿ ಹೊಸ ರಾಜಕೀಯ ಅಲೆಯನ್ನು ಕಂಡಿತು. 1991 ರಿಂದ 2018 ರವರೆಗೆ ಇಪಿಆರ್‌ಡಿಎಫ್ ಇಥಿಯೋಪಿಯಾವನ್ನು ಆಳಿತು. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿತು. ವಿನಾಶಕಾರಿ ಕ್ಷಾಮಗಳಿಗೆ ಹೆಸರುವಾಸಿಯಾಗಿದ್ದ ದೇಶವನ್ನು ಅದರಿಂದ ಮುಕ್ತ ಮಾಡುವಲ್ಲಿ ಕ್ರಮ ತೆಗೆದುಕೊಂಡಿತು. ಮಕ್ಕಳ ಮರಣ ಪ್ರಮಾಣವನ್ನು 1/5 ನಿಂದ 1/20ಕ್ಕೆ ಇಳಿಸಿತು.

ಆದರೆ 27 ವರ್ಷಗಳ ಆಡಳಿತವು ಇಥಿಯೋಪಿಯಾಗೆ ಪ್ರಜಾಪ್ರಭುತ್ವವನ್ನು ತರಲಿಲ್ಲ. ಇದೇ ಕಾರಣಕ್ಕೆ ಇಪಿಆರ್‌ಡಿಎಫ್​ ಮೂಲಕವೇ 2018ರಲ್ಲಿ ಅಹ್ಮದ್ ಪ್ರಧಾನಿ ಪಟ್ಟಕ್ಕೇರಿದರೂ ಸಹ 27 ವರ್ಷಗಳ ಆಡಳಿತವನ್ನು ಅವರೇ 'ಕರಾಳ'ವೆಂದು ಕರೆಯುತ್ತಾರೆ.

ಅಹ್ಮದ್ ದೇಶದ ರಾಜಕೀಯವನ್ನು ಸುಧಾರಿಸಲು ಹೊರಟರು. ಇಪಿಆರ್‌ಡಿಎಫ್ ಅನ್ನು ವಿಸರ್ಜಿಸಿ ಸಮೃದ್ಧ ಪಕ್ಷ (Prosperity Party) ಎಂಬ ಹೊಸ ರಾಜಕೀಯ ಪಕ್ಷವನ್ನು ರಚಿಸಿದರು. ರಾಜಕೀಯ ಪರಿವರ್ತನೆ ಕಡೆಗೆ ಗಮನಹರಿಸಿದರು. ನೋಬೆಲ್​ ಶಾಂತಿ ಪ್ರಶಸ್ತಿಗೆ ಭಾಜನರಾದರು. ಆದರೆ ಈಗ ವಿವಾದಗಳ ಸುಳಿಯಲ್ಲಿ ಸಿಲುಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.