ETV Bharat / opinion

ಸಂವಿಧಾನ ನೀಡಿದ ಹಕ್ಕಿನಂತೆ ಪ್ರತಿಯೊಬ್ಬರು ಭೂಮಿಯನ್ನು ಹೊಂದಿದ್ದಾರೆಯೇ?

ಯುನೆಸ್ಕೋ ಇತ್ತೀಚೆಗೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದದ ಅಡಿಯಲ್ಲಿ ಭೂಮಿ ಹೊಂದುವ ಹಕ್ಕನ್ನೂ ಪ್ರತಿಪಾದಿಸಿದೆ. 'ಜನರಲ್ ಕಾಮೆಂಟ್-26'ನಲ್ಲಿ ಇದನ್ನು ಸೇರಿಸಲಾಗಿದೆ. ಇದು ಪ್ರತಿ ಮನುಷ್ಯ ಭೂಮಿ ಹೊಂದುವ ಹಕ್ಕುಗಳನ್ನು ಸರ್ಕಾರಗಳು ರಕ್ಷಿಸುವ ಜವಾಬ್ದಾರಿಗಳ ಬಗ್ಗೆ ಹೇಳುತ್ತದೆ.

ಭೂಮಿಯ ಹಕ್ಕು
ಭೂಮಿಯ ಹಕ್ಕು
author img

By ETV Bharat Karnataka Team

Published : Sep 28, 2023, 10:46 PM IST

ಭೂಮಿ..! ಮಾನವನ ಬದುಕಿನ ಮೂಲ. ಮನುಷ್ಯರಿಗೆ ಸಂವಿಧಾನದತ್ತವಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಜೊತೆಗೆ ಭೂಮಿ ಹೊಂದುವ ಹಕ್ಕನ್ನೂ ನೀಡಲಾಗಿದೆ ಎಂಬುದು ನಿಮಗೆ ಗೊತ್ತಾ. ಈ ಅಂಶ ಸಂವಿಧಾನದಲ್ಲೇ ಅಡಕ ಮಾಡಲಾಗಿದೆ. ಮಾನವ ಜೀವನಕ್ಕೆ ಅಗತ್ಯವಾದ ಕನಿಷ್ಠ ಹಕ್ಕುಗಳ ಜೊತೆಯಲ್ಲಿ ಭೂಮಿ ಹೊಂದುವ ಹಕ್ಕನ್ನೂ ಸೇರಿಸಲಾಗಿದೆ. 1948 ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯಿಂದ 2018 ರ ರೈತರ ಹಕ್ಕುಗಳ ಘೋಷಣೆಯವರೆಗೆ ಭೂಮಿಯನ್ನು ಹೊಂದುವ ಹಕ್ಕನ್ನು ಪ್ರತಿಪಾದಿಸಲಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಮೇಲಿನ ಅಂತಾರಾಷ್ಟ್ರೀಯ ಒಪ್ಪಂದವನ್ನು 1966 ರಲ್ಲಿ ವಿಶ್ವಸಂಸ್ಥೆಯು ಅಂಗೀಕರಿಸಿತು. ಭಾರತ ಅದನ್ನು ಈಗಾಗಲೇ ಅನುಮೋದಿಸಿದೆ.

ಪ್ರತಿಯೊಬ್ಬ ಮನುಷ್ಯನಿಗೂ ಭೂಮಿ ಹೊಂದುವ ಹಕ್ಕಿದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಅನುಸಾರ ಯಾರೊಬ್ಬರ ಭೂಮಿಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಇಂಥದ್ದೊಂದು ನಿಯಮ ಭಾರತ ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯಲ್ಲೂ ಇತ್ತು. ನಂತರ, ಅದನ್ನು ಆ ಪಟ್ಟಿಯಿಂದ ತೆಗೆದುಹಾಕಲಾಯಿತು. ಆದರೂ, ಅದು ಸಾಂವಿಧಾನಿಕ ಹಕ್ಕಾಗಿಯೇ ಮುಂದುವರಿದಿದೆ. ಭೂಮಿಯ ಮೇಲಿನ ಹಕ್ಕನ್ನು ವಿವಿಧ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ವಿವಿಧ ರೂಪಗಳಲ್ಲಿ ಪ್ರಸ್ತಾಪಿಸಲಾಗಿದೆ.

ಆಹಾರ ಭದ್ರತೆ, ಎಲ್ಲರಿಗೂ ವಸತಿ, ಕುಡಿಯುವ ನೀರು, ಮಾಲಿನ್ಯ ಮುಕ್ತ ಪರಿಸರ, ಆರೋಗ್ಯಕರ ಜೀವನ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳಲ್ಲಿ ಎಲ್ಲರಿಗೂ ಸಮಾನ ಅವಕಾಶವಿರಬೇಕು ಎಂದು ಯುನೆಸ್ಕೋ ಹೇಳಿದೆ.

ಸರ್ಕಾರದಿಂದಲೂ ಭೂಸ್ವಾಧೀನ: ಪ್ರಸ್ತುತ ಭೂಮಿ ಹೊಂದುವ ಹಕ್ಕುಗಳಿಗೆ ಅಭಿವೃದ್ಧಿ ಕಾರ್ಯಗಳು, ನಗರೀಕರಣ, ಹೆಚ್ಚುತ್ತಿರುವ ಭೂಮಿಯ ಮೌಲ್ಯಗಳು, ವಿವಿಧ ಅಗತ್ಯಗಳಿಗಾಗಿ ಭೂಸ್ವಾಧೀನ, ಪರಿಸರ ಬದಲಾವಣೆಗಳು ತೊಡಕಾಗಿವೆ. ಯೋಜನೆಗಳು, ಕೈಗಾರಿಕೆಗಳು, ಸಾರ್ವಜನಿಕ ಹಿತಾಸಕ್ತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಂತಹ ವಿವಿಧ ಕಾರಣಗಳಿಗಾಗಿ ಸರ್ಕಾರವೇ ಜನರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತವೆ. ಅದು ಒಮ್ಮೊಮ್ಮೆ ಬಲವಂತವಾಗಿಯೂ ಭೂಸ್ವಾಧೀನ ನಡೆದಾಗ ಭೂಮಿ ಕಳೆದುಕೊಂಡವರು ಸಂವಿಧಾನ ನೀಡಿದ ಹಕ್ಕಿನಿಂದಲೇ ವಂಚಿತರಾಗುತ್ತಾರೆ.

ನಮ್ಮ ಭೂ ಆಸ್ತಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳಿಲ್ಲದಿದ್ದರೆ ಮತ್ತು ಸರ್ಕಾರಿ ಕಡತಗಳಲ್ಲಿ ನೋಂದಾಯಿಸದಿದ್ದರೆ ಭೂಮಿಯ ಮೇಲಿನ ಹಕ್ಕಿನ ಭದ್ರತೆ ಕಳೆದುಕೊಳ್ಳುತ್ತೇವೆ. ಹಕ್ಕುಪತ್ರಗಳಿಲ್ಲದೇ ಹೋದಲ್ಲಿ ಅದರ ಅತಿಕ್ರಮಣ ಮತ್ತು ಸರ್ಕಾರವೇ ಬಲವಂತವಾಗಿ ವಶಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನಮ್ಮ ಭೂ ಆಸ್ತಿಯ ಗಡಿಯನ್ನು ಗುರುತಿಸಿಟ್ಟುಕೊಳ್ಳಬೇಕು. ಅದರ ಮಾರಾಟ ಮತ್ತು ಖರೀದಿಯನ್ನು ಸುಲಭಗೊಳಿಸುತ್ತದೆ.

ಭೂ ಹಕ್ಕು ಕಾಯ್ದೆಗೆ ಬೇಕಿದೆ ಸುಧಾರಣೆ: ಎಲ್ಲರೂ ಭೂ ಹಕ್ಕುಗಳನ್ನು ಅನುಭವಿಸಬೇಕಾದರೆ, ಕಾಯ್ದೆಯ ಸುಧಾರಣೆ ಆಗಬೇಕಿರುವುದು ಅವಶ್ಯಕ. ಬಡವರಿಗೆ ಮತ್ತು ದೀನದಲಿತರಿಗೆ ಭೂಮಿ ಹಂಚಿದರೆ ಮಾತ್ರ ಸಮಾನತೆ ಸ್ಥಾಪಿತವಾಗುತ್ತದೆ. ಬಡತನ ನಿರ್ಮೂಲನೆ ಮಾಡಲೂ ಸಾಧ್ಯ. ಆದರೆ, ನಮ್ಮ ದೇಶದಲ್ಲಿ ಭೂಸುಧಾರಣೆಗಳು ಕಾಗದಗಳಲ್ಲೇ ಉಳಿದಿವೆ. ಭೂರಹಿತ ಗ್ರಾಮೀಣ ಬಡ ಕೃಷಿಕ ಕುಟುಂಬಗಳಿಗೆ ಭೂಮಿ ನೀಡಬೇಕು. ಇಂತಹ ಪ್ರಯತ್ನ ಇಂದಿಗೂ ಕುಂಟುತ್ತಲೇ ಸಾಗುತ್ತಿದೆ.

ಭೂಮಿಯ ಹಕ್ಕಿನ ರಕ್ಷಣೆಗಾಗಿ ಸರ್ಕಾರಗಳು ಸೂಕ್ತ ಕಾನೂನುಗಳು ಮತ್ತು ನೀತಿಗಳನ್ನು ರೂಪಿಸಬೇಕಿದೆ. ಬಹುಪಾಲು ಜನರಿಗೆ ಭೂಮಿಯೇ ಜೀವನವಾಗಿರುತ್ತದೆ. ಬದುಕುವ ಹಕ್ಕಿನಂತೆಯೇ ಭೂಮಿಯ ಹಕ್ಕು ಬೇಕಿದೆ. ಅದಕ್ಕಾಗಿ ಅದರ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಗಮನ ಹರಿಸಬೇಕು.

ಇದನ್ನೂ ಓದಿ: ಪಂಚ ಗ್ಯಾರಂಟಿ, ಬರ ನಿರ್ವಹಣೆಯ ಹೊರೆ ಮಧ್ಯೆ ನಿರೀಕ್ಷಿತ ಗುರಿ ತಲುಪದ ರಾಜ್ಯ ಸರ್ಕಾರದ ತೆರಿಗೆ ಸಂಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.