LIVE: ಗವಿ ಗಂಗಾಧರೇಶ್ವರನನ್ನು ಸೂರ್ಯರಶ್ಮಿ ಸ್ಪರ್ಶಿಸುವ ಪವಿತ್ರ ಕೌತುಕ - ಸಂಕ್ರಾಂತಿ ಸಂಭ್ರಮ

🎬 Watch Now: Feature Video

thumbnail

By ETV Bharat Karnataka Team

Published : Jan 15, 2024, 5:01 PM IST

Updated : Jan 15, 2024, 5:47 PM IST

ಬೆಂಗಳೂರು : ಸಂಕ್ರಾಂತಿ ಸಂಭ್ರಮದ ದಿನವಾದ ಇಂದು ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುತ್ತಾನೆ. ನಗರದ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯು ದೇವರನ್ನು ಸ್ಪರ್ಶಿಸುವ ಪವಿತ್ರ ಕೌತುಕ ನಡೆಯುತ್ತಿದೆ.

ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆಬಗೆಯ ಅಭಿಷೇಕಗಳು ನಡೆಯುತ್ತಿವೆ. ಸೂರ್ಯನ ಕಿರಣಗಳ ಅದ್ಭುತ ಅಭಿಷೇಕದ ಜೊತೆಗೆ ಗಂಗಾಧರೇಶ್ವರನಿಗೆ ಹಾಲು, ಎಳನೀರು, ಪವಿತ್ರ ಜಲದಿಂದ ಅಭಿಷೇಕ ಮಾಡಲಾಗುತ್ತಿದೆ. ಅರ್ಚಕರ ಮಂತ್ರ ಘೋಷ, ಡೊಳ್ಳು, ನಗಾರಿ, ಗಂಟೆಗಳ ನಾದಗಳ ನಡುವೆ ಸೂರ್ಯ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸುತ್ತಿವೆ.

ಸೂರ್ಯರಶ್ಮಿ ಸ್ಪರ್ಶದ ಬಳಿಕ ಸಂಜೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 5:45 ರಿಂದ 6 ಗಂಟೆವರೆಗೂ ಗಣ್ಯರಿಗೆ ದರ್ಶನ ಇರಲಿದೆ. ಪವಿತ್ರ ಕೌತುಕದ ವೀಕ್ಷಣೆಗೆ ದೇಗುಲದ ಆವರಣದಲ್ಲಿ ಎರಡು ಎಲ್.ಈ.ಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ಗವಿ ಗಂಗಾಧರೇಶ್ವರ ಅಥವಾ ಶ್ರೀ ಗಂಗಾಧರೇಶ್ವರ ದೇವಾಲಯವು ವಿಶೇಷ ಕಲ್ಲಿನ ಕೆತ್ತನೆಯ ವಾಸ್ತುಶಿಲ್ಪವನ್ನು ಹೊಂದಿದೆ. ಸಂಕ್ರಾಂತಿಯಂದು ನಡೆಯುವ ಸೂರ್ಯರಶ್ಮಿ ಸ್ಪರ್ಶದಿಂದ ಸಾಕಷ್ಟು ಹೆಸರುವಾಸಿಯಾಗಿದೆ. ದೇಗುಲವನ್ನು ವೈದಿಕ ಕಾಲದಲ್ಲಿ ಗೌತಮ ಮಹರ್ಷಿ ಮತ್ತು ಭಾರದ್ವಾಜ ಮುನಿಯವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಬಳಿಕ 16ನೇ ಶತಮಾನದಲ್ಲಿ ಬೆಂಗಳೂರು ನಗರದ ಸಂಸ್ಥಾಪಕರಾದ ಕೆಂಪೇಗೌಡರು ನವೀಕರಿಸಿದ್ದಾರೆ. ಇಲ್ಲಿನ ವಾಸ್ತುಶಿಲ್ಪ ಅದ್ಭುತವಾಗಿದ್ದು, ನೈಸರ್ಗಿಕ ಗುಹೆಯ ಏಕಶಿಲೆಯ ಕಲ್ಲಿನಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ. ದೇವಾಲಯದ ಪ್ರಾಂಗಣವು ಹಲವು ಏಕಶಿಲಾ ಶಿಲ್ಪಗಳನ್ನು ಒಳಗೊಂಡಿದೆ. 

ಇದನ್ನೂ ಓದಿ: ಸಂಕ್ರಾಂತಿಯಂದು ಮಹಾಕಾಳೇಶ್ವರನ 'ಭಸ್ಮ ಆರತಿ'ಯಲ್ಲಿ ಭಾಗವಹಿಸಿದ ಕ್ರಿಕೆಟಿಗರು: ವಿಡಿಯೋ

Last Updated : Jan 15, 2024, 5:47 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.