ETV Bharat / lifestyle

ಡೇಟಿಂಗ್​ ಮಾಡೋರಿಗಿಂತ ಮಾಡ್ದೇ ಇರೋರೇ ಕಮ್ಮಿ ಖಿನ್ನತೆ ಹೊಂದಿರ್ತಾರಂತೆ - ಹದಿಹರೆಯ

ಡೇಟಿಂಗ್ ಮಾಡದ ಹದಿಹರೆಯದವರು ಕಡಿಮೆ ಖಿನ್ನತೆ ಹೊಂದಿರುತ್ತಾರೆ ಮತ್ತು ಅವರ ಡೇಟಿಂಗ್ ಗೆಳೆಯರಿಗಿಂತ ವಿಭಿನ್ನ ಮತ್ತು ಆರೋಗ್ಯಕರ ಬೆಳವಣಿಗೆಯ ಪಥವನ್ನು ಅನುಸರಿಸುತ್ತಿದ್ದಾರೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಇದಲ್ಲದೆ ಅವರೂ ಕೂಡಾ ಸಮಾಜಮುಖಿಯಾಗಿ ಮಾನಸಿಕವಾಗಿ ಆರೋಗ್ಯವಾಗಿರುತ್ತಾರಂತೆ.

Non-dating teens are less depressed
author img

By

Published : Sep 9, 2019, 12:50 PM IST

ವಾಷಿಂಗ್ಟನ್​ ​​(ಯುಎಸ್​ಎ): ಡೇಟಿಂಗ್,​ ಹದಿಹರೆಯರ ಮತ್ತು ಯುವಕರ ಸಾಮಾನ್ಯ ಹವ್ಯಾಸ. ಜಾಸ್ತಿ ಡೇಟಿಂಗ್​ ಮಾಡ್ತಾ ಇದ್ರೆ ಜನರೊಡನೆ ಹೆಚ್ಚು ಬೆರೆಯುತ್ತೇವೆ ಅನ್ನೋದು ಸಾಮಾನ್ಯ ಅಭಿಪ್ರಾಯ. ಆದ್ರೆ ಡೇಟಿಂಗ್​ ಮಾಡದ ಹದಿಹರೆಯದವರು ಕೂಡಾ ಡೇಟಿಂಗ್​ ಮಾಡೋರಿಗಿಂತ ಹೆಚ್ಚು ಆರೋಗ್ಯವಂತರಾಗಿ, ಸಾಮಾನ್ಯವಾಗಿಯೇ ಇರುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.

ಜರ್ನಲ್​ ಆಫ್​ ಸ್ಕೂಲ್​ ಹೆಲ್ತ್​ನಲ್ಲಿ ಈ ಅಧ್ಯಯನದ ಮಾಹಿತಿ ಪ್ರಕಟಗೊಂಡಿದೆ. 15 ರಿಂದ 17ರೊಳಗಿನ ಮಧ್ಯಮ ವಯಸ್ಸಿನ ಹದಿಹರೆಯರು ಸಾಮಾನ್ಯವಾಗಿ ಕೆಲ ರೊಮ್ಯಾಂಟಿಕ್​ ಅನುಭವಗಳನ್ನು ಪಡೆದಿರುತ್ತಾರೆ ಎಂದು ಪ್ರಮುಖ ಲೇಖಕ ಹಾಗೂ ಜಾರ್ಜಿಯಾ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಕಾಲೇಜಿನಲ್ಲಿ ಆರೋಗ್ಯ ಪ್ರಚಾರದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ಬ್ರೂಕ್ ಡೌಗ್ಲಾಸ್ ಹೇಳಿದ್ದಾರೆ.

ಹದಿಹರೆಯದ ವಯಸ್ಸಿನಲ್ಲಿ ಡೇಟಿಂಗ್​ ಮಾಡೋದು ಸಾಮಾನ್ಯ ನಡವಳಿಕೆ. ಬ್ರೂಕ್ ಡೌಗ್ಲಾಸ್ ಹೇಳುವ ಪ್ರಕಾರ, ರೊಮ್ಯಾಂಟಿಕ್​ ರಿಲೇಷನ್​ಶಿಪ್​ ಹೊಂದಿರುವ ಹದಿಹರೆಯರು ಅವರ ಮಾನಸಿಕ ಬೆಳವಣಿಗೆಯಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರಂತೆ.

ಈ ಸಮಯದಲ್ಲಿ ರೊಮ್ಯಾಂಟಿಕ್​ ರಿಲೇಶನ್​ಶಿಪ್​ನಲ್ಲಿ ಇಲ್ಲದ ಅಥವಾ ಡೇಟಿಂಗ್​ ಮಾಡದ ಹದಿಹರೆಯದವರು ಉತ್ತಮ ಸಾಮಾಜಿಕ ಕೌಶಲ್ಯ ಮತ್ತು ಕಡಿಮೆ ಖಿನ್ನತೆಯನ್ನು ಹೊಂದಿರುತ್ತಾರೆ. ಅಂತೆಯೇ ಡೇಟಿಂಗ್​ ಮಾಡಿದ ಹದಿಹರೆಯರಿಗೆ ಸಮಾನರಾಗಿರುತ್ತಾರೆ ಎಂದು ಅಧ್ಯಯನದ ಫಲಿತಾಂಶ ತಿಳಿಸಿದೆ.

ಡೇಟಿಂಗ್ ಮಾಡದ ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರ ಡೇಟಿಂಗ್ ಗೆಳೆಯರಿಗಿಂತ ವಿಭಿನ್ನ ಮತ್ತು ಆರೋಗ್ಯಕರ ಬೆಳವಣಿಗೆಯ ಪಥವನ್ನು ಅನುಸರಿಸುತ್ತಿದ್ದಾರೆ ಅನ್ನೋದು ಅಧ್ಯಯನದಿಂದ ಕಂಡುಕೊಂಡ ಅಂಶ ಎಂದು ಸಂಶೋಧಕರು ಹೇಳಿದ್ದಾರೆ.

Intro:Body:

Non-dating teens

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.