ETV Bharat / lifestyle

ದಾಂಪತ್ಯದಲ್ಲಿ ಹೆಣ್ಣಿನ ಲೈಂಗಿಕ ಅಸಂತೃಪ್ತಿಗೆ ಕಾರಣಗಳೇನು?

ಮಿಲನ ಮಹೋತ್ಸವ ಸಮಯದಲ್ಲಿ ಹೆಂಗಸು ತೀವ್ರ ಭಾವೋನ್ಮಾದಕ್ಕೆ ಒಳಗಾಗದಿದ್ದಲ್ಲಿ ಅಂಥ ಹೆಂಗಸರು ಲೈಂಗಿಕ ಅಸಂತೃಪ್ತಿಯಿಂದ ಬಳಲುವುದು ಸಹಜ. ಇದರಿಂದ ಮಿಲನ ಮಹೋತ್ಸವ ಎಂಬುದು ಇವರ ಪಾಲಿಗೆ ಸುಖ ನೀಡುವ ಕ್ರಿಯೆಯಾಗದೆ ಒಂದು ರೀತಿಯ ಹಿಂಸೆ ಅನಿಸಲಾರಂಭಿಸುತ್ತದೆ. ಆದರೆ ಈ ಲೈಂಗಿಕ ಅಸಂತೃಪ್ತಿಯ ಹಿಂದಿನ ನಿಜವಾದ ಕಾರಣ ತಿಳಿಯದೆ ಹೋದಲ್ಲಿ ಸಂಬಂಧದಲ್ಲಿ ಕಹಿ ಮೂಡಲಾರಂಭಿಸುತ್ತದೆ. ದಿನಗಳೆದಂತೆ ದಾಂಪತ್ಯ ಜೀವನನದಲ್ಲಿ ಜಿಗುಪ್ಸೆ ಮೂಡಿ ದಾಂಪತ್ಯ ಮುರಿಯುವ ಹಂತಕ್ಕೂ ಬರಬಹುದು.

author img

By

Published : Aug 10, 2020, 5:56 PM IST

Sexual Urge in Female
Sexual Urge in Female

ಜೀವನದಲ್ಲಿ ಸದಾ ಆನಂದದಾಯಕವಾಗಿರುವುದು ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಅವಲಂಬಿಸಿದೆ. ಒಳ್ಳೆಯ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯ ನೆಮ್ಮದಿಯ ಜೀವನಕ್ಕೆ ಅತಿ ಮುಖ್ಯ. ಆದರೆ ಈ ಎಲ್ಲವೂ ಕೊನೆಗೆ ಮಾನವನ ಲೈಂಗಿಕ ಸಂತೃಪ್ತಿಯ ಮೇಲೆ ಆಧರಿತವಾಗಿವೆ ಎಂಬುದು ಸತ್ಯ.

ದಾಂಪತ್ಯ ಜೀವನದಲ್ಲಿನ ನೆಮ್ಮದಿಗೆ ಲೈಂಗಿಕ ಸಂತೃಪ್ತಿ ಇರಲೇಬೇಕು. ಹೆಣ್ಣು ಮತ್ತು ಗಂಡು ಇಬ್ಬರೂ ಪರಸ್ಪರ ಲೈಂಗಿಕವಾಗಿ ತೃಪ್ತರಾಗಿದ್ದಲ್ಲಿ ಮಾತ್ರ ಅಲ್ಲೊಂದು ಆರೋಗ್ಯಕರ ಸಂಬಂಧ ನೆಲೆಸಿರುತ್ತದೆ. ಕೆಲ ಹೆಂಗಸರು ಈ ವಿಷಯದಲ್ಲಿ ಕೆಟ್ಟ ವಿಚಾರಗಳನ್ನು ಪೋಷಿಸಿಕೊಂಡು ತನ್ನ ಗಂಡಸಿನ ಬಗ್ಗೆ ವಿಪರೀತ ಪೊಸೆಸಿವ್ ಆಗಿ, ಅನುಮಾನ ಪಡುತ್ತ ಲೈಂಗಿಕ ಅಸಂತೋಷವನ್ನು ಅನುಭವಿಸುತ್ತಾರೆ. ಈ ಮಾತು ಎಲ್ಲ ಲೈಂಗಿಕ ಅಸಂತೃಪ್ತ ಹೆಂಗಸರಿಗೆ ಅನ್ವಯಿಸುವುದಿಲ್ಲವಾದರೂ, ಹೆಣ್ಣು ಮಕ್ಕಳಲ್ಲಿನ ಲೈಂಗಿಕ ಅಸಂತೃಪ್ತಿಗೆ ಇದೇ ಪ್ರಮುಖ ಕಾರಣವಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ತಾನು ಆರೋಗ್ಯ ಹಾಗೂ ನೆಮ್ಮದಿಯಿಂದಿದ್ದು ಆರೋಗ್ಯಕರ ಸಮಾಜಕ್ಕೆ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಿರುವಾಗ ಯಾರದೇ ಜೀವನದಲ್ಲಿ ಲೈಂಗಿಕ ಅಸಂತೃಪ್ತಿ ಹೊಗೆಯಾಡುತ್ತಿದ್ದರೆ ಅದನ್ನು ಮುಚ್ಚಿಟ್ಟುಕೊಳ್ಳದೆ ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕ.

ಮಿಲನ ಮಹೋತ್ಸವ ಸಮಯದಲ್ಲಿ ಹೆಂಗಸು ತೀವ್ರ ಭಾವೋನ್ಮಾದಕ್ಕೆ ಒಳಗಾಗದಿದ್ದಲ್ಲಿ ಅಂಥ ಹೆಂಗಸರು ಲೈಂಗಿಕ ಅಸಂತೃಪ್ತಿಯಿಂದ ಬಳಲುವುದು ಸಹಜ. ಇದರಿಂದ ಮಿಲನ ಮಹೋತ್ಸವ ಎಂಬುದು ಇವರ ಪಾಲಿಗೆ ಸುಖ ನೀಡುವ ಕ್ರಿಯೆಯಾಗದೆ ಒಂದು ರೀತಿಯ ಹಿಂಸೆ ಅನಿಸಲಾರಂಭಿಸುತ್ತದೆ. ಆದರೆ ಈ ಲೈಂಗಿಕ ಅಸಂತೃಪ್ತಿಯ ಹಿಂದಿನ ನಿಜವಾದ ಕಾರಣ ತಿಳಿಯದೆ ಹೋದಲ್ಲಿ ಸಂಬಂಧದಲ್ಲಿ ಕಹಿ ಮೂಡಲಾರಂಭಿಸುತ್ತದೆ. ದಿನಗಳೆದಂತೆ ದಾಂಪತ್ಯ ಜೀವನದಲ್ಲಿ ಜಿಗುಪ್ಸೆ ಮೂಡಿ ದಾಂಪತ್ಯ ಮುರಿಯುವ ಹಂತಕ್ಕೂ ಬರಬಹುದು.

ಲೈಂಗಿಕ ಪ್ರೌಢಾವಸ್ಥೆಯ ವಯಸ್ಸಿಗೆ ಬರುವ ಸಮಯದಲ್ಲಿ ಹೆಣ್ಣು ಮಕ್ಕಳು ಹೊಂದಿರುವ ಭಾವನಾತ್ಮಕ ಹಾಗೂ ಮಾನಸಿಕ ಆಲೋಚನೆಗಳ ಏರುಪೇರು ಸಹ ಭವಿಷ್ಯದ ಜೀವನದಲ್ಲಿನ ಲೈಂಗಿಕ ಅಸಮರ್ಥತೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಮಿಲನ ಮಹೋತ್ಸವದ ಕುರಿತಾದ ಭ್ರಮೆ, ತಪ್ಪು ಮಾಹಿತಿ, ಅದರ ಬಗ್ಗೆ ಭಯ ಹಾಗೂ ಸಂಗಾತಿಯನ್ನು ತಾನು ತೃಪ್ತಿ ಪಡಿಸಲಾರೆ ಎಂಬ ಹೆದರಿಕೆ ಮುಂತಾದ ಕಾರಣಗಳಿಂದ ಹೆಂಗಸು ತನ್ನನ್ನು ತಾನು ಲೈಂಗಿಕ ಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದಿರಬಹುದು. ಇನ್ನು ಲೈಂಗಿಕ ಭಾವೋತ್ಕಟತೆ ತಲುಪಲು ಹೆಣ್ಣಿಗೆ ಗಂಡಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಸಂಗಾತಿಗಳಿಬ್ಬರ ಮಧ್ಯೆ ಸೂಕ್ತ ಹೊಂದಾಣಿಕೆ ಇಲ್ಲದಿದ್ದರೆ ಲೈಂಗಿಕ ಜೀವನ ನರಕವಾಗಲಾರಂಭಿಸುತ್ತದೆ.

ಕೆಲ ಹೆಂಗಸರಲ್ಲಿ ಹುಟ್ಟಿನಿಂದಲೇ ಲೈಂಗಿಕ ಆಸಕ್ತಿ ಕಡಿಮೆ ಇರುತ್ತದೆ. ಇವರು ಅಷ್ಟು ಸುಲಭವಾಗಿ ಸಂಗಾತಿಯೊಂದಿಗೆ ಮಿಲನ ಮಹೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಸಮರ್ಥರಾಗಿರುತ್ತಾರೆ. ಆದರೆ ಇಂಥ ಹೆಂಗಸರು ತಮ್ಮ ಗಂಡನೊಂದಿಗೆ ಲೈಂಗಿಕ ಭಾವೋತ್ಕಟತೆ ಸಾಧಿಸಲು ಸಾಧ್ಯವಾಗದಿದ್ದರೂ ತಾವು ಮೆಚ್ಚಿದ ಮತ್ತೊಬ್ಬನೊಂದಿಗೆ ಅದನ್ನು ಸಾಧಿಸಬಲ್ಲರು ಎಂಬುದು ಸಹ ಗಮನಾರ್ಹ. ಇಂಥ ಪ್ರಕರಣಗಳು ವಿರಳವಾದರೂ ಕೆಲ ಬಾರಿ ಇವು ಕಂಡು ಬರುತ್ತವೆ.

ಏನೇ ಆದರೂ ದಾಂಪತ್ಯದಲ್ಲಿ ಲೈಂಗಿಕ ಸಮಸ್ಯೆಗಳು ಎದುರಾದಾಗ ತಕ್ಷಣ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಆ ಮೂಲಕ ಸುಖ ಹಾಗೂ ನೆಮ್ಮದಿಯ ದಾಂಪತ್ಯ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು.

ಲೈಂಗಿಕ ಸಮಸ್ಯೆಗಳಿಗೆ ಕುರಿತಾದ ಸಲಹೆಗಳಿಗೆ ತಜ್ಞೆ ರಶ್ಮಿ ವಾಧ್ವಾ ಅವರನ್ನು wadhwa_rashmi01@yahoo.com ಇಮೇಲ್​ ವಿಳಾಸದ ಮೂಲಕ ಸಂಪರ್ಕಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.