ಹೈದರಾಬಾದ್: ಪ್ರಣಯವನ್ನು ನಾವು ರಹಸ್ಯವಾಗಿ ನೋಡಿ ಮರೆಮಾಚುತ್ತಿದ್ದೇವೆ. ಚಿಕ್ಕಂದಿನಿಂದಲೂ ನಾವು ಶೃಂಗಾರದ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದೇವೆ. ಹರೆಯದಲ್ಲಿ ನಮಗೆ ಸೆಕ್ಸ್ ಬಗ್ಗೆ ಸಿಗಬೇಕಾದ ಮಾಹಿತಿ ಸಿಗುತ್ತಿಲ್ಲ. ಮದುವೆ ಬಳಿಕ ಕಣ್ಣಾಮುಚ್ಚಾಲೆ ಆಡುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲೂ ಇದೇ ರೀತಿಯ ಆಸಕ್ತಿಯನ್ನು ತೋರಿಸಿ ಪ್ರತಿ ಹಂತದಲ್ಲೂ ನಮ್ಮ ಪ್ರವೃತ್ತಿ ಅವೈಜ್ಞಾನಿಕವಾಗಿಯೇ ಮುಂದುವರೆದಿದೆ ಎಂದು ಲೈಂಗಿಕ ಮೆಡಿಸಿನ್ ಸ್ಪೆಷಲಿಸ್ಟ್ ಸುಧಾಕರ್ ಕೃಷ್ಣಮೂರ್ತಿ ಹೇಳಿದ್ದಾರೆ.
ವೈಜ್ಞಾನಿಕ ತಿಳಿವಳಿಕೆಯೊಂದಿಗೆ ಇದಕ್ಕೆ ಸರಿಯಾದ ಉತ್ತರ ಎಂದರೆ ಒಳ್ಳೆ ಲೈಂಗಿಕ ಜೀವನವನ್ನು ಜವಾಬ್ದಾರಿಯುತವಾಗಿ ಆನಂದಿಸುವುದು. ಇದರ ಬಗ್ಗೆ ತಜ್ಞರು ಈಟಿವಿ ಭಾರತ್‌ದೊಂದಿಗೆ ಹಲವು ಮಾಹಿತಿಗಳನ್ನು ವಿವರಿಸಿದ್ದಾರೆ.
ನಮ್ಮಲ್ಲಿ ಹೆಚ್ಚಿನವರು ಮೂಳೆಗಳು ಮುರಿದಾಗ ಮಾತ್ರ ಅವರು ಮುರಿದ ಜಾಗದ ಬಗ್ಗೆ ಕಾಳಜಿ ವಹಿಸುತ್ತಾರೆ. ಪ್ರಣಯದ ವಿಚಾರದಲ್ಲಿ ಪರಿಸ್ಥಿತಿಯೇ ಬೇರೆ. ಅನೇಕ ಜನರು ನಿತ್ಯ ಹಲವು ಬಾರಿ ಅದರ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ತನ್ನ ಸಂಗಾತಿಯೊಂದಿಗೆ ತನ್ನ ದೈಹಿಕ ಸಂಬಂಧವು ಉತ್ತಮವಾಗಿದೆಯೇ? ಆಕೆಗೆ ತೃಪ್ತಿ ಆಗುತ್ತಿದೀಯಾ? ಅಥವಾ ಹಳಿ ತಪ್ಪಿದಿಯಾ ಎಂಬುದರ ಬಗ್ಗೆ ಆಲೋಚನೆ ಮಾಡುತ್ತಾರೆ.
ನಮ್ಮ ಜೀವನದಲ್ಲಿ ಲೈಂಗಿಕತೆಯ ಮಹತ್ವವು ಅಂತ್ಯವಿಲ್ಲ. ಆದರೆ, ದುರದೃಷ್ಟವಶಾತ್ ನಮ್ಮ ಸಮಾಜದಲ್ಲಿ ಲೈಂಗಿಕ ಆರೋಗ್ಯಕ್ಕೆ ನೀಡಬೇಕಾದ ಗೌರವವನ್ನು ನೀಡಲಾಗುತ್ತಿಲ್ಲ. ಹೀಗಾಗಿ ಅದು ಕೆಲವರಿಗೆ ಸರಿಯಾಗಿ ಸಿಗುತ್ತಿಲ್ಲ.
'ಸೆಕ್ಸ್‌ನಿಂದ ಹೆಚ್ಚಿನ ಆನಂದ ಸಿಗುತ್ತಿಲ್ಲ':
ನಮ್ಮ ಸಂಸ್ಕೃತಿಯಲ್ಲಿ ಲೈಂಗಿಕತೆಯ ವಿವಿಧ ಸಂಘರ್ಷದ ಕಲ್ಪನೆಗಳು ಆಳ್ವಿಕೆ ನಡೆಸುತ್ತವೆ. ಪ್ರತಿಯೊಬ್ಬರೂ ಲೈಂಗಿಕತೆಯ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಪ್ರತಿಯೊಬ್ಬರೂ ಲೈಂಗಿಕತೆಯ ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ, ರೊಮ್ಯಾನ್ಸ್ ಬಗ್ಗೆ ಜೋರಾಗಿ ಮಾತನಾಡಲು ಬಂದಾಗ ಎಲ್ಲರೂ ಛೀ ಛೀ ಎನ್ನುತ್ತಾರೆ. ಹೀಗೆ ಸಿಟ್ಟಾದವರು, ಮುಖ ಗಂಟಿಕ್ಕಿಕೊಂಡವರು, ಹೀಗೆ ವ್ಯತಿರಿಕ್ತ ಭಾವನೆಗಳಲ್ಲಿ ಸುಳಿದಾಡುತ್ತಿದ್ದವರು.
ಅವರು ಎಂದಿಗೂ ಲೈಂಗಿಕತೆಯಿಂದ ಹೆಚ್ಚಿನ ಆನಂದ ಪಡೆಯಲು ಸಾಧ್ಯವಿಲ್ಲ. ತಮ್ಮ ಸಂಗಾತಿಗೆ ಸಂತೃಪ್ತಿಯನ್ನು ನೀಡಲು ಸಾಧ್ಯವಿಲ್ಲ. ಪ್ರಣಯವನ್ನು ಪುರಾಣಗಳಿಂದ ಹೊರತರುವುದು ಮತ್ತು ಅದನ್ನು ವಿಜ್ಞಾನ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಹದಿಹರೆಯದಿಂದ ವೃದ್ಧಾಪ್ಯದವರೆಗೆ ಪ್ರತಿಯೊಂದು ಹಂತದಲ್ಲೂ ಆರೋಗ್ಯಕರವಾಗಿ ಮತ್ತು ಜವಾಬ್ದಾರಿಯುತವಾಗಿ ಅದನ್ನು ಪೋಷಿಸಬೇಕು. ಚಿಕ್ಕಂದಿನಿಂದಲೂ ಮಕ್ಕಳು ಮನೆಯಲ್ಲಿ ತಂದೆ - ತಾಯಿ ಪರಸ್ಪರ ಸ್ಪರ್ಶಿಸಿ ಅಪ್ಪಿಕೊಳ್ಳುವುದನ್ನು ಗಮನಿಸುತ್ತಾರೆ. ಇಂತಹ ಮಕ್ಕಳಲ್ಲಿ ವಾತ್ಸಲ್ಯದ ಭಾವನೆಗಳು ಸಹಜವಾಗಿ ಮೂಡುತ್ತವೆ.
ಮಕ್ಕಳಿಗೆ ಬೇಕಿರುವ ಮಾಹಿತಿ ಏನು?
ನಿಜವಾಗಿ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರಿಸದ ಪೋಷಕರ ನಡುವೆ ಬೆಳೆಯುವ ಮಕ್ಕಳು ಅವರು ಬೆಳೆದಂತೆ ಜಡರಾಗುತ್ತಾರೆ. ಸಂಸಾರದಲ್ಲಿ ಗಂಡು - ಹೆಣ್ಣಿನ ನಡುವಿನ ಸಂಬಂಧಗಳು ಎಷ್ಟು ಅನ್ಯೋನ್ಯ ಮತ್ತು ಸಂತೋಷದಿಂದ ಇರುತ್ತವೆ ಎಂದು ತಿಳಿಯಬೇಕು. ಇದರ ಬಗ್ಗೆ ತಿಳಿಯದೇ ಬೆಳೆಯುವ ಮಕ್ಕಳು ಹೊರಜಗತ್ತನ್ನು ಪ್ರವೇಶಿಸಿದಾಗ ಅವರಿಗೆ ಸರಿಯಾದ ಆಲೋಚನಾ ಕ್ರಮದ ಕೊರತೆ ಮತ್ತು ಏನು ಮಾಡಬೇಕೆಂದು ತಿಳಿಯದೇ ಅಪಾಯಕ್ಕೆ ಸಿಲುಕುತ್ತಾರೆ.
ಪುಸ್ತಕಗಳನ್ನು ಓದುವುದು ಮತ್ತು ಅಸಂಬದ್ಧತೆಯಿಂದ ಕಲಿಯುವುದು, ಚಲನಚಿತ್ರಗಳನ್ನು ನೋಡುವುದು ಮತ್ತು ಅದೇ ವಿಷಯವನ್ನು ಯೋಚಿಸುವುದು ಅವರನ್ನು ಎಲ್ಲ ರೀತಿಯ ಸಾಹಸಗಳಿಗೆ ಪ್ರೇರೇಪಿಸುತ್ತದೆ. ಅಂಬೆಗಾಲಿಡುವ ಮಕ್ಕಳು ತಮ್ಮ ದೇಹದ ಇತರ ಭಾಗಗಳನ್ನು ಸ್ಪರ್ಶಿಸುವಂತೆಯೇ ಅವರ ಜನನಾಂಗಗಳನ್ನು ಸ್ಪರ್ಶಿಸುವುದು ಸಹಜ. ಅದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನು ನೋಡುತ್ತಲೇ ಮನೆಯಲ್ಲಿ ದೊಡ್ಡವರು ಛಿ.. ಛಿ.. ಎಂದು ಕೈ ತೆಗೆಯುತ್ತಾರೆ.
ಶೈಶವಾವಸ್ಥೆಯಲ್ಲಿ ಎದುರಾಗುವ ಇಂತಹ ಅಸಾಮಾನ್ಯ ಅನುಭವಗಳ ಪ್ರಭಾವ- ಮಕ್ಕಳ ಮೇಲೆ ಬಲವಾಗಿರುತ್ತದೆ. ಇದು ಅವರ ಲೈಂಗಿಕ ದೃಷ್ಟಿಕೋನ ಮತ್ತು ಆಲೋಚನೆಗಳನ್ನು ಮೊದಲೇ ಪರಿಣಾಮ ಬೀರುತ್ತದೆ ಎಂದು ಗಮನಿಸಬೇಕು. ಆದ್ದರಿಂದಲೇ ದೊಡ್ಡವರು ಇಂತಹ ಸಮಸ್ಯೆಗಳ ಬಗ್ಗೆ ಜಾಗೃತರಾಗಿ ತಮ್ಮ ಮಕ್ಕಳನ್ನು ಉತ್ತಮ 'ನಾಳೆ'ಗಾಗಿ ಸಿದ್ಧಗೊಳಿಸುವುದು ಬಹಳ ಮುಖ್ಯವಾಗಿದೆ.