ಸಂತಾನ ಸಮಸ್ಯೆ ಸರ್ವೇಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂತಾನ ಸಂಬಂಧಿ ಸಮಸ್ಯೆಗಳನ್ನು ಪುರುಷರು ಎದುರಿಸುತ್ತಿದ್ದರೆ, ಅವರಿಗೆ ಮುಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯಂತಹ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ವೀಡಿಷ್ ಸಂಶೋಧಕರು ನಡೆಸಿದ ಅಧ್ಯಯನವೊಂದು ಈ ಕುರಿತಾಗಿ ಸಂಶೋಧನೆ ನಡೆಸಿದೆ. ಕಡಿಮೆ ವೀರ್ಯಾಣು ಹೊಂದಿರುವ ಪುರುಷರನ್ನು ಇತರರೊಂದಿಗೆ ಹೋಲಿಸಿದಾಗ ಕೆಲವು ಹೊಸ ವಿಷಯಗಳು ಬೆಳಕಿಗೆ ಬಂದಿವೆ.
ಸಂತಾನೋತ್ಪತ್ತಿ ಸಮಸ್ಯೆ ಎದುರಿಸುತ್ತಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಲೈಂಗಿಕತೆಗೆ ಅವಶ್ಯಕವಾಗಿರುವ ಶೇ.33ರಷ್ಟು ವ್ಯಕ್ತಿಗಳಲ್ಲಿ ಸಾಮಾನ್ಯ ವ್ಯಕ್ತಿಗಳಿಗಿಂತ ಏಳು ಪಟ್ಟು ಟೆಸ್ಟೋಸ್ಟಿರಾನ್ ಹಾರ್ಮೋನ್‌ಗಳ ಪ್ರಮಾಣ ಕಡಿಮೆ ಇರುತ್ತದೆ ಎಂದು ಕಂಡು ಬಂದಿದೆ. ಇಂತವರಲ್ಲಿ ಮೂಳೆಗಳಲ್ಲಿನ ಸಾಂದ್ರತೆಯೂ ಕಡಿಮೆ ಇರುತ್ತದೆ ಎಂಬುದು ಮತ್ತೊಂದು ವಿಚಾರ.
ಇದು ಮೂಳೆಗಳಲ್ಲಿನ ಸಾಂದ್ರತೆ ಕಡಿಮೆ ಇರುವ ಕಾರಣದಿಂದ ಮೂಳೆ ಮುರಿತ ಸಾಧ್ಯತೆಯೂ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲ, ಗ್ಲೂಕೋಸ್ ಮಟ್ಟವನ್ನು ಸೂಚಿಸುವ HbA1c ಕೂಡ ಅಧಿಕವಾಗಿರುತ್ತದೆ. ಇದು ಮಧುಮೇಹಕ್ಕೂ ಕಾರಣವಾಗುತ್ತದೆ.
ಅದೇ ಕಾರಣದಿಂದ ಸಂತಾನ ಚಿಕಿತ್ಸೆಗೆ ಒಳಗಾಗುವ ಎಲ್ಲಾ ಪುರುಷರು ಒಮ್ಮೆ ಲೈಂಗಿಕ-ಹಾರ್ಮೋನ್ ಪರೀಕ್ಷೆಗೂ ಒಳಗಾಗಬೇಕೆಂದು ತಜ್ಞರು ಸೂಚಿಸುತ್ತಾರೆ. ಒಮ್ಮೊಮ್ಮೆ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದೇ ಇರುವುದೂ ಸಂತಾನ ಸಮಸ್ಯೆಗೆ ಕಾರಣವಾಗಬಹುದು. ಇಂಥವರು ಲೈಂಗಿಕತೆಯ ಕುರಿತು ಆಸಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯಂತ ಮುಖ್ಯ.
ಲೈಂಗಿಕತೆಯಲ್ಲಿ ಆಸಕ್ತಿ ಹೊಂದುವುದಕ್ಕಾಗಿ ಕೆಲವರು ಬಾದಾಮಿ, ನುಗ್ಗೆಕಾಯಿ ಮತ್ತಿತರ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ. ಆದರೆ, ಅವುಗಳು ಹೇಗೆ ಪರಿಣಾಮ ಬೀರುತ್ತವೆ ಎಂದು ವೈಜ್ಞಾನಿಕವಾಗಿ ಇನ್ನೂ ಸಾಬೀತಾಗಿಲ್ಲ. ಆದರೆ, ಮೆಂತ್ಯ ಅಥವಾ ಮೆಂತೆ ಕಾಳುಗಳು ವ್ಯಕ್ತಿಯಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತವೆ.
ಮೆಂತೆ ಕಾಳುಗಳನ್ನು ನೆನೆಸಿ ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಶೇ.82ರಷ್ಟು ಹೆಚ್ಚಾಗುತ್ತದೆ ಎಂದು ವರದಿಗಳು ತಿಳಿಸಿವೆ. ಟೆಸ್ಟೋಸ್ಟಿರಾನ್ನಂತಹ ಲೈಂಗಿಕ ಹಾರ್ಮೋನುಗಳ ಉತ್ಪಾದನೆಯನ್ನು ಮೆಂತೆ ಉತ್ತೇಜಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೋವಿಡ್ ಸಾಂಕ್ರಾಮಿಕ ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆಯೇ?