ETV Bharat / lifestyle

ವಿಶ್ವ ಮಾನಸಿಕ ಆರೋಗ್ಯ ದಿನ: ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ - ಮಾನಸಿಕ ಆರೋಗ್ಯ

ಸಮಾಜದಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ, ಲಿಂಗ ತಾರತಮ್ಯ, ವಯೋಬೇಧವಿಲ್ಲದೆ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ದೊರೆಯುವುದು ಇಂದಿನ ಆದ್ಯತೆ.

World Mental Health Day: Living In A Pandemic Stricken World
ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ
author img

By

Published : Oct 10, 2021, 9:11 AM IST

Updated : Oct 10, 2021, 2:00 PM IST

ಪ್ರತಿಯೊಂದರಲ್ಲಿಯೂ ಸಾಧನೆ ತೋರುವತ್ತ ದಾಪುಗಾಲು ಇಡುವ ಮಾನವ ಒಮ್ಮೊಮ್ಮೆ ಎಡವಿ ಬೀಳುವ ಸಂದರ್ಭ ಬರುತ್ತದೆ. ಕೇವಲ ಸಂಪತ್ತು ಇದ್ದರೆ ಸಾಲದು, ಅದರ ಜೊತೆಯಲ್ಲಿಯೇ ಆರೋಗ್ಯವೂ ಇದ್ದರೆ ಅದಕ್ಕಿಂತ ಬೇರೆ ಭಾಗ್ಯವಿಲ್ಲ. ಆದ್ದರಿಂದಲೇ ಹಿರಿಯರು ಹೇಳುವುದು ಆರೋಗ್ಯವೇ ಭಾಗ್ಯ ಎಂದು.

ಆರೋಗ್ಯ ಸ್ವಾಸ್ಯ್ಥತೆ ಈ ಕ್ಷಣದ ಆದ್ಯತೆಯಾಗಿದೆ. ಇಂದಿನ ದಿನಗಳಲ್ಲಿ ವೈಯಕ್ತಿಕ ಹಂತದಿಂದ ಸಾರ್ವಜನಿಕ ಹಂತಕ್ಕೆ ತಲುಪಿದ್ದು ಆರೋಗ್ಯ. ಈ ಕ್ಷಣದ ಅಗತ್ಯಗಳಲ್ಲಿ ಪ್ರಮುಖವಾದುದು. ಇಂದಿನ ವೈಜ್ಞಾನಿಕ ಯುಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಮಜಲುಗಳನ್ನು ದಾಟಿದ್ದರೂ ನಿತ್ಯ ಎದುರಿಸುವ ಸವಾಲುಗಳು ಸುಲಭವಾಗಿ ಪರಿಹಾರವಾಗುವಂತದ್ದೂ ಅಲ್ಲ. ಇಂದು ಎದುರಿಸುತ್ತಿರುವ ಕೋವಿಡ್‌ನ ಜಾಗತಿಕ ಸಮಸ್ಯೆ ಜ್ವಲಂತ ನಿದರ್ಶನ.

ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ
ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ

ಅಭಿವೃದ್ದಿಹೊಂದಿದ ಹಾಗೂ ಅಭಿವೃದ್ದಿ ಹೊಂದುತ್ತಿರುವ ದೇಶಗಳ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆ. ಇದು ಹಲವಾರು ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಪ್ರತೀವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಗುರುತಿಸಿದ್ದು, ಈ ವರ್ಷ “ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ”ಎಂಬ ಅಂಶವನ್ನು ಪರಿಗಣಿಸಿ ಆಚರಿಸಲು ನಿರ್ಧರಿಸಿದೆ. ಮಾನಸಿಕ ಆರೋಗ್ಯವನ್ನು ಒಂದು ದಿನದಲ್ಲಿ ಗಳಿಸುವಂಥದ್ದಲ್ಲ, ಹಂತಹಂತವಾಗಿ ನಮ್ಮಲ್ಲಿ ನಡೆಯುವ ಆಂತರಿಕ ಪ್ರಕ್ರಿಯೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರದ ಅಧಿಕಾರಿಗಳು, ನಾಗರೀಕ ಸಮಾಜ ಸೇವಾ ಸಂಸ್ಥೆಗಳಿಗೆ ಸಾರ್ವಜನಿಕರಲ್ಲಿ ಮಾನಸಿಕ ಸ್ವಾಸ್ತ್ಯವನ್ನು ಹೊಂದುವಲ್ಲಿ ಅನುಸರಿಸಿದ ವಿಧಾನಗಳನ್ನು ವಿವರಿಸಲು ಅವಕಾಶ ನೀಡಿದೆ.

ಮಾನಸಿಕ ಆರೋಗ್ಯ

ಪ್ರತಿಯೊಬ್ಬ ವ್ಯಕ್ತಿಗೂ ಕ್ರಿಯೆಗೆ ಪ್ರತಿಕ್ರಿಯೆ ನೀಡುವಲ್ಲಿ ಆತನ ದೈಹಿಕ ಆರೋಗ್ಯದಷ್ಟೇ ಮುಖ್ಯ ಆತನ ಮಾನಸಿಕ ಆರೋಗ್ಯವು. ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸುವಂತೆ ಮಾನಸಿಕ ಆರೋಗ್ಯ ಎಂಬುದು ವ್ಯಕ್ತಿಯು ತನ್ನ ನಿತ್ಯ ಜೀವನದ ಒತ್ತಡಗಳನ್ನು ನಿಭಾಯಿಸುವಲ್ಲಿ ತನ್ನ ಸಾಮರ್ಥ್ಯದ ಅರಿವು ಹಾಗೂ ಸಾಮಾಜಿಕ ಜೀವನದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸಮಾಜದ ಅಭಿವೃದ್ದಿಗೆ ಪೂರಕವಾದ ಕೊಡುಗೆ ನೀಡುವುದು.

ಸಾಮಾಜಿಕ ಸ್ವಾಸ್ಥ್ಯ ಮತ್ತು ಕೋವಿಡ್ ಪ್ರಭಾವ

ಜಾಗತಿಕ ಸಮಸ್ಯೆಯಾದ ಕೋವಿಡ್ ಇಂದು ಪ್ರತಿಯೊಬ್ಬರ ಮಾನಸಿಕ ಸ್ವಾಸ್ಥ್ಯವನ್ನು ಹದಗೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ನೇರ ಪ್ರಭಾವ ಕಂಡುಬಂದಿದ್ದು ಆರೋಗ್ಯ ಕಾರ್ಯಕರ್ತರು, ಮುಖ್ಯವಾಹಿನಿಯಲ್ಲಿ ಶ್ರಮಿಸುವ ಮುಂಚೂಣಿ ಸೇವಾಕಾರ್ಯಕರ್ತರು, ವಿದ್ಯಾರ್ಥಿಗಳು, ವಯೋವೃದ್ದರು ಹಾಗೂ ಒಂಟಿಯಾಗಿ ವಾಸಿಸುವವರಷ್ಟೇ ಮುಖ್ಯವಾದವರು ಹಾಗು ಈ ಮೊದಲೇ ಮಾನಸಿಕ ಆರೋಗ್ಯ ಸಂಬಂಧಿ ಖಾಯಿಲೆಗಳಿಂದ ಬಳಲುವವರ ಮೇಲೆ. ಕೋವಿಡ್ ತೀವ್ರತೆ ಹೆಚ್ಚಾದಂತೆ, ನರಸಂಬಂಧಿ, ಮಾನಸಿಕ ಅಸ್ವಸ್ಥತೆ ಹಾಗೂ ಇದಕ್ಕೆ ಸಂಬಂಧಿಸಿದ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಸೇವೆಯು ಕೆಲವೊಮ್ಮೆ ನಿರೀಕ್ಷಿತ ಮಟ್ಟದಲ್ಲಿ ಸಫಲತೆ ಸಾದಿಸುವಲ್ಲಿ ವಿಫಲತೆ ಹೊಂದಿತ್ತು.

ಮಾನಸಿಕ ಆರೋಗ್ಯ ಪ್ರತಿಯೊಬ್ಬರ ಆದ್ಯತೆ, ಎಲ್ಲರೂ ಬದುಕಿನಲ್ಲಿ ಒಂದಲ್ಲಾ ಒಂದು ಹಂತದಲ್ಲಿ ಭಯ, ಒತ್ತಡ, ಉದ್ವಿಗ್ನತೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಇಂತಹ ಸಣ್ಣಪುಟ್ಟ ಘಟನೆಗಳು, ಒತ್ತಡಗಳು ಮಾನಸಿಕವಾಗಿ ಜರ್ಜರಿಯುವಂತೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ

• ತಮ್ಮ ಸಾಮರ್ಥ್ಯದ ಬಗ್ಗೆ ದೃಢತೆ ಹೊಂದಬೇಕು.

• ಸಂದರ್ಭಕ್ಕೆ ಸರಿಯಾದ ರೀತಿಯಲ್ಲಿ ಸಮಚಿತ್ತ ಭಾವದಿಂದ ಪ್ರತಿಕ್ರಿಯಿಸುವುದು.

• ತಮ್ಮ ಕುಟುಂಬ, ಸ್ನೇಹಿತರು, ಕೆಲಸ ನಿರ್ವಹಣಾ ಸ್ಥಳದಲ್ಲಿ ಬೌತಿಕ ಹಾಗೂ ಮಾನಸಿಕವಾಗಿ ತಮ್ಮ ಅಸ್ತಿತ್ವವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಹಾಗೂ ಪ್ರತಿಯೊಬ್ಬರೊಂದಿಗೆ ಪೂರ್ಣ ಪ್ರಮಾಣದ ಪ್ರಾಮಾಣಿಕ ಸ್ಪಂದನೆ ಮಾಡುವುದು ಅಗತ್ಯ.

  • ಮಾನಸಿಕ ಸ್ವಾಸ್ಥ್ಯದ ಅಂಕಿಅಂಶಗಳ ಪ್ರಕಾರ, ಸುಮಾರ 1 ಬಿಲಿಯನ್ ಮಂದಿ ಒಂದೆಲ್ಲಾ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.
  • ಮಾನಸಿಕ ಖಿನ್ನತೆ ವಿಶ್ವದಾದ್ಯಂತ ಸಮಸ್ಯೆಗಳಲ್ಲಿ ಒಂದಾಗಿದ್ದು, ರೋಗಗಳ ಒಟ್ಟಾರೆ ಸಮಸ್ಯೆಗೆ ಕಾರಣವಾಗಿದ್ದು, ಜಾಗತಿಕವಾಗಿ ವಯಸ್ಕರಲ್ಲಿ ಶೇ 5 ರಷ್ಟು ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
  • ಜಾಗತಿಕವಾಗಿ 10-19 ರ ವಯೋಮಾನದ 7 ಜನರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು,ಅರ್ದದಷ್ಟು ಮಂದಿಗೆ 14 ವರ್ಷದಲ್ಲಿ ಮಾನಸಿಕ ಸಮಸ್ಯೆ ಕಂಡು ಬಂದರೂ ಗಣನೆಗೆ ಬಾರದೇ ಚಿಕಿತ್ಸೆ ದೊರೆಯದೇ ಇರುವವರು.
  • ಸ್ಕಿಜೋಪ್ರೇನಿಯಾದಂತಹ ತೀವ್ರತರವಾದ ಮಾನಸಿಕ ರೋಗಗಳಿಂದ ಬಳಲುವ ರೋಗಿಗಳು ಸಾಮಾನ್ಯ ಜನರಿಗಿಂತ 10-20 ವರ್ಷ ಮೊದಲು ಮರಣಹೊಂದುತ್ತಾರೆ.
  • ಶೇ 100ರಲ್ಲಿ ಒಬ್ಬರು ಆತ್ಮಹತ್ಯೆಯಿಂದ ಮರಣ ಹೊಂದುವುದು ಅಲ್ಲದೆ 15-29 ರ ವಯೋಮಾನದವರ ಸಾವಿನ ಪ್ರಮಾಣ ಹೆಚ್ಚಿಸುವಲ್ಲಿ ನಾಲ್ಕನೇ ಪ್ರಮುಖ ಕಾರಣವಾಗಿ ಆತ್ಮಹತ್ಯೆಯು ಪರಿಗಣಿಸಲ್ಪಟ್ಟಿದೆ.

ಜಾಗತಿಕವಾಗಿ ಮಾನಸಿಕ ಆರೋಗ್ಯದ ಕಾಳಜಿ:

  • ಮಾನಸಿಕ ಸಮಸ್ಯೆ ಸಾರ್ವತ್ರಿಕವಾಗಿದ್ದರೂ,ಮಾನಸಿಕ ಆರೋಗ್ಯ ಸೇವೆಗಳು ಮತ್ತು ಪೂರೈಕೆಯ ನಡುವಿನ ಅಂತರವು ಕಡಿಮೆಯಾಗಿಲ್ಲ.
  • ಕೆಲವೇ ಕೆಲವು ಮಂದಿಗೆ ಮಾತ್ರ ಉತ್ತಮ ಗುಣಮಟ್ಟದ ಮಾನಸಿಕ ಆರೋಗ್ಯದ ಸೇವೆ ದೊರೆಯುವುದು
  • ಹಲವಾರು ವರ್ಷಗಳಿಂದ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ,ಇದನ್ನು ತಡೆಗಟ್ಟುವಲ್ಲಿ ಹಾಗೂ ಅರೈಕೆ ಮಾಡುವಲ್ಲಿ ಹೂಡಿಕೆ ಮಾಡದೇ ಇರುವುದರ ಪರಿಣಾಮವಾಗಿ ಮಾನಸಿಕ ಆರೋಗ್ಯ ರಕ್ಷಣೆಯ ಅಂತರವು ಕಡಿಮೆಯಾಗದೇ ಇರುವುದಕ್ಕೆ ಕಾರಣವಾಗಿದೆ.
  • ಸಮಾಜದಲ್ಲಿ ಮಾನಸಿಕವಾಗಿ ಅನಾರೋಗ್ಯದಿಂದ ಕೂಡಿರುವವರ ಬಗ್ಗೆ ಕಳಂಕ ,ತಾರತಮ್ಯ ಭಾವನೆಯು ವ್ಯಾಪಕವಾಗಿ ಹರಡಿರುವುದನ್ನು ಗಮನಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನು ತಿಳಿಸುತ್ತದೆ

ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯ ಹರಡುವಿಕೆ

  • ಮಾನಸಿಕ ಅಸ್ವಸ್ಥತೆಯ ಪ್ರಮಾಣ ನಗರದ ಮೆಟ್ರೋ ವಾಸಿಗಳಲ್ಲಿ ಅಧಿಕವಾಗಿದೆ.
  • ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳಲ್ಲಿ ಒಂದು ಅಥವಾ ಹೆಚ್ಚಿನ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ಗುರುತಿಸಲಾಗಿದೆ.
  • ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಸಾಮಾಜಿಕ. ಕೌಟುಂಬಿಕ ಹಾಗೂ ಕಾರ್ಯಕ್ಷೇತ್ರದಲ್ಲಿ ವೈಫಲ್ಯವನ್ನು ಹೊಂದಿದ್ದಾರೆ.

ಭಾರತದಲ್ಲಿ ಚಿಕಿತ್ಸೆಯ ಅಂತರ, ಭಾರತದಲ್ಲಿ 150 ಮಿಲಿಯನ್ ಜನರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

• ಭಾರತದಲ್ಲಿ ಶೇ 70 ರಿಂದ 92 ರಷ್ಟು ಮಾನಸಿಕ ಚಿಕಿತ್ಸೆಯ ಅಂತರವನ್ನು ಗುರುತಿಸಲಾಗಿದೆ. ಸಾಮಾನ್ಯ ಮಾನಸಿಕ ಅಸ್ವಸ್ಥತೆ- 85.0%. ತೀವ್ರ ಮಾನಸಿಕ ಅಸ್ವಸ್ಥತೆ- 73.6%, ಮನೋರೋಗ 75.5%, ಬೈಪೋಲಾರ್ -70.4%, ಮಾದಕ ದ್ರವ್ಯ- 86.3% ತಂಬಾಕು ಬಳಕೆ-91.8%

• ರೋಗಲಕ್ಷಣದ ಆರಂಭದ ಸಮಯದಿಂದ ಖಿನ್ನತೆಗೆ 2.5 ತಿಂಗಳವರೆಗಾದರೆ 12 ತಿಂಗಳವರೆಗೆ ಅಪಸ್ಮಾರದಂತಹ ಖಾಯಿಲೆಗಳ ಗುಣ ಮುಖವಾಗುವ ಸಮಯ ಬೇಕಾಗುತ್ತದೆ, ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರಿ ಚಿಕಿತ್ಸೆಯನ್ನು ಪಡೆಯಲಾಗುತ್ತದೆ.

• ಚಿಕಿತ್ಸಾ ವೆಚ್ಚದಲ್ಲಿ ಆರಂಭಿಕ ಹಂತದಿಂದ ಗುಣಮುಖರಾಗುವವರೆಗೆ ವ್ಯತ್ಯಾಸಗಳು ಕಂಡು ಬರುತ್ತದೆ. ಮಾದಕ ವಸ್ತು ಸೇವನೆ- 2250, ಸ್ಕಿಜೋಪ್ರೇನಿಯಾ ಮತ್ತು ಇತರೆ ಮಾನಸಿಕ ಸಮಸ್ಯೆ1000. ಖಿನ್ನತೆ 1500, ನರ ದೌರ್ಬಲ್ಯ1500, ಅಪಸ್ಮಾರ1500

ಮಾನಸಿಕ ಆರೋಗ್ಯ ಕಾಯ್ದೆ 2017 ರ ಪ್ರಮುಖ ಅಂಶಗಳು:

MHCA-2017 ರ 5 ನೇ ಅಧ್ಯಾಯದಲ್ಲಿ ತಿಳಿಸುವ ಹಾಗೆ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದಂತೆ ಮಾನವನ ಹಕ್ಕು ಈ ವಿಚಾರವು ಕಾನೂನಿನ ಹೃದಯ ಮತ್ತು ಆತ್ಮದಂತಿದೆ. ಇದರ ಮುನ್ನುಡಿಯಲ್ಲಿ ತಿಳಿಸುವಂತೆ ಮಾನಸಿಕ ರೋಗಿಗೆ ಮಾನಸಿಕ ಚಿಕಿತ್ಸೆ ಹಾಗೂ ಸೇವೆಯನ್ನು ಶುಲ್ಕರಹಿತವಾಗಿ ಒದಗಿಸುವುದು, ಆತನ ರಕ್ಷಣೆ, ಮಾನಸಿಕ ಚಿಕಿತ್ಸೆ ಹಾಗೂ ಸೇವೆ ಸಲ್ಲಿಸುವಲ್ಲಿ ಆತನ ಹಕ್ಕುಗಳನ್ನು ರಕ್ಷಿಸುವುದು, ಅಂತಹ ಸೇವೆಗಳನ್ನು ಪೂರೈಸುವಲ್ಲಿ ವಿಫಲವಾದಲ್ಲಿ ಪರಿಹಾರ ಕೋರಲು ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕವಾಗಿ ಬದುಕುವ ಹಕ್ಕು, ಗೌಪ್ಯತೆ ಕಾಪಾಡುವ, ಚಿಕಿತ್ಸೆಗೆ ಸಂಬಂಧಿಸಿದ ದಾಖಲೆ ಪಡೆಯುವ, ಅಮಾನವೀಯ ರೀತಿಯಲ್ಲಿ ಚಿಕಿತ್ಸೆ ನೀಡುವುದನ್ನು ತಡೆಗಟ್ಟುವ ಹಾಗೂ ಅಸಮಾನತೆ ಮತ್ತು ತಾರತಮ್ಯ ಮಾಡುವುದನ್ನು ತಡೆಗಟ್ಟುವ ಅವಕಾಶವನ್ನು ಕಾನೂನು ರೀತಿಯಲ್ಲಿ ರೂಪಿಸಲಾಗಿದೆ. ಈ ಪ್ರಕಾರ ಪ್ರತಿಯೊಬ್ಬರ ಮಾನಸಿಕ ಆರೋಗ್ಯ ಕಾಪಾಡುವುದು, ಬಡತನ ರೇಖೆಗಿಂತ ಕೆಳಗಿರುವವರು/ಬಡತನ ರೇಖೆ ಕಾರ್ಡ್ ಹೊಂದಿಲ್ಲದೇ ನಿರ್ಗತಿಕರಾದವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಪ್ರಸ್ತಾಪಿಸಲಾಗಿದೆ.

ತುರ್ತು ಸಂದರ್ಭಗಳಲ್ಲಿ ದೈಹಿಕ ನ್ಯೂನ್ಯತೆ ಹೊಂದಿದವರಿಗೆ ಆಂಬ್ಯುಲೆನ್ಸ್ ಬಳಸಲು ಅವಕಾಶ ನೀಡಿರುವ ಹಾಗೆಯೇ ಮಾನಸಿಕ ರೋಗಿಗಳಿಗೂ ಬಳಸಲು ಅವಕಾಶ ಕಲ್ಪಿಸಿದೆ. (ಅಧ್ಯಾಯ-4 ಸೆಕ್ಷನ್-21) ಮತ್ತು ಪೊಲೀಸ್ ಅಧಿಕಾರಿಗಳ ಕಾರ್ಯದ ಬಗ್ಗೆಯೂ ತಿಳಿಸಲಾಗಿದೆ.

MCHA 2017ರ ಪ್ರಕಾರ, ಸೆಕ್ಷನ್-21 ರಲ್ಲಿ ತಿಳಿಸಿರುವಂತೆ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಯನ್ನು ಆರೋಗ್ಯ ವಿಮೆಯಲ್ಲಿ ಸೇರಿಸುವಂತೆ ಅವಕಾಶ ಕಲ್ಪಿಸಲಾಗಿದೆ.

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಅಂಶಗಳು

- ಖಿನ್ನತೆ ಹಾಗೂ ಆತಂಕದಂತಹ ಸಾಮಾನ್ಯ ಮಾನಸಿಕ ಸಮಸ್ಯೆಗಳನ್ನು ಆಪ್ತ ಸಮಾಲೋಚನೆ, ಸೂಕ್ತ ಔಷಧಿ ಮೂಲಕ ಚಿಕಿತ್ಸೆ ನೀಡಬಹುದು.

- ಪ್ರಾಥಮಿಕವಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವಲ್ಲಿ ಸಾಮಾನ್ಯ ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ.

- ತೀವ್ರತರವಾದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರ ನಿಯಮಿತ ತಪಾಸಣೆ ಮಾಡುವುದರ ಮೂಲಕ ಅಕಾಲಿಕ ಮರಣವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

- ಆಟಿಸಂ, ಬುದ್ದಿಮಾಂದ್ಯತೆಯಂತಹ ಸಮಸ್ಯೆಯಿಂದ ಬಳಲುತ್ತಿರುವವರನ್ನು ಕಾಳಜಿ ಮಾಡುವ ಹತ್ತಿರದ ಸಂಬಂಧಿಗಳಿಗೆ ಸೂಕ್ತ ತರಬೇತಿ ನೀಡುವುದರ ಮೂಲಕ ರೋಗಿಗಳ ಜೀವನ ಮಟ್ಟವನ್ನು ಸುಧಾರಿಸಲು ಸಹಾಯವಾಗುತ್ತದೆ.

- ಮಾನಸಿಕ ಆರೋಗ್ಯ ದಿನವು ಸರ್ಕಾರಿ ಅಧಿಕಾರಿಗಳಿಗೆ,ಪದಾಧಿಕಾರಿಗಳಿಗೆ ಈಗಾಗಲೇ ಜಾರಿಗೊಳಿಸಿರುವ ನೀತಿಯನ್ನು ಮೌಲ್ಯಮಾಪನ ಮಾಡಲು ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವಲ್ಲಿ ಮಾನಸಿಕ ಆರೋಗ್ಯ ತಜ್ಙರಿಗೆ ಹಾಗೂ ಆರೈಕೆದಾರರಿಗೆ ಅನುಕೂಲವಾಗಿದೆ. ಸಮಾಜದಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ, ಲಿಂಗ ತಾರತಮ್ಯ, ವಯೋಬೇಧವಿಲ್ಲದೆ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ದೊರೆಯುವುದು ಇಂದಿನ ಆದ್ಯತೆ. ಮಾನಸಿಕ ಆರೋಗ್ಯದ ಕುರಿತು ಸರಿಯಾದ ತಿಳುವಳಿಕೆಯು ಇಂದಿನ ಡಿಜಿಟಲ್ ತಂತ್ರಜ್ಞಾನದ ಬಳಕೆಯೊಂದಿಗೆ ಇರುವ ಸೀಮಿತ ಸಂಪನ್ಮೂಲಗಳನ್ನು ಬಳಸಿ ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕು ಎಂಬುದು ಎಲ್ಲರ ಆಶಯ.

ಡಾ. ಪ್ರೀತಿ. ಎಸ್

ಹಿರಿಯ ಮನೋವೈದ್ಯೆ ಹಾಗೂ ಸ್ಪಂದನ ನರ್ಸಿಂಗ್ ಹೋಂನ ವೈದ್ಯಕೀಯ ನಿರ್ದೇಶಕಿ

Last Updated : Oct 10, 2021, 2:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.