ವೈರಸ್‌ಗಳ ವಿರುದ್ಧ ಹೋರಾಡುವಲ್ಲಿ ಪ್ರತಿಕಾಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಮತ್ತು ನಮ್ಮ ಜೀವಕೋಶಗಳಿಗೆ ತಗಲುವ ಕೊರೊನಾ ವೈರಸ್ ಅನ್ನು ತಡೆಯಲು ಮುಖ್ಯವಾಗಿದೆ. ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಹಾಗೂ ಪ್ರತಿಕಾಯಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತೆ.
ಕೋವಿಡ್ ರೂಪಾಂತರಿಗಳು ಸಹ ಉಲ್ಬಣಗೊಳ್ಳುತ್ತಿರುವ ಕಾರಣ ಕೆಲವು ದೇಶಗಳು ರೂಪಾಂತರಿಯ ಅಪಾಯ ಮತ್ತು ರೋಗದ ತೀವ್ರತೆ ತಪ್ಪಿಸಲು ಬೂಸ್ಟರ್ ಡೋಸ್ಗಳನ್ನು ನೀಡಲು ಆರಂಭಿಸಿವೆ. ಉದಾಹರಣೆಗೆ, ಫೈಝರ್ ವ್ಯಾಕ್ಸಿನ್ನ ಮೂರನೇ ಡೋಸ್ ಪಡೆದವರಲ್ಲಿ ರೋಗದ ತೀವ್ರತೆ ಶೇ.75ರಿಂದ ಶೇ.45ಕ್ಕೆ ಇಳಿಕೆ ಕಂಡಿದೆ. ಪ್ರತಿಕಾಯಗಳು ನಮ್ಮ ರೋಗನಿರೋಧಕ ಶಕ್ತಿ ಅಥವಾ ಪ್ರತಿರಕ್ಷಣಾ ವ್ಯವಸ್ಥೆಯ ಒಂದು ಭಾಗವಾಗಿದೆಯಷ್ಟೇ.. ಹೀಗಾಗಿ, ಟಿ-ಕೋಶಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕಾಗಿದೆ.
ಏನಿದು ಟಿ ಸೆಲ್? : ಬಿಳಿ ರಕ್ತಕಣಗಳ ಒಂದು ವಿಧವಾಗಿರುವ ಟಿ ಜೀವಕೋಶಗಳು ಮೂಳೆ ಮಜ್ಜೆಯಲ್ಲಿನ ಕಾಂಡಕೋಶಗಳಿಂದ ಬೆಳವಣಿಗೆಯಾಗುತ್ತದೆ. ದೇಹವು ಸೋಂಕಿಗೆ ಒಳಗಾದಾಗ ನಮ್ಮ ಪ್ರತಿರಕ್ಷಣಾ ಕೋಶಗಳು ಲಿಂಫೋಸೈಟ್ಸ್ ಎಂಬ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಇದರಲ್ಲಿ ಟಿ ಹಾಗೂ ಬಿ ಸೆಲ್ ಎಂಬ ಎರಡು ವಿಧಗಳಿವೆ.
ವೈರಸ್ ವಿರುದ್ಧ ಹೋರಾಡಲು ಇವು ಕಾರ್ಯನಿರ್ವಹಿಸುತ್ತವೆ. ಕೆಲವು ಟಿ ಹಾಗೂ ಬಿ ಜೀವಕೋಶಗಳು ದೀರ್ಘಾವಧಿಯ ಮೆಮೊರಿ ಕೋಶಗಳಾಗುತ್ತವೆ. ಅಂದರೆ ಒಂದೇ ಬಗೆಯ ಸೋಂಕನ್ನು ಮತ್ತೆ ಮತ್ತೆ ನಮ್ಮ ದೇಹ ಎದುರಿಸಿದಾಗ ಏನು ಮಾಡಬೇಕೆಂಬುದು ಅವುಗಳಿಗೆ ತಿಳಿದಿರುತ್ತದೆ.
ಪ್ರತಿಯೊಂದು ವೈರಸ್ ತನ್ನ ಒಳಗೆ ಮತ್ತು ಹೊರಗೆ ಸಾಕಷ್ಟು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಕೊರೊನಾ ವೈರಸ್‌ನ ಹೊಸ ರೂಪಾಂತರಿಯಾಗಿರುವ ಒಮಿಕ್ರಾನ್ ಅನೇಕ ಸಂಶೋಧಕರನ್ನು ಚಿಂತೆಗೀಡುಮಾಡಿದೆ. ಏಕೆಂದರೆ, ಅದರ ಬಾಹ್ಯ ರಚನೆಯ ಪ್ರಮುಖ ಭಾಗವು ಹೆಚ್ಚು ರೂಪಾಂತರಗೊಂಡಿದೆ.
ಅದನ್ನು ತಟಸ್ಥಗೊಳಿಸುವ ಪ್ರತಿಕಾಯಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದರೆ, ಟಿ ಜೀವಕೋಶಗಳು ವೈರಸ್‌ನ ಇತರ ಭಾಗಗಳ ಮೇಲೆ ಕೇಂದ್ರೀಕರಿಸುವುದರಿಂದ ಅಂತಹ ರೂಪಾಂತರಗಳು ಟಿ ಜೀವಕೋಶಗಳ ಕಾರ್ಯವನ್ನು ತಡೆಯಲಾಗುವುದಿಲ್ಲ.
ಸಾಂಕ್ರಾಮಿಕದ ಸಮಯದಲ್ಲಿ ವೈರಸ್‌ನ ಸ್ಪೈಕ್ ಪ್ರೋಟೀನ್ ಸಾಕಷ್ಟು ಬದಲಾಗಿದೆ. ಇದು ಯಾವಾಗಲೂ ಪ್ರತಿಕಾಯಗಳ ವ್ಯಾಪ್ತಿಯಿಂದ ರೂಪಾಂತರಗೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ. ಕೋವಿಡ್ ವಿರುದ್ಧ ಹೋರಾಡಲು ವಿನ್ಯಾಸಗೊಳಿಸಲಾದ ಟಿ ಕೋಶಗಳು ಮಾನವನ ದೇಹದಲ್ಲಿ ಪ್ರತಿಕಾಯಗಳಿಗಿಂತ ಹೆಚ್ಚು ಕಾಲ ಉಳಿಯುತ್ತವೆ.
ಇದನ್ನೂ ಓದಿ: ಒಮಿಕ್ರಾನ್ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವವನ್ನು ಬೂಸ್ಟರ್ ಡೋಸ್ ಶೇ.88ರಷ್ಟು ಹೆಚ್ಚಿಸುತ್ತದೆ: ಅಧ್ಯಯನ
ಕೋವಿಡ್ ಮತ್ತು ಟಿ ಸೆಲ್‌ಗಳ ನಡುವಿನ ಸಂಬಂಧದ ಕುರಿತ ಡೇಟಾವನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ. ಆದರೂ ಕೂಡ ಕೋವಿಡ್ ತಡೆಗಟ್ಟಲು ಟಿ ಕೋಶಗಳ ಪಾತ್ರ ದೊಡ್ಡದು ಎಂಬುದು ತಜ್ಞರ ಪ್ರಕಾರ ಈಗಾಗಲೇ ಸ್ಪಷ್ಟವಾಗಿದೆ. ಅಲ್ಲದೇ ಶೀತವನ್ನು ಉಂಟು ಮಾಡುವ ಕೊರೊನಾ ವೈರಸ್‌ಗಳ ವಿರುದ್ಧ ವಯಸ್ಕರು ಮತ್ತು ಮಕ್ಕಳನ್ನು ಟಿ ಕೋಶಗಳು ರಕ್ಷಿಸುತ್ತದೆ ಎಂಬುದಕ್ಕೆ ಅನೇಕ ಪುರಾವೆಗಳಿವೆ.
ಟಿ ಜೀವಕೋಶಗಳ ಲಸಿಕೆಗಳು..
ಫೈಝರ್, ಅಸ್ಟ್ರಾಜೆನೆಕಾ ಸೇರಿದಂತೆ ಈವರೆಗೆ ವಿನ್ಯಾಸಗೊಳಿಸಲಾದ ಅನೇಕ ಲಸಿಕೆಗಳು ಕೊರೊನಾ ವೈರಸ್‌ನ ಸ್ಪೈಕ್ ಪ್ರೋಟೀನ್ ಮೇಲೆ ಹೆಚ್ಚು ಗಮನಹರಿಸಿ ತಯಾರಿಸಿದ ವ್ಯಾಕ್ಸಿನ್ಗಳಾಗಿವೆ. ಈ ಲಸಿಕೆಗಳು ಪ್ರತಿಕಾಯಗಳನ್ನು ಉತ್ಪಾದಿಸುವಲ್ಲಿ ಮಹತ್ತರವಾಗಿ ಪರಿಣಾಮಕಾರಿಯಾಗಿವೆ. ಟಿ ಜೀವಕೋಶಗಳ ಪಾತ್ರ ನಮಗೆ ತಿಳಿದಿರುವಾಗ T ಕೋಶಗಳನ್ನು ಉತ್ಪಾದಿಸುವ ಮತ್ತು ಒಂದಕ್ಕಿಂತ ವೈರಸ್‌ನ ಹೆಚ್ಚು ಪ್ರೋಟೀನ್‌ಗಳನ್ನು ಗುರಿಯಾಗಿಸುವ ಕಡೆಗೆ ಲಸಿಕೆ ತಂತ್ರಗಳನ್ನು ಕೇಂದ್ರೀಕೃತವಾಗಬೇಕಿದೆ.
ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಟಿ ಸೆಲ್ ಪ್ರತಿಕ್ರಿಯೆಗಳನ್ನು ಪ್ರಚೋದಿಸುವ ಲಸಿಕೆಗಳ ಆರಂಭಿಕ ಪ್ರಯೋಗಗಳು ಪೂರ್ಣಗೊಂಡಿವೆ. ಟಿ ಸೆಲ್ ಲಸಿಕೆಗಳು ಅಸ್ತಿತ್ವದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಎಲ್ಲಾ ಬಗೆಯ ಕೋವಿಡ್ ರೂಪಾಂತರಗಳಿಂದ ಉಂಟಾಗುವ ತೀವ್ರವಾದ ಕಾಯಿಲೆಯ ವಿರುದ್ಧ ದೀರ್ಘಕಾಲೀನ ರಕ್ಷಣೆಯನ್ನು ಉತ್ಪಾದಿಸುವ ಕೀಲಿಯಾಗಿರಬಹುದು ಎಂದು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಬಯೋಮೆಡಿಕಲ್ ಸೈನ್ಸಸ್‌ನಲ್ಲಿ ಪ್ರಾಧ್ಯಾಪಕರಾದ ಶೀನಾ ಕ್ರೂಕ್‌ಶಾಂಕ್ ಹೇಳುತ್ತಾರೆ.