ETV Bharat / lifestyle

ಅಚ್ಚರಿಯಾದ್ರೂ ನಿಜ.. 2.3 ಕೋಟಿ ವರ್ಷಗಳಲ್ಲಿ ಇರದಷ್ಟು ಇಂಗಾಲದ ಡೈಆಕ್ಸೈಡ್​ ಮಧ್ಯೆ ನಮ್ಮ ಬದುಕು!!

ಸಸ್ಯಗಳು ಬೆಳೆದಂತೆ ಇಂಗಾಲದ ಎರಡು ಸ್ಥಿರ ಐಸೊಟೋಪ್‌ಗಳ (ನಿರ್ದಿಷ್ಟ ರಾಸಾಯನಿಕ ಅಂಶದ ರೂಪಾಂತರ) ಸಾಪೇಕ್ಷ ಪ್ರಮಾಣವು ಇಂಗಾಲ-12 ಮತ್ತು ಕಾರ್ಬನ್-13 ವಾತಾವರಣದಲ್ಲಿನ CO2 ಪ್ರಮಾಣಕ್ಕೆ ಪ್ರತಿಕ್ರಿಯೆಯಾಗಿ ಬದಲಾಗುತ್ತದೆ ಎಂದು ತೋರಿಸಿದ್ದಾರೆ.

carbon dioxide
ಇಂಗಾಲದ ಡೈಆಕ್ಸೈಡ್
author img

By

Published : Jun 2, 2020, 9:15 PM IST

ನ್ಯೂಯಾರ್ಕ್ ​: ಮಾನವರ ಅನೇಕ ಚಟುವಟಿಕೆಗಳ ಪರಿಣಾಮ ಇಂಗಾಲದ ಡೈಆಕ್ಸೈಡ್‌ ಅಧಿಕ ಪ್ರಮಾಣದಲ್ಲಿ ಹೊರ ಸೂಸುತ್ತಿದೆ ಎಂಬುದು ಸಂಶೋಧಕರು ಬಹಿರಂಗಪಡಿಸಿದ್ದಾರೆ.

ಇಂದಿನ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ (ಸಿಒ 2) ಮಟ್ಟವು ಕಳೆದ 23 ದಶಲಕ್ಷ ವರ್ಷಗಳಿಂದ ಇದ್ದದ್ದಕ್ಕಿಂತ ಹೆಚ್ಚಾಗಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಅಮೆರಿಕದ ಲೂಸಿಯಾನ ವಿವಿಯ ಸಂಶೋಧನಾ ತಂಡ, ಪ್ರಾಚೀನ ಸಸ್ಯ ಅಂಗಾಂಶಗಳ ಪಳೆಯುಳಿಕೆ ಅವಶೇಷಗಳನ್ನು 23 ದಶಲಕ್ಷ ವರ್ಷಗಳ ಭೂಮಿಯ ಇತಿಹಾಸದಲ್ಲಿ ವ್ಯಾಪಿಸಿರುವ ವಾತಾವರಣದ ಸಿಒ2ನ ದಾಖಲೆಯನ್ನು ಬಳಸಿಕೊಂಡಿದ್ದಾರೆ.

ಸಸ್ಯಗಳು ಬೆಳೆದಂತೆ ಇಂಗಾಲದ ಎರಡು ಸ್ಥಿರ ಐಸೊಟೋಪ್‌ಗಳ (ನಿರ್ದಿಷ್ಟ ರಾಸಾಯನಿಕ ಅಂಶದ ರೂಪಾಂತರ) ಸಾಪೇಕ್ಷ ಪ್ರಮಾಣವು ಇಂಗಾಲ-12 ಮತ್ತು ಕಾರ್ಬನ್-13 ವಾತಾವರಣದಲ್ಲಿನ CO2 ಪ್ರಮಾಣಕ್ಕೆ ಪ್ರತಿಕ್ರಿಯೆಯಾಗಿ ಬದಲಾಗುತ್ತದೆ ಎಂದು ತೋರಿಸಿದ್ದಾರೆ.

ಜಿಯಾಲಜಿ ಜರ್ನಲ್​ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ. ಪಳೆಯುಳಿಕೆ ಸಸ್ಯಗಳಲ್ಲಿನ ಇಂಗಾಲದ ಐಸೊಟೋಪ್‌ಗಳ ಸಾಪೇಕ್ಷ ಪ್ರಮಾಣ ಅಳೆಯುತ್ತದೆ. ಪ್ರಾಚೀನ ಸಸ್ಯಗಳು ಬೆಳೆದ ವಾತಾವರಣದ CO2 ಸಾಂದ್ರತೆಯ ಲೆಕ್ಕಾಚಾರ ಅಧ್ಯಯನದಲ್ಲಿದೆ. CO-2ನಲ್ಲಿನ ಯಾವುದೇ ಏರಿಳಿತಗಳಿಗೆ ಅಧ್ಯಯನವು ಯಾವುದೇ ಪುರಾವೆಗಳನ್ನು ಬಹಿರಂಗಪಡಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.