ETV Bharat / lifestyle

ಕೋವಿಡ್‌ -19 ಸೀಸನಲ್‌ ಸೋಂಕು: ದಾಖಲೆ ಬಿಡುಗಡೆ ಮಾಡಿದ ಅಧ್ಯಯನ

ಕೋವಿಡ್‌ಗೂ ವಾತಾವರಣಕ್ಕೂ ಅವಿನಾಭಾವ ಸಂಬಂಧದ ಬಗ್ಗೆ ಅಧ್ಯಯನ ನಡೆಸಿರುವ ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಸಂಸ್ಥೆ, ಮಹಾಮಾರಿ ಕೊರೊನಾ ಸೀಸನಲ್‌ ಸೋಂಕು ಎಂದು ಹೇಳಿದೆ. ಇದಕ್ಕೆ ಪುರಾವೆಗಳನ್ನೂ ಒದಗಿಸಿದೆ.

author img

By

Published : Oct 22, 2021, 5:47 PM IST

robust evidence says that covid-19 is a seasonal infection study
ಕೋವಿಡ್‌-19 ಸೀಸನಲ್‌ ಸೋಂಕು; ದಾಖಲೆ ಬಿಡುಗಡೆ ಮಾಡಿದ ಅಧ್ಯಯನ

ನವದೆಹಲಿ: ಮಹಾಮಾರಿ ಕೋವಿಡ್‌-19 ಒಂದು ಸೀಸನಲ್‌(ಋತುಮಾನಕ್ಕೆ ತಕ್ಕಂತೆ) ಸೋಂಕು ಎಂದು ಹೇಳಿರುವ ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ (ISGlobal) ನೇತೃತ್ವದ ಹೊಸ ಅಧ್ಯಯನವು, ಇದಕ್ಕೆ ಪುರಾವೆಗಳನ್ನು ನೀಡಿದೆ.

'ಲಾ ಕೈಕ್ಸಾ' ಫೌಂಡೇಶನ್‌ ನೆರವಿನೊಂದಿಗೆ ಅಧ್ಯಯನ ನಡೆಸಿರುವ ಜಾಗತಿಕ ಆರೋಗ್ಯ ಸಂಸ್ಥೆ, ಕೋವಿಡ್ -19 ಕಡಿಮೆ ತಾಪಮಾನ ಮತ್ತು ತೇವಾಂಶಕ್ಕೆ ಸಂಬಂಧಿಸಿದ ಕಾಲೋಚಿತ ಸೋಂಕು ಎಂಬುದನ್ನು ದೃಢಪಡಿಸಿದೆ.

ಮೊದಲ ಸೈದ್ಧಾಂತಿಕ ಮಾಡೆಲಿಂಗ್ ಅಧ್ಯಯನವು ಕೋವಿಡ್ -19 ಪ್ರಸರಣದಲ್ಲಿ ಹವಾಮಾನವು ಚಾಲಕವಲ್ಲ ಎಂದು ಸೂಚಿಸುತ್ತದೆ. ವೈರಸ್‌ಗೆ ಯಾವುದೇ ವಿನಾಯಿತಿ ಇಲ್ಲ. ಕೋವಿಡ್‌ ನಿಜವಾದ ಕಾಲೋಚಿತ ರೋಗವೇ ಎಂಬ ಪ್ರಶ್ನೆಯೂ ಹೆಚ್ಚು ಕೇಂದ್ರೀಕೃತವಾಗುತ್ತಿದೆ ಎಂದು ಐಎಸ್‌ಗ್ಲೋಬಲ್‌ನ ಹವಾಮಾನ, ಆರೋಗ್ಯ ಕಾರ್ಯಕ್ರಮದ ನಿರ್ದೇಶಕ ಮತ್ತು ಅಧ್ಯಯನದ ಸಂಯೋಜಕರಾದ ಕ್ಸೇವಿಯರ್ ರೋಡೆ​​​​ ವಿವರಿಸುತ್ತಾರೆ.

ರೋಡೆ ಮತ್ತವರ ತಂಡವು ಮೊದಲು SARS-CoV-2 ನ ಆರಂಭಿಕ ಹಂತದಲ್ಲಿ ತಾಪಮಾನ ಮತ್ತು ತೇವಾಂಶದ ಸಂಬಂಧ ಬಗ್ಗೆ ಐದು ಖಂಡಗಳ 162 ದೇಶಗಳಲ್ಲಿ ಮಾನವ ನಡವಳಿಕೆ ಮತ್ತು ಸಾರ್ವಜನಿಕ ಆರೋಗ್ಯ ನೀತಿಗಳಲ್ಲಿ ಬದಲಾವಣೆಗಳನ್ನು ಜಾರಿಗೆ ತರುವ ಬಗ್ಗೆ ವಿಶ್ಲೇಷಿದೆ.

ಹವಾಮಾನ ಮತ್ತು ರೋಗಗಳ ನಡುವಿನ ಈ ಸಂಬಂಧವು ಕಾಲಾನಂತರದಲ್ಲಿ ಹೇಗೆ ವಿಕಸನಗೊಂಡಿತು, ಮತ್ತು ಇದು ವಿಭಿನ್ನ ಭೌಗೋಳಿಕ ಮಾಪಕಗಳಲ್ಲಿ ಸ್ಥಿರವಾಗಿದೆಯೇ ಎಂದು ತಂಡವು ವಿಶ್ಲೇಷಿಸಿದ್ದು, ಇದಕ್ಕಾಗಿ ಸಂಖ್ಯಾಶಾಸ್ತ್ರೀಯ ವಿಧಾನವನ್ನು ಬಳಸಿದ್ದಾರೆ. ಇದು ವಿಭಿನ್ನವಾದರೂ ಒಂದೇ ರೀತಿಯ ವ್ಯತ್ಯಾಸಗಳನ್ನು (ಅಂದರೆ ಮಾದರಿ-ಗುರುತಿಸುವ ಸಾಧನ) ಗುರುತಿಸಲು ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ.

ತಾಪಮಾನ ಮತ್ತು ತೇವಾಂಶ ಹೆಚ್ಚಾದಂತೆ ಮೊದಲ ಕೋವಿಡ್‌ ಅಲೆ ಕಡಿಮೆಯಾಗಿತ್ತು. ತಾಪಮಾನ ಮತ್ತು ತೇವಾಂಶ ಕಡಿಮೆಯಾದಂತೆ ಕೋವಿಡ್‌ 2ನೇ ಅಲೆಯಲ್ಲಿ ಪ್ರಕರಣಗಳು ಏರಿಕೆಯಾಗಿದ್ದವು. ಆದರೂ ಎಲ್ಲ ಖಂಡಗಳಲ್ಲಿ ಬೇಸಿಗೆಯಲ್ಲಿ ಈ ಮಾದರಿಗಳಲ್ಲಿ ವ್ಯತ್ಯಾಸಗಳಾಗಿವೆ. ಯುವಜನರ ಸಾಮೂಹಿಕ ಕೂಟಗಳು, ಪ್ರವಾಸೋದ್ಯಮ ಮತ್ತು ಹವಾನಿಯಂತ್ರಣ ಸೇರಿದಂತೆ ಹಲವು ಅಂಶಗಳಿಂದ ಇದನ್ನೂ ವಿವರಿಸಬಹುದು ಎಂದು ಐಎಸ್‌ ಗ್ಲೋಬಲ್‌ನ ಸಂಶೋಧಕ ಮತ್ತು ಅಧ್ಯಯನದ ಮೊದಲ ಲೇಖಕ ಅಲೆಜಾಂಡ್ರೊ ಫಾಂಟಲ್ ವಿವರಿಸುತ್ತಾರೆ.

ಅಂತಿಮವಾಗಿ, ಸಾಂಕ್ರಾಮಿಕ ರೋಗಶಾಸ್ತ್ರೀಯ ಮಾದರಿಯನ್ನು ಬಳಸಿ, ಸಂಶೋಧನಾ ತಂಡವು ತಾಪಮಾನವನ್ನು ಪ್ರಸರಣ ದರದಲ್ಲಿ ಸೇರಿಸುವುದು ವಿಭಿನ್ನ ಅಲೆಗಳ ಏರಿಕೆ ಮತ್ತು ಕುಸಿತವನ್ನು ಊಹಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.