ನವದೆಹಲಿ: ಶಿಯೋಮಿ ಮೊದಲ ಬಾರಿಗೆ ಸ್ಯಾಮ್‌ಸಂಗ್ ಮತ್ತು ಆಪಲ್‌ನ್ನು ಹಿಂದಿಕ್ಕಿ ಜೂನ್‌ನಲ್ಲಿ ವಿಶ್ವದ ನಂಬರ್ ಒನ್ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯೊಂದು ತಿಳಿಸಿದೆ.
ಶಿಯೋಮಿಯ ಮಾರಾಟವು ಜೂನ್‌ನಲ್ಲಿ 26 ಪ್ರತಿಶತದಷ್ಟು (ತಿಂಗಳಿಂದ ತಿಂಗಳಿಗೆ) ಬೆಳವಣಿಗೆ ಆಗಿದೆ. ಹಿಂದಿನ ತಿಂಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿತ್ತು. ಶಿಯೋಮಿ ಮಾರಾಟದಲ್ಲಿ ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಕೌಂಟರ್ಪಾಯಿಂಟ್ ರಿಸರ್ಚ್‌ನ ಮಾಸಿಕ ಮಾರುಕಟ್ಟೆ ಪಲ್ಸ್ ಸೇವೆಯ ಪ್ರಕಾರ, 2011 ರಲ್ಲಿ ಆರಂಭವಾದಾಗಿನಿಂದ ಇದು ಸುಮಾರು 800 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ.
ಇದನ್ನೂ ಓದಿ: ಮ್ಯಾಗ್ನೆಟಿಕ್ ವೈರ್‌ಲೆಸ್ ಚಾರ್ಜಿಂಗ್ ಪರಿಕರ ಅನಾವರಣಗೊಳಿಸಿದ Realme
ಹುವಾವೇ ಕುಸಿತ ಆರಂಭವಾದಾಗಿನಿಂದ, ಶಿಯೋಮಿ ಈ ಕುಸಿತದಿಂದ ಉಂಟಾದ ಅಂತರವನ್ನು ತುಂಬಲು ಸ್ಥಿರವಾದ ಮತ್ತು ಆಕ್ರಮಣಕಾರಿ ಪ್ರಯತ್ನಗಳನ್ನು ಮಾಡುತ್ತಿದೆ. ಚೀನಾ, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಂತಹ ಹುವೈ ಹಾಗೂ ಹಾನರ್‌ನಂತಹ ಪರಂಪರೆಯನ್ನು ಮಾರುಕಟ್ಟೆಯಲ್ಲಿ ವಿಸ್ತರಿಸುತ್ತಿದೆ ಎಂದು ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಹೇಳಿದ್ದಾರೆ. ಜೂನ್‌ನಲ್ಲಿ ಶಿಯೋಮಿಗೆ ಚೀನಾ, ಯುರೋಪ್ ಮತ್ತು ಭಾರತದಲ್ಲಿನ ಪೂರೈಕೆ ನಿರ್ಬಂಧಗಳಿಂದಾಗಿ ಸ್ಯಾಮ್‌ಸಂಗ್‌ನ ಕುಸಿತದಿಂದ ಮತ್ತಷ್ಟು ಸಹಾಯವಾಗಿದೆ ಎಂದರು.
ರೆಡ್‌ಮಿ 9, ರೆಡ್ಮಿ ನೋಟ್ 9 ಮತ್ತು ರೆಡ್ಮಿ ಕೆ ಸರಣಿಯ ಫೋನ್‌ಗಳು ಉತ್ತಮ ಕಾರ್ಯಕ್ಷಮತೆಯ ಮೂಲಕ ಸಣ್ಣ ಹಾಗೂ ದೊಡ್ಡ ನಗರಗಳಲ್ಲೂ ಹೆಚ್ಚು ಮಾರಾಟ ಆಗುತ್ತಿವೆ ಎಂದು ಹಿರಿಯ ವಿಶ್ಲೇಷಕ ವರುಣ್ ಮಿಶ್ರಾ ಹೇಳಿದ್ದಾರೆ.