ETV Bharat / lifestyle

ಲಾಕ್​​​ಡೌನ್ ಸಮಯದಲ್ಲಿ ಸೈಬರ್ ಕ್ರೈಮ್ ಹೆಚ್ಚಳ.. ಭಾರತದ ಮೇಲೂ ಆನ್​ಲೈನ್ ಕಳ್ಳರ ಕಣ್ಣು..

author img

By

Published : Dec 1, 2021, 8:01 PM IST

ದಾಳಿಕೋರರ ವಿಧಾನಗಳು ಹೆಚ್ಚು ಅತ್ಯಾಧುನಿಕವಾಗುತ್ತಿವೆ. ಸೈಬರ್ ಕ್ರಿಮಿನಲ್‌ಗಳು ಅವರನ್ನು ಪತ್ತೆಹಚ್ಚಲು ಕಷ್ಟವಾಗಿಸುವ ತಂತ್ರಗಳನ್ನು ಬಳಸುತ್ತಿದ್ದಾರೆ ಮತ್ತು ಹೆಚ್ಚು ವೈಯಕ್ತೀಕರಿಸಿದ ಸೈಬರ್ ದಾಳಿಗಳನ್ನು ನಡೆಸುತ್ತಿದ್ದಾರೆ. ಜಾಗತಿಕವಾಗಿ ಜೂನ್-ಅಕ್ಟೋಬರ್ ಅವಧಿಯಲ್ಲಿ ಶೇ.32 ರಷ್ಟು ಸೈಬರ್​ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ..

ransomware-top-threat-for-indians-in-2021-crypto-scams-surge
ಲಾಕ್​​​ಡೌನ್ ಸಮಯದಲ್ಲಿ ಸೈಬರ್ ಕ್ರೈಮ್ ಹೆಚ್ಚಳ

ನವದೆಹಲಿ : ಲಾಕ್​​ಡೌನ್​ ಸಮಯದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗಿವೆ. 2021ರಲ್ಲಿ ಅತೀ ಹೆಚ್ಚು ರಾನ್ಸಮ್‌ವೇರ್ ( ಕಂಪ್ಯೂಟರ್ ಬಳಕೆದಾರನ ಮಾಹಿತಿ ಕದಿಯುವುದು) ದಾಳಿ ನಡೆದಿದ್ದರೆ ನಂತರದ ಸ್ಥಾನದಲ್ಲಿ ಕ್ರಿಪ್ಟೋ ಕರೆನ್ಸಿ ಸಂಬಂಧಿತ ವಂಚನೆ ನಡೆದಿವೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

2021ರ ಕೊನೆಯ ಐದು ತಿಂಗಳುಗಳನ್ನು ವರ್ಷದ ಮೊದಲ ಐದು ತಿಂಗಳುಗಳಿಗೆ ಹೋಲಿಸಿದಾಗ, ಜಾಗತಿಕವಾಗಿ ಗ್ರಾಹಕರನ್ನು ಗುರಿಯಾಗಿಸಿಕೊಂಡು ನಡೆಸಲಾದ ದಾಳಿಯೂ ಶೇ.38ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದ್ದರೆ, ಈ ಸಂಖ್ಯೆ ಭಾರತದಲ್ಲಿ ಶೇ.65ರಷ್ಟಿದೆ ಎಂದು ವರದಿ ಹೇಳಿದೆ.

ಜಾಗತಿಕ ಭದ್ರತಾ ಕಂಪನಿ ಅವಾಸ್ಟ್ ಪ್ರಕಾರ ಮೊಬೈಲ್ ಫೋನ್​ ವಿಭಾಗದಲ್ಲಿ ಆಯ್ಡ್‌ವೇರ್ ಮತ್ತು ಫ್ಲೀಸ್‌ವೇರ್ ಬೆದರಿಕೆಗಳು ಪ್ರಮುಖವಾಗಿದೆ ಎಂದಿದೆ. ಆಯ್ಡ್​​​​ವೇರ್ ವೈರಸ್​​ಗಳು ಜಾಹೀರಾತಿನ ಪ್ರಕಾರವಾಗಿ ಮೊಬೈಲ್​ ಅಥವಾ ಕಂಪ್ಯೂಟರ್ ಸೇರಲಿವೆ.

ಫ್ಲೀಸ್‌ವೇರ್ ವೈರಸ್​​ ಒಂದು ಅಪ್ಲಿಕೇಶನ್ ಆಗಿದ್ದು, ಇದು ಮೊಬೈಲ್, ಕಂಪ್ಯೂಟರ್​ನಲ್ಲಿ ಗೌಪ್ಯವಾಗಿ ಹಣ ಕದಿಯುವ ಕಾರ್ಯ ಮಾಡಲಿವೆ ಎಂದು ಭದ್ರತಾ ಕಂಪನಿ ತಿಳಿಸಿದೆ. ಕೊರೊನಾ ಪ್ರತಿಯೊಬ್ಬರ ಜೀವನದ ಪ್ರತಿ ಅಂಶವನ್ನು ಬದಲಾಯಿಸಿದೆ ಮತ್ತು ಅದು ಸೈಬರ್‌ವರ್ಲ್ಡ್ ಅನ್ನು ಸಹ ಒಳಗೊಂಡಿದೆ ಎಂದು ಅವಾಸ್ಟ್‌ನಲ್ಲಿ ಬೆದರಿಕೆ ಗುಪ್ತಚರ ನಿರ್ದೇಶಕ ಮೈಕಲ್ ಸಲಾತ್ ಹೇಳಿದ್ದಾರೆ.

ದಾಳಿಕೋರರ ವಿಧಾನಗಳು ಹೆಚ್ಚು ಅತ್ಯಾಧುನಿಕವಾಗುತ್ತಿವೆ. ಸೈಬರ್ ಕ್ರಿಮಿನಲ್‌ಗಳು ಅವರನ್ನು ಪತ್ತೆಹಚ್ಚಲು ಕಷ್ಟವಾಗಿಸುವ ತಂತ್ರಗಳನ್ನು ಬಳಸುತ್ತಿದ್ದಾರೆ ಮತ್ತು ಹೆಚ್ಚು ವೈಯಕ್ತೀಕರಿಸಿದ ಸೈಬರ್ ದಾಳಿಗಳನ್ನು ನಡೆಸುತ್ತಿದ್ದಾರೆ. ಜಾಗತಿಕವಾಗಿ ಜೂನ್-ಅಕ್ಟೋಬರ್ ಅವಧಿಯಲ್ಲಿ ಶೇ.32 ರಷ್ಟು ಸೈಬರ್​ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಆದಾಗ್ಯೂ, ಭಾರತಕ್ಕೆ ಈ ಸಂಖ್ಯೆಯು ಜಾಗತಿಕ ಸರಾಸರಿಗಿಂತ ಕಡಿಮೆಯಾಗಿದೆ. ವರ್ಷದ ಕೊನೆಯ ಐದು ತಿಂಗಳುಗಳಲ್ಲಿ ಜಾಗತಿಕವಾಗಿ 40 ಪ್ರತಿಶತದಷ್ಟು ಹೆಚ್ಚಾಗಿದೆ ಆದರೆ ಭಾರತದಲ್ಲಿ 13 ಪ್ರತಿಶತದಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್‌ನಲ್ಲಿ, ಫೈರ್‌ಬೇಸ್ ಡೇಟಾಬೇಸ್‌ನ ತಪ್ಪಾದ ಕಾನ್ಫಿಗರೇಶನ್‌ನಿಂದ ಬಳಕೆದಾರರ ಡೇಟಾವನ್ನು ಸಂಭಾವ್ಯವಾಗಿ ಬಹಿರಂಗಪಡಿಸುವ 19,300 ಕ್ಕೂ ಹೆಚ್ಚು ಆ್ಯಂಡ್ರಾಯ್ಡ್​ ಅಪ್ಲಿಕೇಶನ್‌ಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಓದಿ: ಚೇತರಿಕೆ ಹಾದಿಗೆ ಮರಳಿದ ಮುಂಬೈ ಷೇರುಪೇಟೆ; ದಿನದಾಂತ್ಯಕ್ಕೆ ಸೆನ್ಸೆಕ್ಸ್‌ 620 ಅಂಕಗಳ ಜಿಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.