ಹೈದರಾಬಾದ್: ರೆಡ್ಮಿ ಇಂಡಿಯಾ ಮೊಬೈಲ್ ಕಂಪನಿಯು ತನ್ನ ನೂತನ ರೆಡ್ಮಿ ನೋಟ್ 10 ಸರಣಿಯ ಮೊಬೈಲ್ಗಳನ್ನು ಭಾರತದಲ್ಲಿ ವರ್ಚುವಲ್ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದೆ. ನೋಟ್ 10 ಶ್ರೇಣಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಾಗಿದ್ದು ಅವು ಹೀಗಿವೆ: ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್, ರೆಡ್ಮಿ ನೋಟ್ 10 ಪ್ರೊ ಮತ್ತು ರೆಡ್ಮಿ ನೋಟ್ 10.
![Features and specifications of Redmi Note 10 series launched in India](https://etvbharatimages.akamaized.net/etvbharat/prod-images/thumb_0403newsroom_1614867875_756.jpg)
ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಫೀಚರ್ಗಳು ಹಾಗೂ ತಾಂತ್ರಿಕ ವೈಶಿಷ್ಟ್ಯಗಳು
![Features and specifications of Redmi Note 10 series launched in India](https://etvbharatimages.akamaized.net/etvbharat/prod-images/p2_0403newsroom_1614867875_318.jpg)
![Features and specifications of Redmi Note 10 series launched in India](https://etvbharatimages.akamaized.net/etvbharat/prod-images/p3_0403newsroom_1614867875_675.jpg)
- 108 ಎಂಪಿ ಹಿಂಬದಿ ಕ್ಯಾಮೆರಾ, 5ಎಂಪಿ ಸುಪರ್ ಮ್ಯಾಕ್ರೊ ಲೆನ್ಸ್ ಹಾಗೂ 8ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಮತ್ತು 2 ಎಂಪಿ ಡೆಪ್ತ್ ಸೆನ್ಸರ್ಗಳೊಂದಿಗೆ
- ಕ್ಯಾಮೆರಾದಲ್ಲಿ ನೈಟ್ ಮೋಡ್ 2.0, ಮ್ಯಾಜಿಕ್ ಕ್ಲೋನ್ ಮೋಡ್, ಲಾಂಗ್ ಎಕ್ಸಪೋಸರ್ ಮೋಡ್, ವಿಡಿಯೋ ಪ್ರೊ ಮೋಡ್, ಡ್ಯೂಯೆಲ್ ವಿಡಿಯೋ ಹಾಗೂ ವಿಲಾಗ್ ಮೋಡ್ಗಳನ್ನು ಸಹ ಅಳವಡಿಸಲಾಗಿದೆ.
- ನೈಟ್ ಮೋಡ್ ಸೆಲ್ಫಿಯೊಂದಿಗೆ 16 ಎಂಪಿ ಇನ್-ಡಿಸ್ಪ್ಲೇ ಪಂಚ್ ಹೋಲ್ ಮುಂಭಾಗದ ಕ್ಯಾಮೆರಾ ಇದೆ.ಭಾರತದಲ್ಲಿ ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೋನ್ ಬಿಡುಗಡೆ. ಚಿತ್ರಕೃಪೆ: Redmi Indiaಭಾರತದಲ್ಲಿ ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೋನ್ ಬಿಡುಗಡೆ. ಚಿತ್ರಕೃಪೆ: Redmi India
- 16.9 ಸೆಂಮೀ (6.6 ಇಂಚ್) 120 ಹರ್ಟ್ಸ್ ಸುಪರ್ AMOLED ಡಿಸ್ಪ್ಲೇ, 1200 ನಿಟ್ಸ್ ಪೀಕ್ ಬ್ರೈಟನೆಸ್ HDR10 ಸಪೋರ್ಟ್ನೊಂದಿಗೆ.
- 3ಡಿ ಕರ್ವಡ್ ಗ್ಲಾಸ್ ಬಾಡಿ, ಫಿಂಗರಪ್ರಿಂಟ್ ಸ್ಕ್ಯಾನರ್ ಮತ್ತು ಡಬಲ್ ಟ್ಯಾಪ್ ಗೆಸ್ಚರ್
- 3 ಬಣ್ಣಗಳಲ್ಲಿ ಲಭ್ಯ: ವಿಂಟೇಜ್ ಬ್ರಾಂಜ್, ಗ್ಲೇಸಿಯಲ್ ಬ್ಲ್ಯು, ಡಾರ್ಕ್ ನೈಟ್
- 192 ಗ್ರಾಂ ತೂಕ ಹೊಂದಿದ್ದು, 8.1 ಎಂಎಂ ತೆಳುವಾಗಿದೆ.
- ಕ್ವಾಲ್ಕಾಂ ಸ್ನ್ಯಾಪ್ಡ್ರ್ಯಾಗನ್ 732G ಪ್ರೊಸೆಸರ್ ಇದರಲ್ಲಿದೆ.
- 8GB ವರೆಗೆ LPDDR4X RAM ಮತ್ತು 128GB UFS2.2 ವರೆಗೆ ಸ್ಟೊರೇಜ್ ಸ್ಪೇಸ್ ಹೊಂದಿದೆ.
- 2+1 ಪ್ರತ್ಯೇಕ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಇದ್ದು ಇದನ್ನು 512 GB ವರೆಗೆ ವಿಸ್ತರಿಸಬಹುದು.
- 128GB UFS2.2 ಆಧರಿತ ಆ್ಯಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂ ಇದರಲ್ಲಿದೆ.
- 5020mAh ಬ್ಯಾಟರಿ ಹಾಗೂ 33 W ಫಾಸ್ಟ್ ಚಾರ್ಜರ್ ಇದೆ.
- ಡ್ಯೂಯೆಲ್ ಸ್ಟೀರಿಯೊ ಸ್ಪೀಕರ್ ಮತ್ತು Z-Axis ಹ್ಯಾಪ್ಟಿಕ್ಸ್ ಮೋಟರ್ ಇದೆ.
ಮೂರು ಮಾದರಿಗಳಲ್ಲಿ ಲಭ್ಯ:
- 6GB+64GB- ರೂ. 18,999
- 6GB+128GB- ರೂ. 19,999
- 8GB+128GB - ರೂ. 21,999
ಮಾರ್ಚ್ 18 ರಿಂದ ರೆಡ್ಮಿ ನೋಟ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ರೆಡ್ಮಿ ನೋಟ್ 10 ಪ್ರೊ ಫೀಚರ್ಗಳು ಹಾಗೂ ತಾಂತ್ರಿಕ ವೈಶಿಷ್ಟ್ಯಗಳು
![Features and specifications of Redmi Note 10 series launched in India](https://etvbharatimages.akamaized.net/etvbharat/prod-images/p6_0403newsroom_1614867875_805.jpg)
- 16.9 ಸೆಂಮೀ (6.6 ಇಂಚ್) 120 ಹರ್ಟ್ಸ್ ಸುಪರ್ AMOLED ಡಿಸ್ಪ್ಲೇ. 1200 ನಿಟ್ಸ್ ಪೀಕ್ ಬ್ರೈಟನೆಸ್ HDR10 ಸಪೋರ್ಟ್ನೊಂದಿಗೆ.
- 64 ಎಂಪಿ ಕ್ವಾಡ್ ಕ್ಯಾಮೆರಾ. 5 ಎಂಪಿ ಸುಪರ್ ಮ್ಯಾಕ್ರೊ ಲೆನ್ಸ್ ಮತ್ತು 8 ಎಂಪಿ ಅಲ್ಟ್ರಾ ವೈಡ್ ಲೆನ್ಸ್ಗಳೊಂದಿಗೆ.
- ಕ್ವಾಲ್ಕಾಂ ಸ್ನ್ಯಾಪ್ಡ್ರ್ಯಾಗನ್ 732G ಪ್ರೊಸೆಸರ್ ಇದೆ.
- 3ಡಿ ಕರ್ವಡ್ ಬಾಡಿ, ಫಿಂಗರಪ್ರಿಂಟ್ ಸ್ಕ್ಯಾನರ್ ಮತ್ತು ಡಬಲ್ ಟ್ಯಾಪ್ ಗೆಸ್ಚರ್ನೊಂದಿಗೆ.
- 5020mAh ಬ್ಯಾಟರಿ, 33 W ಫಾಸ್ಟ್ ಚಾರ್ಜರನೊಂದಿಗೆ.
- MIUI12 ಆಧರಿತ ಆ್ಯಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂ ಇದೆ.
- 8GB ವರೆಗೆ LPDDR4X RAM ಮತ್ತು 128GB ವರೆಗೆ UFS2.2 ಸ್ಟೊರೇಜ್ ಸ್ಪೇಸ್ ಇದೆ.
- 2+1 ಪ್ರತ್ಯೇಕ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಇದ್ದು, ಇದನ್ನು 512GB ವರೆಗೆ ಹೆಚ್ಚಿಸಬಹುದು.
- 3 ಬಣ್ಣಗಳಲ್ಲಿ ಲಭ್ಯ: ವಿಂಟೇಜ್ ಬ್ರಾಂಜ್, ಗ್ಲೇಸಿಯಲ್ ಬ್ಲ್ಯು, ಡಾರ್ಕ್ ನೈಟ್
ಮೂರು ಮಾದರಿಗಳಲ್ಲಿ ಲಭ್ಯ:
- 6GB+64GB- ರೂ. 15,999
- 6GB+128GB- ರೂ. 16,999
- 8GB+128GB - ರೂ. 18,999
ಇದೇ ಮಾರ್ಚ್ 17 ರಿಂದ ರೆಡ್ಮಿ ನೋಟ್ 10 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ರೆಡ್ಮಿ ನೋಟ್ 10 ಫೀಚರ್ಗಳು ಹಾಗೂ ತಾಂತ್ರಿಕ ವೈಶಿಷ್ಟ್ಯಗಳು
![Features and specifications of Redmi Note 10 series launched in India](https://etvbharatimages.akamaized.net/etvbharat/prod-images/p8_0403newsroom_1614867875_1108.jpg)
![Features and specifications of Redmi Note 10 series launched in India](https://etvbharatimages.akamaized.net/etvbharat/prod-images/p7_0403newsroom_1614867875_84.jpg)
- 16.33 ಸೆಂಮೀ (6.43 ಇಂಚ್) ಸುಪರ್ AMOLED FHD ಡಿಸ್ಪ್ಲೇ. 1100ನಿಟ್ಸ್ ಪೀಕ್ ಬ್ರೈಟನೆಸ್ನೊಂದಿಗೆ.
- ಕ್ವಾಲ್ಕಾಂ ಸ್ನ್ಯಾಪ್ಡ್ರ್ಯಾಗನ್ 678G ಪ್ರೊಸೆಸರ್ ಇದರಲ್ಲಿದೆ.
- 48ಎಂಪಿ ಪ್ರೈಮರಿ ಕ್ಯಾಮೆರಾ, ಸೋನಿ IMX582 ಸೆನ್ಸರ್ನೊಂದಿಗೆ. 8MP ಅಲ್ಟ್ರಾ-ವೈಡ್ ಲೆನ್ಸ್, 2ಎಂಪಿ ಮ್ಯಾಕ್ರೊ ಮತ್ತು 2ಎಂಪಿ ಡೆಪ್ತ್ ಕ್ಯಾಮೆರಾ.
- 3 ಬಣ್ಣಗಳಲ್ಲಿ ಲಭ್ಯ: ಅಕ್ವಾ ಗ್ರೀನ್, ಫ್ರಾಸ್ಟ್ ವೈಟ್, ಶಾಡೊ ಬ್ಲ್ಯಾಕ್
- 5000 mAh ಬ್ಯಾಟರಿ, 33W ಫಾಸ್ಟ್ ಚಾರ್ಜರನೊಂದಿಗೆ.
![Features and specifications of Redmi Note 10 series launched in India](https://etvbharatimages.akamaized.net/etvbharat/prod-images/p9_0403newsroom_1614867875_795.jpg)
ಎರಡು ಮಾದರಿಗಳಲ್ಲಿ ಲಭ್ಯ
- 4GB+64GB- ರೂ. 11,999
- 6GB+128GB- ರೂ. 13,999
ಮಾರ್ಚ್ 16 ರಿಂದ ಭಾರತದ ಮಾರುಕಟ್ಟೆಯಲ್ಲಿ ಸಿಗಲಿದೆ.
![Features and specifications of Redmi Note 10 series launched in India](https://etvbharatimages.akamaized.net/etvbharat/prod-images/p10_0403newsroom_1614867875_207.jpg)