ನವದೆಹಲಿ: ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಆಧಾರಿತ ಒಪ್ಪೋ ಕಲರ್ ಒಎಸ್ 11 ಈ ತಿಂಗಳು ದೇಶದ ಹೆಚ್ಚಿನ ಒಪ್ಪೋ ಸಾಧನಗಳಲ್ಲಿ ಲಭ್ಯವಾಗಲಿದೆ ಎಂದು ಸ್ಮಾರ್ಟ್ ಫೋನ್ ಬ್ರಾಂಡ್ ಪ್ರಕಟಿಸಿದೆ. A-53 ಮತ್ತು ಒಪ್ಪೋ F -17 ಕ್ರಮವಾಗಿ ಜೂನ್ 17 ಮತ್ತು ಜೂನ್ 26 ರ ಒಳಗೆ ಕಲರ್ ಒಎಸ್ 11 ಅಧಿಕೃತ ಆವೃತ್ತಿ ಸ್ವೀಕರಿಸಲಿದೆ.
ಒಪ್ಪೋ ಎ- 54 ಮತ್ತು ಒಪ್ಪೋ ರೆನೋ ಕ್ರಮವಾಗಿ ಜೂನ್ 16 ಮತ್ತು ಜೂನ್ 29ರಿಂದ ಇತ್ತೀಚಿನ ಓಎಸ್ ಅಪ್ಡೇಟ್ಗಳನ್ನು ಸ್ವೀಕರಿಸಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಫೈಂಡ್, ರೆನೋ, ಎಫ್ ಮತ್ತು ಎ ಸರಣಿಗಳನ್ನು ಒಳಗೊಂಡಂತೆ ಹೆಚ್ಚಿನ ಮಾದರಿಗಳನ್ನು ಅಪ್ಡೇಟ್ ಒಳಗೊಂಡಿರುತ್ತದೆ.
370 ದಶಲಕ್ಷಕ್ಕೂ ಹೆಚ್ಚು ಜಾಗತಿಕ ಬಳಕೆದಾರರನ್ನು ಹೊಂದಿರುವ ಕಲರ್ ಒಎಸ್ ಇಂಗ್ಲಿಷ್, ಬಹಾಸಾ ಮತ್ತು ಥಾಯ್ ಸೇರಿದಂತೆ 80ಕ್ಕೂ ಹೆಚ್ಚು ಭಾಷೆಗಳನ್ನು ಬೆಂಬಲಿಸುತ್ತದೆ.