ETV Bharat / lifestyle

ಸೆಕೆಂಡ್ ಜೆನ್ ಐಫೋನ್ - ಎಸ್​ಇ ಬಿಡುಗಡೆ; ಬೆಲೆ 42,500 ರಿಂದ ಆರಂಭ - ಹೈ ಸೆಕ್ಯೂರಿಟಿ ಟಚ್​ ಐಡಿ

ಆ್ಯಪಲ್​ ಕಂಪನಿ ಕಡಿಮೆ ದರದ ಸೆಕೆಂಡ್​ ಜನರೇಷನ್ ಐಫೋನ್ ಎಸ್​ಇ (iPhone SE) ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಆ್ಯಪಲ್​ ವೆಬ್​​ಸೈಟ್​​ ಮೂಲಕ ಏ.17 ರಿಂದ ಪ್ರಿ ಆರ್ಡರ್​ ಮಾಡಬಹುದಾಗಿದ್ದು, ಏ.24 ರಿಂದ ಅಮೆರಿಕದ ಆ್ಯಪಲ್​ ಮಳಿಗೆಗಳು ಹಾಗೂ ವಿಶ್ವದ ಇತರ 40 ರಾಷ್ಟ್ರಗಳಲ್ಲಿ ಮಾರಾಟಕ್ಕೆ ಬಿಡುಗಡೆಯಾಗಲಿದೆ.

Apple unveils 2nd gen iPhone SE
Apple unveils 2nd gen iPhone SE
author img

By

Published : Apr 17, 2020, 6:22 PM IST

ಲಾಕ್​ಡೌನ್​ ಅವಧಿಯಲ್ಲಿ ಗ್ಯಾಜೆಟ್ಸ್​ ಪ್ರಿಯರಿಗಾಗಿ ಖುಷಿ ಸುದ್ದಿಯೊಂದು ಬಂದಿದೆ. ಆ್ಯಪಲ್​ ಕಂಪನಿ ಕಡಿಮೆ ದರದ ಸೆಕೆಂಡ್​ ಜನರೇಷನ್ ಐಫೋನ್ ಎಸ್​ಇ (iPhone SE) ಬಿಡುಗಡೆ ಮಾಡಿದೆ. 4.7 ಇಂಚು ರೆಟಿನಾ HD ಡಿಸಪ್ಲೇ, ಹೈ ಸೆಕ್ಯೂರಿಟಿ ಟಚ್​ ಐಡಿ ಹೊಂದಿರುವ ಇದು 42,500 ರೂಪಾಯಿಗಳ ಆರಂಭಿಕ ಬೆಲೆಗಳಲ್ಲಿ ಲಭ್ಯವಿದೆ.

64 ಜಿಬಿ, 128 ಜಿಬಿ ಮತ್ತು 256 ಜಿಬಿ ಮಾಡೆಲ್​ಗಳಲ್ಲಿ ಕಪ್ಪು, ಬಿಳಿ ಹಾಗೂ ಕೆಂಪು (PRODUCT RED) ವರ್ಣಗಳಲ್ಲಿ ಸಿಗಲಿದೆ. ಆ್ಯಪಲ್​ ಅಧಿಕೃತ ಡೀಲರ್ ಹಾಗೂ ಮಾರಾಟಗಾರರ ಬಳಿ ಮಾತ್ರ ಸಿಗುತ್ತಿರುವ ಈ ಫೋನ್​ ಭಾರತದ ಮಾರುಕಟ್ಟೆಯಲ್ಲಿ ಎಂದಿನಿಂದ ಸಿಗಲಿದೆ ಎಂಬುದು ಗೊತ್ತಾಗಿಲ್ಲ.

ಅಮೆರಿಕದಲ್ಲಿ ಆ್ಯಪಲ್​ ವೆಬ್​​ಸೈಟ್​ ಮೂಲಕ ಏ.17 ರಿಂದ ಪ್ರಿ ಆರ್ಡರ್​ ಮಾಡಬಹುದಾಗಿದ್ದು, ಏ.24 ರಿಂದ ಅಮೆರಿಕದ ಆ್ಯಪಲ್​ ಮಳಿಗೆಗಳು ಹಾಗೂ ವಿಶ್ವದ ಇತರ 40 ರಾಷ್ಟ್ರಗಳಲ್ಲಿ ಮಾರಾಟಕ್ಕೆ ಬಿಡುಗಡೆಯಾಗಲಿದೆ. ಸ್ಮಾರ್ಟ್​ಫೋನ್​ಗಳ ಅತಿ ಹೆಚ್ಚು ವೇಗದ ಚಿಪ್​ ಆಗಿರುವ ಆ್ಯಪಲ್​ ನಿರ್ಮಿತ A13 Bionic ಚಿಪ್​ ಇದರಲ್ಲಿದೆ. ವೈರ್​ಲೆಸ್​ ಚಾರ್ಜಿಂಗ್​ ಹಾಗೂ ಫಾಸ್ಟ್ ಚಾರ್ಜಿಂಗ್​ ಎರಡೂ ಸೌಲಭ್ಯಗಳನ್ನು ಐಫೋನ್ ಎಸ್​ಇ ಹೊಂದಿದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿ ಚಾರ್ಜ್ ಆಗುವುದು ವಿಶೇಷವಾಗಿದೆ.

ಐಫೋನ್ ಎಸ್​ಇ ನಲ್ಲಿ ಡ್ಯೂಯೆಲ್​ ಸಿಮ್​ ಬಳಸಬಹುದಾಗಿದ್ದು, ಎರಡು ಸಿಮ್​ ನಂಬರ ಇಟ್ಟುಕೊಳ್ಳುವ ಭಾರತೀಯ ಗ್ರಾಹಕರಿಗೆ ಅನುಕೂಲಕರವಾಗಿದೆ. ಐಫೋನ್ ಎಸ್​ಇ ಮೊದಲ ಆವೃತ್ತಿಯ ಫೋನ್​ಗಳು ಚಿಕ್ಕ ಸೈಜ್​ ಹಾಗೂ ಕೈಗೆಟುಕುವ ದರದ ಕಾರಣದಿಂದ ಭಾರತದಲ್ಲಿ ಭಾರಿ ಜನಪ್ರಿಯವಾಗಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.