ಸ್ಯಾನ್ ಡಿಯಾಗೋ: ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯ ಪ್ರದೇಶದಲ್ಲಿ ಎಲಿಸಾ, ನೋಕಿಯಾ ಹಾಗೂ ಕ್ವಾಲ್ಕಾಮ್ ವತಿಯಿಂದ 5ಜಿ ಇಂಟರ್ನೆಟ್ ವೇಗವನ್ನು ಪರೀಕ್ಷಿಸಲಾಗಿದ್ದು, ಬ್ಯಾಂಡ್ ಸಹಾಯದಿಂದ ಇಂಟರ್ನೆಟ್ ವೇಗದಲ್ಲಿ ದಾಖಲೆ ನಿರ್ಮಿಸಿದೆ.
5-ಜಿ ಹೈ-ಸ್ಪೀಡ್ ಇಂಟರ್ನೆಟ್ನಿಂದಾಗಿ ವಿಡಿಯೋ ಡೌನ್‌ಲೋಡ್‌ಗಳು ಅಥವಾ ವರ್ಚುವಲ್ ರಿಯಾಲಿಟಿ ಮತ್ತು ವರ್ಧಿತ ರಿಯಾಲಿಟಿ ಅಪ್ಲಿಕೇಶನ್‌ಗಳನ್ನು ಅತ್ಯಂತ ಸುಲಭವಾಗಿ ಪಡೆಯಬಹುದಾಗಿದೆ. ಈ ಸೇವೆಯನ್ನು 2021ರ ಹೊತ್ತಿಗೆ ಜಾರಿಗೆ ತರುವ ನಿರೀಕ್ಷೆಯಿದೆ ಎಂದು ನೋಕಿಯಾ ತಿಳಿಸಿದೆ.
ಎಲಿಸಾದ ಸಹಯೋಗದೊಂದಿಗೆ 5ಜಿ ನೆಟ್‌ವರ್ಕ್‌ನಲ್ಲಿ ನೋಕಿಯಾದ 5-ಜಿಎಂಎಂ ವೇವ್ ತಂತ್ರಜ್ಞಾನ ಮತ್ತು ಕ್ವಾಲ್ಕಾಮ್ ಟೆಕ್ನಾಲಜೀಸ್‌ನ 5-ಜಿ ಸ್ಮಾರ್ಟ್‌ಫೋನ್ ಫ್ಯಾಕ್ಟರ್ ಟೆಸ್ಟ್ ಸಾಧನಗಳನ್ನು ಬಳಸುವುದರ ಮೂಲಕ ಈ ಇಂಟರ್ನೆಟ್ ವೇಗವನ್ನು ಫಿನ್‌ಲ್ಯಾಂಡ್‌ನಲ್ಲಿ ಮೊದಲ ಬಾರಿಗೆ ಪರೀಕ್ಷಿಸಲಾಗಿದ್ದು, 5-ಜಿ ವೇಗದ ದಾಖಲೆಯನ್ನು ನಾವು ನಿರ್ಮಿಸಿದ್ದೇವೆ ಎಂದು ನೋಕಿಯಾ ಹೇಳಿದೆ.
-
We're very proud to have worked with @ElisaOyj and @Qualcomm to achieve a #5G speed record in Finland, hitting 8Gbps on a commercial network. https://t.co/TRpqf3MI2a pic.twitter.com/r5t6ZBkFDj
— Nokia (@nokia) November 18, 2020 " class="align-text-top noRightClick twitterSection" data="
">We're very proud to have worked with @ElisaOyj and @Qualcomm to achieve a #5G speed record in Finland, hitting 8Gbps on a commercial network. https://t.co/TRpqf3MI2a pic.twitter.com/r5t6ZBkFDj
— Nokia (@nokia) November 18, 2020We're very proud to have worked with @ElisaOyj and @Qualcomm to achieve a #5G speed record in Finland, hitting 8Gbps on a commercial network. https://t.co/TRpqf3MI2a pic.twitter.com/r5t6ZBkFDj
— Nokia (@nokia) November 18, 2020
ಫಿನ್‌ಲ್ಯಾಂಡ್‌ನಲ್ಲಿ 5-ಜಿ ವೇಗದ ದಾಖಲೆಯನ್ನು ನಿರ್ಮಿಸಲು ಹಾಗೂ ಎಲಿಸಾ ಮತ್ತು ಕ್ವಾಲ್ಕಾಮ್‌ನೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. ಈ ನೆಟ್‌ವರ್ಕ್‌ನಲ್ಲಿ 8 ಜಿಬಿಪಿಎಸ್ ನಷ್ಟು ವೇಗಕ್ಕೆ ತಲುಪಿಸಿರುವುದು ಸಂತಸ ತಂದಿದೆ ಎಂದು ನೋಕಿಯಾ ಟ್ವೀಟ್ ಮಾಡಿದೆ.
ಈ ಮೂರು ಕಂಪನಿಗಳ ಸಹಯೋಗದಿಂದ ನಿರ್ಮಿಸಿಲಾದ 5-ಜಿ ವೇಗವು ಕೇವಲ ಒಂದು ಸೆಕೆಂಡ್ ಸಮಯದಲ್ಲಿ 4-ಕೆ ವಿಡಿಯೋಗಳನ್ನು ಹಾಗೂ ಟ್ರಿಪಲ್-ಎ ಗೇಮ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿ.
ಗ್ರಾಹಕರಿಗೆ 5-ಜಿ ಸೇವೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಡಿಜಿಟಲೀಕರಣಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರ ಮೊದಲ ಭಾಗವಾಗಿ ಫಿನ್‌ಲ್ಯಾಂಡ್‌ನಲ್ಲಿ 5-ಜಿ ವೇಗವನ್ನು ವಿಶ್ವದಲ್ಲೇ ಮೊದಲು ನಿಯೋಜಿಸಲಾಗಿದೆ.
5-ಜಿ ವೇಗದೊಂದಿಗೆ 8 ಜಿಬಿಪಿಎಸ್ ತಲುಪುವುದು ಸ್ವಾಭಾವಿಕ ಹೆಜ್ಜೆಯಾಗಿದೆ, ನಾವು ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ತಲುಪಲು ಯತ್ನಿಸುತ್ತಿದ್ದೇವೆ ಎಂದು ನೋಕಿಯಾ ಕಂಪನಿ ತಿಳಿಸಿದೆ.